Andolana originals

ಪೊಲೀಸರಿಗೆ ಎಲ್ಲ ವಿಷಯ ಗೊತ್ತಾಗಿದೆ!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ

ನಯವಾಗಿ ಮಾಹಿತಿ ಪಡೆದು ಬಿಡದಿ ಟೋಲ್ ಬಳಿ ಲಾಕ್ ಮಾಡಿದ ಪೊಲೀಸರು

ಏನಿದು ನಿಜ ಹೇಳಿ ಪ್ರದೋಷ್?: ಪಿಎಸ್‌ಐ ವಿನಯ್ ಖಡಕ್ ಪ್ರಶ್ನೆ; ಬಾಯಿಬಿಟ್ಟ ಪ್ರದೋಷ್

ಪಿಎಸ್‌ಐ ವಿನಯ್ ಅವರು, ಸರೆಂಡರ್ ಆದ ಹುಡುಗರು ದರ್ಶನ್, ಪವಿತ್ರಾ ಗೌಡ ಮತ್ತು ಪವನ್ ಅವರ ಹೆಸರು ಹೇಳುತ್ತಿದ್ದಾರೆ’ ಎಂದು ಕೇಳಿದ್ದರಿಂದ ಭಯವಾಗಿ ನಾನು, ನಾಗರಾಜ್ ಮತ್ತು ಲಕ್ಷ್ಮಣ್ ನೈಸ್ ರೋಡ್‌ನಲ್ಲಿ ಭೇಟಿಯಾದೆವು. ನಂತರ ಪಿಎಸ್‌ಐ ವಿನಯ್ ಅವರಿಗೆ ಫೋನ್ ಮಾಡಿ, ನಿಮ್ಮೊಂದಿಗೆ ಮಾತನಾಡಬೇಕು. ೫ ನಿಮಿಷ ಸಿಗುತ್ತೀರಾ ಎಂದು ರಿಕ್ವೆಸ್ಟ್ ಮಾಡಿದೆ. ಈ ನಡುವೆ ‘ಎಲ್ಲರನ್ನೂ ಪೊಲೀಸರ ಮುಂದೆ ಸರೆಂಡರ್ ಮಾಡಿಸಿಬಿಡೋಣ, ಇಲ್ಲದಿದ್ದರೆ ತೊಂದರೆಯಾಗುತ್ತದೆ’ ಎಂದು ನಾವು ಮೂರೂ ಜನ ಯೋಚಿಸುತ್ತಿದ್ದೆವು.

ಅದೇ ಸಮಯಕ್ಕೆ ಕಾಕತಾಳೀಯ ಎಂಬಂತೆ ನಾವು ನಿಂತಿದ್ದ ಸ್ಥಳದಿಂದ ೨೦-೩೦ ಅಡಿ ದೂರದಲ್ಲಿ ಪವನ್ ಹಾಗೂ ನಂದೀಶ್ ಒಂದು ಪಿಕಪ್ ಗಾಡಿಯ (ರಿಪೇರಿಗೆ) ಬಾನೆಟ್ ತೆಗೆದು ನೋಡುತ್ತಿದ್ದರು. ಆಗ ಲಕ್ಷ್ಮಣ್ ಅವರನ್ನು ತೋರಿಸಿ, ‘ಅಣ್ಣ ಇವರು ಇಲ್ಲೇ ಇದ್ದಾರೆ’ ಎಂದರು. ನಂತರ ಲಕ್ಷ್ಮಣ್, ಅವರು ಇದ್ದ ಜಾಗಕ್ಕೆ ಹೋಗಿ, ಪವನ್ ಮತ್ತು ನಂದೀಶ್ ಇಬ್ಬರನ್ನೂ ನಿಮ್ಮ ಜೊತೆ ಮಾತನಾಡುವುದು ಇದೆ ಬನ್ನಿ ಎಂದು ಕರೆದುಕೊಂಡು ನಾವು ಇದ್ದ ಜಾಗಕ್ಕೆ ಬಂದರು.

ದರ್ಶನ್ ಹೆಸರು ಬಾಯಿಬಿಡಲಿಲ್ಲ:  ಅಷ್ಟರಲ್ಲಿ ಪಿಎಸ್‌ಐ ವಿನಯ್ ಅವರು ಅಲ್ಲಿಗೆ ಬಂದರು. ಆಗ ನಾನು ನಿಮ್ಮೊಂದಿಗೆ ಮಾತನಾಡುವುದಿದೆ. ನನ್ನ ಕಾರಿನೊಳಗೆ ರಿಕ್ವೆಸ್ಟ್ ಮಾಡಿದೆ. ಆಗ ಮಧ್ಯದ ಸೀಟಿನಲ್ಲಿ ಕುಳಿತಿದ್ದ ನಾಗರಾಜ್ ಕಾರಿನಿಂದ ಕೆಳಗೆ ಇಳಿದರು. ಪಿಎಸ್‌ಐ ವಿನಯ್ ಅವರು ನನ್ನ ಕಾರಿನ ಮಧ್ಯದ ಸೀಟಿನಲ್ಲಿ ಬಂದು ಕುಳಿತರು. ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ, ‘ಏನಿದು ನಿಜ ಹೇಳಿ ಪ್ರದೋಷ್’ ಎಂದು ನನ್ನನ್ನು ಪ್ರಶ್ನಿಸಿದರು.

ಆಗ ನಾನು ನಡೆದ ವಿಚಾರ ಹೇಳುತ್ತಾ, ಒಬ್ಬ ಹುಡುಗ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ. ಆತನನ್ನು ಚಿತ್ರದುರ್ಗದಿಂದ ಕರೆದುಕೊಂಡು ಬಂದು ಹೊಡೆದಿದ್ದಾರೆ; ಅದಕ್ಕೆ ಹುಡುಗ ಸತ್ತು ಹೋಗಿದ್ದಾನೆ. ನಂತರ ಡೆಡ್ ಬಾಡಿಯನ್ನು ತೆಗೆದುಕೊಂಡು ಬಂದು ಸತ್ವ ಅಪಾರ್ಟ್‌ಮೆಂಟ್ ಹತ್ತಿರ ಬಿಸಾಕಿದ್ದಾರೆ ಎಂದು ತಿಳಿಸಿದೆ. ಆಗ ಪಿಎಸ್‌ಐ ವಿನಯ್ ಅವರು, ‘ಆ ಹುಡುಗನಿಗೆ ಹೊಡೆದ ಸ್ಥಳದಲ್ಲಿ ಯಾರ‍್ಯಾರ್ ಇದ್ದರು’ ಎಂದು ಕೇಳಿದರು. ಅದಕ್ಕೆ ನಾನು, ಪವನ್, ನಂದೀಶ್, ರಾಘವೇಂದ್ರ, ಪವಿತ್ರಾ ಗೌಡ, ವಿನಯ್, ನಾಗರಾಜ್, ಲಕ್ಷ್ಮಣ್ ಇದ್ದೆವು ಎಂದು ತಿಳಿಸಿದೆ. ಆದರೆ ದರ್ಶನ್ ಅವರ ಹೆಸರನ್ನು ಹೇಳಲಿಲ್ಲ.

ಮುಂದೆ ಯಾವತ್ತೂ ನನಗೆ ಫೋನ್ ಮಾಡಬೇಡಿ:  ನಂತರ ಪಿಎಸ್‌ಐ ವಿನಯ್ ಅವರು, ‘ನೀವು ಹೇಗೆ ಹೋಗಿದ್ರಿ’ ಎಂದು ಕೇಳಿದಾಗ, ನನ್ನ ಇದೇ ಕಾರಿನಲ್ಲಿ ಹೋಗಿದ್ದೆ ಎಂದು ಹೇಳಿದೆ. ಆಗ ಪಿಎಸ್‌ಐ ವಿನಯ್‌ಅವರು ತಕ್ಷಣ ನನ್ನ ಕಾರಿನಿಂದ ಇಳಿದು ಬಿಟ್ಟರು. ನಂತರ ‘ಪ್ರದೋಷ್ ಇನ್ನು ಮುಂದೆ ನನಗೆ ಯಾವತ್ತೂ ಫೋನ್ ಮಾಡಬೇಡಿ’ ಎಂದು ಹೇಳಿ ಅಲ್ಲಿಂದ ಹೊರಡಲು ಅನುವಾದರು. ಆಗ ನಾನು ಬೇರೆಯವರನ್ನೆಲ್ಲಾ ಇಂದು ಸರೆಂಡರ್ ಮಾಡಿಸುತ್ತೇನೆ ಎಂದು ಅವರಿಗೆ ಹೇಳಿದೆ. ಅದಕ್ಕೆ ವಿನಯ್ ಅವರು ಆಯ್ತು ಎಂದು ಹೇಳಿ ಅಲ್ಲಿಂದ ಹೊರಟು ಹೋದರು.

ಒಂದು ಸಲ ದರ್ಶನ್‌ಗೆ ವಿಷಯ ತಿಳಿಸಿಬಿಡೋಣ:  ನಂತರ ನಾನು, ನಾಗರಾಜ್, ಲಕ್ಷ್ಮಣ್, ನಂದೀಶ್ ಮತ್ತು ಪವನ್ ಎಲ್ಲರೂ ವಿನಯ್ ಅವರನ್ನು ಭೇಟಿ ಮಾಡಲು ಹೋದೆವು. ಆ ವೇಳೆಗೆ ವಿನಯ್ ಪಟ್ಟಣಗೆರೆ ಜಯಣ್ಣ ಅವರ ಮನೆಯ ಹತ್ತಿರ ಇದ್ದ ಇನ್ನೊಂದು ಶೆಡ್‌ನ ಬಳಿ ಇದ್ದರು. ಅಲ್ಲಿಗೆ ದೀಪಕ್ ಕೂಡ ಬಂದರು. ಆಗ ನಾನು ವಿನಯ್ ಉದ್ದೇಶಿಸಿ ಪೊಲೀಸರಿಗೆ ಎಲ್ಲ ವಿಷಯ ಗೊತ್ತಾಗಿದೆ, ಎಲ್ಲರನ್ನೂ ಸರೆಂಡರ್ ಮಾಡಿಸುವುದು ಒಳ್ಳೆಯದು ಎಂದೆ. ಅದಕ್ಕೆ ವಿನಯ್ ಒಪ್ಪಿದರು. ಆಗ ನಾಗರಾಜ್, ‘ಒಂದು ಸಲ ದರ್ಶನ್ ಅವರಿಗೆ ಈ ವಿಷಯ ತಿಳಿಸಿಬಿಡೋಣ’ ಎಂದರು. ಅದಕ್ಕೆ ನಾವೆಲ್ಲರೂ ಒಪ್ಪಿಕೊಂಡೆವು.

ಮೈಸೂರಿನ ರ‍್ಯಾಡಿಷನ್ ಬ್ಲೂ ಹೋಟೆಲ್‌ನಲ್ಲಿ ದರ್ಶನ್ ಭೇಟಿ:  ನಂತರ ಮೈಸೂರು ಕಡೆಗೆ ಹೊರಟೆವು. ನನ್ನ ಕಾರನ್ನು ದೀಪಕ್ ಓಡಿಸುತ್ತಿದ್ದರು. ಅದರಲ್ಲಿ ಪವನ್ ಮತ್ತು ನಂದೀಶ್ ಇದ್ದರು. ವಿನಯ್ ಜೀಪಿನಲ್ಲಿ, ವಿನಯ್, ನಾಗರಾಜ್, ಲಕ್ಷ್ಮಣ್ ಮತ್ತು ನಾನು ಇದ್ದೆವು. ಅಲ್ಲಿಂದ ಹೊರಟವರೇ ನೇರವಾಗಿ ಮೈಸೂರಿನಲ್ಲಿದ್ದ ರ‍್ಯಾಡಿಸಷನ್ ಬ್ಲೂ ಹೋಟೆಲ್‌ಗೆ ಹೋದೆವು. ಅಲ್ಲಿ ನಾಗರಾಜ್ ಅವರು ದರ್ಶನ್ ಅವರಿಗೆ ಫೋನ್ ಮಾಡಿ ‘ಸ್ವಲ್ಪ ಮಾತನಾಡಬೇಕು ಬನ್ನಿ’ ಎಂದು ಹೇಳಿದರಲ್ಲದೆ, ‘ನಾವು ಮೈಸೂರಿನಲ್ಲೇ ಇದ್ದೇವೆ; ಹಾಗಾಗಿ ಹೋಟೆಲ್‌ನ ಕಾನ್ಫರೆನ್ಸ್ ರೂಂಗೆ ಬನ್ನಿ’ ಎಂದು ಕರೆದರು. ನಂತರ ದರ್ಶನ್‌ಅವರು ಕಾನ್ಫರೆನ್ಸ್ ರೂಂಗೆ ಬಂದಾಗ; ನಾನು, ವಿನಯ್ ಮತ್ತು ನಾಗರಾಜ್ ದರ್ಶನ್ ಬಳಿ ಹೋದೆವು. ಆಗ ನಾಗರಾಜ್, ‘ಸರೆಂಡರ್ ಆದ ಹುಡುಗರು ಪೊಲೀಸರಿಗೆ ನಿಜ ಹೇಳಿಬಿಟ್ಟಿದ್ದಾರೆ’ ಎಂದು ದರ್ಶನ್‌ಗೆ ಹೇಳಿದರು. ನಂತರ ನಾನು ಅಲ್ಲಿ ಯಾರ‍್ಯಾರು ಇದ್ದರೋ, ಅವರನ್ನೆಲ್ಲಾ ಸರೆಂಡರ್ ಮಾಡಿಸಲು ಹೋಗುತ್ತಿದ್ದೇವೆ ಎಂದು ಹೇಳಿದೆ. ಆ ವೇಳೆಗೆ ನನಗೆ ಪಿಎಸ್‌ಐ ವಿನಯ್ ಅವರ ಫೋನ್ ಕಾಲ್ ಬಂತು. ರಿಸೀವ್ ಮಾಡಿದಾಗ, ‘ನೀವು ಎಲ್ಲಿದ್ದೀರಿ ಎಂದು ಕೇಳಿದರು. ನಾನು ಮೈಸೂರಿನಲ್ಲಿ ಇದ್ದೇವೆ, ಈಗ ಬೆಂಗಳೂರು ಕಡೆಗೆ ಹೊರಡುತ್ತೇವೆ ಎಂದು ತಿಳಿಸಿದೆ. ಆಗ ಪಿಎಸ್‌ಐ ವಿನಯ್ ಅವರು, ‘ನಿಮ್ಮ ಬಳಿ ಪವನ್ ಫೊಟೋ ಇದೆಯ?’ ಎಂದು ಕೇಳಿದರು. ಆಗ ನಾವು, ಇಲ್ಲ ಸರ್ ಪವನ್ ನಮ್ಮ ಜೊತೆ ಇದ್ದಾರೆ, ಅವರನ್ನು ಕರೆದುಕೊಂಡು ಬಂದು ಸರೆಂಡರ್ ಮಾಡಿಸುತ್ತೇವೆ ಎಂದು ಹೇಳಿದೆ. ನಾವೆಲ್ಲರೂ ದರ್ಶನ್ ಅವರೊಂದಿಗೆ ಮಾತನಾಡಿಕೊಂಡು ಹೋಟೆಲ್ ಮಹಡಿಯಿಂದ ಕೆಳಗೆ ಇಳಿದು ಬಂದೆವು. ನಂತರ ವಿನಯ್ ಮತ್ತು ದೀಪಕ್ ಅವರು ವಿನಯ್ ಜೀಪಿನಲ್ಲಿ; ನಾನು, ನಾಗರಾಜ್, ಲಕ್ಷ್ಮಣ್, ಪವನ್ ಮತ್ತು ನಂದೀಶ್ ನನ್ನ ಸ್ಕಾರ್ಪಿಯೋ ಕಾರಿನಲ್ಲಿ ಬೆಂಗಳೂರು ಕಡೆಗೆ ಹೊರಟೆವು.

ಸರ್ ದಯವಿಟ್ಟು ನಮಗೆ ಸಹಾಯ ಮಾಡಿ:  ಮತ್ತೆ ಅರ್ಧ ಗಂಟೆಯಲ್ಲಿ ಪಿಎಸ್‌ಐ ವಿನಯ್ ಅವರು ನನಗೆ ಫೋನ್ ಮಾಡಿ ಎಲ್ಲಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು, ಬೆಂಗಳೂರು ಕಡೆಗೆ ಬರುತ್ತಿದ್ದೇವೆ ಎಂದು ಹೇಳಿ, ಸರ್ ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ರಿಕ್ವೆಸ್ಟ್ ಮಾಡಿದೆ. ಅದಕ್ಕೆ ಅವರು, ‘ಇವರನ್ನೆಲ್ಲಾ ಮೊದಲು ಸರೆಂಡರ್ ಮಾಡಿಸಿ’ ಎಂದು ಫೋನ್ ಕಟ್ ಮಾಡಿದರು. ಇದಾದ ಅರ್ಧ ಗಂಟೆಗೇ ಮತ್ತೆ ಪಿಎಸ್‌ಐ ವಿನಯ್ ಅವರು ನನಗೆ ಕಾಲ್ ಮಾಡಿ, ‘ಪವನ್ ನಿಮ್ಮ ವಾಹನದಲ್ಲಿಯೇ ಇದ್ದಾನೆಯೇ’ ಎಂದು ಮತ್ತೆ ಕೇಳಿದರು. ನಾನು ಹೌದು ಎಂದು ಹೇಳಿದೆ. ಅಷ್ಟಕ್ಕೆ ಫೋನ್ ಕಟ್ ಮಾಡಿದರು.

ಬಿಡದಿ ಟೋಲ್ ಬಳಿ ಕಾರು ತಡೆದು ಸುತ್ತುವರಿದ ಪೊಲೀಸರು:  ೧೦.೦೬.೨೦೨೪ರ ಮಧ್ಯರಾತ್ರಿ ೧೨ ಗಂಟೆ ಸುಮಾರಿಗೆ ನಾವು ಬಿಡದಿ ಟೋಲ್ ಹತ್ತಿರ ಬಂದಾಗ, ಪೊಲೀಸರು ನಮ್ಮ ಕಾರನ್ನು ತಡೆದು ವಾಹನವನ್ನು ಸುತ್ತುವರಿದರು. ನಂತರ ಪೊಲೀಸರು ಗಾಡಿಯೊಳಗೆ ಇಣುಕಿ ನಿಮ್ಮಲ್ಲಿ ಪವನ್ ಯಾರು ಎಂದು ವಿಚಾರಿಸಿದರು. ಆಗ ನಾನು ಪವನ್‌ನತ್ತ ಕೈತೋರಿಸಿದೆ. ನಂತರ ಪೊಲೀಸರು ಪವನ್ನನ್ನು ನಮ್ಮ ಕಾರಿನಿಂದ ಇಳಿಸಿಕೊಂಡು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೊರಟರು.

ಏಳು ಜನರು ಸ್ಟೇಷನ್‌ನಲ್ಲಿ ಲಾಕ್: ನಂತರ ಉಳಿದಿದ್ದ ಪೊಲೀಸರು ನಮ್ಮೆಲ್ಲರ (ಪ್ರದೋಷ್, ಲಕ್ಷ್ಮಣ್, ನಾಗರಾಜ್, ನಂದೀಶ್) ಹೆಸರುಗಳನ್ನೂ ಕೇಳಿದರು. ನಮ್ಮ ಕಾರಿನಲ್ಲಿ ಯಾವುದಾದರು ಆಯುಧಗಳು ಇವೆಯೇ ಎಂದು ವಿಚಾರಿಸಿದರು. ನಾನು ಇಲ್ಲ ಎಂದೆ. ನಂತರ ಎಲ್ಲರೂ ನಿಮ್ಮ ಮೊಬೈಲ್ ಫೋನ್ ಕೊಡಿ ಎಂದು ಹೇಳಿ ನಮ್ಮೆಲ್ಲರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದರು. ಅಷ್ಟರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ನನ್ನ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಬಂದು ಕುಳಿತರು. ನಂತರ ನಮ್ಮನ್ನು ಕರೆದುಕೊಂಡು ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್‌ಗೆ ಹೋದರು. ನಂತರ ಪೊಲೀಸರು ವಿನಯ್ ಹಾಗೂ ದೀಪಕ್ ಅವರನ್ನು ಆರ್.ಆರ್.ನಗರದ ಆರ್ಚ್ ಬಳಿ ಹಿಡಿದು ಸ್ಟೇಷನ್‌ಗೆ ಕರೆದುಕೊಂಡು ಬಂದಿದ್ದಾರೆ ಎಂದು ನಮಗೆ ಗೊತ್ತಾಯಿತು.

ಆಂದೋಲನ ಡೆಸ್ಕ್

Recent Posts

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್‌ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…

4 mins ago

ಓದುಗರ ಪತ್ರ: ನಡೆಯಲಿ ಪ್ರಶಾಂತ…!

ನಡೆಯಲಿ ಪ್ರಶಾಂತ...! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುತಿಹನು ಪ್ರಶಾಂತ ಎಲ್ಲವೂ ನಡೆಯಲಿ ಶಾಂತ... ಪ್ರಶಾಂತ ! ಅಭಿಮನ್ಯುವಿನ ಉತ್ತರಾಧಿಕಾರಿ…

6 mins ago

ಓದುಗರ ಪತ್ರ: ಜೀವ ಉಳಿಸುವ ಔಷಧಗಳು ಅತಿ ಲಾಭದ ವಸ್ತು ಆಗಬಾರದಲ್ಲವೇ?

ಗಂಭೀರ ಕಾಯಿಲೆಗಳ ೧೮೦ ದುಬಾರಿ ಔಷಧಗಳು ಮತ್ತು ೭೮೦ ವೈದ್ಯಕೀಯ ಸಾಮಗ್ರಿಗಳನ್ನು ಹತ್ತಾರು ಪಟ್ಟು ಹೆಚ್ಚು ಲಾಭವಿಟ್ಟುಕೊಂಡು ಮಾರಾಟ ಮಾಡುತ್ತಿರುವುದು…

8 mins ago

ಓದುಗರ ಪತ್ರ: ‘ಕುಬೇರನ ಮೂಲೆ’ಯಲ್ಲೇ ಕಸದ ಕೊಪ್ಪರಿಗೆ!

ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ…

17 mins ago

ನಿನ್ನೆ ರಷ್ಯಾದಲ್ಲಿ ‘ರೂಬಿ ಕ್ಯೂಬ್’, ನಾಳೆ ಟೊರೆಂಟೊದಲ್ಲಿ ‘ಮಹಿಮಾ’

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಷ್ಯಾ-ಭಾರತ ಸಂಬಂಧದ ಹಿನ್ನೆಲೆಯಲ್ಲಿ ಚಿತ್ರೋತ್ಸವ ಆಯೋಜನೆ ಎರಡು ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ…

21 mins ago

ದರ್ಶನ್ ತಂಗಿದ್ದ ಜಾಗದ ರಹಸ್ಯ ಬಯಲು!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಎಸಿಪಿ ಚಂದನ್ ಎಂಟ್ರಿ; ಒಂದೇ ಮಾತಿಗೆ ಗುಟ್ಟು ಬಾಯಿಬಿಟ್ಟ ಪ್ರದೋಷ್ ಮೈಸೂರಿನ ರ‍್ಯಾಡಿಷನ್‌ ಬ್ಲೂ…

31 mins ago