ಕೆ.ಬಿ.ರಮೇಶನಾಯಕ
ಗೋಲ್ಡ್ ಕಾರ್ಡ್, ಜಂಬೂಸವಾರಿ, ಪಂಜಿನ ಕವಾಯತು ಟಿಕೆಟ್ ಸೋಲ್ಡ್ ಔಟ್
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಪ್ಲಾನ್ ಯಶಸ್ವಿ
ಮೈಸೂರು: ಮುಂಗಾರು ಮಳೆ ಕೈಕೊಟ್ಟು ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಸಂಪ್ರದಾಯದಂತೆ ನಡೆಸಿಕೊಂಡು ಬಂದಿರುವ ನಾಡಹಬ್ಬ ದಸರಾ ಮಹೋತ್ಸವವನ್ನು ಈ ಬಾರಿಯೂ ಅದ್ಧೂರಿಯಾಗಿ ಆಚರಿಸಲು ರಾಜ್ಯಸರ್ಕಾರ ೪೫ ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದರೆ, ಮತ್ತೊಂದೆಡೆ ತಿಂಗಳ ಮುನ್ನವೇ ಗೋಲ್ಡ್ಕಾರ್ಡ್, ಟಿಕೆಟ್ಗಳನ್ನು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರಿಂದಾಗಿ ದಸರಾ ಖರ್ಚಿನ ಭಾರವನ್ನು ಇಳಿಸಿದಂತಾಗಿದೆ. ಕಳೆದ ಬಾರಿಗಿಂತ ಈ ಬಾರಿ ಗೋಲ್ಡ್ ಕಾರ್ಡ್ ಮಾರಾಟದ ಪ್ರಮಾಣದಲ್ಲೂ ಕೊಂಚ ಏರಿಕೆಯಾದರೂ ದಸರಾ ಆರಂಭಕ್ಕೂ ಮುನ್ನವೇ ಪ್ರವಾಸಿಗರ ಉತ್ತಮ ಸ್ಪಂದನೆಯಿಂದ ಸೋಲ್ಡ್ ಔಟ್ ಆಗಿರುವುದರಿಂದ ಆದಾಯವೂ ಜಾಸ್ತಿಯಾಗಿದೆ.
ಹೀಗಾಗಿ, ಜಿಲ್ಲಾ ದಸರಾ ಮಹೋತ್ಸವ ಸಮಿತಿಯ ಖಾತೆಗೆ ದೊಡ್ಡ ಮಟ್ಟದಲ್ಲಿ ಹಣ ಹರಿದುಬಂದಿದ್ದರೆ, ಟಿಕೆಟ್ ಮಾರಾಟದ ಹೊಣೆ ಹೊತ್ತಿದ್ದ ಖಾಸಗಿ ಏಜೆನ್ಸಿಗೂ ಬಂಪರ್ ಲಾಭ ಸಿಕ್ಕಿದೆ. ನಾಡಹಬ್ಬ ದಸರಾ ಮಹೋತ್ಸವ ಬಂದಾಗಲೆಲ್ಲಾ ತರಾತುರಿಯಲ್ಲಿ ವೆಬ್ ಸೈಟ್ ಆರಂಭಿಸಿ ಗೋಲ್ಡ್ ಕಾರ್ಡ್, ಜಂಬೂಸವಾರಿ, ಪಂಜಿನ ಕವಾಯತು ಟಿಕೆಟ್ಗಳನ್ನು ಮಾರಾಟಕ್ಕೆ ಬಿಡಲಾಗುತ್ತಿತ್ತು. ಇದರಿಂದ ಕೆಲವರಿಗೆ ಸಿಕ್ಕಿದರೆ, ಹಲವರಿಗೆ ಸಿಗದೆ ಅಸಮಾಧಾನಗೊಳ್ಳುತ್ತಿದ್ದರು.
ಕಾಳಸಂತೆಯಲ್ಲೂ ಮಾರಾಟದ ಆರೋಪಗಳು ಕೇಳಿ ಬರುತ್ತಿದ್ದವು. ಇದನ್ನು ಮನಗಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಹೊಸದಾದ ಯೋಜನೆ ರೂಪಿಸಿ ತಿಂಗಳ ಮುನ್ನವೇ ವೆಬ್ಸೈಟ್ ಲೋಕಾರ್ಪಣೆ ಮಾಡುವ ಜತೆಗೆ, ಗೋಲ್ಡ್ಕಾರ್ಡ್ಗಳು, ಟಿಕೆಟ್ ಮಾರಾಟಕ್ಕೆ ಅವಕಾಶ ಕಲ್ಪಿಸಿ ನಿಬಂಧನೆಗಳನ್ನು ವಿಧಿಸಿದ್ದರು. ಸೆ.೨೧ರಂದು ೩೫೦೦ ಗೋಲ್ಡ್ ಕಾರ್ಡ್, ಜಂಬೂಸವಾರಿ, ಪಂಜಿನ ಕವಾಯತು ತಲಾ ೩೦೦೦ ಟಿಕೆಟ್ಗಳು, ಒಂದು ಸಾವಿರ ರೂ. ಮುಖಬೆಲೆಯ ಡ್ರೋನ್ ಶೋ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಮಾರಾಟಕ್ಕೆ ಬಿಡಲಾಗಿತ್ತು. ದಸರಾ ಉದ್ಘಾಟನೆಯ ಮುನ್ನವೇ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ಗಳು ಪೂರ್ಣಪ್ರಮಾಣದಲ್ಲಿ ಮಾರಾಟವಾಗಿರುವುದು ವಿಶೇಷ.
ಭಾರ ಇಳಿಸಿದ ಟಿಕೆಟ್ ಆದಾಯ: ಕಳೆದ ಒಂದು ದಶಕಗಳಿಗೆ ಹೋಲಿಸಿದರೆ ಗೋಲ್ಡ್ಕಾರ್ಡ್,ಟಿಕೆಟ್ ಆದಾಯದ ಮೇಲೆ ಅವಲಂಬನೆಯಾಗಿರಲಿಲ್ಲ.ಆದರೆ, ವರ್ಷದಿಂದ ವರ್ಷಕ್ಕೆ ಖರೀದಿಸುವ ಪ್ರಮಾಣ ಹೆಚ್ಚಾದ ಮೇಲೆ ಹಾಗೂ ಪಾಸ್ಗಳಿಗೆ ಉಂಟಾದ ಬೇಡಿಕೆಯನ್ನು ತಗ್ಗಿಸಲು ಮಾರಾಟದ ಸಂಖ್ಯೆ ಹೆಚ್ಚು ಮಾಡಲಾಗಿತ್ತು. ದೇಶ-ವಿದೇಶಗಳ ದಸರಾ ನೋಡುಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಗೋಲ್ಡ್ಕಾರ್ಡ್, ಟಿಕೆಟ್ಗಳನ್ನು ಖರೀದಿ ಮಾಡಿರುವುದು ಗಮನಾರ್ಹವಾಗಿದೆ. ೬೫೦೦ ರೂ. ಮುಖಬೆಲೆಯ ೩೫೦೦ ಗೋಲ್ಡ್ಕಾರ್ಡ್ಗಳ ಮಾರಾಟದಿಂದ ೨ ಕೋಟಿ,೨೭,೫೦ ಲಕ್ಷ ರೂ., ಜಂಬೂಸವಾರಿಯ ೩ ಸಾವಿರ ಟಿಕೆಟ್ ಮಾರಾಟವಾಗಿದ್ದು, ಒಂದು ಟಿಕೆಟ್ಗೆ ೩೫೦೦ರೂ.ನಂತೆ ೧.೫ ಕೋಟಿ ರೂ,ಬನ್ನಿಮಂಟಪದ ಪಂಜಿನ ಕವಾಯತು ೧೫೦೦ರೂ.ಬೆಲೆಯ ೩೫೦೦ ಟಿಕೆಟ್ ಮಾರಾಟವಾಗಿದ್ದು,೫೨.೫೦ಲಕ್ಷ ರೂ.ಆದಾಯ ಬಂದಿದ್ದರೆ, ಡ್ರೋನ್ ಶೋ ಟಿಕೆಟ್ ಮಾರಾಟ ಮುಂದುವರಿದಿದೆ. ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಿದ್ದವರಿಗೆ ಜಿಲ್ಲಾಧಿಕಾರಿ ಕಚೇರಿ ಸ್ಪಂದನ ಕೊಠಡಿಯಲ್ಲಿ ವಿತರಣೆ ವ್ಯವಸ್ಥೆ ಮಾಡಿರುವುದರಿಂದ ಕೊನೆಯ ಕ್ಷಣದಲ್ಲಿ ಗಂಟೆಗಟ್ಟಲೆ ಕಾದು ನಿಲ್ಲುವುದು ತಪ್ಪಿದೆ. ಬೆಳಿಗ್ಗೆಯಿಂದ ಸಂಜೆ ೬ ಗಂಟೆವರೆಗೆ ಯಾವುದಾದರೂ ಒಂದು ದಾಖಲೆ ಹಾಜರುಪಡಿಸಿ ಟಿಕೆಟ್ಗಳನ್ನು ಪಡೆದುಹೋಗುತ್ತಿರುವುದರಿಂದ ಗೊಂದಲಕ್ಕೂ ಬ್ರೇಕ್ ಬಿದ್ದಿದೆ.
ಸೀಟ್ ನಂಬರ್ ವ್ಯವಸ್ಥೆ: ಹಣ ಕೊಟ್ಟವರಿಗೆ ಮೀಸಲಾದ ಜಾಗದಲ್ಲಿ ಕೂರಲು ಬಿಡುವುದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಜಿಲ್ಲಾಡಳಿತ ಪ್ರತಿ ಟಿಕೆಟ್ ಮತ್ತು ಸೀಟ್ಗೂ ಕ್ರಮಸಂಖ್ಯೆಯನ್ನು ನಮೂದಿಸಿದೆ. ಈಗಾಗಲೇ ಗೋಲ್ಡ್ಕಾರ್ಡ್, ಟಿಕೆಟ್ಗಳಿಗೆ ಆಸನದ ಸಂಖ್ಯೆಯನ್ನು ನಮೂದಿಸಿದ್ದು,ಅಷ್ಟೇ ಪ್ರಮಾಣದ ಆಸನಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಹೀಗಾಗಿ,ಖರೀದಿದಾರರು ತಮಗಾಗಿ ಮೀಸಲಾದ ಜಾಗದಲ್ಲೇ ಕೂರಬೇಕಾಗಿದೆ. ಕೆಲ ಗೊಂದಲಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ಉಂಟಾಗುತ್ತಿತ್ತು. ಈ ಬಾರಿ ಅಂತಹ ಪ್ರಮಾದಕ್ಕೆ ಅವಕಾಶ ಇಲ್ಲದಂತೆ ಮಾಡಲಾಗಿದೆ.
ಏಜೆನ್ಸಿಗೂ ಒಂದಿಷ್ಟು ಲಾಭ: ಟಿಕೆಟ್ ಮಾರಾಟದ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದ್ದರಿಂದಾಗಿ ಏಜೆನ್ಸಿಗೆ ಒಂದಿಷ್ಟು ಆದಾಯ ಬಂದಿದೆ. ಒಂದು ಗೋಲ್ಡ್ ಕಾರ್ಡ್ ಬೆಲೆ ೬೫೦೦ರೂ.ಇದ್ದರೂ ಸೇವಾ ತೆರಿಗೆ, ಸಿಜಿಎಸ್ಟಿ, ಎಸ್ಜಿಟಿ ಸೇರಿದಂತೆ ೬೯೧೦ರೂ.ಆಗಿದೆ. ಇದರಲ್ಲಿ ಟಿಕೆಟ್ ಮಾರಾಟದ ವ್ಯವಸ್ಥೆ ನೋಡಿಕೊಂಡಿದ್ದ ಏಜೆನ್ಸಿಗೆ ಪ್ರತಿ ಟಿಕೆಟ್ಗೆ ೩೮೦ರೂ.ಲಾಭ ಬಂದಿರುವುದು ವಿಶೇಷವಾಗಿದೆ
” ತಿಂಗಳ ಮುನ್ನವೇ ಗೋಲ್ಡ್ಕಾರ್ಡ್, ಟಿಕೆಟ್ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಯಾವುದೇ ಗೊಂದಲ ಇಲ್ಲದಂತೆ ಮಾರಾಟವಾಗಿದೆ. ಈ ಬಾರಿ ಸೀಟ್ಗಳಿಗೆ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಮೊದಲ ಬಾರಿಗೆ ಜಿಲ್ಲಾಡಳಿತ ಮಾಡಿದ ಹೊಸ ಯೋಜನೆ ಸಫಲವಾಗಿದೆ.”
ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ
ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ ಮದರ್ ಥೆರೇಸಾ ಈಗ ನಮ್ಮ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಅಂತೂ ನಾಲ್ಕು ಹುಡುಗರು ಸ್ಟೇಷನ್ ಒಳಗೆ ಹೋದರು ಎಂದರೆ ಮತ್ತೊಂದು ಸಂಕಟ ಶುರು ಪಿಎಸ್ಐ…
ನವೀನ್ ಡಿಸೋಜ ಒಂದೇ ದಿನದಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ; ವಯಸ್ಕರಿಗೆ ೪೦೦, ಮಕ್ಕಳಿಗೆ ೩೦೦ ರೂ.ದರ ಮಡಿಕೇರಿ:…
ಪ್ರಶಾಂತ್ ಎಸ್. ಕೆಎಸ್ಟಿಡಿಸಿ ವತಿಯಿಂದ ವ್ಯವಸ್ಥೆ; ಪ್ರತಿನಿತ್ಯ ೩ ಟ್ರಿಪ್ಗಳಲ್ಲಿ ಪ್ರಯಾಣ ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ‘ಅಂಬಾರಿ ಬಸ್’…
ನವದೆಹಲಿ: ವರ್ತಕರಿಗೆ ದೀಪಾವಳಿ ಸಂದರ್ಭದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಅಕ್ಟೋಬರ್ 15ರಿಂದ ಜಾರಿಯಾಗಬೇಕಿದ್ದ ಆಯ್ದ UPI ಮರ್ಚೆಂಟ್ ಪಾವತಿಗಳ ಮೇಲಿನ…