ವಿಶ್ವಪ್ರಸಾದ್ ಆಳ್ವ
ಒಂದೆರಡು ವರ್ಷಗಳ ಹಿಂದೆ ದೇಶದ ಹಣಕಾಸು ಸಚಿವರು ಮೂಲ ತಂತ್ರಜ್ಞಾನ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಕ್ಷೇತ್ರಕ್ಕೆ ೧.೫ ಲಕ್ಷ ಕೋಟಿ ರೂ.ಗಳನ್ನು ಘೋಷಿಸಿದ್ದರು. ಮೂಲ ವಿಜ್ಞಾನ ಮತ್ತು ತಂತ್ರಜ್ಞಾನ, ಆತ್ಮ ನಿರ್ಭರ್ ಕಾರ್ಯಕ್ರಮಗಳು, ಉತ್ಪನ್ನಗಳ ತಯಾರಿಕೆ, ರಫ್ತು ಮತ್ತು ಎಂಎಸ್‌ಎಂಇಗಳಿಗೆ ಭಾರತ ಸರ್ಕಾರವು ಹೆಚ್ಚಿನ ಪ್ರೋತ್ಸಾಹಕರ ರೀತಿಯ ಪುನರಾವರ್ತಿತ ಘೋಷಣೆಗಳನ್ನು ನೀಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಹಿಂದೆ ಸ್ಟಾರ್ಟ್ ಅಪ್‌ಗಳಿಗೆ ಹಂಚಿಕೆ ಮಾಡಲಾದ ಅನುದಾನದ ಫಲಿತಾಂಶವನ್ನು ತಿಳಿಯದೇ ಈಗ ಸ್ಟಾರ್ಟ್ ಅಪ್‌ಗಳ ಬೆಳವಣಿಗೆಗೆ ೧೦,೦೦೦ ಕೋಟಿ ರೂ. ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.
ಬಜೆಟ್‌ನಲ್ಲಿ ತಿಳಿಸಲಾದ ಅನುದಾನವನ್ನು ಯಾರಿಗೆ? ಯಾವಾಗ? ಎಷ್ಟು ಹಂಚಿಕೆ ಮಾಡಲಾಗಿದೆ? ಅದರಿಂದ ಆದ ಲಾಭವೇನು? ಎನ್ನುವುದನ್ನು ಪರಾಮರ್ಶಿಸದೇ ಈ ರೀತಿಯ ಘೋಷಣೆ ಮಾಡಲಾಗಿದೆ. ಆದರೆ ಯಾವುದೇ ಹೊಸ ಯೋಜನೆಯನ್ನು ಅನಾವರಣಗೊಳಿಸುವ ಮುನ್ನ ಹಿಂದಿನ ಅನುದಾನಗಳ ವಿತರಣೆ, ಅವುಗಳ ಬಳಕೆಯಿಂದ ಬಂದ ಫಲಿತಾಂಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸುವುದು ಸರ್ಕಾರದ ಕರ್ತವ್ಯವಾಗಿರಬೇಕು. ಅಲ್ಲದೇ ಇಂತಹ ಹಿಂದಿನ ಯೋಜನೆ, ಕಾರ್ಯಕ್ರಮಗಳಿಂದ ಸಮಾಜದ ಮೇಲಾದ ಪರಿಣಾಮಗಳನ್ನು ತಿಳಿದುಕೊಳ್ಳುವುದು ನಮ್ಮ ಹಕ್ಕಾಗಿದೆ.
ಸ್ಟಾರ್ಟ್ ಅಪ್‌ಗಳನ್ನು ಪೋಷಿಸುವುದು ಅತ್ಯಗತ್ಯವಾಗಿದೆ. ಹಾಗೆಯೇ ಆದ್ಯತೆಯಾಗಿ ಪರಿಗಣಿಸದೆ ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸಲು ಅವುಗಳಿಗೆ ಸಮಾನ ಅವಕಾಶ ನೀಡುವುದೂ ಅತ್ಯಗತ್ಯವಾಗಿದೆ. ಸ್ಟಾರ್ಟ್ ಅಪ್‌ಗಳು ತಯಾರಿಸುವ ಉತ್ಪನ್ನಗಳು ರಫ್ತು ಯೋಗ್ಯವಾಗಿದ್ದು, ವಿದೇಶಿ ವಿನಿಮಯದ ಮೂಲಕ ದೇಶಕ್ಕೆ ಆದಾಯ ತರುವಂಥಾದ್ದಾಗಿ ರಬೇಕೆಂದು ಬಯಸುವ ಹಾಗೆ ಅದೇ ಉತ್ಪನ್ನಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ಬಳಕೆಗೆ ಯೋಗ್ಯವೆಂದು ಪರಿಗಣಿಸಬೇಕಾಗಿದೆ. ಸ್ಟಾರ್ಟ್ ಅಪ್‌ಗಳಿಂದ ಸರ್ಕಾರಗಳು ಎಷ್ಟು ಸರಕುಗಳನ್ನು ಖರೀದಿ ಮಾಡಿವೆ ಎಂಬುದರ ಡೇಟಾವನ್ನು ನಾವು ನೋಡಲು ಸಾಧ್ಯವೇ ಎಂಬ ಪ್ರಶ್ನೆ ಇದೆ. ನಿಜವಾದ ಫಲಾನುಭವಿಗಳನ್ನು (ಸ್ಟಾರ್ಟ್ ಅಪ್‌ಗಳು) ಗುರುತಿಸುವ ಪ್ರಕ್ರಿಯೆ ಹಾಗೂ ಕೆಲವು ಸ್ಟಾರ್ಟ್ ಅಪ್‌ಗಳು ವಾಣಿಜ್ಯದ ದೃಷ್ಟಿಕೋನದಿಂದ ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ ಎನ್ನುವ ಬಗೆಗಿನ ಡೇಟಾ ಇಲ್ಲದಿದ್ದರೆ ಅನುದಾನವನ್ನು ಹಂಚುವುದರಿಂದ ಏನೂ ಪ್ರಯೋಜನವಾಗಲಾರದು.
ಟೆಂಡರ್ ಅನ್ನು ಕರೆಯುವ ಮೊದಲೇ ಸರ್ಕಾರಕ್ಕೆ ಬೇಕಾಗುವ ಸರಕುಗಳನ್ನು ನಿರ್ಧರಿಸಲಾಗಿರುತ್ತದೆ. ಹಾಗೆಯೇ ಟೆಂಡರ್ ನಡೆಸುವ ಪ್ರಕ್ರಿಯೆಯು ಎಂದೂ ಕ್ರಮಬದ್ಧವಾಗಿರುವುದಿಲ್ಲ ಹಾಗೂ ಪಾರದರ್ಶಕವಾಗಿರುವುದಿಲ್ಲ. ಭ್ರಷ್ಟಾಚಾರವನ್ನು ತಡೆಗಟ್ಟಲಾಗುವುದು ಹಾಗೂ ಹಿಂದಿನ ಸರ್ಕಾರದಲ್ಲಿ ಮಾಡಲಾಗಿರುವ ಪ್ರಮಾದಗಳನ್ನು ಸರಿಪಡಿಸಲಾಗುವುದು ಎಂದು ಘೋಷಿಸಿಕೊಂಡು ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂತು.
ಆದರೆ ಕಳೆದ ೧೫ ವರ್ಷಗಳಿಂದ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಈಗ ಎಲ್ಲ ತಪ್ಪುಗಳಿಗೂ ಹಿಂದಿನ ಸರ್ಕಾರಗಳನ್ನು ದೂಷಿಸುವ ಚಾಳಿಯನ್ನು ಬಿಡಬೇಕು. ಸದ್ಯ ಕೇಂದ್ರ ಸಚಿವಾಲಯಗಳು ಹಾಗೂ ಸೆಕ್ರೆಟೆರಿಯೇಟ್ ಮಟ್ಟದಲ್ಲಿ ಭ್ರಷ್ಟಾಚಾರ ಇಳಿಮುಖವಾಗಿದೆ ಎನಿಸಿದರೂ, ಆಡಳಿತಾತ್ಮಕ ಕೊರತೆಯಿಂದಾಗಿ ಮತ್ತು ನಿಯಂತ್ರಕ ಸಂಸ್ಥೆಗಳಿಗೆ ಹೆಚ್ಚಿನ ಬಲ ನೀಡಿರುವ ಕಾರಣ ತಳ ಹಂತದ ಆಡಳಿತದಲ್ಲಿ ಭ್ರಷ್ಟಾಚಾರ ಉತ್ತುಂಗದಲ್ಲಿದೆ ಎನ್ನಬಹುದು. ಇಂದು ನಾವು ನೋಡುತ್ತಿರುವ ಹೆಚ್ಚಿನ ಸ್ಟಾರ್ಟ್ ಅಪ್‌ಗಳು ಸಾಫ್ಟ್‌ವೇರ್, ಸೇವೆಗಳು, ಆನ್‌ಲೈನ್ ವ್ಯಾಪಾರ ಅಪ್ಲಿಕೇಶನ್‌ಗಳು, ಆಹಾರ ವಿತರಣೆ ಮತ್ತು ಫಿನ್‌ಟೆಕ್ ವಲಯಗಳಲ್ಲಿವೆ.
ಆದರೆ ಇಂದು ಯಶಸ್ವಿ ರಾಷ್ಟ್ರೀಯ ಸ್ಟಾರ್ಟ್ ಅಪ್‌ಗಳ ಪಟ್ಟಿಯಲ್ಲಿ ಬಹಳವಾದ ಮೂಲ ತಂತ್ರಜ್ಞಾನ ಮತ್ತು ಉತ್ಪನ್ನ ಕಂಪೆನಿಗಳು ಇರುವುದು ಕಾಣುತ್ತಿಲ್ಲ. ಶ್ರೀಮಂತ ವ್ಯವಹಾರಸ್ಥರು ಮತ್ತು ಕುಟುಂಬಗಳು ತಮ್ಮ ಹಣವನ್ನು ಮೂಲ ತಂತ್ರಜ್ಞಾನ ಅಥವಾ ಉತ್ಪನ್ನ ಕಂಪೆನಿಗಳಲ್ಲಿ ತೊಡಗಿಸುವುದರ ಬದಲು ಸೇವಾ ಕ್ಷೇತ್ರಗಳಲ್ಲಿ ತೊಡಗಿಸಲು ಆದ್ಯತೆ ನೀಡುವರು. ಕಾರಣ ಭಾರತದಲ್ಲಿ ಉತ್ತಮ ಪರಿಸರವಿದೆ ಎಂದು ಅವರು ನಂಬಲಾರರು ಅಥವಾ ಹಾರ್ಡ್‌ವೇರ್ ಮತ್ತು ಟೆಕ್ ಕಂಪೆನಿಗಳಿಗೆ ಸಹಾಯ ಮಾಡಲು ಸರ್ಕಾರದ ನೀತಿ ನಿಯಮಗಳ ಬಗ್ಗೆ ಅವರಿಗೆ ನಂಬಿಕೆ ಇಲ್ಲವೆನ್ನಬಹುದು. ಇನ್ನು ಲಾಭದಾಯಕವಲ್ಲದ ಹಾಗೂ ಹಣಕಾಸಿನ ದೃಢತೆ ಇಲ್ಲದ ದಶಮಾನಗಳಷ್ಟು ಹಳೆಯದಾದ ಸ್ಥಿರ ಕಂಪೆನಿಗಳಿಗೆ ಬ್ಯಾಂಕ್‌ಗಳೂ ಹಣಕಾಸಿನ ನೆರವು ನೀಡಲು ಮುಂದಾಗುವುದಿಲ್ಲ. ಹೀಗಾಗಿ ಸ್ಟಾರ್ಟ್ ಅಪ್‌ಗಳಿಗೆ ಹಣಕಾಸಿನ ನೆರವು ಒದಗಿಸುವುದು ಇರಲಿ, ಸಮರ್ಪಕ ವಿತರಣೆ ಇಲ್ಲದೇ ಸರ್ಕಾರದ ಯೋಜನೆಗಳು ಕೇವಲ ಘೋಷಣೆಗಳಾಗಿ ಉಳಿಯುತ್ತವೆ. ಪ್ರಾರಂಭದಲ್ಲಿ ತಲೆದೋರುವಂತಹ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ದಾಟಿಕೊಂಡು ಉತ್ಪಾದನೆ ಹಂತ ತಲುಪುವ ಸ್ಟಾರ್ಟ್ ಅಪ್‌ಗಳಿಗೆ ೧೦೦ಕ್ಕೂ ಹೆಚ್ಚು ಸ್ಥಳೀಯ, ರಾಜ್ಯ ಅಥವಾ ಕೇಂದ್ರಗಳ ನಿಯಂತ್ರಕ ಸಂಸ್ಥೆಗಳ ಪರವಾನಗಿಗಳ ಸಮಸ್ಯೆ ಎದುರಾಗುತ್ತವೆ.
ಹೀಗೆ ಕೊನೆಯೇ ಕಾಣದ ಸೂಚನೆಗಳು, ಎಚ್ಚರಿಕೆಗಳು, ದಾಳಿಗಳ ಹೊಡೆತದಿಂದ ಭಾರತದ ಉತ್ಪನ್ನ ತಂತ್ರಜ್ಞಾನ ಕ್ಷೇತದ ಸ್ಥಿತಿ ಭಯಾನಕವಾಗಿದೆ. ಎಷ್ಟು ಹಾರ್ಡ್‌ವೇರ್ ಉತ್ಪನ್ನ ಕಂಪೆನಿಗಳು ಸರ್ಕಾರಿ ಯೋಜನೆಗಳ ಉಪಯೋಗ ಪಡೆದುಕೊಂಡು ಸಾಗುತ್ತಿವೆ, ಉಳಿದುಕೊಂಡಿವೆ ಎಂಬ ಪ್ರಶ್ನೆ ಇದೆ. ೨ ವರ್ಷಗಳ ಹಿಂದೆ ಘೋಷಿಸಲಾದ ಫಾರ್ಮಾ/ಮೆಡ್‌ಟೆಕ್ ಪಿಆರ್ ಐಪಿ ಯೋಜನೆಯನ್ನು ಉದಾಹರಣೆಗೆ ತೆಗೆದುಕೊಂಡು ನೋಡಿದಾಗ, ಅಂತ್ಯವಿಲ್ಲದ ಚರ್ಚೆಗಳಲ್ಲೇ ಸುತ್ತುತ್ತಿದೆ. ಇಂತಹ ಪರಿಸ್ಥಿತಿಯನ್ನು ಸರಿಪಡಿಸಲು ಬೋಸ್ಟನ್ ಸಲಹಾ ಗುಂಪಿಗೆ ಜವಾಬ್ದಾರಿ ನೀಡಿದ್ದರೂ, ಸರ್ಕಾರ ನೀತಿ, ನಿಯಮಗಳನ್ನು ಪದೇ ಪದೇ ಬದಲಾಯಿಸುತ್ತಿರುವುದರಿಂದ ವಿಷಯಗಳು ಪ್ರಗತಿ ಕಾಣದಾಗಿವೆ. ಅಲ್ಲದೇ ಇದುವರೆಗೂ ಯಾವುದೇ ಹಣವನ್ನು ವಿತರಿಸಲಾಗಿಲ್ಲ.
ಹಣಕಾಸಿನ ನೆರವಿಗಾಗಿ ಅರ್ಜಿ ಸಲ್ಲಿಸುವಂತೆ ಸರ್ಕಾರ ಹಲವಾರು ಬಾರಿ ಕಂಪೆನಿಗಳಿಗೆ ತಿಳಿಸಿದ್ದರೂ, ಪ್ರಾಮಾಣಿಕ ಸಂಸ್ಥೆ ಹಾಗೂ ಪ್ರಾಮಾಣಿಕ ಆಕಾಂಕ್ಷಿಗಳು ಈ ಪ್ರಕ್ರಿಯೆಯಿಂದ ದೂರ ಉಳಿಯುವರು. ಹಾಗಾಗಿ ಈ ಯೋಜನೆಗಳ ಮೂಲ ಉದ್ದೇಶವನ್ನೇ ಮಣ್ಣುಪಾಲು ಮಾಡಿ, ಎಲ್ಲಾ ಸರ್ಕಾರದ ಯೋಜನೆಗಳು, ಸಬ್ಸಿಡಿಗಳು, ಅನುದಾನಗಳು, ಕಾರ್ಯಕ್ರಮಗಳನ್ನು ಬಹು ದೊಡ್ಡ ಕಂಪೆನಿಗಳು, ಬಲಾಢ್ಯ ಎಂಎನ್‌ಸಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳು ಕಬಳಿಸಿಕೊಳ್ಳುವರು. ಯುಪಿಎ ಸರ್ಕಾರದಿಂದ ೨೦೧೩ರಲ್ಲಿ ಪ್ರಾರಂಭಿಸಲಾದ ಇಎಸ್‌ಡಿಎಂ ಕಾರ್ಯಕ್ರಮಗಳು ಹಾಗೂ ೨೦೧೬ರಲ್ಲಿ ಅದನ್ನು ಅನುಷ್ಠಾನಕ್ಕೆ ತರಲಾದ ಎನ್ ಡಿಎ ಸರ್ಕಾರದ ಇಎಸ್‌ಡಿಎಂ ಕಾರ್ಯಕ್ರಮಗಳನ್ನು ಗಮನಿಸಿದ್ದೇ ಆದರೆ ಕೋಟ್ಯಂತರ ರೂ. ಪೋಲಾಗಿದೆ. ಹತ್ತು ವರ್ಷಗಳ ಬಳಿಕ ಈ ಇಎಸ್‌ಡಿಎಂ ಯೋಜನೆಯಡಿ ಕೇವಲ ೪೮ ಯೋಜನೆಗಳು ಪೂರ್ಣಗೊಂಡಿವೆ ಇಲ್ಲವೇ ಬೆಳಕು ಕಾಣಹತ್ತಿವೆ.
ಕೆಲವು ಯಶಸ್ವಿ ಇಎಸ್‌ಡಿಎಂ ಮೈಸೂರು ಅಥವಾ ಇಎಸ್‌ಡಿಎಂ ಲಹರಿಯಂತಹ ಕೆಲವು ಯಶಸ್ವಿ ಸಂಸ್ಥೆಗಳು ಭಾರತ ಸರ್ಕಾರದಿಂದ ಬರಬೇಕಾದ ಬಾಕಿ ಅನುದಾನಕ್ಕೆ ಹಲವಾರು ವರ್ಷಗಳಿಂದ ಕಾದು ಕುಳಿತಿವೆ. ಅಲ್ಲದೇ ಹಲವಾರು ಜ್ಞಾಪನೆಗಳನ್ನು ಸಲ್ಲಿಸಿ, ಸಭೆಗಳು ಮತ್ತು ಅನುಸರಣೆಗಾಗಿ ಹೊಸದಿಲ್ಲಿಗೆ ಭೇಟಿ ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಹೀಗೆ ಅಧಿಕಾರಶಾಹಿಗಳ ನಡವಳಿಕೆ ಮತ್ತು ಕೆಂಪುಪಟ್ಟಿಗೆ ಸೇರಿಸುವ ಅವರ ಕ್ರಮದಿಂದ ಬೇಸತ್ತು ಪ್ರಮೋಟರ್‌ಗಳು ಯೋಜನೆಯ ೨ನೇ ಹಂತವನ್ನು ಕಾರ್ಯರೂಪಕ್ಕೆ ತರುವುದನ್ನೇ ಕೈ ಬಿಟ್ಟಿದ್ದಾರೆ. ಸರ್ಕಾರದ ಉದ್ದೇಶಗಳು ಏನೇ ಒಳ್ಳೆಯದಾಗಿರಬಹುದು. ಆದರೆ ಅದು ಉತ್ತಮ ಕಾರ್ಯಾಚರಣೆ ಇಲ್ಲದೇ ಫಲಿತಾಂಶ ನಿರಾಶಾದಾಯಕವಾಗುವುದು.
ಇಂತಹ ಕಾರ್ಯವಿಧಾನವಿಲ್ಲದ ಘೋಷಣೆಗಳು ಗ್ಯಾಲರಿ ಮತ್ತು ಚಿಯರ್ ನಾಯಕರ ಪ್ರಚಾರಕ್ಕೆ ಮಾತ್ರ ಉದ್ದೇಶಿಸಿದಂತೆ ಆಗುತ್ತವೆ. ವಿಷಾದದ ಸಂಗತಿ ಎಂದರೆ ನಮ್ಮ ವಿರೋಧ ಪಕ್ಷಗಳು ತುಂಬಾ ಬಲಹೀನವಾಗಿವೆ ಹಾಗೂ ಅವು ಎಂದೂ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಯಾವುದೇ ರೀತಿಯ ಟೀಕೆಗಳನ್ನು, ವಿಮರ್ಶೆಗಳನ್ನು ಸ್ವೀಕರಿಸದಂತಹ ಹಾಗೂ ಪರಸ್ಪರ ಒಪ್ಪಿಕೊಳ್ಳದಂತಹ ಕೈಗಾರಿಕಾ ಸಂಘಟನೆಗಳು, ಮಾಧ್ಯಮ, ಎನ್‌ಜಿಒಗಳು ಮತ್ತು ಸರ್ಕಾರಿ ಸಂಸ್ಥೆಗಳ ಕೂಟವನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಹೀಗಾಗಿ ಇಂತಹ ಲೋಪಗಳನ್ನು ಸರಿಪಡಿಸಲು ನ್ಯಾಯಾಂಗದ ಕದ ತಟ್ಟುವ ಉಳಿದಿರುವ ಒಂದೇ ಭರವಸೆಯ ಮಾರ್ಗವಾಗಿದೆ. ಆದರೆ ನ್ಯಾಯಾಲದಲ್ಲಿ ಅನೇಕ ಪ್ರಕರಣಗಳು ರಾಶಿ ರಾಶಿಯಾಗಿ ಉಳಿದಿರುವುದರಿಂದ ನ್ಯಾಯವು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂಬ ಪರಿಸ್ಥಿತಿ ಇದೆ.
ಆದ್ದರಿಂದ ಜವಾಬ್ದಾರಿಯುತ ಸರ್ಕಾರ, ಬಲವಾದ ಮತ್ತು ರಚನಾತ್ಮಕ ವಿರೋಧಪಕ್ಷ, ಸಮಾಜದಲ್ಲಿ ಸಮಾನತೆ, ಸಮಯಕ್ಕೆ ಸರಿಯಾದ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ಮಾಧ್ಯಮ ಇದ್ದಾಗ ಮಾತ್ರ ನಮ್ಮ ವಿಶ್ವ ಗುರುವಿನ ಕನಸು ಈಡೇರಲು ಸಾಧ್ಯ. ಕಾಲ ಮೀರುವುದರೊಳಗೆ ಇಂತಹ ವಾತಾವರಣವನ್ನು ನಾವು ನಿರ್ಮಿಸುತ್ತೇವೆ ಎಂದು ಭಾವಿಸುವೆ.
” ಯಾವುದೇ ರೀತಿಯ ಟೀಕೆಗಳನ್ನು, ವಿಮರ್ಶೆಗಳನ್ನು ಸ್ವೀಕರಿಸದಂತಹ ಹಾಗೂ ಪರಸ್ಪರ ಒಪ್ಪಿಕೊಳ್ಳದಂತಹ ಕೈಗಾರಿಕಾ ಸಂಘಟನೆಗಳು, ಮಾಧ್ಯಮ, ಎನ್‌ಜಿಒಗಳು ಮತ್ತು ಸರ್ಕಾರಿ ಸಂಸ್ಥೆಗಳ ಕೂಟವನ್ನು ನಾವು ಸೃಷ್ಟಿಸಿಕೊಂಡಿದ್ದೇವೆ.”
ಚೆಟ್ಟಳ್ಳಿ: ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕನೊಬ್ಬ ಮತ್ತೊಬ್ಬ ಕಾರ್ಮಿಕನನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ…
ನವದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ 9 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಬಿಹಾರದಿಂದ…
ಬೆಂಗಳೂರು: ಅಮೇರಿಕಾ, ಇಸ್ರೇಲ್-ಇರಾನ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದುಬೈನಲ್ಲಿ ಸಿಲುಕಿ ಆತಂಕದಲ್ಲಿರುವ ಕನ್ನಡಿಗರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಬೂದಬಾಳು ಕೆರೆಗೆ ಕಾವೇರಿ ನದಿ ಮೂಲದಿಂದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಷೇರುದಾರರು ನಿಮ್ಮ ಮೇಲೆ ವಿಶ್ವಾಸವಿಟ್ಟು ಕೃಷಿ ಪತ್ತಿನ ಸಹಕಾರ ಸಂಘದ…
ಟೆಹರಾನ್: ಅಮೇರಿಕಾ ಹಾಗೂ ಇಸ್ರೇಲ್ ದೇಶಗಳು ಇರಾನ್ ಜೊತೆ ನಡೆಸುತ್ತಿರುವ ಯುದ್ಧವು ಇದೀಗ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮಾರ್ಗಗಳಲ್ಲಿ…