ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS
ಮೈಸೂರು: ಕಳೆದ ಎರಡು ತಿಂಗಳುಗಳಿಂದ ಕಾಡಂಚಿನ ಪ್ರದೇಶಗಳಲ್ಲಿ ಪ್ರತ್ಯಕ್ಷವಾಗುತ್ತಿರುವ ಹುಲಿಗಳು, ಮಾನವಹಾಗೂ ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಇಂತಹ ಹುಲಿಗಳ ಸೆರೆಗೆ ಕಾರ್ಯಾಚರಣೆ ಮುಂದುವರಿಸಿರುವ ಅರಣ್ಯ ಇಲಾಖೆಯಲ್ಲಿ ಥರ್ಮಲ್ ಡ್ರೋನ್ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ.
ಬಂಡೀಪುರ-ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಹುಲಿ ದಾಳಿ ತಡೆಯಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಕಾಡಿನಿಂದ ಹೊರಬರುವ ಹುಲಿಗಳ ಮೇಲೆ ನಿಗಾ ಇಡಲು ಥರ್ಮಲ್ ಡ್ರೋನ್ ಸ್ಕ್ವಾಡ್ ನಿಗಾ ಇರಿಸಿದೆ. ಹುಲಿ ಸೆರೆಗೆ ಅರಣ್ಯ ಇಲಾಖೆ ಸಾಕಾನೆಗಳನ್ನು ಬಳಕೆ ಮಾಡಿಕೊಂಡಿದ್ದಷ್ಟೇ ಅಲ್ಲದೇ ಮುಂಜಾನೆ, ಮುಸ್ಸಂಜೆ ಹಾಗೂ ಕಗ್ಗತ್ತಲಿನಲ್ಲಿಯೂ ಹುಲಿ ಇರುವ ಸ್ಥಳಗಳ ಬಗ್ಗೆ ನಿಖರ ಮಾಹಿತಿ ಒದಗಿಸುವ ಥರ್ಮಲ್ ಡ್ರೋನ್ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಸಾಮಾನ್ಯವಾಗಿ ಸೇನಾ ಕಾರ್ಯಾಚರಣೆ, ಗಡಿ ಸುರಕ್ಷತೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಳಕೆ ಮಾಡಲಾಗುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಥರ್ಮಲ್ ಡ್ರೋನ್ ಕ್ಯಾಮೆರಾವನ್ನು ಅರಣ್ಯ ಇಲಾಖೆ ಜನವಸತಿ ಪ್ರದೇಶಗಳಿಗೆ ಬಂದು ಜನಸಾಮಾನ್ಯರಿಗೆ ಉಪಟಳ ನೀಡುವ ವನ್ಯಜೀವಿಗಳ ಸೆರೆಗೆ ಬಳಕೆ ಮಾಡಿಕೊಳ್ಳುತ್ತಿದೆ. ಜತೆಗೆ ಇದರಲ್ಲಿ ಯಶಸ್ಸನ್ನೂ ಕಂಡಿದೆ.
ಸರಗೂರಿನಲ್ಲಿ ನ.೯ರಂದು ರಾತ್ರಿ ೯ ಗಂಟೆ ಸುಮಾರಿಗೆ ಪೊದೆಯಲ್ಲಿ ಅಡಗಿ ಕುಳಿತಿದ್ದ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಹಾಗೆಯೇ ಹುಣಸೂರಿನಲ್ಲಿ ತಡರಾತ್ರಿಕಾರ್ಯಾಚರಣೆ ನಡೆಸಿ, ಜೋಳದ ಹೊಲದಲ್ಲಿ ಅಡಗಿದ್ದ ಹುಲಿಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿತ್ತು. ಇದೇ ರೀತಿ ಕಾಡಿನಿಂದ ಹೊರಗೆ ಬಂದಿದ್ದ ೧೫ಕ್ಕೂ ಹೆಚ್ಚು ಹುಲಿಗಳನ್ನು ಅರಣ್ಯ ಇಲಾಖೆ ಥರ್ಮಲ್ ಡ್ರೋನ್ ನೆರವಿನಿಂದ ಯಶಸ್ವಿಯಾಗಿ ಸೆರೆ ಹಿಡಿದಿದೆ.
ಥರ್ಮಲ್ ಡ್ರೋನ್ ವಿಶೇಷತೆ ಏನು?: ಥರ್ಮಲ್ ಡ್ರೋನ್ ಕ್ಯಾಮೆರಾಗೆ ಮೂರು ಬ್ಯಾಟರಿಗಳಿದ್ದು, ತಲಾ ೪೦ ನಿಮಿಷಗಳವರೆಗೆ ಚಾರ್ಜ್ ಲಭ್ಯತೆ ಇರುತ್ತದೆ. ವನ್ಯಜೀವಿಗಳು (ಹುಲಿ-ಆನೆ) ಎಲ್ಲಿವೆ ಎಂಬುದರ ಆಧಾರದ ಮೇಲೆ ರಾತ್ರಿಮತ್ತು ಹಗಲು ಕ್ಯಾಮೆರಾ ಚಾಲನೆ ಮಾಡಲಾಗುತ್ತದೆ. ಹುಲಿಗಳು ಪತ್ತೆಯಾದ ತಕ್ಷಣ ಕ್ಯಾಮೆರಾದಲ್ಲಿ ಲೊಕೇಶನ್ಸಹಿತ ಚಿತ್ರ ಸೆರೆ ಹಿಡಿದು, ಅರಣ್ಯ ಇಲಾಖೆ ಸಿಬ್ಬಂದಿಗೆಕಳುಹಿಸಿಕೊಡುತ್ತದೆ. ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಸಾಕಾನೆ ಬಳಸಿಕೊಂಡು ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಾರೆ.
ಜಿಪಿಎಸ್ ಮೂಲಕ ಲೊಕೇಶನ್ ನಿಗದಿ ಮಾಡಿದರೆ, ಥರ್ಮಲ್ ಡ್ರೋನ್ ಅಲ್ಲಿಯವರೆಗೂ ನಿರಾಯಾಸವಾಗಿಪ್ರಯಾಣಿಸುತ್ತದೆ. ಜೇನುನೊಣದ ಮಾದರಿಯಲ್ಲಿಯೇ ಶಬ್ದ ಮಾಡುವುದರಿಂದ ಹುಲಿ-ಆನೆ ಸೇರಿದಂತೆ ಯಾವುದೇ ಪ್ರಾಣಿಗಳಿಗೂ ತೊಂದರೆ ಆಗುವುದಿಲ್ಲ. ಪ್ರಾಣಿಗಳು ಇರುವನಿರ್ದಿಷ್ಟ ಜಾಗದ ಚಿತ್ರ ಸೆರೆ ಹಿಡಿದ ಕೂಡಲೇ ಆನೆ ಕಾರ್ಯಪಡೆಗೆ ರವಾನಿಸುತ್ತದೆ.
ಈ ಕ್ಯಾಮೆರಾವನ್ನು ಮಲೆನಾಡು ಭಾಗದಲ್ಲಿ ಆನೆಗಳನ್ನು ಮರಳಿ ಕಾಡಿಗೆ ಕಳುಹಿಸಲು ಬಳಸಲಾಗುತ್ತಿತ್ತು. ಇದೀಗ ಹುಲಿಕಾರ್ಯಾಚರಣೆಗೂ ಇದರ ಬಳಕೆಯಿಂದ ಅನುಕೂಲವಾಗಿದೆ. ಥರ್ಮಲ್ ಡ್ರೋನ್ ವನ್ಯಜೀವಿಗಳ ಸೆರೆಗಷ್ಟೇ ಅಲ್ಲದೇಅವುಗಳ ಚಲನವಲನಗಳ ಮೇಲೂ ನಿಗಾ ಇಡಲು ಬಳಕೆ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಅರಣ್ಯ ಇಲಾಖೆ ಕಾಡಿನಿಂದ ನಾಡಿಗೆ ಬಂದ ಆನೆಗಳನ್ನು ಕಾಡಿಗೆಮರಳಿಸಲು ಬಳಕೆ ಮಾಡಿಕೊಳ್ಳಲಾಗಿದೆ. ಈ ಡ್ರೋನ್ ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಲು, ದೂರದಿಂದಲೇ ಪ್ರಾಣಿಗಳನ್ನು ಗುರುತಿಸಿ, ಅವುಗಳ ಚಲನವಲನಗಳ ಮೇಲೆ ನಿಗಾ ಇಡಲು ಸಹಕಾರಿಯಾಗಿದೆ.
ಮೈಸೂರಿನಲ್ಲೇ ಮೊದಲ ಬಳಕೆ:
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನಲ್ಲಿ ೨೦೨೨ರ ಡಿಸೆಂಬರ್‌ನಲ್ಲಿ ಚಿರತೆಯೊಂದು ಬಾಲಕ ಸೇರಿದಂತೆ ಮೂವರನ್ನು ಬಲಿ ಪಡೆದು ಸತತ ೨೦ ದಿನಗಳ ಕಾಲ ಅರಣ್ಯ ಇಲಾಖೆ ಕಣ್ಣಿಗೆ ಬೀಳದೆ ಚಳ್ಳೆಹಣ್ಣು ತಿನ್ನಿಸಿತ್ತು. ಮನುಷ್ಯರನ್ನು ಬಲಿ ಪಡೆದು ಕಬ್ಬಿನ ಗದ್ದೆಗಳಲ್ಲಿ ಅಡಗಿಕೊಳ್ಳುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವುದೇ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಕಡೆಗೆ ಸರ್ಕಾರ ಚಿರತೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಆದೇಶವನ್ನೂ ಮಾಡಿತ್ತು. ಆದರೆ, ಚಿರತೆ ಕೊಲ್ಲಲು ಮನಸ್ಸು ಮಾಡದ ಅಧಿಕಾರಿಗಳು ಸೇನೆಯಲ್ಲಿ ಬಳಕೆ ಮಾಡಲಾಗುವ ಥರ್ಮಲ್ ಡ್ರೋನ್‌ಗಳನ್ನು ತರಿಸಿಕೊಂಡು ಕಾರ್ಯಾಚರಣೆ ಮಾಡಿ, ನರಹಂತಕ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದರು. ಘಟನೆ ಬಳಿಕ ಸಾರ್ವಜನಿಕರ ವಿರೋಧ, ಮೇಲಧಿಕಾರಿಗಳ ಒತ್ತಡವನ್ನೂ ಇಲಾಖೆ ತಣ್ಣಗಾಗಿಸಿತ್ತು
” ಹುಲಿ ಸೆರೆ ಕಾರ್ಯಾಚರಣೆ ನಡೆಸಲು ಡ್ರೋನ್ ಕ್ಯಾಮೆರಾಬಹಳಷ್ಟು ಉಪಯೋಗವಾಗಿದೆ. ಪ್ರಾಣಿಗಳ ಮೇಲೆ ನಿಗಾ ಇಡಲು ಮತ್ತು ಅವುಗಳು ಇರುವ ಸ್ಥಳವನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಥರ್ಮಲ್ ಡ್ರೋನ್ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ವಿಶೇಷವಾಗಿ ರಾತ್ರಿ ವೇಳೆ ವನ್ಯಜೀವಿಗಳ ಚಲನವಲನವನ್ನು ಸೆರೆ ಹಿಡಿಯಲು ಸಹಾಯ ಮಾಡಲಿದೆ.”
-ಸೀಮಾ, ನಿರ್ದೇಶಕಿ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ
ಇಲಾಖೆಯಲ್ಲಿ ಎಲ್ಲೆಲ್ಲಿ ಬಳಕೆ?:
ಥರ್ಮಲ್ ಡ್ರೋನ್ ಉಪಯೋಗ ಅರಿತ ಅರಣ್ಯ ಇಲಾಖೆ ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಷ್ಟೇ ಅಲ್ಲದೇ, ವನ್ಯಜೀವಿ ವಲಯ, ಚಿರತೆ ಕಾರ್ಯಪಡೆ (ಎಲ್‌ಟಿಎಫ್), ಆನೆ ಕಾರ್ಯಪಡೆ (ಇಟಿಎಫ್) ಹಾಗೂ ಹುಲಿ ಸಂರಕ್ಷಣೆಯ ವಿಶೇಷ ಪಡೆ(ಎಸ್‌ಟಿಪಿಎಫ್)ಯಲ್ಲಿಯೂ ಈ ಡ್ರೋನ್‌ಗಳನ್ನು ಬಳಸತೊಡಗಿದೆ.
ನವದೆಹಲಿ: ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ಕುರಿತು…
ನವದೆಹಲಿ: ಚುನಾವಣಾ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ…
ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿದರು. ವಿಧಾನಸಭೆಯಲ್ಲಿ ವಂದೇಮಾತರಂ ಗೀತೆ…
ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಇಂದು 127…
ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…