ನಂಜನಗೂಡು : ಮುಜರಾಯಿ ಇಲಾಖೆ ಅದೀನದಲ್ಲಿರುವ ಸುಬ್ರಹ್ಮಣ್ಯದಲ್ಲಿ 1 ಬಕೆಟ್ ನೀರಿಗೆ 5 ರೂ. ಆದರೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ 50 ರೂ. ಇದು ದೇವಾಲಯಗಳಲ್ಲಿ ನಡೆಯುತ್ತಿರುವ ಭಕ್ತರ ಶೋಷಣೆಗೆ ಒಂದು ಉದಾಹರಣೆ.
ಹಿಮಾಲಯದ ತಪ್ಪಲಿನಲ್ಲಿ ಒಂದು ಬಕೆಟ್ ನೀರಿನ ಬೆಲೆ 20 ರೂ. ಆದರೆ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಕಪಿಲಾ ತೀರದಲ್ಲಿ ಬಕೆಟ್ ನೀರಿಗೆ 50 ರೂ. ನಿಂದ 100 ರೂ. ಪಡೆಯಲಾಗುತ್ತಿದೆ ಎಂಬ ಸುದ್ದಿ ಫೆ. 12ರಂದು ‘ಆಂದೋಲನ’ ದಿನ ಪತ್ರಿಕೆ ಯಲ್ಲಿ ಪ್ರಕಟವಾದಾಗ ಒಂದೆರಡು ವಾರ ಸ್ಥಗಿತವಾಗಿದ್ದ ಬಿಸಿ ನೀರಿನ ಸುಲಿಗೆ ಈಗ ಮತ್ತೆ ರಾಜಾರೋಷವಾಗಿ ಪುನಾರಂಭವಾಗಿದೆ. ಶ್ರೀಕಂಠೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಬೆಳಗಿನ ಜಾವ ಸೇರಿದಂತೆ ಚಳಿಯಲ್ಲಿ ತೀರ್ಥ ಸ್ನಾನ ಮಾಡುವವರು ಬಿಸಿ ನೀರಿನ ಸ್ನಾನ ಮಾಡಲು ಬಯಸುತ್ತಾರೆ. ಮಕ್ಕಳಿಗಂತೂ ತಣ್ಣೀರಿನ ಸ್ನಾನ ಮಾಡಿಸಲು ಒಪ್ಪದ ಅವರು ಹಣ ನೀಡಿ ಬಿಸಿ ನೀರು ಖರೀದಿಸಿ ಸ್ನಾನ ಮಾಡಿಸುತ್ತಾರೆ.
5 ವರ್ಷಗಳ ಹಿಂದೆ ಕಪಿಲಾ ಸ್ನಾನಘಟ್ಟದಲ್ಲಿ ದೇವಾಲಯದ ವತಿಯಿಂದ ಎರಡು ಬಾಯ್ಲರ್‌ಗಳನ್ನು ಸ್ಥಾಪಿಸಿ ಭಕ್ತರಿಗೆ 5 ರೂ. ಗಳಿಗೆ ಒಂದು ಬಕೆಟ್ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವ್ಯವಸ್ಥೆಯನ್ನು ದೇವಾಲಯದಿಂದ ಸಂಬಳ ಪಡೆಯುವ ಸಿಬ್ಬಂದಿಗಳ ಮೂಲಕವೇ ನಿರ್ವಹಿಸಲಾಗುತ್ತಿತ್ತು. ಆದರೆ ದೇವಾಲಯದ ಈ ಸೌಲಭ್ಯ ಕೆಲವೇ ದಿನಗಳಲ್ಲಿ ಸುಲಿಗೆ ರೂಪ ತಾಳಿ ದೇವಾಲಯದ ಪಾಲಿಗೆ ಉಚಿತವಾಗಿ ಭಕ್ತರ ಜೇಬಿಗೆ ಕನ್ನ ಆಗಿ ಪರಿವರ್ತನೆಯಾಗಿ ಸುಲಿಗೆಕೋರರ ಪಾಲಿಗೆ ದಿನಕ್ಕೆ 10-20 ಸಾವಿರ ರೂ. ಆದಾಯಕ್ಕೆ ದಾರಿಯಾಯಿತು. ನಿತ್ಯ ಕನಿಷ್ಠ 200 ಬಕೆಟ್ ನೀರಿನ ವ್ಯಾಪಾರವಾಗುತ್ತಿದ್ದು, ಭಾನುವಾರ, ಸೋಮವಾರ ಹುಣ್ಣಿಮೆ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ 800 ಬಕೆಟ್‌ವರೆಗೆ ಇಲ್ಲಿ ವ್ಯಾಪಾರ ವಾಗುತ್ತದೆ ಎನ್ನುತ್ತಾರೆ ಈ ಕಾರ್ಯಕ್ಕೆ ದಿನಗೂಲಿ ಸಿಬ್ಬಂದಿ. ಅವರುಗಳೇ ಹೇಳುವ ಪ್ರಕಾರ, ಒಂದು ಬಕೆಟ್‌ಗೆ 50 ರೂ. ಆದರೆ 100 ಬಕೆಟ್‌ಗೆ 5,000 ರೂ. ನಿತ್ಯ ಕನಿಷ್ಠ 200 ಬಕೆಟ್ ಎಂದರೂ 10,000 ರೂ. , ದಿನದ ಆದಾಯ. ವಿಶೇಷ ದಿನಗಳಲ್ಲಿ ಅದು ಐದು ಪಟ್ಟು ಹೆಚ್ಚಾಗಿ 40 ಸಾವಿರ ರೂ. ವರೆಗೂ ಹೋಗುತ್ತದೆ. ಕೊನೆಗೆ ರಶೀತಿಯೇ ಇಲ್ಲದ ಈ ಅಘೋಷಿತ ಆದಾಯ ಎಲ್ಲಿಗೆ ಹೋಗುತ್ತಿದೆ? ಯಾರ ಜೇಬು ಸೇರುತ್ತಿದೆ? ಇದರಲ್ಲಿ ಯಾರ‍್ಯಾರು ಪಾಲುದಾರರು ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ದೊರೆಯದಾಗಿದೆ.
ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…
ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…
ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…
ಟೆಹ್ರಾನ್ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…
ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…
ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…