ಮಂಜು ಕೋಟೆ
ಕೋಟೆ: ಕೆಲವರು ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಚಿಕಾಗೋದಿಂದ ಆಗಮಿಸಿ ದಾಖಲೆ ಸಲ್ಲಿಸಿದ ೪೦ ಎಕರೆ ಜಮೀನಿನ ಮಾಲೀಕ ಅಲಿ ಹಸನ್
ಎಚ್.ಡಿ.ಕೋಟೆ: ಅನೇಕ ವಿವಾದಗಳಿಂದ ಕೂಡಿದ್ದ ಕೋಟ್ಯಂತರ ರೂ. ಮೌಲ್ಯದ ೪೦ ಎಕರೆ ಜಮೀನಿನ ಮಾಲೀಕ ಹಲವಾರು ವರ್ಷಗಳ ನಂತರ ವಿದೇಶದಿಂದ ಆಗಮಿಸಿ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ‘ಇದು ನನ್ನ ಜಮೀನು, ನಾನು ಇನ್ನೂ ಬದುಕಿದ್ದೇನೆ’ ಎಂದು ದಾಖಲಾತಿಗಳನ್ನು ಸಲ್ಲಿಸಿದ್ದಾರೆ.
ಪಟ್ಟಣದ ಹೃದಯಭಾಗದ ಕೃಷ್ಣಾಪುರ ಸಮೀಪದಲ್ಲಿರುವ ಸರ್ವೆ ನಂ.೮೪ರಲ್ಲಿ ೪೦ ಎಕರೆ ಜಮೀನಿನ ಮಾಲೀಕರಾದ ಅಲಿ ಹಸನ್ ಅವರು ನಿಧನರಾಗಿದ್ದಾರೆ ಎಂದು ಕೆಲವರು ಗೊಂದಲ ಸೃಷ್ಟಿಸಿ ಮತ್ತು ಜಮೀನಿನ ವಿಚಾರವಾಗಿ ಕೆಲವರಿಂದ ವಿವಾದ ಮತ್ತು ಸಮಸ್ಯೆಗಳು ಎದುರಾಗಿ ಹಲವು ಪ್ರಕರಣಗಳು ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ್ದವು.
ಈ ಪ್ರಕರಣಗಳಿಗೆ ತಿಲಾಂಜಲಿ ಹೇಳಲು ಮೈಸೂರಿನ ನಿವಾಸಿಯಾಗಿದ್ದ, ಅಮೆರಿಕಾದ ಚಿಕಾಗೋದಲ್ಲಿ ನೆಲೆಸಿರುವ ೮೨ ವರ್ಷದ ಅಲಿ ಹಸನ್ ಚಿಕಾಗೊದಿಂದ ಬಂದು ಪಟ್ಟಣದ ನ್ಯಾಯಾಲಯಕ್ಕೆ ಮತ್ತು ವಿವಿಧ ಕಚೇರಿಗಳಿಗೆ ಭೇಟಿ ನೀಡಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ.
೪೫ ವರ್ಷಗಳ ಹಿಂದೆ ಮೈಸೂರಿನ ನಜರ್ಬಾದ್ ನಿವಾಸಿಗಳಾಗಿದ್ದ ಅಲಿ ಹಸನ್ ಮತ್ತು ಪತ್ನಿ ಕೋಟೆ ಪಟ್ಟಣದಲ್ಲಿ ೪೦ ಎಕರೆ ಜಮೀನನ್ನು ಖರೀದಿಸಿದ್ದರು. ೧೯೯೨ರಲ್ಲಿ ಅವರ ಕುಟುಂಬ ವಿದೇಶಕ್ಕೆ ತೆರಳಿ ನೆಲೆಸಿತ್ತು. ಬಳಿಕ ಅನೇಕ ಭೂಗಳ್ಳರು ಜಮೀನಿನ ಮತ್ತು ವ್ಯಕ್ತಿಯ ನಕಲಿ ದಾಖಲಾತಿ ಸೃಷ್ಟಿಸಿದ್ದರಿಂದ ಅನೇಕ ವಿವಾದಗಳು ಉಂಟಾಗಿದ್ದವು.
ಅಲಿ ಹಸನ್ ಅವರ ಪರಿಚಿತರಾದ ಅಮರನಾಥ್ ಮತ್ತು ಬಾಲಾಜಿಯವರು ೨೦೧೫ರಲ್ಲಿ ಜಮೀನಿನ ವಿಚಾರವಾಗಿ ಜಿಪಿಎ ಪಡೆದಿದ್ದು, ೨೦೨೧ರಲ್ಲಿ ಮೈಸೂರಿನ ಉದ್ಯಮಿ ಎಂ.ಅರುಣ್ಗೌಡ ಅವರಿಗೆ ೧೫ ಎಕರೆ, ೨೦೨೩ರಲ್ಲಿ ಸುರೇಂದ್ರನಾಥ್ ರೆಡ್ಡಿ, ರಫೀಕ್ ಅಹಮದ್, ಅಲಿ ತೋಸಿಫ್ ಎಂಬವರಿಗೆ ೨೫ ಎಕರೆ ಜಮೀನನ್ನು ಮಾರಾಟ ಮಾಡಿದ್ದರು.
ಕಳೆದ ವರ್ಷ ಮೈಸೂರಿನ ಕಬಿನಿ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಸಂಸ್ಥೆಯವರು ಈ ನಾಲ್ವರಿಂದ ೪೦ ಎಕರೆ ಜಮೀನನ್ನು ಲೇಔಟ್ ಆಗಿ ನಿರ್ಮಾಣ ಮಾಡಲು ೬೦:೪೦ ಅನುಪಾತದಲ್ಲಿ ಜಿ.ವಿ.ಗೆ ಪಡೆದಿದ್ದರು. ಮೈಸೂರಿನ ನಿವಾಸಿ ಮಹಮದ್ ಹನೀಫ್ ಎಂಬವರು ನಮ್ಮ ತಾತ ಅಲಿ ಹಸನ್, ತಂದೆ ಇಲಿಯಾಸ್ ಆಗಿದ್ದು ಇವರು ಸಾವನಪ್ಪಿದ್ದಾರೆ. ಇವರ ಜಮೀನು ನಮ್ಮದು ಎಂದು ನ್ಯಾಯಾಲಯಕ್ಕೆ ಮತ್ತು ಸಂಬಂಧಪಟ್ಟ ಕಚೇರಿಗೆ ಮೊರೆ ಹೋಗಿದ್ದರು.
ಮತ್ತೆ ಜಮೀನು ಸಮಸ್ಯೆಗೆ ಎದುರಾದ ಹಿನ್ನೆಲೆಯಲ್ಲಿ ಕಬಿನಿ ಬಿಲ್ಡರ್ಸ್ ಅಂಡ್ ಡೆವಲಪಸ್ನವರು ಚಿಕಾಗೋದಲ್ಲಿದ್ದ ಅಲಿ ಹಸನ್ ಮತ್ತು ಅವರ ಮಗ ಸಮ್ಸ್ ಇದ್ರಿಸ್ ಅವರನ್ನು ಪತ್ತೆ ಮಾಡಿ, ಇಲ್ಲಿ ನಡೆದ ಘಟನೆಗಳನ್ನು ತಿಳಿಸಿದಾಗ, ವಿದೇಶದಿಂದ ತಂದೆ ಮತ್ತು ಮಗ ಆಗಮಿಸಿ, ಉಪನೋಂದಣಾಧಿಕಾರಿ ಕಚೇರಿ ಮತ್ತು ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿಗೆ ತಮಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ನೀಡಿದ್ದಾರೆ.
ತಾಲ್ಲೂಕಿನಲ್ಲಿ ಅನೇಕ ಭೂ ಸಮಸ್ಯೆಗಳು ಎದುರಾಗಿದ್ದು, ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಜಮೀನುಗಳನ್ನು ಕಬಳಿಸಲು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಇಂತಹವುಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕಾಗಿದೆ.
” ನಾನು ವಿದೇಶದಲ್ಲಿ ನೆಲೆಸಿರುವುದನ್ನು ಗಮನಿಸಿ ಕೆಲವರು ನಕಲಿ ದಾಖಲಾತಿ ಸೃಷ್ಟಿಸಿ ಜಮೀನು ಕಬಳಿಸಲು ಮುಂದಾಗಿದ್ದರು. ನಾನು ಜೀವಂತವಾಗಿರುವುದಕ್ಕೆ ಮತ್ತು ಜಮೀನು ನನ್ನದು ಎಂಬುದಕ್ಕೆ ಮತ್ತು ಜಿಪಿಎ ಮೂಲಕ ಬೇರೆಯವರಿಗೆ ಮಾರಾಟ ಮಾಡಿರುವುದಕ್ಕೆ ಎಲ್ಲ ದಾಖಲಾತಿಗಳನ್ನೂ ನ್ಯಾಯಾಲಯಕ್ಕೆ ಮತ್ತು ಸಂಬಂಧಪಟ್ಟ ಕಚೇರಿಗಳಿಗೆ ನಾನು ಮತ್ತು ನನ್ನ ಮಗ ಸಲ್ಲಿಸಿದ್ದೇವೆ.”
-ಅಲಿ ಹಸನ್, ಚಿಕಾಗೋ ನಿವಾಸಿ
” ಎಚ್.ಡಿ.ಕೋಟೆ ಪಟ್ಟಣದ ಅಭಿವೃದ್ಧಿಗಾಗಿ ಅತ್ಯುತ್ತಮವಾದ ೪೦ ಎಕರೆಯ ಲೇಔಟ್ ನಿರ್ಮಾಣವಾಗುತ್ತದೆ. ಶಾಲೆ, ವಾಣಿಜ್ಯ ಮಳಿಗೆಗಳು,ರೆಸ್ಟೋರೆಂಟ್, ಹೋಟೆಲ್, ಮಾರುಕಟ್ಟೆ, ಪಾರ್ಕ್, ಬೃಂದಾವನ, ಕಡಿಮೆ ದರಕ್ಕೆ ನಿವೇಶನಗಳು ಇನ್ನಿತರ ಸೌಲಭ್ಯಗಳು ಸಾರ್ವಜನಿಕರಿಗೆ ದೊರೆಯಲಿವೆ.”
-ಸಂಪತ್ ಕೊಠಾರಿ, ಮುಖ್ಯಸ್ಥರು, ಕಬಿನಿ ಬಿಲ್ಡರ್ಸ್ ಅಂಡ್ ಡೆವಲಪರ್ಸ್
ಕೆ.ಎಸ್. ಚಂದ್ರಶೇಖರ್ ಮೂರ್ತಿ ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ…
ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು,…
ಚಾಮರಾಜನಗರ: ಚಳಿ ಇನ್ನೂ ದೂರ ಸರಿದಿಲ್ಲ. ಆದರೂ ಬಿಸಿಲು ಬೆವರು ಹರಿಯುವ ಮಟ್ಟಿಗೆ ಸುಡುತ್ತಿದೆ. ನೆಲ ದಿನೇ ದಿನೇ ಕಾದ…
ಮಾಗನೂರು ಶಿವಕುಮಾರ್ ಇಂದು,ನಾಳೆ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ಮಳವಳ್ಳಿ: ಶಾಂತಿ-ಸೌಹಾರ್ದತೆಯ ಸಂದೇಶ ಸಾರುವ ಪಟ್ಟಣದ ಗ್ರಾಮ ದೇವತೆಗಳಾದ ದಂಡಿನ…
ಪ್ರವಾಸಿಗರ ಅಸಮಾಧಾನ; ವಿಡಿಯೋ ವೈರಲ್ ಮಡಿಕೇರಿ: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್‌ಪಟ್ಟಿ ಜೀಪ್ ಸಫಾರಿಗೆ ಪ್ರವಾಸಿಗರಿಂದ ದುಪ್ಪಟ್ಟು…
ಕೆ.ಬಿ.ರಮೇಶನಾಯಕ ಮೊದಲ ಹಂತದಲ್ಲಿ ಮೈಸೂರಿನ ಪ್ರಮುಖ ಮೂರು ರಸ್ತೆಗಳ ಗುರುತು ಮೈಸೂರು: ದೇಶದ ಪ್ರಮುಖ ಸ್ಮಾರ್ಟ್ ಸಿಟಿಗಳಲ್ಲಿ ನಿರ್ಮಾಣಗೊಂಡಿರುವ ವಿಶ್ವದರ್ಜೆಯ…