ಎಸ್.ಎಸ್.ಭಟ್
ನಂಜನಗೂಡು: ಪ್ರತಿ ವರ್ಷ ಸುತ್ತೂರು ಜಾತ್ರೆಯಲ್ಲಿ ಹೊಸದನ್ನು ಪರಿಚಯಿಸುವ ಸುತ್ತೂರು ಶ್ರೀ ಗಳು ಈ ಬಾರಿ ಶಿವರಾತ್ರೀಶ್ವರ ಜಯಂತಿ ಮಹೋತ್ಸವದ ತೆಪ್ಪೋತ್ಸವಕ್ಕೆಂದು ಅತ್ಯಾಕರ್ಷಕವಾದ ವಿನೂತನ ತೆಪ್ಪವನ್ನು ಸಿದ್ಧಪಡಿಸಿದ್ದು, ಸೋಮವಾರ ಜನಸಾಗರದ ಮಧ್ಯೆ ಈ ವಿನೂತನ ತೆಪ್ಪ ಕಪಿಲಾ ನದಿಯಲ್ಲಿ ಸಂಚರಿಸಲಿದೆ.
ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸೂಚನೆಯ ಮೇರೆಗೆ ಈ ತೆಪ್ಪವನ್ನು ಉತ್ತರ ಕನ್ನಡದ ಮುರುಡೇಶ್ವರದ ಶಿಲ್ಪಿ ಗಂಗಾಧರ ಸಿದ್ಧಪಡಿಸಿದ್ದು ಅದು ಸೋಮವಾರ ಕಪಿಲೆಯಲ್ಲಿ ತೇಲುವ ಮೂಲಕ ಪ್ರೇಕ್ಷಕರ ಕಣ್ತುಂಬಲಿದೆ.
೨೫ ಎಚ್‌ಪಿ ಮೋಟಾರ್‌ನಿಂದ ಚಾಲನೆಗೊಳ್ಳುವ ಈ ತೆಪ್ಪದ ನಾಲ್ಕು ದಿಕ್ಕುಗಳಲ್ಲಿನ ಶಿಲ್ಪಕಲಾ ಕೆತ್ತನೆಗಳಿಂದ ಅತ್ಯಾಕರ್ಷಕ ವಾಗಿದೆ. ಈ ಸುಂದರವಾದ ಈ ತೆಪ್ಪದಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಿಗೆ ತಲಾ ನಾಲ್ಕರಂತೆ ಹದಿನಾರು ನಂದಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಶಿವರಾತ್ರೀಶ್ವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವ ನಡೆಸುವ ಈ ತೇಲುವ ದೇವಾಲಯದಲ್ಲಿ ಸುಮಾರು ೨೦ ಜನರು ನಿಂತುಕೊಳ್ಳಲು ಸ್ಥಳಾವಕಾಶವಿದೆ.
” ೧೭ ಅಡಿ ಎತ್ತರದ ೨೦+೧೮ ಅಡಿ ಅಗಲದ ಈ ತೆಪ್ಪವನ್ನು ೨೫ಕ್ಕೂ ಹೆಚ್ಚು ಅಶ್ವಶಕ್ತಿಯ ಮೋಟಾರ್ ನಿರ್ವಹಿಸುತ್ತಿದ್ದು, ಸುತ್ತೂರು ಜಾತ್ರೆಯ ಅತ್ಯಂತ ಜನಾಕರ್ಷಣೆಯ ತೆಪ್ಪವಾಗಿ ಕಂಗೊಳಿಸಲಿದೆ.”
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…
ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…
ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…