Andolana originals

ಹಳ್ಳದಲ್ಲಿ ಸಿಗುವ ಕಲುಷಿತ ನೀರೇ ಇವರಿಗೆ ಆಸರೆ!

ಮಂಜು ಕೋಟೆ

ಎಚ್.ಡಿ.ಕೋಟೆ ತಾಲ್ಲೂಕಿನ ಗೂಳೂರು ಹಾಡಿ ಜನರು ಪ್ರತಿನಿತ್ಯ ಎದುರಿಸುತ್ತಿರುವ ದಯನೀಯ ಸ್ಥಿತಿಯಿದು

ಎಚ್.ಡಿ.ಕೋಟೆ: ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ತಾಲ್ಲೂಕಿನಲ್ಲಿ ಯಾವ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಕೆಲಸ ನಿರ್ವಹಿಸಿದರೂ ಸಮಾಜದ ಕಟ್ಟಕಡೆಯ ಆದಿವಾಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವುದಕ್ಕೆ ಗೂಳೂರು ಹಾಡಿಯ ಗಿರಿಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಸಾಕ್ಷಿಯಾಗಿದೆ.

ತಾಲ್ಲೂಕಿನ ನಾಗರಹೊಳೆ, ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಗೂಳೂರು ಹಾಡಿಯ ಆದಿವಾಸಿ ಜನರು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಅದರಲ್ಲೂ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿದ್ದು, ಆದಿವಾಸಿಗಳು ನೀರಿಗಾಗಿ ಅವರೇ ಗುಂಡಿ ತೆಗೆದು ಅದರಲ್ಲಿ ಸಿಗುವ ಕಲುಷಿತ ನೀರನ್ನು ಸೇವನೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ತಾಲ್ಲೂಕಿನಲ್ಲಿ ೧೧೮ ಗಿರಿಜನ ಹಾಡಿಗಳು ಇದ್ದು, ಅವರಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಹಲವಾರು ಯೋಜನೆಗಳ ಮೂಲಕ ಪ್ರತಿವರ್ಷ ಕೋಟ್ಯಂತರ ರೂ. ಅನುದಾನ ಬಂದರೂ ಹಾಡಿ ಜನರಿಗೆ ಮೂಲಸೌಕರ್ಯ ಮಾತ್ರ ಸಮರ್ಪಕವಾಗಿ ದೊರೆಯದಿರುವುದು ವಿಷಾದನೀಯ.

ಗೂಳೂರು ಗಿರಿಜನ ಹಾಡಿಯಲ್ಲಿ ಸುಮಾರು ೧೨೦ ಕುಟುಂಬಗಳು ಹಲವಾರು ದಶಕಗಳಿಂದ ವಾಸವಾಗಿದ್ದು, ಇಲ್ಲಿನ ಜನರು ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕದೆ ಕಂಗಾಲಾಗಿದ್ದಾರೆ.

ಕಳೆದ ೨ ತಿಂಗಳಿನಿಂದ ಹಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಇಲ್ಲಿನ ಆದಿವಾಸಿ ಜನರು ಸಮೀಪದ ಕಾಡಿನ ಬಳಿ ಇರುವ ಹಳ್ಳಗಳಲ್ಲಿ ವನ್ಯಪ್ರಾಣಿಗಳು ಕುಡಿಯುವ ನೀರನ್ನು ಶೇಖರಿಸಿ ತರುವ ಪರಿಸ್ಥಿತಿ ಎದುರಾಗಿದೆ. ಬಿಸಿಲಿನ ತಾಪಮಾನಕ್ಕೆ ಆ ಗುಂಡಿಯಲ್ಲಿದ್ದ ನೀರು ಕೂಡ ಬತ್ತಿ ಹೋಗಿದ್ದರಿಂದ ಗಿರಿಜನರೇ ಚಿಕ್ಕದಾಗಿ ಬಾವಿ ತೆಗೆದು ಅಲ್ಲಿ ಸಿಗುವ ಕಲುಷಿತ ನೀರನ್ನೇ ಬಳಸುವಂತಾಗಿದೆ.

ಇದರಿಂದಾಗಿ ಮಹಿಳೆಯರು, ವೃದ್ಧರು, ಚಿಕ್ಕಮಕ್ಕಳು ಇಲ್ಲಿನ ಅಧಿಕಾರಿ ವರ್ಗ, ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಿರಿಜನರ ಅಭಿವೃದ್ಧಿಗೆ ಬರುತ್ತಿರುವ ಕೋಟ್ಯಂತರ ರೂ. ಅನುದಾನದಲ್ಲಿ ಈ ಕ್ಷೇತ್ರದಲ್ಲಿರುವ ಪ್ರತಿಯೊಂದು ಹಾಡಿಯೂ ಅಭಿವೃದ್ಧಿಯತ್ತ ಸಾಗಬೇಕಿತ್ತು. ಆದರೆ, ಹಾಡಿಗಳು ಸೌಕರ್ಯವಂಚಿತವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಅಧಿಕಾರಿ ವರ್ಗದವರು ಅರಣ್ಯ ಇಲಾಖೆಯವರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಸಮಸ್ಯೆಗಳನ್ನು ಜೀವಂತವಾಗಿ ಉಳಿಸಿಕೊಂಡು ಹೋಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇತ್ತ ಆದಿವಾಸಿ ಜನರು ಕುಡಿಯುವ ನೀರಿಗಾಗಿ ಹಗಲಿರುಳು ಎನ್ನದೆ ಪ್ರಾಣ ಭೀತಿಯಿಂದ ಅರಣ್ಯದಲ್ಲಿ ಕಲುಷಿತ ನೀರು ಕುಡಿಯುವ ಪರಿಸ್ಥಿತಿ ಉದ್ಭವಿಸಿದೆ. ಸಂಬಂಧಪಟ್ಟ ಅಽಕಾರಿಗಳು, ಜನಪ್ರತಿನಿಧಿಗಳು ಈಗಲಾದರೂ ನೊಂದ ಆದಿವಾಸಿ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು

” ಗೂಳೂರು ಹಾಡಿಯಲ್ಲಿ ಅಂತರ್ಜಲ ಕುಸಿದಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿಗೆ ಪರ್ಯಾಯವಾದ ಮಾರ್ಗದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಬೋರ್‌ವೆಲ್ ಕೊರೆಸಲು ಅರಣ್ಯ ಇಲಾಖೆಯವರು ಅವಕಾಶ ಕೊಡುತ್ತಿಲ್ಲ. ಅರಣ್ಯ ಇಲಾಖೆಯವರಿಗೆ ಮತ್ತು ಸರ್ಕಾರಕ್ಕೆ ಅನೇಕ ಬಾರಿ ಪತ್ರ ಬರೆದರೂ ಅನುಮತಿ ನೀಡುತ್ತಿಲ್ಲ. ಈಗ ಟ್ಯಾಂಕರ್ ಮೂಲಕ ನೀರು ಪೂರೈಸಲು ಮುಂದಾಗಿದ್ದೇವೆ.”

-ಸ್ವಾಮಿ, ಪಿಡಿಒ, ಡಿ.ಬಿ.ಕುಪ್ಪೆ ಗ್ರಾಪಂ

” ಆದಿವಾಸಿ ಜನರಿಗೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ ಗೂಳೂರಿನ ಆದಿವಾಸಿ ಜನರು ನೀರಿಗಾಗಿ ಪ್ರತಿ ವರ್ಷವೂ ನರಕಯಾತನೆ ಪಡುವಂತಾಗಿದೆ. ಸಚಿವರು, ಶಾಸಕರು, ಅಧಿಕಾರಿಗಳು ಇದೇ ಹಾಡಿಯಲ್ಲಿ ಹಿಂದೆ ವಾಸ್ತವ್ಯ ಹೂಡಿದ್ದರೂ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ.:

-ಪುಟ್ಟಬಸವ, ಗಿರಿಜನ ಮುಖಂಡ

 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

14 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

14 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

14 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

14 hours ago

ಮೀಸಲಾತಿ ಸೌಲಭ್ಯಕ್ಕೆ ವಿರೋಧವೇಕೆ?

ಟಿ.ಕೆ.ಹರೀಶ್ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನಾತ್ಮಕ ವ್ಯವಸ್ಥೆ ಮೀಸಲಾತಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಜಾರಿಗೆ ತರಲಾಗಿದೆ.…

14 hours ago

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ ದೂರ: ಮೈಸೂರು ತಾಲ್ಲೂಕಿನ ಜಯಪುರ…

17 hours ago