ಗಿರೀಶ್ ಹುಣಸೂರು
ಸೆ.೧೬ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ ಗಂಟೆಯೊಳಗೆ ಸಿಂಹಾಸನ ಜೋಡಣೆ
ಅ.೩೧ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧೨ ಗಂಟೆಯೊಳಗೆ ಸಿಂಹಾಸನ ವಿಸರ್ಜನೆ
ಸೆ.೨೨ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಖಾಸಗಿ ದರ್ಬಾರ್,
ರಾಜವಂಶಸ್ಥರ ಪೂಜಾ ಕೈಂಕರ್ಯ
ಮೈಸೂರು: ದಸರಾ ಜಂಬೂಸವಾರಿ ವೈಭವದ ಜತೆಗೆ ರಾಜಮನೆತನದವರ ನವರಾತ್ರಿ ಉತ್ಸವದ ಧಾರ್ಮಿಕ ಆಚರಣೆಗಾಗಿ ಅಂಬಾವಿಲಾಸ ಅರಮನೆಯಲ್ಲಿ ಜೋಡಿಸಲಾಗುವ ರತ್ನ ಖಚಿತ ಸ್ವರ್ಣ ಸಿಂಹಾಸನ ಗಮನಸೆಳೆಯುತ್ತದೆ.
ಶತಮಾನಗಳಿಂದಲೂ ಮೈಸೂರು ಸಂಸ್ಥಾನದ ಮಹಾರಾಜರು ಇದೇ ಸಿಂಹಾಸನಾರೂಢರಾಗಿ ನವರಾತ್ರಿಯ ದಿನಗಳಲ್ಲಿ ದರ್ಬಾರು ನಡೆಸಿಕೊಂಡು ಬಂದಿದ್ದಾರೆ. ರಾಜಪ್ರಭುತ್ವ ಅಳಿದು ಪ್ರಜಾ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಹಿಂದಿನ ಪದ್ಧತಿಗಳನ್ನು ಆಚರಿಸುತ್ತಾ ಬರಲಾಗಿದ್ದು, ಈಗ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನವ ರಾತ್ರಿಯ ದಿನಗಳಲ್ಲಿ ಸಿಂಹಾಸನಾ ರೂಢರಾಗಿ ಖಾಸಗಿ ದರ್ಬಾರ್ ನಡೆಸುತ್ತಾರೆ.
ನಾಜೂಕಿನ ಕೆಲಸ: ರತ್ನ ಖಚಿತ ಸ್ವರ್ಣ ಸಿಂಹಾಸನವನ್ನು ಜೋಡಿಸುವ ಕೆಲಸದಲ್ಲಿ ಮೈಸೂರು ತಾಲ್ಲೂಕಿನ ಗೆಜ್ಜಗಳ್ಳಿ ಗ್ರಾಮಸ್ಥರು ಸಿದ್ಧಹಸ್ತರು. ಅದಕ್ಕಾಗಿಯೇ ಮಹಾರಾಜರ ಕಾಲದಿಂದಲೂ ನವರಾತ್ರಿ ಆರಂಭಕ್ಕೂ ಮೂರು ತಿಂಗಳ ಮೊದಲೇ ಅರಮನೆಯ ಪರಿಚಾರಕರು ಗೆಜ್ಜಗಳ್ಳಿಗೆ ಹೋಗಿ ವೀಳ್ಯ ಕೊಟ್ಟು ಆಹ್ವಾನ ನೀಡಿ ಬರುತ್ತಿದ್ದರು. ರಾಜ ಪುರೋಹಿತರು ನಿಗದಿಪಡಿಸಿದ ಗಳಿಗೆಯಲ್ಲಿ ಗೆಜ್ಜಹಳ್ಳಿಯ ಗ್ರಾಮಸ್ಥರು ಸಿಂಹಾಸನವನ್ನು ಜೋಡಿಸಿ ಹೋಗುತ್ತಿದ್ದರು. ಇದಕ್ಕಾಗಿ ಅವರಿಗೆ ರಾಜ ಮರ್ಯಾದೆ ಮಾಡಿ ಭಕ್ಷೀಸು ನೀಡಿ ಕಳುಹಿಸಿ ಕೊಡಲಾಗುತ್ತಿತ್ತು.
ಸಿಂಹಾಸನ ಜೋಡಣೆ ಮಾತ್ರವಲ್ಲದೆ ಖಾಸಗಿ ದರ್ಬಾರ್‌ನಲ್ಲಿ ಭಾಗವಹಿಸುವ ಅರಮನೆ ಆನೆ, ಕುದುರೆ, ಎತ್ತು, ಹಸು ಮೊದಲಾದವುಗಳನ್ನು ನೋಡಿಕೊಳ್ಳಲು ಈ ಹಿಂದೆ ಗೆಜ್ಜಗಳ್ಳಿಯ ನೂರಾರು ಜನರು ಬರುತ್ತಿದ್ದರು. ರಾಜರು ಭಕ್ಷೀಸು ನೀಡುತ್ತಾರೆ ಎಂಬುದಕ್ಕಿಂತಲೂ ಅರಮನೆಯ ಒಳಗೆ ನಡೆಯುವ ಚಟುವಟಿಕೆಗಳನ್ನು ನೋಡುವ ಕುತೂಹಲದಿಂದಲೇ ಸಿಂಹಾಸನ ಜೋಡಣೆಗೆ ಹೋಗುತ್ತಿದ್ದರು. ಊರಿನ ಪಟೇಲರಾದ ಮಹ ದೇವಪ್ಪ ಅವರ ಮನೆಗೆ ಅರಮನೆಯಿಂದ ಹೇಳಿ ಕಳುಹಿಸುತ್ತಿದ್ದರು. ಅವರು ಗ್ರಾಮದಿಂದ ೧೫ರಿಂದ ೨೦ ಜನರನ್ನು ಕರೆದೊಯ್ಯುತ್ತಿದ್ದರು. ಅರಮನೆ ಕೆಲಸಗಳನ್ನು ಮಾಡಿಕೊಂಡು ಅಲ್ಲೇ ಅಡುಗೆ ಮಾಡಿ ಊಟ ಮಾಡಿಕೊಂಡು ಉಳಿಯುತ್ತಿದ್ದರಂತೆ. ಆಗಿನ ಕಾಲಕ್ಕೆ ಅರಮನೆಯಲ್ಲಿ ದಿನಕ್ಕೆ ೨೦ರಿಂದ ೫೦ ರೂಪಾಯಿ ಕೊಡು ತ್ತಿದ್ದರಂತೆ. ಪಟೇಲ್ ಮಹದೇವಪ್ಪ ಅವರ ಜೊತೆಗೆ ಕೋಗಲ್ ಮಹದೇವಪ್ಪ, ಈರಪ್ಪ, ಭುಜಂಗಪ್ಪ, ಮೂಗಪ್ಪನ ಮಹದೇವಪ್ಪ ಮೊದಲಾದ ವರು ಹೋಗುತ್ತಿದ್ದರು. ಈಗ ಪಟೇಲ್ ಮಹದೇವಪ್ಪ ಅವರು ನಿಧನರಾಗಿದ್ದು, ಅರಮನೆಯಿಂದ ಆಹ್ವಾನವೂ ಬರುತ್ತಿಲ್ಲ ಎನ್ನುತ್ತಾರೆ ಗ್ರಾಪಂ ಮಾಜಿ ಸದಸ್ಯ ಲೋಕೇಶ್.
ಸಿಂಹಾಸನ ಜೋಡಣೆ: ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರಾಜವಂಶಸ್ಥರ ಉಪಸ್ಥಿತಿಯಲ್ಲಿ ಅರಮನೆಯ ನೆಲಮಾಳಿಗೆಯಲ್ಲಿ ರುವ ಭದ್ರತಾಕೊಠಡಿ ಯಿಂದ ರತ್ನಖಚಿತ ಸ್ವರ್ಣ ಸಿಂಹಾಸನವನ್ನು ಹೊರ ತೆಗೆದು ಪೂಜೆ ನೆರವೇರಿಸಿದ ನಂತರ ಸಿಂಹಾಸನ ಜೋಡಣೆಗೆ ಚಾಲನೆ ದೊರೆಯಲಿದೆ. ಈ ವೇಳೆ ಪಟ್ಟದ ಆನೆ, ಹಸು, ಕುದುರೆ ಪಾಲ್ಗೊಳ್ಳುತ್ತವೆ. ಈ ಬಾರಿ ಅರಮನೆಯಲ್ಲಿ ನಡೆಯುವ ಪೂಜೆಗಳಿಗೆ ಪಟ್ಟದ ಆನೆಗಳಾಗಿ ಶ್ರೀಕಂಠ ಮತ್ತು ಏಕಲವ್ಯ ಆನೆಗಳನ್ನು ಆಯ್ಕೆ ಮಾಡಲಾಗಿದೆ.
ಸಿಂಹಾಸನ ಜೋಡಣೆ ಹೇಗೆ?: ಈ ಸಿಂಹಾಸನವನ್ನು ೧೩ ಭಾಗಗಳಾಗಿ ವಿಂಗಡಿಸಿಡಲಾಗುತ್ತದೆ. ಆಸನದ ಒಂದು ಭಾಗ, ಅದನ್ನು ಹತ್ತಲು ಬಳಸುವ ಮೆಟ್ಟಿಲು ಮತ್ತೊಂದು ಭಾಗ ಹಾಗೂ ಇದಕ್ಕೆ ಕಲಶವಿಟ್ಟಂತೆ ಸಿಂಗಾರಗೊಳಿಸುವ ಛತ್ರಿ ಮೂರನೇ ಭಾಗವಾಗಿ ಪ್ರತ್ಯೇಕವಾಗಿ ಇರಿಸಿದ್ದು, ಈ ಎಲ್ಲವನ್ನೂ ಜೋಡಿಸಲಾಗುವುದು. ನವ ರಾತ್ರಿಯ ಮೊದಲ ದಿನ ರಾಜವಂಶಸ್ಥರು ಇದಕ್ಕೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಸಿಂಹದ ಆಕೃತಿಯನ್ನು ಇದಕ್ಕೆ ಜೋಡಿಸಲಾಗುತ್ತದೆ. ಆಗ ಅದು ಪರಿಪೂರ್ಣ ಸಿಂಹಾಸನವಾಗುತ್ತದೆ.
” ಹಿಂದಿನ ಕಾಲದಲ್ಲಿ ಹೊಟ್ಟೆ ತುಂಬಾ ಊಟ ಇರುತ್ತಿರಲಿಲ್ಲ, ಈ ಕಾರಣಕ್ಕೆ ಅರಮನೆಯಿಂದ ಸಿಂಹಾಸನ ಜೋಡಣೆಗೆ ಕರೆದ ಕೂಡಲೇ ಗೆಜ್ಜಗಳ್ಳಿಯ ಜನ ಕೂಲಿಗಿಂತಲೂ ದಸರಾ ಕಳೆಯೋ ವರೆಗೆ ಹೊಟ್ಟೆ ತುಂಬಾ ಊಟ ಸಿಗುತ್ತೆ ಅನ್ನುವ ಕಾರಣಕ್ಕೆ ಹೋಗುತ್ತಿದ್ದರು. ಆರಂಭದಲ್ಲಿ ಸಿಂಹಾಸನ ಜೋಡಣೆಗೆ ತಲಾ ೫೦ ರೂ. ಭಕ್ಷೀಸು ನೀಡುತ್ತಿದ್ದ ರಂತೆ, ಬರಬರುತ್ತಾ ೫೦೦ ರೂ.ವರೆಗೂ ನೀಡಲಾಗು ತ್ತಿತ್ತು. ಪ್ರತಿ ದಸರಾ ಸಂದರ್ಭದಲ್ಲಿ ಅರಮನೆ ಯಿಂದ ಆಹ್ವಾನ ಬರಬಹುದೆಂದು ಗ್ರಾಮಸ್ಥರು ಎದುರು ನೋಡುತ್ತಿರುತ್ತಾರೆ. ಆದರೆ, ೨೦೦೬ರಿಂದ ಈಚೆಗೆ ಸಿಂಹಾಸನ ಜೋಡಣೆಗೆ ಗೆಜ್ಜಗಳ್ಳಿ ಗ್ರಾಮಸ್ಥರನ್ನು ಕರೆಯುತ್ತಿಲ್ಲ.”
-ಲೋಕೇಶ್, ಗ್ರಾಪಂ ಮಾಜಿ ಸದಸ್ಯ, ಗೆಜ್ಜಗಳ್ಳಿ
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…