• ದಿನೇಶ್ ಬಸವಾಪಟ್ಟಣ
ಲಿಟಲ್ ಬಾಯ್’ ಎಂದೆ ಅಡ್ಡಹೆಸರು ಇಟ್ಟುಕೊಂಡ ಈ ಬಾಂಬ್ 28 ಇಂಚು ಗಳಷ್ಟು ವ್ಯಾಸ 120 ಇಂಚುಗಳಷ್ಟು ಉದ್ದ ಮತ್ತು 9000 ಪೌಂಡ್ ಗಳಷ್ಟು ತೂಕವಿತ್ತು. ಸ್ಫೋಟಗೊಂಡ 43 ಸೆಕೆಂಡುಗಳು ನಂತರ 50,00,00,000 ಡಿಗ್ರಿ ಸೆಂ. ನಷ್ಟು ಶಾಖವನ್ನು ಬಿಡುಗಡೆಗೊಳಿಸಿತ್ತು, ಸ್ಫೋಟಗೊಂಡ 1/10000 ಸೆಕೆಂಡ್ ಗಳ ನಂತರ 180 ಅಡಿ ವ್ಯಾಸವುಳ್ಳ ಬೆಂಕಿಯುಂಡೆಯೊಂದು ರೂಪುಗೊಂಡಿತು. ಅದರ ಒಳಗಿನ ಉಷ್ಣಾಂಶ 30,00,000 ಡಿಗ್ರಿ ಸಂ. ಇದರೊಡನೆ ಉತ್ಪತ್ತಿಯಾದ ಅಗಾಧ ತರಂಗಗಳು ಇಡೀ ನಗರವನ್ನು ಸೆಕೆಂಡಿಗೆ 2.8 ಮೈಲಿಗಳ ವೇಗದಲ್ಲಿ ಆವರಿಸಿದ್ದು 20,000 ಟನ್ ಗಳಷ್ಟು ಟಿ.ಎಂ.ಟಿ ಸಿಡಿಮದ್ದು ಸಿಡಿಸಿದಾಗ ಉತ್ಪನ್ನವಾಗುವಷ್ಟು ಶಾಖದ ಕಿರಣಗಳು, ಬೆಂಕಿ ಎಲ್ಲವೂ ಆಘಾತಕಾರಿಯಾಗಿತ್ತು.
ಸುಮಾರು 20000000000000 (20 ಟ್ರಿಲಿಯನ್) ಕ್ಯಾಲರಿಯಷ್ಟು ಶಕ್ತಿ ಬಿಡುಗಡೆಗೊಂಡಿತ್ತು. ಇದು ನಡೆದಿದ್ದು ಆಗಸ್ಟ್ 06, 1945ರಲ್ಲಿ ಡಿಸೆಂಬರ್ 8, 1941 ರಂದು ಪರ್ಲ್ ಹಾರ್ಬರ್ ಮೇಲೆ ನಡೆದ ದಾಳಿಯ ನಂತರ ವಿಧಿಯಿಲ್ಲದೆ ಅಮೆರಿಕ ಎರಡನೇ ಮಹಾಯುದ್ಧಕ್ಕೆ ಪ್ರದೇಶಿಸಿತು. ನಂತರ ನಡೆದ ದಾಳಿಗಳು ತೀವ್ರಗೊಂಡವು ಜಪಾನ್‌ನ ಆಕ್ರಮಣಾಕಾರಿ ನಡೆ ಅದಾಗಲೇ ಮಲಯ, ಫಿಲಿಫೈನ್ಸ್, ಜಾವ ಮತ್ತು ಬರ್ಮಾವನ್ನಲ್ಲದೆ ದಕ್ಷಿಣೇಷ್ಯಾವನ್ನು 6 ತಿಂಗಳಲ್ಲಿ ವರಪಡಿಸಿಕೊಂಡಿತ್ತು. ಆದರೆ 1942ರ ಜೂನ್‌ನಲ್ಲಿ ನಡೆದ ನೌಕಾಸಮರಗಳು ಜಪಾನನ್ನು ಘಾಸಿಗೊಳಿಸಿದ್ದರಿಂದ ಯುದ್ರದಿಂದ ಹಿಮ್ಮುಖಗೊಳ್ಳಲಾರಂಭಿಸಿತು. ಅದೇ ವೇಳೆಗೆ ವಾಯುದಾಳಿಯೂ ಕೂಡ ತೀವ್ರಗೊಂಡಿತ್ತು.
ಜಪಾನ್‌ನ ಬೇರೆ ಎಲ್ಲಾ ನಗರಗಳಂತೆ ಹಿರೋಷಿಮಾ ನಗರವೂ ಕೂಡ ಸಂಪೂರ್ಣ ಯುದ್ಧಕ್ಕೆ ತೆರೆದುಕೊಂಡಿತ್ತು, ಸಾವು ಇಲ್ಲವೇ ಬದುಕು ಎನ್ನುವಂತೆ ಅಕ್ಟೋಬರ್ 211, 1943 ಹಿರೋಷಿಮಾ ಸಿಟಿ ಹಾಲ್ ಸುದ್ದಿ ಸಮಾಚಾರದಲ್ಲಿ “ಯುದ್ಧವು ತೀವ್ರವಾಗುತ್ತಿರುವುದರಿಂದ ಮುನ್ನಡೆಯಲ್ಲಿ ಕಾದಾಡುತ್ತಿರುವ ಸೈನಿಕರಂತೆ ನಾಗರಿಕರು, ಉದ್ಯೋಗಿಗಳು, ಎಲ್ಲ ಪ್ರಜೆಗಳು ಸಮಯ ಮೀರಿ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು.” ಇದರರ್ಥ, ‘ಇನು ಮುಂದೆ ರಜಾ ದಿನಗಳಿರುವುದಿಲ್ಲ, ವಾರದಲ್ಲಿ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ!’ ಎರ್ಚಾಗನ್ ಪ್ಯೂಸ್ ಗಳನ್ನು ಪರೀಕ್ಷಿಸಿ ಅವುಗಳು ಸಿದ್ಧವಿದೆಯೆಂದು ಖಚಿತಪಡಿಸಿಕೊಳ್ಳಲಾಯಿತು
ಮೊದಲ ಗುರಿಯಾದ ಹಿರೋಷಿಮಾ ಕಣ್ಣಿಗೆ ಕಂಡಿತು, ನಂತರ 09:15.30 AM (ಟಿನಿಯನ್ ಕಾಲ)ಕ್ಕೆ ಕರಾರುವಾಕ್ಕಾಗಿ ಹಿರೋಷಿಮಾದ ಮೇಲೆ ಬಾಂಬನ್ನು ಬೀಳಿಸಲಾ ಯಿತು. ಇದು ಮಾನವ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಸಾವು ನೋವುಗಳಿಗೆ ಕಾರಣೀಭೂತವಾದ ಅಮೆರಿಕದ ಯುದ್ಧ ವಿಮಾನ ಅನೋಲಾ ಗೆಳೆಯ ನೌಕಾಪಡೆ ಕ್ಯಾಪ್ಟನ್ ವಿಲಿಯಂ ಎಸ್. ಪಾರ್ ಸನ್ಸ್ ನ ಡೈರಿಯ ಪುಟಗಳಲ್ಲಿರುವ ದಾಖಲೆ.
ಮೆಮೊರಿಯಲ್ (ಜೆನ್ ಬಾಕು ಡೋಮ್) ಆಗಸ್ಟ್ 6, 1945ರಂದು ಮಾನವ ಇತಿಹಾಸದಲ್ಲೆ ಮೊತ್ತ ಮೊದಲ ಅಣುಬಾಂಬ್ ಸ್ಪೋಟದ ನಂತರ ಉಳಿದ ಒಂದೇ ಒಂದು ಕಟ್ಟಡದ ಅಸ್ಥಿಪಂಜರ, ವಿಶ್ವಶಾಂತಿ ಭರವಸೆಯ ಪ್ರತೀಕ.
ಮಾರ್ಚ್ 17, 1945ರಲ್ಲಿ ಅಮೆರಿಕನ್ನರು ಇಪೋಜಿಮಾ ವನ್ನು ಅಕ್ರಮಿಸಿಕೊಂಡ ನಂತರ, ಜಪಾನ್ ಮೇಲೆ ಅದರಲ್ಲೂ ಹಿರೋಷಿಮಾದ ದ್ವೀಪ ನಗರಗಳ ಮೇಲೆ ದಾಳಿಯನ್ನು ತೀವ್ರಗೊಳಿಸುತ್ತಾರೆ. ಜುಲೈ 1ರ ಒಂದೇ ರಾತ್ರಿಯಲ್ಲಿ 1817 ಜನರು ಸಾವನಪುತ್ತಾರೆ. ಏಪ್ರಿಲ್‌ನಲ್ಲಿ ಬಿ-29 ಬಾಂಬರ್ ಒಂದು 10 ಬಾಂಬುಗಳನ್ನು ಎಸೆದ ನಂತರ ಕೆಲವು ವಿಮಾನಗಳು ಶರಣಾಗತರಾಗಿ ಎನ್ನುವ ಸೂಚನೆಗಳುಳ ಕರಪತ್ರಗಳನ್ನು ಬೀಳಿಸುತ್ತವೆ. ಇದು ಜನಸಾಮಾನ್ಯರಲ್ಲಿ ಗೊಂದಲವನ್ನು ಮೂಡಿಸುತ್ತದೆ, “ಹಿರೋಷಿಮಾ ಒಂದು ಬೌದ್ಧ ಧರ್ಮಕೇಂದ್ರವಾಗಿದೆ ಎಂತಲೋ ಅಥವಾ ಹಿರೋಷಿಮಾ ನಗರದಿಂದ ಅಮೆರಿಕಕ್ಕೆ ಹೆಚ್ಚು ವಲಸೆ ಹೋಗುವ ಜನರಿಂದ ತುಂಬಿದೆ ಎಂದೋ, ಒಟ್ಟಿನಲ್ಲಿ ಮಿಲಿಟರಿನಗರವಾದ ಹಿರೋಷಿಮಾ ಮೇಲೆ ತಾವು ತಯಾರಿಸಿರುವ ಹೊಸ ಬಾಂಬನ್ನು ಸೋಟಿಸುವುದರಿಂದ ಜಪಾನಿಗಳ ಆತ್ಮಸ್ಥೆರ್ಯವನ್ನು ಕುಗ್ಗಿಸಿ ಯುದ್ಧ ನಿಲ್ಲಿಸುವ ಇರಾದೆಯಿಂದ ನಗರವನ್ನು ಪ್ರಥಮ ಗುರಿಯನ್ನಾಗಿಸುತ್ತದೆ.
ಕುರೆ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳ ಮೇಲೆ ಮೇಲಿಂದ ಮೇಲೆ ದಾಳಿಯಾಗುತ್ತದೆ. ನಂತರ ಇದಕ್ಕಿದ್ದಂತೆ ದಾಳಿ ನಿಂತುಹೋಗುತ್ತದೆ, ಆಗಸ್ 2 ಮತ್ತು 3ರಂದು ದಾಳಿಯಿರಲಿಲ್ಲ. ವಿಮಾನದ ರೆಕ್ಷೆಯ ನೆರಳೂ ಕೂಡ ಭೂಮಿಯ ಮೇಲೆ ಬಿದ್ದಿರುವುದಿಲ್ಲ. ಅಮೆರಿಕದ ನ್ಯೂ ಮೆಕ್ಸಿಕೋ ಮರುಭೂಮಿಯ ಅಲ್ಲೊ ಗಾರ್ಡೊನಲ್ಲಿ ನಡೆದ ಯಶಸ್ವಿ ಅಣ್ವಸ್ತ್ರ ಪ್ರಯೋಗದ ನಂತರ ನ್ಯೂಕ್ಲಿಯರ್ ಬಾಂಬ್ ತಯಾರಿಕೆ ನಡೆಯುತ್ತಿದೆಯೆಂದು ಇಲ್ಲಿಯ ಜನರಿಗೆ ಎಳ್ಳಷ್ಟೂ ತಿಳಿದಿರುವುದಿಲ್ಲ. ಸ್ಪೋಟದ ಹಿಂದಿನ ರಾತ್ರಿ ಶುಭವಾಗಿತ್ತು. ಅಂದು ಭಾನುವಾರ ನಾದರೂ ರಜಾ ದಿನವೇನೂ ಆಗಿರಲಿಲ್ಲ.
ಕಾಲ 21:200 ಸೈರನ್ ಬಜಾಯಿಸುತ್ತದೆ. ‘ವಿಮಾನಗಳು ಆಗಮಿಸುತ್ತಿವೆ, ದೀಪಗಳನ್ನು ನಂದಿಸಿ’ಎಂದು ಸೂಚನೆ ಬರುತ್ತದೆ, 00:25ಕ್ಕೊಂದು ಸಲ, ನಂತರ ಬೆಳಗ್ಗೆ 07:09ಕ್ಕೊಂದು ಸಲ ಸೈರನ್ ಕೂಗುತ್ತದೆ. ಹೀಗೆ ಅವಿರತವಾದ ಅಪಾಯದ ಮುನ್ಸೂಚನೆಯಿಂದ ಜನ ನಿದ್ದೆಗೆಟ್ಟಿರುತ್ತಾರೆ. ಬೆಳಿಗ್ಗೆ ಏನೂ ಆತಂಕವಿಲ್ಲವೆಂದು ಸೂಚನೆ ಬಂದಾಗ ಮನೆಗೆ ಹಿಂದಿರುಗುತ್ತಿದ್ದ ರಾತ್ರಿ ಪಾಳಿಯ ಕೆಲಸಗಾರರು, ಕೆಲಸಕ್ಕೆ ಆಗಮಿಸುತ್ತಿದ್ದ ದಿನದ ಪಾಳಿಯ ಕೆಲಸಗಾರರೊಂದಿಗೆ ಬೆರೆತಿರುತ್ತಾರೆ. ಸರ್ಕಾರಿ ನೌಕರರು, ಕಾರ್ಖಾನೆ ಕಾರ್ಮಿಕರು, ಸ್ವಯಂ ಸೇವಕರು, ವಿದ್ಯಾರ್ಥಿಗಳು, ನಗರದ ಮೇಲೆ ಬಾಂಬ್ ಬಿದ್ದಾಗ ಹರಡುವ ಬೆಂಕಿಯನ್ನು ತಡೆಗಟ್ಟಲು ಬೇಕಾದ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ. ಒಟ್ಟಿನಲ್ಲಿ ರಾತ್ರಿಯ ಆತಂಕದ ವಾತಾವರಣದಿಂದ ಬಿಡುಗಡೆಗೊಂಡ ಕ್ಷಣಗಳನ್ನು ಆನಂದಿಸುತ್ತಿರುತ್ತಾರೆ. ಇದ್ದಕ್ಕಿದ್ದಂತೆ ಹಿರೋಷಿಮಾ ಸೆಂಟ್ರಲ್ ಬ್ರಾಡ್ ಕಾಸ್ಟಿಂಗ್ (NHK) ರೇಡಿಯೋದಲ್ಲಿ ಧ್ವನಿ ಮೊಳಗುತ್ತದೆ “ಮಿಲಿಟರಿ ಕಮ್ಯಾಂಡ್ ಸೂಚನೆ ಕೊಡುತ್ತಿದೆ, ಸೈಜೂ ದ್ವೀಪದ ಮೇಲೆ ಮೂರು ದೊಡ್ಡ ವಿಮಾನಗಳು” ಅಷ್ಟೆ, ಪ್ರಸಾರ, ದಿಗಂತದಲ್ಲಿ ದಿಗ್ಗನೆ ಗೋಚರಿಸಿದ ಕಣ್ಣು ಕುಕ್ಕುವ ಬೆಳಕಿನೊಡನೆ ಕಡಿತಗೊಳ್ಳುತ್ತದೆ. ಭೂಮಿಯೇ ಬಿರಿಯಿತನ್ನುವ ಆ ಸ್ಪೋಟದೊಂದಿಗೆ ಆಕ್ರಮಿಸಿದ ಬೆಂಕಿಯ ಜ್ವಾಲೆಗಳು, ಯಾರಿಗೆ ಏನಾಯಿತೆಂದು ತಿಳಿಯುವ ಮುನ್ನವೇ ಕರಗಿ ಇದ್ದಿಲುಗಳಾದರು, ಸ್ಪೋಟದ ತರಂಗದಲ್ಲಿ ದಿಕ್ಕಾಪಾಲಾಗಿ ಚೆಲ್ಲಾಡಿದರು. ಕುಸಿಯುತ್ತಿರುವ ಕಟ್ಟಡಗಳ ನಡುವೆ ಶಾಶ್ವತ ನಿವಾಸಿಗಳಾದರು. ಕೈಯಿಲ್ಲದ, ಕಾಲಿಲ್ಲದ, ರುಂಡವಿಲ್ಲದೆ ದೇಹಗಳು ಭೂಮಿಯ ಮೇಲೆ ಪೇರಿಸಲ್ಪಟ್ಟು ಅವುಗಳ ನಡುವೆ ಬೀಕರವಾಗಿ ಸುಟ್ಟು ಘಾಸಿಗೊಂಡ ಕೆಲವು ಜೀದಂತ ಶವಗಳ ರೋದನೆಗೆ ಯಾರಲ್ಲೂ ಉತ್ತರವಿರಲಿಲ್ಲ. ಅತ್ತ ಟಿನಿಯನ್ ದ್ವೀಪದಲ್ಲಿ ಬಾಂಬ್ ಸ್ಪೋಟಿಸಿದ ಒಂದು ಗಂಟೆಯ ನಂತರ ‘ಎನೊಲಾ ಗೇ’ನಿಂದ ಸಂದೇಶವೊಂದು ಬಂತು, ‘ಫಲಿತಾಂಶ ಅತ್ಯಂತ ಸ್ಪಷ್ಟ ಎಲ್ಲ ರೀತಿಯಲ್ಲೂ ಯಶಸ್ವಿಯಾಗಿದೆ. ಇಡೀ ದೀಪ ಅತ್ಯುತ್ತಾಹದಿಂದ “ನಾವು ಸಾಧಿಸಿದೆವು, ಹಿರೋಷಿಮಾಗೆ ಸರಿಯಾದ ಪೆಟ್ಟುಕೊಟ್ಟೆವು” ಎಂದು ಸಂಭ್ರಮಿಸಿತು.
ಅಲ್ಲಿ ಹತ್ತಿರದಲ್ಲೇ ಇದ್ದ ಮಿಲಿಟರಿ ವಲಯದಲ್ಲಿ ಸಂತೋಷದಿಂದ ಉದ್ರಿಕ್ತಗೊಂಡಿದ್ದ ಸೈನಿಕರ ನಡುವೆ ವಿಜ್ಞಾನಿ ಗಳು ನಿರ್ಲಿಪ್ತತೆಯಿಂದ ಎರಡನೇ ನ್ಯೂಕ್ಲಿಯರ್ ಬಾಂಬನ್ನು ಸಿದ್ದಗೊಳಿಸುತ್ತಿದ್ದರು. ನಾಗಸಾಕಿಯ ಮೇಲೆ ಬೀಳಿಸಲು ಹಿರೋಜಮಾ ಹೀಸ್ ಮೆಮೊರಿಯಲ್ ಮ್ಯೂಸಿಯಂನ ಮೊದಲನೇ ಮಹಡಿಯ ಆರಂಭದಲ್ಲಿ 1945 ಆಗಸ್ಟ್ ೨ರಂದು ತೆಗೆದ ಯುಕಿಕೊ ಪುಜೆ ಎಂಬ ಬಾಲಕಿಯ ಛಾಯಾ ಚಿತ್ರವಿದೆ. ಆಗಸ್ಟ್ 6ರಂದು 10 ವರ್ಷದ ಈ ಬಾಲಕಿಯ ಮನೆ ಹೈಪೊ ಸೆಂಟರ್ (ಅಟಾಮಿಕ್ ಬಾಂಬ್ ಸಿಡಿದ ಸ್ಥಳ) ನಿಂದ ಸುಮಾರು 1200 ಮೀ. ದೂರದಲ್ಲಿರುತ್ತದೆ. ಆಕೆ ತನ್ನ ಮನೆಯ ಕೋಣೆಯೊಂದರಲ್ಲಿ ಕುಳಿತಿರುತ್ತಾಳೆ. ಬಾಂಬ್ ಸಿಡಿದಾಕ್ಷಣ ಉತ್ಪತ್ತಿಯಾದ ಅತೀವ ಶಾಖ ಆಕೆಯ ಬಲ ಭಾಗವನ್ನು ಸುಟ್ಟು, ಒಡೆದು ಚೂರಾದ ಮನೆಯ ಕಿಟಕಿಯ ಗಾಜುಗಳೆಲ್ಲ ಆಕೆಯ ದೇಹದಲ್ಲಿ ಚುಚ್ಚಿಕೊಂಡಿರುತ್ತದೆ. ನಗರದ ಕಟ್ಟಡಗಳಿಗೆ ಬೆಂಕಿ ಹರಡುವ ಮುನ್ನ ಕುಸಿಯುತ್ತಿದ್ದ ತನ್ನ ಮನೆಯಿಂದ ಹೇಗೋ ತಪ್ಪಿಸಿಕೊಂಡಿರುತ್ತಾಳೆ. ಬೆಂಕಿಯನೇರ ಆಕ್ರಮಣದಿಂದ ಆಕೆಯ ಬಲಗೈಯ ಬೆರಳುಗಳೆಲ್ಲ ಒಂದಕ್ಕೊಂದು ಬೆಸೆಯಲ್ಪಟ್ಟಿರುತ್ತವೆ. ನಂತರ ಶಸ್ತ್ರಚಿಕಿತ್ಸೆಯ ಮೂಲಕ ಬೆರಳುಗಳನ್ನು ಬಿಡಿಸಿರುತ್ತಾರೆ. ಆಕೆ ಬೆಳೆದು, ಮದುವೆಯಾಗಿ, ಎರಡು ಮಕ್ಕಳನ್ನು ಪಡೆದು ಸುಖದಿಂದ ಜೀವನ ನಡೆಸುತ್ತಾಳೆ. ತನ್ನ 30 ವರ್ಷಗಳ ನಂತರ ಕ್ಯಾನ್ಸರ್ ಕಾಯಿಲೆ ಆಕ್ರಮಿಸಿದರೂ ಹಿರೋಷಿಮಾ ಅಟಾಮಿಕ್ ಬಾಂಬ್ ಸರ್ವೈವರ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆದು ಕೆಲಕಾಲ ಚೇತರಿಸಿಕೊಂಡರೂ, ಕ್ಯಾನ್ಸರ್ ದೇಹದಲ್ಲಿ ಪಸರಿಸಿ ದೈಹಿಕವಾಗಿ ಆಕೆಯ ಚಟುವಟಿಕೆಗಳು ಕುಂಠಿತವಾಗುತ್ತಾ ಬರುತ್ತವೆ. ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ 1977ರಲ್ಲಿ ಮರಣ ಹೊಂದುತ್ತಾಳೆ. ಆಗ ಆಕೆಯ ವಯಸ್ಸು 42 ವರ್ಷ.
ಮ್ಯೂಸಿಯಂನ ಒಳಗೆ ಹಾಗೆಯೇ ಮುಂದುವರಿದರೆ, ಬಾಂಬ್ ಸಿಡಿದ ನಂತರ ಆದ ದುರಂತದ ಚಿತ್ರಗಳು, ಅಳಿದುಳಿದ ಪಳಿಯುಳಿಕೆಗಳು, ಛಾಯಾಚಿತ್ರಗಳು, ಸಾಕ್ಷಾ ಧಾರಿತ ವಸ್ತುಗಳು, ಬಲಿಯಾದವರ ಬಟ್ಟೆಗಳು, ಆಟಿಕೆಗಳು, ಬದುಕುಳಿದವರು ಕೆಲವು ಕಾಲದ ನಂತರ ಬರೆದ ವರ್ಣಚಿತ್ರಗಳು, ರೇಖಾ ಚಿತ್ರಗಳಲ್ಲಿ ಅಂದುಅನುಭವಿಸಿದ ಅತ್ಯಂತ ದಾರುಣ ಪರಿಸ್ಥಿತಿಯ ಚಿತ್ರಣವನ್ನು ತೆರೆದಿಡುತ್ತವೆ. ಎಂತಹ ಕಲ್ಲು ಹೃದಯವನ್ನೂ ಕೂಡ ಕರಗಿಸು ವಂತಹ ಈ ವಸ್ತು ಸಂಗ್ರಹಾಲಯದ ಚಿತ್ರಗಳನ್ನು ನೋಡಿದ ನಂತರ ಅತ್ತಾವಲೋಕನ ಮಾಡಿಕೊಳ್ಳಲೆಂದೇ ಇರುವ ಪಡಸಾಲೆ ಯಲ್ಲಿ ಒತ್ತರಿಸಿ ಬರುವ ದುಃಖದ ಕಟ್ಟೆಯೊಡೆಯುತ್ತದೆ. ಇಂದು ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವಾಗಲಿ, ಇಸ್ರೇಲ್-ಪ್ಯಾಲೆಸ್ಪೇನ್ ಯುದ್ಧದಲ್ಲಿ ಮೇಲೆ ನೀಡಿದ ವಿವರಗಳಿಗಿಂತೇನೂ ಕಡಿಮೆ ಅನಾಹುತವಾಗಿಲ್ಲ. ಚರಿತ್ರೆ ಯಲ್ಲಿ ಎರಡು ಮಹಾಯುದ್ರಗಳಾಗಿ ಅನುಭವಿಸಿದ ಸಾವು ನೋವುಗಳ ಸಾಕ್ಷಿ ಕಣ್ಣ ಮುಂದೆ ಇದ್ದರೂ ಮನುಕುಲದ ಕೆಲವರ ಯುದ್ಧ ದಾಹಕ್ಕೆ ಕೊನೆಯೇ ಇಲ್ಲ. ಯುದ್ದದಿಂದ ಏನು ಸಾಧಿಸುತ್ತೇವೆ ಎಂಬ ಕಲ್ಪನೆಯೂ ಇಲ್ಲ. ಹಾಗಾಗಿ ಯುದ್ಧದ ಅನಾಹುತಗಳನ್ನು ನೋಡುವುದಿದ್ದರೆ ಹಿರೋಷಿಮಾದಲ್ಲಿರುವ ಹಿರೋಷಿಮಾ ಪೀಸ್ ಮೆಮೋರಿ ಯಲ್ ಮ್ಯೂಸಿಯಂ ಅನ್ನು ಈ ರಾಜಕೀಯ ನಾಯಕರು ವೀಕ್ಷಿಸಬೇಕು. ಅಂದು ಘಾಸಿಗೊಂಡ ದೇಹಗಳನ್ನು ನೋಡಿದ ನನ್ನ ಆತ್ಮವೂ ಘಾಸಿಗೊಂಡಿತ್ತು.
(ದತ್ತಾಂಶ ಮಾಹಿತಿ: ಹಿರೋಷಿಮಾ ಪೀಸ್ ಮೆಮೊರಿಯಲ್ ಮ್ಯೂಸಿಯಂ)
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಇಂದಿನಿಂದ ( ಡಿಸೆಂಬರ್ 20 ) ಮೂರು ದಿನಗಳ ಕಾಲ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…