Andolana originals

ಮಡಿಕೇರಿ ನಗರದಲ್ಲಿ ಹೆಚ್ಚಿದ ಬಿಡಾಡಿ ದನಗಳ ಕಾಟ

ನವೀನ್ ಡಿಸೋಜ

ವಾಹನಸವಾರರು,ಪಾದಚಾರಿಗಳಲ್ಲಿ ಭೀತಿ; ಕಾನೂನು ಕ್ರಮದ ಎಚ್ಚರಿP

ಮಡಿಕೇರಿ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲೇ ಗುಂಪು ಗುಂಪಾಗಿ ದನಗಳು ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ದನಗಳನ್ನು ರಸ್ತೆಗೆ ಬಿಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಗರಸಭೆ ಮುಂದಾಗಿದೆ.

ನಗರದಲ್ಲಿ ಒಂದೆಡೆ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ ಇದ್ದರೆ, ಮತ್ತೊಂದೆಡೆ ಬಿಡಾಡಿ ದನಗಳು ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿವೆ. ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಖಾಸಗಿ ಬಸ್ ನಿಲ್ದಾಣ, ಮಹದೇವಪೇಟೆ, ದಾಸವಾಳ ರಸ್ತೆ ಸೇರಿದಂತೆ ಮೈದಾನಗಳು, ಶಾಲಾ-ಕಾಲೇಜುಗಳ ಬಳಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ಕಂಡು ಬರುತ್ತಿದ್ದು, ಸಾರ್ವ ಜನಿಕರು ಹಾಗೂ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ.

ದುತ್ತನೆ ಎದುರಾಗುವ,ರಸ್ತೆಗಳಲ್ಲಿ ಮಲಗಿ ರುವ, ಅಲ್ಲಲ್ಲಿ ಗುಂಪು ಗುಂಪಾಗಿ ನಿಂತಿರುವ ಬಿಡಾಡಿ ದನಗಳನ್ನು ತಪ್ಪಿಸಿ ವಾಹನಗಳನ್ನು ಚಾಲನೆ ಮಾಡಲು ಚಾಲಕರು ದಿನನಿತ್ಯ ಸರ್ಕಸ್ ಮಾಡಬೇಕಿದೆ. ಮೊದಲೇ ಪಾರ್ಕಿಂಗ್ ಸಮಸ್ಯೆಯಿಂದ ಕಂಗೆಟ್ಟಿರುವ ಮಡಿಕೇರಿ ನಗರದಲ್ಲಿ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುವುದರಿಂದ ಬಹುತೇಕ ರಸ್ತೆಗಳಲ್ಲಿ ಏಕಕಾಲಕ್ಕೆ ಒಂದು ವಾಹನ ಮಾತ್ರ ಸಂಚರಿಸುವ ಪರಿಸ್ಥಿತಿಯಿದೆ. ಈ ನಡುವೆ ಅಲ್ಲಲ್ಲಿ ಬಿಡಾಡಿ ದನಗಳ ಗುಂಪು ಕಂಡುಬರುತ್ತಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ರಸ್ತೆ ಪಕ್ಕದಲ್ಲಿ ಹಣ್ಣು, ಹಂಪಲು, ತರಕಾರಿ ಮಾರಾಟಕ್ಕೂ ಬಿಡಾಡಿ ದನಗಳಿಂದ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ಬೀಸಾಡುವ ಹಣ್ಣಿನ ಸಿಪ್ಪೆಗಳೇ ಇವುಗಳಿಗೆ ಆಹಾರ. ಕೆಲ ದನಗಳು ಅಂಗಡಿಗಳಿಗೆ ನುಗ್ಗಲು ಪ್ರಯತ್ನಿಸುವ ದೃಶ್ಯ ಸಾಮಾನ್ಯವಾಗಿದೆ. ಸಾರ್ವಜನಿಕರು ಮಾತ್ರವಲ್ಲದೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ಬಿಡಾಡಿ ದನಗಳಿಂದ ಸಮಸ್ಯೆ ಎದುರಾ ಗಿದೆ. ನಡೆದುಕೊಂಡು ಹೋಗುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಬಿಡಾಡಿ ದನಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಆಗೊಮ್ಮೆ – ಈಗೊಮ್ಮೆ ಬಿಡಾಡಿ ದನಗಳ ಸಮಸ್ಯೆ ಹೆಚ್ಚಾದಾಗ ಎಚ್ಚೆತ್ತುಕೊಳ್ಳುವ ನಗರಸಭೆ, ಅವುಗಳ ಮಾಲೀಕರಿಗೆ ನೋಟಿಸ್ ನೀಡುವುದು, ದನಗಳನ್ನು ಹಿಡಿದು ಗೋಶಾಲೆಗೆ ಬಿಡುವ ಕೆಲಸವನ್ನು ಮಾಡುತ್ತಿರುತ್ತದೆ. ಇದರಿಂದ ಕೆಲ ದಿನಗಳ ಕಾಲ ನಗರದಲ್ಲಿ ಸಮಸ್ಯೆ ಇಲ್ಲವಾಗು ತ್ತದೆಯಾದರೂ ಮತ್ತೆ ಕೆಲವೇ ದಿನಗಳಲ್ಲಿ ದನಗಳು ರಸ್ತೆಗೆ ಬರುತ್ತವೆ. ಇದರಿಂದ ಸುಗಮ ಸಂಚಾರಕ್ಕೆ ಮತ್ತೆ ಸಮಸ್ಯೆ ಎದುರಾಗುತ್ತದೆ. ಕಳೆದ ಬಾರಿ ದನಗಳನ್ನು ನಗರದಿಂದ ತೆರವು ಮಾಡುವ ಕೆಲಸ ಮಾಡಲಾಗಿತ್ತು. ನಗರಸಭೆ ಸಿಬ್ಬಂದಿ ರಾತ್ರೋರಾತ್ರಿ ದನಗಳನ್ನು ನಗರದಿಂದಆಚೆಗಟ್ಟುವ ಕೆಲಸ ಮಾಡಿದ್ದರು. ಇದಕ್ಕೆ ಕೆಲವು ಸ್ಥಳೀಯರಿಂದ ವಿರೋಧವೂ ವ್ಯಕ್ತವಾಗಿತ್ತು.

ಇದಾಗಿ ಸುಮಾರು ವರ್ಷಗಳು ಕಳೆಯುತ್ತಿವೆ. ಮತ್ತೆ ನಗರದಲ್ಲಿ ಬಿಡಾಡಿ ದನಗಳು ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಇನ್ನು ದನಗಳು ನಡು ರಸ್ತೆಯಲ್ಲಿ ಗುದ್ದಾಟಕ್ಕೆ ನಿಂತರಂತೂ ಎಲ್ಲವೂ ಅಯೋಮಯ.

” ನಗರದ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನಗಳು ಓಡಾಡುತ್ತಿರುವುದರಿಂದ ವಾಹನ ಚಾಲಕರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಈ ಸಂಬಂಧ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಮಾಲೀಕರ ಮೇಲೆ ಬಿಎನ್‌ಎಸ್ ೨೦೨೩ ಸೆಕ್ಷನ್ ೨೯೧ರಂತೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು.”

-ಎಚ್.ಆರ್. ರಮೇಶ್, ನಗರಸಭೆ ಪೌರಾಯುಕ್ತ 

ಫೆ.೬ರವರೆಗೆ ಮಾಲೀಕರಿಗೆ ನಗರಸಭೆ ಗಡುವು: 

ಮಡಿಕೇರಿ ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನಗಳು ಎಲ್ಲೆಂದರಲ್ಲಿ ಓಡಾಡುತ್ತಿದ್ದು, ವಾಹನ ಚಾಲಕರು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ರಸ್ತೆ ಅಪಘಾತಗಳು, ಜೀವಹಾನಿ ಹಾಗೂ  ಆಸ್ತಿನಷ್ಟ ಸಂಭವಿಸುವ ಸಾಧ್ಯತೆಯೂ ಇದ್ದು, ಮಾಲೀಕರು ತಮ್ಮ ದನಗಳನ್ನು ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ನಗರಸಭೆ ಸೂಚಿಸಿದೆ. ಈ ಸಂಬಂಧ ಮಾಲೀಕರಿಗೆ ಫೆ.೬ರವರೆಗೆ ಗಡುವು ನೀಡಿದೆ. ನಂತರ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನಗಳು ಕಂಡುಬಂದಲ್ಲಿ ಗೋ ಶಾಲೆಗೆ ಸ್ಥಳಾಂತರಿಸಲು ನಗರಸಭೆ ಕ್ರಮಕೈಗೊಳ್ಳಲಿದೆ ಎಂದು ನಗರಸಭೆ ಪೌರಾಯುಕ್ತ ಎಚ್. ಆರ್.ರಮೇಶ್ ತಿಳಿಸಿದ್ದಾರೆ.

 

 

ಆಂದೋಲನ ಡೆಸ್ಕ್

Recent Posts

ಮಂಡ್ಯ| ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಮಂಡ್ಯ‌: ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ…

12 mins ago

ಬಜೆಟ್‌ ದೇಶದ ಅಭಿವೃದ್ಧಿಗೆ ಹೊಸ ಸ್ಪರ್ಶ ತುಂಬಲಿದೆ: ಪ್ರಧಾನಿ ಮೋದಿ

ನವದೆಹಲಿ: 2026ರ ಬಜೆಟ್‌ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುರಿತು…

19 mins ago

ಬಜೆಟ್‌ನಲ್ಲಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಕ್ಕೆ ಮತ್ತೆ ಅನ್ಯಾಯ: ಈಶ್ವರ ಖಂಡ್ರೆ

ಬೆಂಗಳೂರು: ಭಾನುವಾರ ಮಂಡಿಸಲಾದ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ರಜೆ ನೀಡುವಂತಿದೆ. ಸಂಪೂರ್ಣ ನಿರಾಶಾದಾಯಕವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು…

22 mins ago

ಕೇಂದ್ರ ಬಜೆಟ್:‌ ಯಾವ ವಸ್ತುಗಳ ದರ ಏರಿಕೆ? ಯಾವುದು ಇಳಿಕೆ?

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ಇಂದು 2026-27ನೇ ಕೇಂದ್ರ ಬಜೆಟ್‌ ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ…

48 mins ago

ಕೇಂದ್ರ ಬಜೆಟ್‌ 2026: 12 ಕ್ಯಾನ್ಸರ್‌ ಔಷಧಗಳಿಗೆ ತೆರಿಗೆ ವಿನಾಯಿತಿ

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದು 2026-27ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆ ಮಾಡಿದರು. ತೆರಿಗೆಗೆ ಸಂಬಂಧಿಸಿದಂತೆ ಹಲವು…

2 hours ago

ಕೇಂದ್ರ ಬಜೆಟ್‌ 2026: ದೇಶಾದ್ಯಂತ 500 ಹೊಸ ಜಲಾಶಯಗಳ ನಿರ್ಮಾಣಕ್ಕೆ ಯೋಜನೆ

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದು 2026-27ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆ ಮಾಡಿದರು. ದೇಶಾದ್ಯಂತ 500 ಹೊಸ…

3 hours ago