Andolana originals

ಮ.ಬೆಟ್ಟದಲ್ಲಿವೆ ೪೩ ಅನಧಿಕೃತ ವಸತಿಗೃಹಗಳು!

ಮಹಾದೇಶ್ ಎಂ.ಗೌಡ

ಗ್ರಾಮ ಪಂಚಾಯಿತಿಗೆ ವಾರ್ಷಿಕ ೧೨ ರಿಂದ ೧೫ ಲಕ್ಷ ರೂ.ನಷ್ಟ; ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಹೃದಯ ಭಾಗದಲ್ಲಿರುವ ೭೬ ಖಾಸಗಿ ವಸತಿ ಗೃಹಗಳ ಪೈಕಿ ಕೇವಲ ೩೩ ವಸತಿ ಗೃಹಗಳು ಮಾತ್ರ ಗ್ರಾಮ ಪಂಚಾಯಿತಿಯಿಂದ ಅಧಿಕೃತವಾಗಿ ಪರವಾನಗಿ ಪಡೆದು ನಿಯಮಾನುಸಾರ ನಡೆಯುತ್ತಿವೆ. ಉಳಿದ ೪೩ ವಸತಿಗೃಹಗಳು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಗ್ರಾಮ ಪಂಚಾಯಿತಿ ದಾಖಲೆಯಿಂದ ಬಹಿರಂಗವಾಗಿದೆ.

ಇದರಿಂದ ಪಂಚಾಯಿತಿಗೆ ಪ್ರತಿ ವರ್ಷ ಲಕ್ಷಾಂತರ ರೂ. ಆರ್ಥಿಕ ನಷ್ಟವಾಗುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ ಕಂಡಿವೆ. ಗ್ರಾಮ ಪಂಚಾಯಿತಿಯಿಂದ ಪಡೆದ ಅಧಿಕೃತ ದಾಖಲೆ ಪ್ರಕಾರ, ೨೦೧೩-೧೪ರಿಂದ ೨೦೨೩-೨೪ ರವರೆಗೆ ವಿವಿಧ ವರ್ಷಗಳಲ್ಲಿ ಕೇವಲ ೩೩ ಮಾಲೀಕರು ಮಾತ್ರ ಪರವಾನಗಿ ಪಡೆದಿದ್ದಾರೆ.

ಪರವಾನಗಿ ಪಡೆದ ೩೩ ವಸತಿ ಗೃಹಗಳು: ತಂಬಡಿಗೇರಿ, ಗ್ರಾಮ ಪಂಚಾಯಿತಿ ರಸ್ತೆ, ಗುರುದರ್ಶಿನಿ ಹಿಂಭಾಗ, ಗುರುನಗರ, ಸಾಲೂರು ಮಠ ರಸ್ತೆ, ನಾಗಮಲೆ ಹಿಂಭಾಗದಲ್ಲಿರುವ – ಜ್ಞಾನಮೂರ್ತಿ, ಕೆ.ಎಸ್.ಮಧು, ನಾಗಪ್ಪ, ಮುದ್ದಯ್ಯ, ಶಂಕರ, ಎಸ್.ಬಿ., ಎಸ್.ಬಿ.ಬಿ. ವಸತಿಗೃಹ, ಆರ್.ನಾಗರಾಜ್ (ಆರ್.ಪಿ.ಲಾಡ್ಜ್), ರಾಮಯ್ಯ, ಜೆ.ಎ.ಶಿವಮೂರ್ತಿ, ನೀಲಮ್ಮ, ಚಂದ್ರಪ್ಪ, ಲಿಂಗಪ್ಪ, ಚಂದ್ರಶೇಖರ್, ಎಸ್. ಮುತ್ತುರಾಜು, ಪರಮೇಶ್, ಮಂಜುನಾಥ್, ಜೆ.ಪಿ ಗಂಗಾಧರ್, ಚಂದ್ರಮೋಹನ್, ಶಿವಣ್ಣ, ಪಿ. ಮಹದೇವಪ್ಪ, ಚನ್ನಬಸವಣ್ಣ, ಚಾಮುಂಡೇಶ್ವರಿ ಲಾಡ್ಜ್, ಪದ್ಮಾವತಿ, ಮಹದೇವ್ (ದರ್ಶಿನಿ), ಲಿಂಗರಾಜು ಕೀರ್ತಿ, ಮಹದೇವಮೂರ್ತಿ (ವೈಭವ್), ಉಮೇಶ್, ಬಿ.ನಾಗರಾಜು ಮತ್ತು ತಾಯಮ್ಮ ಅವರ ವಸತಿ ಗೃಹಗಳು ಅಧಿಕೃತವಾಗಿ ಪರವಾನಗಿ ಪಡೆದಿವೆ.

ಇವರಲ್ಲಿ ೨೧ ಮಂದಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅದರಲ್ಲಿ ೧೬ ಮಂದಿ ೧ ವರ್ಷ (೨೦೨೫-೨೬), ೪ ಮಂದಿ ೨ ವರ್ಷ (೨೦೨೪-೨೫) ಮತ್ತು ಗುರುನಗರದ ಚಂದ್ರಶೇಖರ್ ಅವರು ೪ ವರ್ಷದಿಂದ (೨೦೨೨-೨೩ರಿಂದ) ತೆರಿಗೆ ಕಟ್ಟದೆ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿದ್ದಾರೆ.

ಪರವಾನಗಿ ಪಡೆಯದ ೪೩ ಲಾಡ್ಜ್‌ಗಳು: ೭೬ ವಸತಿಗೃಹಗಳ ಪೈಕಿ ೪೩ ವಸತಿ ಗೃಹಗಳ ಮಾಲೀಕರು ಪರವಾನಗಿ ಪಡೆದಿರುವುದಿಲ್ಲ. ಸಿದ್ದಪ್ಪ, ಪುಟ್ಟರಂಗಪ್ಪ, ಮಹದೇವ, ಲಿಂಗಪ್ಪ, ಜಾತಪ್ಪ, ರಮೇಶ್, ಚೌಡಪ್ಪ, ಮಹದೇವಪ್ಪ, ಶಿವಣ್ಣ, ಪ್ರಕಾಶ್, ರಂಗಸ್ವಾಮಿ, ಮಹೇಶ್, ದೇವಮ್ಮ, ದೇವರಾಜು, ಚಂದ್ರಮ್ಮ, ಗುರುಮಲ್ಲಪ್ಪ, ನಾಗಪ್ಪ, ರಾಮಸ್ವಾಮಿ, ಬಸವರಾಜು, ಸಿದ್ದರಾಜು, ಮಹದೇವಸ್ವಾಮಿ, ಪುಟ್ಟಸ್ವಾಮಿ, ದೇವಮ್ಮ ಬಸವರಾಜು , ದೇವರಾಜು, ಜಯಣ್ಣ, ಗಂಗಾಧರ್, ರಾಮಚಂದ್ರ, ಮಹದೇವಮ್ಮ, ಈರಣ್ಣ, ಪ್ರಕಾಶ್, ಮುತ್ತುರಾಜು ಸೇರಿದಂತೆ ೪೩ ಮಂದಿ ಇವರಲ್ಲಿ ಸೇರಿದ್ದಾರೆ.

ಪರವಾನಗಿ ಶುಲ್ಕ, ವಾರ್ಷಿಕ ನವೀಕರಣ ಶುಲ್ಕ, ಆಸ್ತಿ ತೆರಿಗೆ, ನೀರು ಮತ್ತು ಸ್ವಚ್ಛತಾ ತೆರಿಗೆ ಸೇರಿ ಒಂದು ಲಾಡ್ಜ್ ನಿಂದ ವರ್ಷಕ್ಕೆ ಕನಿಷ್ಠ ೨೫ರಿಂದ ೪೦ ಸಾವಿರ ರೂ. ಗಳು ಪಂಚಾಯಿತಿಗೆ ಬರಬೇಕಿದೆ. ೪೩ ಅಕ್ರಮ ಲಾಡ್ಜ್‌ಗಳಿಂದಲೇ ಪ್ರತಿ ವರ್ಷ ಸುಮಾರು ೧೨ರಿಂದ ೧೫ ಲಕ್ಷ ರೂ. ನೇರ ನಷ್ಟವಾಗುತ್ತಿದೆ. ಜೊತೆಗೆ ೨೧ ಮಂದಿ ತೆರಿಗೆ ಬಾಕಿ ಉಳಿಸಿಕೊಂಡಿರುವುದರಿಂದ ಇನ್ನೂ ೫ ರಿಂದ ೬ ಲಕ್ಷ ರೂ. ಬಾಕಿ ಇದೆ. ಒಟ್ಟಾರೆ ಪಂಚಾಯಿತಿಗೆ ೨೦ ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗುತ್ತಿದೆ.

ಈ ಹಣದಿಂದ ಬೆಟ್ಟದಲ್ಲಿ ಕುಡಿಯುವ ನೀರು, ಬೀದಿ ದೀಪ, ಚರಂಡಿ, ತ್ಯಾಜ್ಯ ವಿಲೇವಾರಿ, ಭಕ್ತರಿಗೆ ಶೌಚಾಲಯ ದಂತಹ ಅಭಿವೃದ್ಧಿ ಮಾಡಬಹುದಿತ್ತು. ಆದರೆ ಹಣವೇ ಇಲ್ಲದೆ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಕೆಲವು ಖಾಸಗಿ ವಸತಿಗೃಹಗಳಲ್ಲಿ ಪಬ್, ಕ್ಲಬ್‌ಗಳನ್ನು ಮಾಡಿಕೊಂಡು ಮದ್ಯಪಾನ, ಜೂಜಾಟ, ಇನ್ನಿತರ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪವೂ ಇದೆ.

ಖಾಸಗಿ ವಸತಿಗೃಹಗಳಲ್ಲಿ ಯಾವುದೇ ವಿಳಾಸದ ದಾಖಲಾತಿಗಳನ್ನು ಪಡೆಯದೇ ಬಾಡಿಗೆಗೆ ನೀಡುವುದರಿಂದ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟಿವೆ. ಆದ್ದರಿಂದ ಸಂಬಂಧಪಟ್ಟ ಅಽಕಾರಿಗಳು ವಸತಿಗೃಹಗಳ ಮೇಲೆ ದಾಳಿ ನಡೆಸಿದರೆ ಅಕ್ರಮ ಬಯಲಿಗೆ ಬರಲಿದೆ. ಕೂಡಲೇ ಪಂಚಾಯಿತಿ ಪಿಡಿಒ ಮತ್ತು ಜಿಲ್ಲಾ ಆಡಳಿತ ೪೩ ಅಕ್ರಮ ಲಾಡ್ಜ್‌ಗಳಿಗೂ ನೋಟಿಸ್ ನೀಡಿ ಬೀಗ ಜಡಿದು, ತೆರಿಗೆ ಬಾಕಿ ಇರುವ ೨೧ ಮಂದಿಯಿಂದ ಕೂಡಲೇ ವಸೂಲಿ ಮಾಡಬೇಕು ಎಂದು ಸ್ಥಳೀಯರು ಮತ್ತು ಭಕ್ತರು ಒತ್ತಾಯಿಸಿದ್ದಾರೆ.

” ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ನಡೆಯುತ್ತಿರುವ ವಸತಿಗೃಹಗಳ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು.”

ಶ್ರೀರೂಪ, ಜಿಲ್ಲಾಧಿಕಾರಿ

” ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ವಸತಿಗೃಹಗಳು ನಡೆಯುತ್ತಿದ್ದರೆ ಅಂತಹವುಗಳನ್ನು ಪಟ್ಟಿ ಮಾಡಿ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು.”

ಮೋಹನ್, ಡಿವೈಎಸ್ಪಿ, ಕೊಳ್ಳೆಗಾಲ ಉಪ ವಿಭಾಗ

 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

30 mins ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

31 mins ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

33 mins ago

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…

35 mins ago

ಮೋದಿ ಅಧಿಕಾರ ಪರ್ವ ರಜತ ಮಹೋತ್ಸವ: ಏನಿತ್ತು? ಏನಿಲ್ಲ?

ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…

37 mins ago

ತನ್ನನ್ನು ತಾನೇ ಚಿವುಟಿ ಎಚ್ಚರಿಸಿದ್ದ ನೆಹರೂ

ಜವಾಹರಲಾಲ್ ಎಂಬ ಅಪಾಯಕಾರಿ ಮನುಷ್ಯ ೬ ಬಾರಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ೩ ಬಾರಿ ಸತತವಾಗಿ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್…

43 mins ago