Andolana originals

ಸದ್ದಿಲ್ಲದೇ ರಂಗೇರುತ್ತಿರುವ ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ ಕಣ

ಕೆ.ಬಿ.ರಮೇಶನಾಯಕ

ಚುನಾವಣಾ ಅಖಾಡಕ್ಕೆ ಧುಮುಕಲಿರುವ ಶಾಸಕರು, ಮಾಜಿ ಶಾಸಕರು

ಮೌನವಾಗಿಯೇ ದಾಳಗಳನ್ನು ಉರುಳಿಸುತ್ತಿರುವ ನಾಯಕರು

ಮತ ಚಲಾಯಿಸುವ ಪ್ರತಿನಿಧಿ (ಡೆಲಿಗೇಟ್ಸ್) ಮನವೊಲಿಕೆಗೆ ಕಸರತ್ತು 

ಮೈಸೂರು: ಸಹಕಾರ ಕ್ಷೇತ್ರದ ಕೇಂದ್ರ ಬಿಂದುವಾಗಿರುವ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ ಬ್ಯಾಂಕ್) ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ದಿನಾಂಕ ನಿಗದಿ ಯಾದ ಬೆನ್ನಲ್ಲೇ ಚುನಾವಣೆಯ ಕಣ ರಂಗೇರುತ್ತಿದೆ.

ಈ ಚುನಾವಣೆಯು ಪಕ್ಷಾತೀತ ವಾಗಿದ್ದರೂ ಅಖಾಡಕ್ಕೆ ಇಳಿಯುವ ಅಭ್ಯರ್ಥಿಗಳು ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡಿರುವುದರಿಂದ ರಾಜಕೀಯ ಪಕ್ಷಗಳು ಆಡಳಿತ ಹಿಡಿಯಲು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿವೆ. ಇದ ರಿಂದಾಗಿ ಚುನಾವಣೆಯಲ್ಲಿ ಗೆಲ್ಲಲು ಮೌನವಾಗಿಯೇ ದಾಳಗಳನ್ನು ಉರುಳಿಸುವುದಲ್ಲದೆ, ಮತ ಚಲಾಯಿ ಸುವ ಡೆಲಿಗೇಟ್ ಹಿಡಿದಿಟ್ಟುಕೊಳ್ಳಲು ಮನ ವೊಲಿಕೆಯ ಕಸರತ್ತು ಆರಂಭಿಸಿರುವುದು ಗಮನಾರ್ಹವಾಗಿದೆ. ಗ್ರಾಮೀಣ ಪ್ರದೇಶದ ರೈತ ಸಮುದಾಯಕ್ಕೆ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸುತ್ತಾ ಬಂದಿರುವ ಎಂಸಿಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಅಧಿಕಾರಾವಧಿ ೨೦೨೩ರ ನವೆಂಬರ್ ತಿಂಗಳಲ್ಲೇ ಕೊನೆಗೊಂಡಿತ್ತು.

ಆದರೆ,ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಚುನಾವಣೆಯನ್ನು ಮುಂದೂಡಲಾಗಿತ್ತು. ಇದರಿಂದಾಗಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರಿಂದಾಗಿ ಹೈಕೋರ್ಟ್ ಆದೇಶದಂತೆ ಚುನಾವಣೆ ನಡೆಸುವುದು ಅನಿವಾರ್ಯ ವಾಗಿದ್ದು, ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ಫೆಡರಲ್ ಸಹಕಾರ ಸಂಘಗಳ ಚುನಾವಣಾಧಿಕಾರಿ ಜಿ.ಲಕ್ಷ್ಮೀ ಕಾಂತ ರೆಡ್ಡಿ ಜೂ.೨೬ಕ್ಕೆ ಮುಹೂರ್ತ ನಿಗದಿಪಡಿಸುತ್ತಿದ್ದಂತೆ ಅವಳಿ ಜಿಲ್ಲೆಗಳ ಸಹಕಾರ ವಲಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ.

ಚುನಾವಣಾ ಅಖಾಡಕ್ಕೆ ಸಜ್ಜಾದ ಘಟಾನುಘಟಿ ನಾಯಕರು: ಈ ಬಾರಿ ಹಳೆಯ ಮತ್ತು ಹೊಸ ಮುಖಗಳು ಕಣಕ್ಕಿಳಿಯುತ್ತಿರುವುದರಿಂದ ಅಖಾಡ ಮತ್ತಷ್ಟು ರಂಗು ಪಡೆಯುವ ಸಾಧ್ಯತೆ ಇದೆ. ಸಹಕಾರ ಕ್ಷೇತ್ರದ ಚುನಾವಣೆ ನಡೆದಾಗ ಜನರಿಗೆ ಗೊತ್ತಿಲ್ಲದಂತೆ ಮುಗಿದು ಹೋಗುತ್ತಿತ್ತಾದರೂ ಈ ಬಾರಿಯ ಚುನಾ ವಣೆಯು ಅನೇಕರಿಗೆ ಪ್ರತಿಷ್ಠೆಯ ಕಣವಾಗಿದೆ.

ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಹನೂರು ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ, ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎಸ್.ಚಂದ್ರಶೇಖರ್, ಸಿ.ಬಸವೇ ಗೌಡ, ಮಾಜಿ ನಿರ್ದೇಶಕರಾದ ಬಿ.ಎನ್.ಸದಾನಂದ, ಅಮಿತ್ ವಿ.ದೇವರಹಟ್ಟಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಕಣಕ್ಕಿಳಿಯುವುದು ನಿಶ್ಚಿತವಾದರೆ, ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರ ತಂದೆ ದೊಡ್ಡಸ್ವಾಮೇಗೌಡ ಸಹಕಾರ ಕ್ಷೇತ್ರದ ಕಣಕ್ಕಿಳಿಯುತ್ತಿರುವುದು ವಿಶೇಷವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಘಟಾನುಘಟಿ ನಾಯಕರು ಸ್ಪರ್ಧೆ ಮಾಡುತ್ತಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ಹೊಸಬರಿಗೆ ಅಥವಾ ಹಳಬರಿಗೂ ಅವಕಾಶ ಸಿಗುವುದು ಕಡಿಮೆಯಾಗಿದೆ.

ಸ್ಪರ್ಧೆ ಮಾಡಿದರೂ ಶಾಸಕರನ್ನು ಎದುರಿಸಿ ಗೆಲ್ಲುವುದು ಕಷ್ಟಕರ ಎನ್ನುವುದು ಗೊತ್ತಾಗಿರುವ ಕಾರಣ ದೂರ ಉಳಿಯುವುದಕ್ಕೂ ಚಿಂತನೆ ನಡೆಸಿದ್ದಾರೆ. ದಿನಾಂಕ ಪ್ರಕಟವಾದ ಬೆನ್ನಲ್ಲೇ ತಮ್ಮ ತಮ್ಮ ಆಪ್ತರನ್ನು ಕರೆಸಿ ಸಮಾಲೋಚನೆ ನಡೆಸುತ್ತಲೇ ಎದುರಾಳಿಗಳ ಬೆಂಬಲ, ಸಾಮರ್ಥ್ಯವನ್ನು ಗುರುತಿಸಿ ಹೊಸ ದಾಳ ಗಳನ್ನು ಉರುಳಿ ಸುವ ಕೆಲಸದಲ್ಲಿ ತೊಡಗಿರುವುದು ಕಂಡುಬಂದಿದೆ.

ಡೆಲಿಗೇಟ್ಸ್‌ಗಳ ಮನವೊಲಿಕೆ: ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿರುವ ಡೆಲಿಗೇಟ್ಸ್ಗಳ ಮನವೊಲಿಕೆಗೆ ಆಕಾಂಕ್ಷಿಗಳು ಮುಂದಾಗಿದ್ದಾರೆ. ನಿರ್ದೇಶಕ ಸ್ಥಾನದ ಮೇಲೆ ಕಣ್ಣಿಟ್ಟು ಸ್ಪರ್ಧೆಗೆ ಅಣಿಯಾಗಿರುವವರು ಪ್ರತಿನಿಧಿಗಳನ್ನು ಭೇಟಿ ಮಾಡುವುದು, ದೂರವಾಣಿ ಮೂಲಕ ಮಾತ ನಾಡುವುದು, ಎದುರಾಳಿಗಳ ಸಂಪರ್ಕಕ್ಕೆ ಸಿಗದ ರೀತಿಯಲ್ಲಿ ಓಲೈಕೆ ಮಾಡುತ್ತಿದ್ದಾರೆ.

ಒಂದು ಸುತ್ತು ಪ್ರಚಾರ ಮುಗಿಸಿರುವ ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದ ಬಳಿಕ ತಮ್ಮ ಪರ ನಿಷ್ಠೆಯುಳ್ಳ ಮತದಾರರನ್ನು ಜೋಪಾನವಾಗಿ ಕಾಯ್ದಿರಿಸಿಕೊಳ್ಳು ವಂತೆ ಮಾಡಲು ಒಂದು ತಂಡವನ್ನೇ ನಿಯೋಜಿಸಿರುವುದು ಗೊತ್ತಾಗಿದೆ.

ಗುಂಪು ಅನುಮಾನ: ಈ ಬಾರಿ ಪರ-ವಿರೋಧದ ಗುಂಪು ಸ್ಪರ್ಧೆ ಮಾಡುವುದಕ್ಕಿಂತಲೂ ವೈಯಕ್ತಿಕವಾಗಿ ಸ್ಪರ್ಧೆ ಮಾಡಲು ಒಲವು ತೋರುತ್ತಿರುವುದು ವಿಶೇಷ. ಹಲವಾರು ವರ್ಷಗಳಿಂದ ಪ್ರತ್ಯೇಕ ಬಣ ಮಾಡಿಕೊಂಡು ಸ್ಪರ್ಧಿಸುತ್ತಿದ್ದರು. ನಂತರ ಒಂದಾಗಿ ಕೆಲಸ ಮಾಡುತ್ತಿದ್ದರು. ಆದರೆ, ಈ ಬಾರಿ ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಚಂದ್ತಶೇಖರ್ ಅವರು ತಮ್ಮದು ಕಾಂಗ್ರೆಸ್ ಟೀಂ ಎಂದು ಹೇಳಿದರೂ ಎದುರಾಳಿಗಳು ಮಾತ್ರ ಮೌನವಾಗಿಯೇ ಇರುವುದನ್ನು ಗಮನಿಸಬಹುದಾಗಿದೆ.

ಆಂದೋಲನ ಡೆಸ್ಕ್

Recent Posts

ಟಿ-20 ವಿಶ್ವಕಪ್‌ | ಸ್ಕಾಟ್ಲೆಂಡ್‌ ವಿರುದ್ಧ ಇಂಗ್ಲೆಂಡ್‌ 5 ವಿಕೆಟ್‌ ಗೆಲುವು

ಕೋಲ್ಕತ್ತ : ಟಿ-20 ವಿಶ್ವಕಪ್‌ನ ಲೀಗ್ ಹಂತದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್‌ಗಳ…

11 hours ago

ಡಿಕೆಶಿ ಮುಖ್ಯಮಂತ್ರಿ ಆಗೇ ಆಗ್ತರೆ : ಶಾಸಕ ಗಣಿಗ ರವಿಕುಮಾರ್‌

ಮಂಡ್ಯ: ಡಿ.ಕೆ. ಶಿವಕುಮಾರ್ ಅವರು ಅತಿ ಶೀಘ್ರದಲ್ಲೇ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಿ.ರವಿಕುಮಾರ್‌…

11 hours ago

ಮೈಸೂರು | ಶಿವರಾತ್ರಿಗೆ ಎಲ್ಲೆಡೆ ಸಿದ್ಧತೆ

ಮೈಸೂರು : ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿ ಆಚರಣೆಗೆ ಶಿವ ದೇವಾಲಯಗಳು ಸಂಪೂರ್ಣ ಸಜ್ಜಾಗಿವೆ. ನಗರದ ಪ್ರಮುಖ…

11 hours ago

ಮೈಸೂರು | 4 ಲಕ್ಷ ಮೌಲ್ಯದ ಡ್ರಗ್ಸ್ ವಶ‌ ; ಆರೋಪಿ ಬಂಧನ

ಮೈಸೂರು : ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಮಂಡಿ ಪೊಲೀಸ್ ಠಾಣಾ ಅಧಿಕಾರಿಗಳು ನಡೆಸಿದ…

11 hours ago

2.20 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ; ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಪ್ರಗತಿ : ಸಿಎಂ ಮೆಚ್ಚುಗೆ

ಹಾವೇರಿ : ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ…

13 hours ago

ರಾಜ್ಯದ 22 ಸಾವಿರಕ್ಕೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಹಣ ಬಿಡುಗಡೆ

​ಬೆಂಗಳೂರು : ಕರ್ನಾಟಕದ ಸಾವಿರಾರು ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ…

14 hours ago