Andolana originals

ನವರಾತ್ರಿ ಸಂಭ್ರಮಕ್ಕೆ ಸಾಕ್ಷಿಯಾದ ಸಹಸ್ರಾರು ಜನರು

ಮಂಜು ಕೋಟೆ

ಕೋಟೆ: ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಿಯ ಆರಾಧನೆಯೊಂದಿಗೆ ಮಿನಿ ದಸರಾ ವೈಭವ 

ಎಚ್.ಡಿ.ಕೋಟೆ: ಪಟ್ಟಣದಲ್ಲಿ ಮಿನಿ ದಸರಾ ಹಾಗೂ ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀ ವರದರಾಜಸ್ವಾಮಿ ಹಾಗೂ ಶ್ರೀ ಚಾಮುಂಡೇಶ್ವರಿ ದೇವಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸ್ತಬ್ಧ ಚಿತ್ರ, ಕಲಾತಂಡಗಳೊಡನೆ ಬೃಹತ್ ಮೆರವಣಿಗೆ ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು.

ಶ್ರೀ ವರದರಾಜ ಸ್ವಾಮಿ ದೇವಸ್ಥಾನ ಮತ್ತು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬುಧವಾರ ಸಂಜೆ ಮಿನಿ ದಸರಾದ ಮೆರವಣಿಗೆಗೆ ದೇವಸ್ಥಾನಗಳ ಸಮಿತಿಯ ಮುಖ್ಯಸ್ಥರು, ಗಣ್ಯರು, ಪೊಲೀಸ್ ಇಲಾಖೆಯ ಅಧಿ ಕಾರಿಗಳ ಸಮ್ಮುಖದಲ್ಲಿ ಪೊಲೀಸ್ ಗೌರವದೊಂದಿಗೆ ಚಾಲನೆ ದೊರೆಯಿತು.

ಮೊದಲನೇ ಮುಖ್ಯ ರಸ್ತೆ, ಎರಡನೇ ಮುಖ್ಯ ರಸ್ತೆ, ಹೌಸಿಂಗ್ ಬೋರ್ಡ್, ಇನ್ನಿತರ ಮುಖ್ಯ ರಸ್ತೆಗಳಲ್ಲಿ ವರದರಾಜಸ್ವಾಮಿ, ಶ್ರೀದೇವಿ, ಭೂದೇವಿ, ಚಾಮುಂಡೇಶ್ವರಿ ದೇವಿಯ ವಿಗ್ರಹಗಳೊಂದಿಗೆ ಮೆರವಣಿಗೆ ಸಾಗಿತು. ಸಾವಿರಾರು ಜನರ ಸಮ್ಮುಖದಲ್ಲಿ ಧಾರ್ಮಿಕ ಆಚರಣೆಗಳ ಜತೆಗೆ ಸ್ಥಳೀಯ ಸಾಂಸ್ಕ ತಿಕ ಪರಂಪರೆ, ಕಲಾ ಪ್ರದರ್ಶನಗಳು ವಿಶೇಷ ಮೆರುಗು ತಂದವು. ಪಟ್ಟಣದ ಶ್ರೀ ವರದರಾಜ ಸ್ವಾಮಿ ಮತ್ತು ಚಾಮುಂಡೇಶ್ವರಿ ದೇವಸ್ಥಾನವು ಸ್ಥಳೀಯ ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ನವ ರಾತ್ರಿಯ ಅಂಗವಾಗಿ ಪ್ರತಿದಿನ ಮತ್ತು ವಿಜಯದಶಮಿ ದಿನ ಬೆಳಿಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ನವರಾತ್ರಿ ಉತ್ಸವ ಹಾಗೂ ಮಿನಿ ದಸರಾ ಕಾರ್ಯಕ್ರಮಗಳು ಯಾವುದೇ ಒಂದು ಸಮು ದಾಯಕ್ಕೆ ಸೀಮಿತವಾಗದೆ, ಪಟ್ಟಣದ ಜನರು ಒಗ್ಗಟ್ಟಿನಿಂದ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮತ್ತು ಸಾಂಸ್ಕ ತಿಕ ಪರಂಪರೆಯ ಪ್ರತೀಕವಾಗಿದ್ದವು. ತಹಸಿಲ್ದಾರ್ ಶ್ರೀನಿವಾಸ್, ನಾಗರತ್ನ, ಪುರಸಭೆ ಮಾಜಿ ಅಧ್ಯಕ್ಷರಾದ ಶಿವಮ್ಮ ಚಾಕಳ್ಳಿ ಕೃಷ್ಣ, ಚಾಮುಂಡೇಶ್ವರಿ ದೇವಸ್ಥಾನದ ಸಮಿತಿಯವರಾದ ನಟರಾಜ್, ಎಂ.ಸಿ.ದೊಡ್ಡ ನಾಯಕ, ರಾಮಯ್ಯ, ಬ್ಯಾಂಕ್ ವೀರಪ್ಪ, ನಾಗಣ್ಣ, ಪೇಂಟ್ ನಾಗೇಗೌಡ, ರಮೇಶ್, ಸ್ಟುಡಿಯೋ ಪ್ರಕಾಶ್, ದೇವರಾಜ್, ಸತೀಶ ಆರಾಧ್ಯ, ವರದರಾಜಸ್ವಾಮಿ ದೇವಸ್ಥಾನದ ಸಮಿತಿಯವರಾದ ರಂಗ ಅಯ್ಯಂಗಾರ್, ಪ್ರಸಾದ್, ತಿರುಮಲಾಚಾರ್ಯ, ಡೇರಿ ಶ್ರೀಕಾಂತ್ ಪೇಯಿಂಟ್ ಜಯಂತ್, ಚಾಕಳ್ಳಿ ಕೃಷ್ಣ, ಶ್ರೀಧರ್, ಸುಧಾಕರ್, ಡಿಶ್ ದೇವರಾಜು, ಪೂರ್ಣೇಶ, ಯುವರಾಜ, ಕನ್ನಡ ಪ್ರಮೋದ್, ಕೆಂಡಗಣ್ಣ, ಪೊಲೀಸ್ ಗುಂಡಣ್ಣ, ರಾಮಣ್ಣ, ವಿನಯ್ ಭಜರಂಗಿ, ಜೈಶಂಕರ್, ರಾಜೇಶ, ನಿಜಗುಣ, ಸಂತು, ಮಂಜು ಕೋಟೆ, ಬೀಚನಹಳ್ಳಿ ಮಂಜು, ಚಿಕ್ಕನಾಯಕ, ಬಿಲ್ಲನಾಯಕ, ರಾಜನಾಯಕ, ಜವರನಾಯಕ, ಮಹಾದೇವಪ್ಪ, ಚೆಲುವಕೃಷ್ಣ, ದೇವ ನಾಯಕ, ಗಣೇಶ, ಕೃಷ್ಣನಾಯಕ, ರಘು, ಸೋಮನಾಯಕ, ನಂಜುಂಡ ಮೂರ್ತಿ, ಪಟೇಲ್ ನಾಗರಾಜ್, ಶೆಟ್ಟಿ, ಸುರೇಶ, ಹರ್ಷಿತ್, ಬೀರೇಗೌಡ, ಜೆ.ಪಿ.ನಾಗರಾಜ್, ಪೊಲೀಸ್ ಅಧಿಕಾರಿಗಳಾದ ಸುರೇಶ್ ನಾಯಕ್, ಶಿವಕುಮಾರ್, ಚಿನ್ನದ ಪದಕ ವಿಜೇತ ಸೈಯದ್, ಕಬೀರ್ ಉದ್ದೀನ್, ಯೋಗೇಶ್, ಉಮೇಶ್, ಆನಂದ್, ಶ್ರೀನಿವಾಸ್, ಮಹೇಶ್, ಅವಿನಾಶ್, ನಿತಿನ್, ಮಹದೇವಮ್ಮ, ನೂರಾರು ಮಹಿಳೆಯರು ಉಪಸ್ಥಿತರಿದ್ದರು.

ಸಂಸ್ಕೃತಿಯ ಸಂಗಮ:  ಶ್ರೀ ವರದರಾಜಸ್ವಾಮಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿಯ ನವರಾತ್ರಿ ಉತ್ಸವದ ಮೂಲಕ ಭಕ್ತಿ, ಸಂಪ್ರದಾಯ ಮತ್ತು ಸ್ಥಳೀಯ ಸಂಸ್ಕ ತಿಯ ಸಂಗಮ ಕಂಡುಬಂದಿತು. ಮಿನಿ ದಸರಾ ಕಾರ್ಯಕ್ರಮವು ಪಟ್ಟಣದ ಜನರಲ್ಲಿ ಹೊಸ ಸಂಭ್ರಮ ಮೂಡಿಸಿತು.

 

 

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ ಜಂಬೂಸವಾರಿಗೆ ಸಿಎಂ ಡಿಕೆಶಿ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಭ ಮೀನ ಲಗ್ನದಲ್ಲಿ ಚಾಲನೆ ನೀಡಿದರು.…

18 hours ago

ಅಂಬಾರಿ ಹೊತ್ತ ಪ್ರಶಾಂತ ಜಂಬೂ ಸವಾರಿಗೆ ಸಜ್ಜು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಘಟ್ಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಶಾಂತನಿಗೆ ಸಾಥ್ ನೀಡಲು ಕುಮ್ಕಿ ಆನೆಗಳಾಗಿ ರೂಪ…

18 hours ago

ಜಂಬೂಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧಚಿತ್ರಗಳು

ಮೈಸೂರು:  ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ವೈವಿಧ್ಯಮಯ ಸ್ತಬ್ಧಚಿತ್ರಗಳು ಹಾಗೂ ಜಾನಪದ ಕಲಾತಂಡಗಳು ವಿಶೇಷ ಮೆರುಗು ನೀಡಿವೆ. ನಾಡಿನ…

18 hours ago

ಚಿನ್ನದ ಅಂಬಾರಿ ಹೊರಲು ಸಿದ್ಧನಾದ ಪ್ರಶಾಂತ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಈಗಾಗಲೇ ಸ್ತಬ್ಧಚಿತ್ರಗಳು ಹಾಗೂ ವಿವಿಧ ಕಲಾತಂಡಗಳು ಸಾಗುತ್ತಿವೆ.…

19 hours ago

ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ.ಶಿವಕುಮಾರ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಂದಿಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಿದರು.…

20 hours ago

ಮೈಸೂರು ದಸರಾ ಮಹೋತ್ಸವ: ವಜ್ರಮುಷ್ಠಿ ಕಾಳಗ ರದ್ದು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಸಂಪ್ರದಾಯಗಳಲ್ಲಿ ಒಂದಾದ ವಜ್ರಮುಷ್ಠಿ ಕಾಳಗವನ್ನು ಈ ಬಾರಿ ರದ್ದುಪಡಿಸಲಾಗಿದೆ. ಅರಮನೆಯ ಸವಾರಿ…

23 hours ago