ಜಾಗದ ವಿಚಾರವಾಗಿ ಅಭಿಪ್ರಾಯ ಹಂಚಿಕೊಂಡ ಸಾರ್ವಜನಿಕರು, ರೈತರು, ಮುಖಂಡರು
ಕೆ.ಎಸ್.ಚಂದ್ರಶೇಖರ್ ಮೂರ್ತಿ
ಮೈಸೂರು: ತಿ.ನರಸೀಪುರ ಪಟ್ಟಣದಲ್ಲಿ ಕೆಎಸ್‌ಐಸಿಗೆ ಸೇರಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರ ಕ್ರೀಡಾಂಗಣ ನಿರ್ಮಿಸಲು ಮುಂದಾಗಿರುವುದನ್ನು ಸ್ವಾಗತಿಸುವ ತಿ.ನರಸೀಪುರ ತಾಲ್ಲೂಕಿನ ಜನತೆ. ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‌ಐಸಿ) ಆವರಣದ ಜಾಗವನ್ನೇ ಆಯ್ಕೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾಗದ ವಿಚಾರ ವಾಗಿ ಪರ- ವಿರೋಧ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಸಾರ್ವಜನಿಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
” ವಿವೇಚನಾ ರಹಿತ ಕ್ರಮ ತಿ.ನರಸೀಪುರದಲ್ಲಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿರುವುದು ಸಂತೋಷದ ವಿಷಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ವಿಷನ್ ಇದೆ. ಆದರೆ, ಕ್ರೀಡಾಂಗಣವನ್ನು ನೂರಾರು ಜನರು ಕೆಲಸ ಮಾಡುತ್ತಿರುವ ಕರ್ನಾಟಕ ರೇಷ್ಮೆ ನೂಲು ತೆಗೆಯುವ ಘಟಕದ ಆವರಣದಲ್ಲಿಯೇ ನಿರ್ಮಿಸಲು ಹೊರಟಿರುವುದು ವಿವೇಚನಾ ರಹಿತ ಕ್ರಮ.”
-ನಾಗೇಂದ್ರ ಸ್ವಾಮಿ, ನಿವಾಸಿ
ಕ್ರೀಡಾಂಗಣ ಬೇಡ, ಕಾರ್ಖಾನೆ ಮಾಡಿ: ಕ್ರೀಡಾಂಗಣ ನಿರ್ಮಿಸಲು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಘಟಕದ ಆವರಣ ಆಯ್ಕೆ ಮಾಡಿರುವುದು ಸರಿಯಲ್ಲ. ಅಲ್ಲಿನ ಪರಿಸರ ಹಾಳಾಗುತ್ತದೆ. ಕ್ರೀಡಾಂಗಣಕ್ಕಾಗಿ ೬ ಕೋಟಿ ರೂ. ಖರ್ಚು ಮಾಡುವ ಬದಲು ಅಲ್ಲಿಯೇ ಇನ್ನೊಂದು ಕಾರ್ಖಾನೆ ಮಾಡಿ ಉದ್ಯೋಗ ಸೃಷ್ಟಿ ಮಾಡಬೇಕು. ಕ್ರೀಡಾಂಗಣಕ್ಕೆ ತಿ.ನರಸೀಪುರದಲ್ಲಿ ಬೇರೆ ಜಾಗ ಹುಡುಕಲಿ.
-ಮಹದೇವಸ್ವಾಮಿ, ತಿ.ನರಸೀಪುರ
ಸಿಎಂಗೆ ಮನವಿ ಸಲ್ಲಿಸಿದ್ದೇವೆ: ತಿ.ನರಸೀಪುರಕ್ಕೆ ಕ್ರೀಡಾಂಗಣ ಬೇಕು. ಆದರೆ, ಎಚ್ ಟಿಎಂಎ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಘಟಕ ಇರುವ ಸ್ಥಳದಲ್ಲಿ ಕ್ರೀಡಾಂಗಣ ಮಾಡುವುದಕ್ಕೆ ಆಗಲ್ಲ. ನಾವು ಈ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೇ ಬಂದು ಸ್ಥಳ ನೋಡಿ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
-ಪ್ರಸಾದ್ ನಾಯ್ಕ್, ತಿ.ನರಸೀಪುರ ರೈತ
ಕೆಎಸ್‌ಐಸಿ ಜಾಗದಲ್ಲಿ ಕ್ರೀಡಾಂಗಣ ಸರಿಯಲ್ಲ: ನಮ್ಮೂರಿಗೆ ಸರ್ಕಾರ ಕ್ರೀಡಾಂಗಣ ಕೊಡುತ್ತಿರುವುದು ತುಂಬಾ ಖುಷಿಯ ವಿಚಾರ. ಆದರೆ, ಕ್ರೀಡಾಂಗಣ ಮಾಡಲು ಸೂಕ್ತವಾದ ಜಾಗ ಗುರುತು ಮಾಡುವುದರಲ್ಲಿ ಜನಪ್ರತಿನಿಽಗಳು ವಿಫಲರಾಗಿದ್ದಾರೆ. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಘಟಕಕ್ಕೆ ಇತಿಹಾಸವಿದೆ. ಇಲ್ಲಿ ಸಾವಿರಾರು ಮರಗಳಿವೆ. ಇಂತಹ ಪ್ರದೇಶದಲ್ಲಿ ಕ್ರೀಡಾಂಗಣ ಮಾಡುವುದು ಸೂಕ್ತವಲ್ಲ.
-ಮೋಹನ್ ಕುಮಾರ್, ಸ್ಥಳೀಯ
ಕೆಎಸ್‌ಐಸಿ ಜಾಗದಲ್ಲಿ ಕ್ರೀಡಾಂಗಣ ಬೇಡ:
ಕ್ರೀಡಾಂಗಣಕ್ಕೆ ಯಾರ ವಿರೋಧವೂ ಇಲ್ಲ, ಕ್ರೀಡಾಂಗಣ ಬೇಕು. ಆದರೆ, ಕ್ರೀಡಾಂಗಣಕ್ಕೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಘಟಕ ಇರುವ ಜಾಗವೇ ಯಾಕೆ ಬೇಕು? ಇಲ್ಲಿ ಸಾಕಷ್ಟು ಮರಗಳಿವೆ. ಮೈಸೂರು ರೇಷ್ಮೆ ಸೀರೆಗೆ ಸರತಿ ಸಾಲಿನಲ್ಲಿ ನಿಂತು ಖರೀದಿಸುವಷ್ಟು ಬೇಡಿಕೆ ಇರುವಾಗ ಇಂತಹ ಮೈಸೂರು ರೇಷ್ಮೆ ನೂಲು ತೆಗೆಯುವ ಕಾರ್ಖಾನೆಗೆ ತೊಂದರೆ ಮಾಡುವುದು ಬೇಡ.
-ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ
” ಬೇರೆ ಜಾಗದಲ್ಲಿ ಕ್ರೀಡಾಂಗಣ ಮಾಡಲಿ ತಿ.ನರಸೀಪುರ ತಾಲ್ಲೂಕಿಗೆ ಕ್ರೀಡಾಂಗಣ ಅಗತ್ಯವಿದೆ. ಆದರೆ, ಕ್ರೀಡಾಂಗಣವನ್ನು ನೂರಾರು ಜನರು ಕೆಲಸ ಮಾಡುತ್ತಿರುವ ರೇಷ್ಮೆ ನೂಲು ತೆಗೆಯುವ ಘಟಕದಲ್ಲಿ ಮಾಡುವುದು ಬೇಡ. ಆ ಜನರ ಹೊಟ್ಟೆ ಮೇಲೆ ಹೊಡೆದು ಕ್ರೀಡಾಂಗಣ ಮಾಡುವ ಅಗತ್ಯ ಇಲ್ಲ. ರೇಷ್ಮೆ ನೂಲು ತೆಗೆಯುವ ಘಟಕದ ಜಾಗ ಬಿಟ್ಟು ಬೇರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಿ.”
-ಎನ್.ಮಹದೇವಸ್ವಾಮಿ, ಆಟೋ ಚಾಲಕ
ಬೆಂಗಳೂರು: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಏರ್ಪಟ್ಟಿರುವ ಪರಿಣಾಮ ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ…
ನಾಪೋಕ್ಲು: ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಾಗ್ದಾಳಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಳಸಿಕೆರೆ ಗ್ರಾಮದ…
ಬೆಂಗಳೂರು: ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಚರ್ಚಿಸಲಾಗುವುದು. ರಾಜ್ಯದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡಲಾಗುವುದು ಎಂದು…
ಕೊಡಗು: ನಾಳೆ ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳ ಪೂಜಾ…
ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು…