Andolana originals

ಜೀವ ರಕ್ಷಣೆಯ ಹೋರಾಟಕ್ಕೆ ಸಾವಿರಾರು ಹೆಗಲು….

ಸಾಕ್ಷಾತ್‌ ವರದಿ: ರಶ್ಮಿ ಕೋಟಿ, ಆಂದೋಲನ

ವಯನಾಡು: ಕೇರಳದಲ್ಲಿ ಪ್ರವಾಹ, ಭೂ ಕುಸಿತದಂತಹ ನೈಸರ್ಗಿಕ ವಿಕೋಪಗಳು ಹೊಸದೇನಲ್ಲ. ಜುಲೈ ೩೦ರ ಮಧ್ಯರಾತ್ರಿ ಸಂಭವಿಸಿದ ಭೂ ಕುಸಿತದಲ್ಲಿ ಬೆಟ್ಟಗಳು ಜಾರಿ, ನದಿ ತನ್ನ ಹರಿವಿನ ದಿಕ್ಕನ್ನೇ ಬದಲಾಯಿಸಿ ಕೇರಳವನ್ನು ದುಃಸ್ವಪ್ನಕ್ಕೆ ನೂಕಿದೆ. ಈ ಅವಘಡಕ್ಕೆ ಸಿಲುಕಿದ ೪ ಹಳ್ಳಿಗಳ ಸಾವಿರಾರು ಜನರು ನಿರಾಶ್ರಿತರ ಶಿಬಿರಗಳಲ್ಲಿ ತಂಗಿದ್ದಾರೆ. ಘಟನೆಯಲ್ಲಿ ನಾಪತ್ತೆಯಾದ ೨೦೦ಕ್ಕೂ ಹೆಚ್ಚು ಜನರು ಜೀವಂತವಾಗಿಯೋ, ಶವವಾಗಿಯೋ ಇನ್ನೂ ಸಿಕ್ಕಿಲ್ಲ. ಇದು ಬದುಕುಳಿ ದಿರುವವರನ್ನು ಹತಾಶೆಯಲ್ಲಿ ಮುಳುಗಿಸಿದೆ. ಸಾವಿಗೀಡಾದವರ ಸಂಖ್ಯೆ ೩೦೦ಕ್ಕೂ ಹೆಚ್ಚು ಎನ್ನಲಾಗು ತ್ತಿದ್ದರೂ ಈ ಪಟ್ಟಿ ದಿನೇ ದಿನೇ ಬೆಳೆಯುತ್ತಲೇ ಇದೆ.

ಈ ಭೂ ಕುಸಿತದಿಂದ ಉಂಟಾದ ಸಾವು-ನೋವು, ನಷ್ಟಗಳ ನಡುವೆಯೂ ಸಂತ್ರಸ್ತರಿಗೆ ಧೈರ್ಯ ಮತ್ತು ಆಸರೆಯಾಗುತ್ತಿ ರುವ ಮಾನವೀಯ ಕಥೆಗಳ ನಿರಂತರ ಹರಿವು ಇಡೀ ಕೇರಳವನ್ನು ಒಂದಾಗಿಸಿದೆ. ನಾಗರಿಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸಹಾಯಕ್ಕಾಗಿ ಮುಂದೆ ಬರುತ್ತಿದ್ದಾರೆ. ಸಂತ್ರಸ್ತರ ನೋವಿಗೆ ಮಿಡಿಯುವ ಮನಸ್ಸುಗಳ ಸಾಮೂಹಿಕ ಪ್ರಯತ್ನಗಳು ಅತ್ಯಂತ ಕೆಟ್ಟ ನೈಸರ್ಗಿಕ ವಿಪತ್ತಿನ ಸಮಯದಲ್ಲಿಯೂ ಭರವಸೆಯ ಆಶಾ ಕಿರಣವನ್ನು ಮೂಡಿಸುತ್ತಿವೆ.

ಸಮವಸ್ತ್ರಗಳಿಲ್ಲದ ಸೂಪರ್ ಹೀರೋಗಳು:
ಸರ್ಕಾರ ಹಾಗೂ ಸ್ಥಳೀಯ ಪ್ರಶಾಸನ ದೊಂದಿಗೆ ಸಂತ್ರಸ್ತರ ನೆರವಿಗೆ ಎನ್‌ಡಿಆರ್ ಎಫ್, ಭಾರತೀಯ ಸೇನೆ, ಕೇರಳ ರಾಜ್ಯದ ಪೊಲೀಸರು, ಅರಣ್ಯ ಅಽಕಾರಿಗಳು ಧಾವಿಸಿ ಬಂದಿದ್ದು ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೂ ರಕ್ಷಣಾ ಕಾರ್ಯವನ್ನು ಅವಿರತವಾಗಿ
ಕೈಗೊಂಡಿದ್ದಾರೆ.

ಗಾಯಾಳುಗಳನ್ನು ಪರಿಹಾರ ಶಿಬಿರಗಳಿಗೆ ತಲುಪಿಸಲು ಸ್ಥಳೀಯ ನಾಗರಿಕರೂ ಅವರೊಂದಿಗೆ ಕೈ ಜೋಡಿಸುತ್ತಿದ್ದಾರೆ. ತಮ್ಮವರನ್ನು ಹಾಗೂ ತನ್ನದೆಲ್ಲವನ್ನೂ ಕಳೆದುಕೊಂಡು ಅನಾಥ ಪ್ರಜ್ಞೆ ಅನುಭವಿಸುತ್ತಿರುವವರ ದುಃಖಕ್ಕೆ ಮರುಗಿ ಅವರಿಗೆ ಆಹಾರ, ಬಟ್ಟೆ, ಹೊದ್ದುಕೊಳ್ಳಲು ರಗ್ಗು, ಔಷಽ ಹಾಗೂ ಇತರ ಎಲ್ಲ ಅವಶ್ಯ ವಸ್ತುಗಳನ್ನು ಸಂಗ್ರಹಿಸಿ ತಮ್ಮ ಸ್ವಂತ ವಾಹನಗಳನ್ನೇ ತುರ್ತು ಪರಿಹಾರದ ವಾಹನವಾಗಿ ಮಾಡಿಕೊಂಡು, ಅದರಲ್ಲಿ ಪರಿಹಾರ ಸಾಮಗ್ರಿಗಳನ್ನು ತುಂಬಿಕೊಂಡು ಶಿಬಿರಗಳಲ್ಲಿ ವಿತರಿಸುತ್ತಿದ್ದುದು ಹೃದಯಸ್ಪರ್ಶಿಯಾಗಿತ್ತು.

ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಬದುಕುಳಿದವರನ್ನು ದುರಂತದ ಸ್ಥಳದಿಂದ ರಸ್ತೆಯ ಬದಿಯಲ್ಲಿ ನಿಂತಿದ್ದ ಆಂಬ್ಯುಲೆನ್ಸ್‌ಗೆ ಸಾಗಿಸಲು ನಾಗರಿಕರು ಕೈ ಜೋಡಿಸುತ್ತಿದ್ದರು. ಇದಕ್ಕೆ ಪೂರಕವಾಗಿ ಸ್ವಯಂಸೇವಕರು ರಸ್ತೆ ಮಧ್ಯಭಾಗದಲ್ಲಿ ರಸ್ತೆ ಡಿವೈಡರ್‌ನಂತೆ ನಿಂತು ಆಂಬ್ಯುಲೆನ್ಸ್‌ಗೆ ಮತ್ಯಾವ ವಾಹನವೂ ಅಡ್ಡಬರದಂತೆ ನೋಡಿಕೊಳ್ಳುತ್ತಿದ್ದುದು ಗಾಯಾಳುಗಳ ಪ್ರಾಣ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಂತೆ ಕಾಣುತ್ತಿತ್ತು.

ಮಣ್ಣಿನ ಅಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ರಕ್ಷಣಾ ಪಡೆಯವರು ಹೊರತೆಗೆಯುತ್ತಿದ್ದರೆ ಅವುಗಳಿಗೆ ಸಾಮೂಹಿಕ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುತ್ತಿತ್ತು. ಅಪರಿಚಿತರಾ ದರೂ ತಮ್ಮವರ ಅಗಲಿಕೆಯ ನೋವಿನಿಂದ ದುಃಖಿಸುತ್ತಿದ್ದವರ ಕಣ್ಣೀರು ಒರೆಸಿ ಸಮಾಧಾನಪಡಿಸುತ್ತಿದ್ದರು.

ವಿಕೋಪದಿಂದ ತತ್ತರಿಸಿರುವ ಕೇರಳದ ಅತಿ ದೊಡ್ಡ ಸವಾಲಿನ ಈ ಸಮಯದಲ್ಲಿ ಮಾನವೀಯ ಮನಸ್ಸುಗಳೆಲ್ಲ ಒಗ್ಗಟ್ಟಿನಿಂದ ನಿಂತು, ಸಾಧ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಂಗ್ರಹಿಸಿ ನೊಂದ ಜೀವಗಳಿಗೆ ಆಸರೆಯಾಗುತ್ತಿರುವ ದೃಶ್ಯ ಕೇರಳದ ಈ ದುರಂತದಲ್ಲಿ ಕಾಣುತ್ತಿರುವ ಬೆಳ್ಳಿ ಮೋಡವೆಂದರೆ ತಪ್ಪಾಗಲಾರದು.

ಸಂಪರ್ಕ ಕಡಿತಗೊಂಡ ಅನೇಕರು ಫೇಸ್‌ಬುಕ್ ಮತ್ತು ವಾಟ್ಸ್ ಆಪ್ ಬಳಸಿ ಸಹಾಯಕ್ಕಾಗಿ ಮನವಿ ಮಾಡುವ ವೀಡಿಯೊಗಳನ್ನು ಹಂಚಿಕೊಳ್ಳಲು, ರಕ್ಷಣಾ ತಂಡಗಳನ್ನು ತಲುಪಲು ನಿಖರವಾದ ಸ್ಥಳಗಳು ಮತ್ತು ಸಂಪರ್ಕ ಸಂಖ್ಯೆ ಗಳನ್ನು ನೀಡಲಾಗುತ್ತಿದೆ.

ಮಗನ ಕ್ಯಾನ್ಸರ್‌ ಚಿಕಿತ್ಸೆಗೆ ಕೂಡಿಟ್ಟ ಹಣ ಪರಿಹಾರ ನಿಧಿಗೆ!
ಕೇರಳದ ಪತ್ತನಂತಿಟ್ಟದ ಅಡೂರ್ ಪಟ್ಟಣದ ನಿವಾಸಿ ಅನಸ್, ಕ್ಯಾನ್ಸರ್ ಪೀಡಿತ ಮಗನ ಚಿಕಿತ್ಸೆಗಾಗಿ ಹಣವನ್ನು ಕೂಡಿಡುತ್ತಿದ್ದರು. ಆದರೆ, ಕಷ್ಟದಲ್ಲಿರುವ ಇತರರಿಗೆ ಸಹಾಯ ಮಾಡಲು ಅವರು ಇಟ್ಟ ಹೆಜ್ಜೆ ಧೈರ್ಯವಷ್ಟೇ ಅಲ್ಲ ಹೃದಯಸ್ಪರ್ಶಿಯೂ ಹೌದು. ತನ್ನ ಮಗನ ಚಿಕಿತ್ಸೆಗಾಗಿ ಕೂಡಿಟ್ಟಿದ್ದ ಹಣವನ್ನು ಕೇರಳ ಪ್ರವಾಹ ಪರಿಹಾರ ನಿಧಿಗೆ ನೀಡಿದ್ದಾರೆ!

‘ನನ್ನ ಮಗ ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದಾನೆ, ಆದರೆ ಪ್ರವಾಹದಿಂದಾಗಿ ರಾಜ್ಯದಲ್ಲಿ ಅನೇಕರು ಎದುರಿಸುತ್ತಿರುವ ಸಂಕಷ್ಟಕ್ಕೆ ಹೋಲಿಸಿದರೆ ನನ್ನ ಸಂಕಷ್ಟ ಏನೂ ಅಲ್ಲ’ ಎನ್ನುತ್ತಾರೆ ಅನಸ್.

ಹೆಗಲಿಗೆ ಹೆಗಲು ಕೊಡುತ್ತಿರುವ ನಾಗರಿಕರು
ಸೇನೆ, ನೌಕಾಪಡೆ ಮತ್ತು ವಾಯುಪಡೆ, ಕೋಸ್ಟ್ ಗಾರ್ಡ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ೩ ದಿನಗಳಿಂದ ರಕ್ಷಣಾ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದರೂ, ಸಂಘ ಸಂಸ್ಥೆಗಳು ಹಾಗೂ ಸ್ವಯಂ ಸೇವಕರ ಪಾತ್ರ ಶ್ಲಾಘನೀಯ. ಇಡೀ ಕೇರಳದ ನಾಗರಿಕರೆಲ್ಲಾ ನೆರೆ ಪೀಡಿತ ಜನರೊಂದಿಗೆ ಹೆಗಲಿಗೆ ಹೆಗಲು ಕೊಡುತ್ತಿದ್ದಾರೆ. ಎರಡನೆಯದಾಗಿ, ಯುವಕರು ತಮ್ಮದೇ ಆದ ಪ್ರಯತ್ನಗಳ ಮೂಲಕ ರಕ್ಷಣಾ ಕಾರ್ಯವನ್ನು ಸಂಘಟಿಸುತ್ತಿದ್ದಾರೆ. ಐಟಿ ಕಂಪೆನಿಗಳೂ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಲು ತಮ್ಮ ಸಿಬ್ಬಂದಿಯನ್ನು ಬಿಟ್ಟುಕೊಟ್ಟಿವೆ.

ನಿಯಂತ್ರಣ ಕೊಠಡಿಯಾಗಿ ಸಾಮಾಜಿಕ ಮಾಧ್ಯಮ
ವಾಟ್ಸ್‌ಆಪ್, ಇಸ್ಟಾಗ್ರಾಂ ಮತ್ತು ಫೇಸ್‌ಬುಕ್‌ಗಳು ರಾತ್ರೋರಾತ್ರಿ ವಿಪತ್ತು ಪರಿಹಾರಕ್ಕಾಗಿ ನಿಯಂತ್ರಣ ಕೊಠಡಿಯಾಗಿ ಮಾರ್ಪಟ್ಟಿವೆ. ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆ, ಬಹುತೇಕ ಎಲ್ಲಾ ಫೇಸ್‌ಬುಕ್ ಪುಟಗಳು ಮತ್ತು ಗುಂಪುಗಳು ಪ್ರವಾಹದಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡುವ ಒಂದು ವಿಷಯದ ಮೇಲೆ ಮಾತ್ರ ಗಮನಹರಿಸಿವೆ. ಕಾಣೆಯಾದವರನ್ನು ಹುಡುಕಲು, ಸಹಾಯ ಪಡೆಯಲು, ಮಳೆ, ಪ್ರವಾಹ ಮತ್ತು ಭೂಕುಸಿತದ ಮಾಹಿತಿಯನ್ನು ಪೋಸ್ಟ್ ಮಾಡುವುದು ಇದರಲ್ಲಿ ಸೇರಿದೆ.

ಆಂದೋಲನ ಡೆಸ್ಕ್

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

10 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

11 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

11 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago