Andolana originals

ಹುಲಿ, ಚಿರತೆ ಸೆರೆಗೆ ಪಶುವೈದ್ಯರ ಕೊರತೆ!

ಪ್ರಶಾಂತ್ ಎಸ್.

ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಇಬ್ಬರೇ ವೈದ್ಯರು

ವನ್ಯಜೀವಿ ವೈದ್ಯರಿಲ್ಲದೆ ಹುಲಿ ಚಿರತೆ ಕಾರ್ಯಾಚರಣೆ ವಿಳಂಬ

೨೨ ದಿನಗಳಿಂದ ಮಾನವ ಹುಲಿ ಸಂಘರ್ಷ ಹೆಚ್ಚಳ

ಮೈಸೂರು: ಮಾನವ-ವನ್ಯಜೀವಿ ಸಂಘರ್ಷ ದಿನೇದಿನೇ ಹೆಚ್ಚುತ್ತಿದ್ದು, ಒಂದೆಡೆ ಇದಕ್ಕೆ ಶಾಶ್ವತ ಪರಿಹಾರ ನೀಡಲಾಗದೆ ಅರಣ್ಯ ಇಲಾಖೆ ಹಿನ್ನೆಡೆ ಅನುಭವಿಸುತ್ತಿದೆ. ಮತ್ತೊಂದೆಡೆ ಕಾಡಂಚಿನ ಪ್ರದೇಶಗಳಲ್ಲಿ ಉಪಟಳ ನೀಡುತ್ತಿರುವ ಚಿರತೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಶುವೈದ್ಯರ (ವನ್ಯಜೀವಿ) ಕೊರತೆ ಎದ್ದು ಕಾಣುತ್ತಿದೆ.

ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ೮ರಿಂದ ೧೦ ಮಂದಿ ಪಶು ವೈದ್ಯರ ಅಗತ್ಯವಿದೆ. ಆದರೆ ಇಬ್ಬರೇ ಇಬ್ಬರು ವನ್ಯ ಜೀವಿ ಪಶುವೈದ್ಯರಿದ್ದಾರೆ. ಕಳೆದ ೨೨ ದಿನ ಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸರಗೂರು ಹಾಗೂ ಹೆಡಿಯಾಲ ವ್ಯಾಪ್ತಿಯಲ್ಲಿ ಹುಲಿ-ಮಾನವ ಸಂಘರ್ಷ ತಾರಕಕ್ಕೇರಿದೆ.

ಆದರೆ, ಕಾಡಂಚಿನಲ್ಲಿ ಜನತೆಗೆ ಉಪಟಳ ನೀಡುತ್ತಿರುವ ಆನೆ, ಹುಲಿ, ಚಿರತೆಗಳ ಸೆರೆ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ವನ್ಯ ಜೀವಿ ವೈದ್ಯರಿಲ್ಲದ ಪರಿಣಾಮ ಕಾರ್ಯಾಚರಣೆ ವಾರಗಟ್ಟಲೆ ನಡೆಯುವಂತಾಗಿದೆ. ಸರಗೂರು ವ್ಯಾಪ್ತಿಯಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದ್ದು, ಇದಕ್ಕೆ ಬಂಡೀಪುರ, ನಾಗರಹೊಳೆಯ ಪಶುವೈದ್ಯರನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೇ ವೇಳೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಯಾವುದಾದರೂ ವನ್ಯಜೀವಿ ಗಾಯಗೊಂಡಲ್ಲಿ ಅಥವಾ ಬೇರೆ ಪ್ರದೇಶದಲ್ಲಿ ಆನೆ ದಾಂದಲೆ ನಡೆಸಿದ್ದಲ್ಲಿ ಈ ವೈದ್ಯರನ್ನೇ ಅಲ್ಲಿಗೆ ನಿಯೋಜಿಸಲಾಗುತ್ತದೆ. ಹಾಗಾಗಿ ಉಪಟಳ ನೀಡುವ ಪ್ರಾಣಿಗಳ ಸೆರೆ ಕಾರ್ಯಾಚರಣೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಪ್ರತಿ ವಲಯಕ್ಕೂ ಬೇಕು ವನ್ಯಜೀವಿ ವೈದ್ಯರು: ಮೈಸೂರು ಜಿಲ್ಲೆಯು ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶವನ್ನು ಒಳ ಗೊಂಡಿದ್ದು ಇಲ್ಲಿ ಆಗಾಗ್ಗೆ ಸಂಭವಿಸುವ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಅರಣ್ಯ ಸಿಬ್ಬಂದಿ ಜೊತೆಗೆ ಪ್ರತಿ ವಲಯಕ್ಕೂ ನುರಿತ ಪಶುವೈದ್ಯರ ಅಗತ್ಯವಿದೆ. ನಂಜನಗೂಡು, ಸರಗೂರು, ಎಚ್.ಡಿ.ಕೋಟೆ, ಮೈಸೂರು ವಲಯಗಳಿಗೆ ಪಶುವೈದ್ಯರನ್ನು ನೇಮಿಸಿದಲ್ಲಿ ಈಗಿರುವ ವೈದ್ಯರ ಮೇಲಿನ ಒತ್ತಡ ತಗ್ಗಲಿದೆ.

ವೈದ್ಯರಿಗೂ ಪ್ರತ್ಯೇಕ ಕೇಡರ್ ಅಗತ್ಯ: ಅರಣ್ಯ ಇಲಾಖೆಯಲ್ಲಿ ಪಶುವೈದ್ಯರನ್ನು ಅವರ ಶ್ರೇಣಿಗೆ ಅನುಸಾರ ನಡೆಸಿಕೊಳ್ಳದೇ, ಡಿ ಗ್ರೂಪ್ ನೌಕರರಂತೆ ನಡೆಸಿಕೊಳ್ಳಲಾಗುತ್ತದೆ ಎಂಬ ಆರೋಪ ಇದೆ. ಹಾಗಾಗಿ ಇಲಾಖೆಯ ವಶುವೈದ್ಯರಾಗಿ ಬರಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರ ತಜ್ಞ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಪ್ರತ್ಯೇಕ ಕೇಡರ್ ಮಾಡಬೇಕಿದೆ. ಜತೆಗೆ ಪ್ರತ್ಯೇಕ ಕಚೇರಿ, ವಾಹನ ವ್ಯವಸ್ಥೆಯಂತಹ ಮೂಲ ಸೌಲಭ್ಯ ಕಲ್ಪಿಸ ಬೇಕು ಎಂಬ ಕೂಗು ಕೇಳಿಬರುತ್ತಿದೆ.

” ವನ್ಯಜೀವಿ ಪಶು ವೈದ್ಯರ ಕೊರತೆ ಕುರಿತು ನಮ್ಮಇಲಾಖೆಯ ಮೇಲಧಿಕಾರಿಗಳು ಹಾಗೂ ಅರಣ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಲಾಗುವುದು, ಸದ್ಯದಲ್ಲೇ ಸೂಕ್ತ ಕ್ರಮಕೈಗೊಳ್ಳುವ ಭರವಸೆ ಇದೆ.”

-ಪರಮೇಶ್, ಎಸಿಎಫ್‌ 

” ಹುಲಿ ಮನುಷ್ಯನ ಮೇಲೆ ದಾಳಿ ಮಾಡಿದಾಗ ಅರಿವಳಿಕೆ ಚುಚ್ಚುಮದ್ದು ನೀಡಿ ಅದನ್ನು ಸೆರೆಹಿಡಿಯಲು ವನ್ಯಜೀವಿ ಪಶು ವೈದ್ಯರ ಅಗತ್ಯವಿದ್ದು ನಾಗರಹೊಳೆ ಹಾಗೂ ಬಂಡೀಪುರವ್ಯಾಪ್ತಿಯಲ್ಲಿ ಎಲ್ಲೆ ಈ ಸಮಸ್ಯೆಗಳಾದ್ದರೂ ಇಬ್ಬರೇ ವೈದ್ಯರಿದ್ದಾರೆ. ಹಾಗಾಗಿ ಹುಲಿ ಕಾರ್ಯಚರಣೆ ನಿಧಾನವಾಗುತ್ತಿದೆ.”

-ಲಿಖಿತ್ ರಾಜೇ ಅರಸ್, ವನ್ಯ ಜೀವಿ ತಜ್ಞ 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿ…ರಾಮ ..!

ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…

4 hours ago

ಓದುಗರ ಪತ್ರ: ಗಿಡಗಳನ್ನು ನೆಟ್ಟು ಪರಿಸರ ಉಳಿಸಿ

ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…

5 hours ago

ಓದುಗರ ಪತ್ರ: ಹಗಲು ದರೋಡೆ ನಿಲ್ಲಿಸಿ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…

5 hours ago

‘ಕೆಡಿ’ ಹಾಡು, ‘ಲವ್ ಮಾಕ್‌ಟೈಲ್ ೩’, ಕಥೆಯ ಆತ್ಮ, ನಿರೂಪಣೆ, ಕೃತಿಸ್ವಾಮ್ಯಗಳ ಸುತ್ತ

ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ…

5 hours ago

ಸಮರ್ಪಕ ನಿರ್ವಹಣೆಯಿಲ್ಲದೇ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕಗಳು

ಮಹಾದೇಶ್ ಎಂ.ಗೌಡ ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ…

5 hours ago

ಭೇರ್ಯ ಗ್ರಾಪಂಗೆ ೨ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಭೇರ್ಯ ಮಹೇಶ್ ಡಿಜಿಟಲ್ ಗ್ರಂಥಾಲಯ, ಸ್ವಚ್ಛತೆ, ನೈರ್ಮಲ್ಯ, ನೀರು ಸರಬರಾಜು, ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಭೇರ್ಯ: ಭಾರತದ ನಿಜವಾದ…

5 hours ago