ಲಕ್ಷ್ಮೀಕಾಂತ್ ಕೊಮಾರಪ್ಪ
ನವದಂಪತಿಗಳಿಂದ ಕೆರೆಗೆ ಬಾಗಿನ; ಉತ್ಸವಕ್ಕೆ ಸಿಂಗಾರಗೊಂಡ ದೊಡ್ಡಮಳ್ತೆ ಗ್ರಾಮ
ಸೋಮವಾರಪೇಟೆ: ನವದಂಪತಿಗಳ ಆರಾಧ್ಯ ದೇವತೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಹೊನ್ನಮ್ಮ ತಾಯಿ ಜಾತ್ರೋತ್ಸವ ಆ.೨೬ ರಂದು ನಡೆಯಲಿದ್ದು, ಗ್ರಾಮವು ಸಿಂಗಾರಗೊಂಡಿದೆ. ಸ್ವರ್ಣಗೌರಿ ಹಬ್ಬದಂದು ನವದಂಪತಿಗಳು ಹೊನ್ನಮ್ಮನ ಕೆರೆ ತಟದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಭಾಗವಹಿಸಿ ಕೆರೆಗೆ ಬಾಗಿನ ಅರ್ಪಿಸುವುದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆ.೨೬ರಂದು ಬೆಳಿಗ್ಗೆ ೧೦.೩೦ಕ್ಕೆ ಕೆರೆಗೆ ಬಾಗಿನ ಆರ್ಪಿಸಲಾಗುತ್ತದೆ. ಸುತ್ತಮುತ್ತಲ ಗ್ರಾಮಸ್ಥರು ಮನೆಯಲ್ಲಿ ಮದುವೆಯ ಶುಭ ಕಾರ್ಯ ನಡೆಯಬೇಕಾದರೂ ಹೊನ್ನಮ್ಮ ತಾಯಿಗೆ ಹರಕೆ ಹೊರುವುದು ಇಲ್ಲಿನ ಪದ್ಧತಿ. ಮದುವೆ ನಂತರ ಕುಟುಂಬ ಸಮೇತ ಜಾತ್ರೋತ್ಸವದಲ್ಲಿ ಭಾಗವಹಿಸಿ, ಬಾಗಿನ ಅರ್ಪಿಸಿ ಆಶೀರ್ವಾದ ಪಡೆಯುವುದು ಸಂಪ್ರದಾಯವಾಗಿದೆ.
ಹೊರ ರಾಜ್ಯ, ಜಿಲ್ಲೆಗಳಿಂದ ಸಾರ್ವಜನಿಕರು ಗೌರಿಹಬ್ಬದಂದು ಆಗಮಿಸುತ್ತಾರೆ. ಹೊರಗಿನ ಜನರಿಗೆ ಊರಿನ ಜನ ಆತ್ಮೀಯವಾಗಿ ಸ್ವಾಗತಿಸುವ ಬಗೆಯೂ ಔಚಿತ್ಯಪೂರ್ಣವಾಗಿದೆ. ಮನೆ, ಮಂದಿರಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಆತಿಥ್ಯ ನೀಡುವ ಪರಿಯಂತೂ ಮಲೆನಾಡಿನ ಜೀವನಶೈಲಿಗೆ ಉತ್ತಮ ನಿದರ್ಶನವಾಗಿದೆ. ಈ ಜಾತ್ರೋತ್ಸವದಲ್ಲಿ ಶ್ರೀಸಾಮಾನ್ಯರೆಲ್ಲರೂ ಮತ-ಭೇದ ಮರೆತು ಗೌರಿಹಬ್ಬದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಸಂಪ್ರದಾಯವಾಗಿದೆ. ಗ್ರಾಮಸ್ಥರು ಸಭೆ ಸೇರಿ ಗೌರಿಹಬ್ಬ ಹಾಗೂ ಜಾತ್ರೋತ್ಸವದ ವಿಧಿ ವಿಧಾನಗಳು ಮತ್ತು ಪಾಲಿಸಬೇಕಾದ ನೀತಿ ನಿಯಮಗಳ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತಾರೆ.
ಬಾಗಿನ ಅರ್ಪಣೆ: ಗೌರಿಹಬ್ಬದಂದು ಅವರವರ ಮನೆಗಳಲ್ಲಿ ಗೌರಿಯನ್ನು ಪೂಜಿಸಿ, ವೃತ ನಿಯಮಗಳನ್ನು ನಿಷ್ಠೆಯಿಂದ ಪಾಲಿಸುತ್ತಾರೆ. ಗಂಗೆಯನ್ನು ಪೂಜಿಸಿ ಕಳಸದೊಂದಿಗೆ ಗೌರಿಯನ್ನು ಮನೆಗೆ ತರುವುದು ಮುಂತಾದ ವಿಶಿಷ್ಟ ಸಂಪ್ರದಾಯಗಳನ್ನು ನೆರವೇರಿಸಿ ಹೊನ್ನಮ್ಮನ ಕೆರೆಯಲ್ಲಿ ಬಾಗಿನ ಅರ್ಪಿಸುತ್ತಾರೆ. ಬಾಗಿನಗಳನ್ನು ಆಕರ್ಷಕವಾಗಿ ಕಾಣುವಂತೆ ಸಿಂಗರಿಸಿ, ದೇವಾಲಯದ ಹೊರಾಂಗಣದಲ್ಲಿರುವ ಬಂಗಾರದ ಕಟ್ಟೆ ಮೇಲಿಟ್ಟು ಪೂಜಿಸಲಾಗುತ್ತದೆ. ಕೆರೆಯ ಏರಿಯ ಹೃದಯ ಭಾಗದಲ್ಲಿರುವ ಬಸವೇಶ್ವರ ದೇವಾಲಯವು ಪೂಜೆ-ಪುನ \ಸ್ಕಾರಗಳಿಗೆ ವಿಶೇಷ. ಬಹಳ ಹಿಂದೆಯೇ ಪ್ರತಿಷ್ಠಾಪಿಸಲ್ಪಟ್ಟ ನಂದಿಯ ವಿಗ್ರಹವಿರುವ ಗರ್ಭಗುಡಿಯನ್ನೇ ಕೇಂದ್ರವಾಗಿಟ್ಟುಕೊಂಡು ತಾಯಿ ಹೊನ್ನಮ್ಮನ ಪ್ರತಿಮೆ ಸ್ಥಾಪಿಸಲಾಗಿದೆ. ಇಲ್ಲಿ ವಿಶೇಷ ಪೂಜೆ ನೆರವೇರಿಸಿದರೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ
ಎಂಬ ನಂಬಿಕೆ ಜನರಲ್ಲಿದೆ. ಪ್ರವಾಸಿತಾಣವೂ ಹೌದು: ಹೊನ್ನಮ್ಮನ ಕೆರೆಯ ಏರಿಯ ಎಡ ಮತ್ತು ಬಲ ಬದಿಯಲ್ಲಿರುವ ಗವಿಬೆಟ್ಟ ಮತ್ತು ಮೋರಿ ಬೆಟ್ಟಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಂದಾಜು ೯೦೦ ಅಡಿಗಳಷ್ಟು ಎತ್ತರವಿರುವ ದೈತ್ಯಾಕಾರದ ಬಂಡೆ ಕಲ್ಲುಗಳಿಂದ ಸ್ಥಿರವಾಗಿ ನೆಲೆಯೂರಿ ನಿಂತಂತೆ ಭಾಸವಾಗುತ್ತದೆ. ಗವಿಬೆಟ್ಟಕ್ಕೆ ಮೆಟ್ಟಿಲುಗಳಿದ್ದು, ಮಧ್ಯಭಾಗಕ್ಕೆ ಸರಿಯಾಗಿ ಗುಹೆಯ ಬಾಗಿಲಿನಂತಿರುವ ದ್ವಾರವುಪ್ರವಾಸಿಗರನ್ನು ಸ್ವಾಗತಿಸುತ್ತದೆ. ಗುಹೆಯಿಂದ ಹೊರಬಂದು ಬೆಟ್ಟದ ಮೇಲೇರಿ ದೃಷ್ಟಿಹರಸಿದಷ್ಟು ನಯನ ಮನೋಹರ ದೃಶ್ಯಗಳು ಮೈ ರೋಮಾಂಚನಗೊಳ್ಳುವಂತೆ ಮಾಡುತ್ತವೆ.
ಹೊನ್ನಮ್ಮ ಕೆರೆಯ ಇತಿಹಾಸ: ಎರಡೂವರೆ ಸಾವಿರ ವರ್ಷಗಳ ಹಿಂದೆ ಊರಿನ ಒಡೆಯ ಮಲ್ಲೇಗೌಡರು ದೊಡ್ಡಮಳ್ತೆ ಗ್ರಾಮದಲ್ಲಿ ಕೆರೆಯನ್ನು ಕಟ್ಟಿಸಿದಾಗ ಕೆರೆಯಲ್ಲಿ ನೀರು ಬರಲಿಲ್ಲವಂತೆ. ನೀರು ಬರಬೇಕಾದರೆ ನಿಮ್ಮ ಮನೆಯ ಮುದ್ದಿನ ಸೊಸೆ ಹೊನ್ನಮ್ಮಳನ್ನು ಬಲಿಕೊಡಬೇಕು ಎಂದು ಕನಸ್ಸಿನಲ್ಲಿ ಅಶರೀರವಾಣಿ ನುಡಿಯಿತಂತೆ. ಇದರಿಂದ ಚಿಂತೆಗೆ ಒಳಗಾದ ಮಲ್ಲೇಗೌಡರು ಈ ವಿಷಯವನ್ನು ತನ್ನ ಪತ್ನಿಯೊಂದಿಗೆ ಚರ್ಚಿಸುತ್ತಿರುವಾಗ, ಹೊನ್ನಮ್ಮ ಇದೆಲ್ಲವನ್ನೂ ಕೇಳಿಸಿಕೊಂಡು, ಸ್ವಯಂ ನಿರ್ಧಾರದಿಂದ ಕೆರೆಗೆ ಹಾರವಾಗಿ, ನಂತರ ಕೆರೆಯಲ್ಲಿ ನೀರು ಉಕ್ಕಿ ಹರಿದು ಇಡೀ ಗ್ರಾಮವೇ ಸಮೃದ್ಧಿಯಾಯಿತು. ಇದು ತ್ಯಾಗದ ಸಂಕೇತವಾಗಿ, ನಂತರ ಹೊನ್ನಮ್ಮ ಗ್ರಾಮದೇವತೆಯಾದರು ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
” ಹೊನ್ನಮ್ಮ ತಾಯಿ ಜಾತ್ರೋತ್ಸವನ್ನು ಅನೇಕ ದಶಕಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹೊರ ಜಿಲ್ಲೆ ಮತ್ತು ರಾಜ್ಯದಿಂದ ಜನರು ಬರುತ್ತಾರೆ. ಕೆರೆ ನೀರಿಲ್ಲದೆ ಬತ್ತಿದ ನಿದರ್ಶನಗಳಿಲ್ಲ. ಈ ವರ್ಷ ಉತ್ತಮ ಮಳೆಯಾಗಿದ್ದು, ೧೬ ಎಕರೆ ವಿಸ್ತೀರ್ಣದ ಕೆರೆ ಸಂಪೂರ್ಣ ತುಂಬಿದೆ. ಹತ್ತಾರು ಗ್ರಾಮಗಳ ಕೃಷಿ ಭೂಮಿಗೆ ನೀರು ಸಿಗುತ್ತದೆ. ಪ್ರವಾಸಿಗರನ್ನು ಆಕರ್ಷಿಸಲು ಕಲಾ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ.
-ಚಂದ್ರಶೇಖರ್, ಅಧ್ಯಕ್ಷರು, ಶ್ರೀ ಸ್ವರ್ಣಗೌರಿ ದೇವಾಲಯ ಸಮಿತಿ, ದೊಡ್ಡ ಮಳ್ತೆ
ನವದೆಹಲಿ: ಶನಿವಾರ ಐದನೇ ದಿನವೂ ಇಂಡಿಗೋ ವಿಮಾನ ಹಾರಾಟ ಅಡಚಣೆಗಳು ಮುಂದುವರೆದಿದ್ದು, ದೇಶಾದ್ಯಂತ ಹಲವಾರು ವಿಮಾನಗಳು ರದ್ದಾಗಿವೆ. ಕಳೆದ ನಾಲ್ಕು…
ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…
ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…
ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…
ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…
ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…