ಕಾಂಗೀರ ಬೋಪಣ್ಣ
ವಿರಾಜಪೇಟೆ ಪ.ಪಂ.ಅವಧಿ ಅ.೩೧ಕ್ಕೆ ಮುಕ್ತಾಯ ಹಿನ್ನೆಲೆ; ಹೈಕೋರ್ಟ್ ಮೆಟ್ಟಿಲೇರಿದ ಆಡಳಿತ ಮಂಡಳಿ
ವಿರಾಜಪೇಟೆ: ಇಲ್ಲಿನ ಪ.ಪಂ.(ಈಗಿನ ಪುರಸಭೆ) ಆಡಳಿತ ಮಂಡಳಿ ಅವಧಿ ಅ.೩೧ರಂದು ಮುಕ್ತಾಯಗೊಳ್ಳಲಿದ್ದು, ಆ ಬಳಿಕ ನಡೆಯುವ ಆಡಳಿತಾಧಿಕಾರಿ ನೇಮಕಕ್ಕೆ ತಡೆ ನೀಡಿ ಅಧಿಕಾರದ ಅವಧಿಯನ್ನು ವಿಸ್ತರಿಸುವಂತೆ ಕೋರಿ ಪುರಸಬೆ ಆಡಳಿತ ಮಂಡಳಿ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದೆ.
ವಿರಾಜಪೇಟೆ ಪ.ಪಂ. ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಆದರೆ,೨೦೧೮ರಲ್ಲಿ ಪ.ಪಂ. ಆಡಳಿತ ಮಂಡಳಿ ಚುನಾವಣೆ ನಡೆದಿದೆ. ಈಗಿರುವ ಆಡಳಿತ ಮಂಡಳಿಯ ಅಧಿಕಾರ ಇದೇ ತಿಂಗಳ ಕೊನೆಗೆ ಮುಕ್ತಾಯಗೊಳ್ಳಲಿದೆ. ಈಗಾಗಲೇ ರಾಜ್ಯದ ವಿವಿಧ ನಗರಸಭೆ, ಪುರಸಭೆ, ಪ.ಪಂ.ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಆಡಳಿತಾಧಿಕಾರಿ ನೇಮಕಕ್ಕೆ ತಡೆ ನೀಡಿ ಅವಧಿ ವಿಸ್ತರಿಸಿದ್ದು, ಅದರಂತೆ ನಮಗೂ ಆಡಳಿತ ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದೆ.
೨೦೧೮ರಲ್ಲಿ ನಡೆದ ಪ.ಪಂ. ಆಡಳಿತ ಮಂಡಳಿ ಚುನಾವಣೆಯಲ್ಲಿ ೧೮ ಮಂದಿ ಸದಸ್ಯರು ಆಯ್ಕೆಯಾಗಿದ್ದರು. ಆದರೆ ಅಧ್ಯಕ್ಷ ಸ್ಥಾನದ ಮೀಸಲಾತಿ ಗೊಂದಲದಿಂದ ಎರಡು ವರ್ಷಗಳ ಕಾಲ ಅಧಿಕಾರ ವಂಚಿತರಾಗುವಂತಾಯಿತು. ನಂತರ ಬಿಜೆಪಿ ಮೊದಲ ಅವಧಿಯಲ್ಲಿ ಅಧಿಕಾರ ನಡೆಸಿತು. ೨೦೨೩ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ವಿರಾಜಪೇಟೆ ಕ್ಷೇತ್ರವೂ ಕಾಂಗ್ರೆಸ್ ಪಾಲಾಯಿತು.
ಈ ರಾಜಕೀಯ ಮೇಲಾಟ ಪ.ಪಂ. ಆಡಳಿತದ ಮೇಲೂ ಪರಿಣಾಮ ಬೀರಿತು. ನೂತನ ಶಾಸಕರ ಸಾರಥ್ಯದಲ್ಲಿ ಎಲ್ಲಾ ಪಕ್ಷೇತರ ಸದಸ್ಯರು ಕಾಂಗ್ರೆಸ್ ಸೇರಿದ್ದಲ್ಲದೆ, ಬಿಜೆಪಿಯ ಕೆಲ ಸದಸ್ಯರನ್ನೂ ಸೆಳೆದುಕೊಂಡು ಕಾಂಗ್ರೆಸ್ ಪ.ಪಂ.ಅಧಿಕಾರದ ಗದ್ದಿಗೆ ಏರುವಲ್ಲಿ ಯಶಸ್ವಿಯಾಯಿತು. ನೂತನವಾಗಿ ಗುರುತಿಸಲ್ಪಟ್ಟ ಹೆಚ್ಚುವರಿ ವಾರ್ಡ್‌ಗಳ ಪ್ರತಿನಿಧಿಗಳಾಗಿ ಇಬ್ಬರು ಸದಸ್ಯರನ್ನು ಸರ್ಕಾರ ನೇಮಿಸಿದ್ದು, ಮತದಾನದ ಹಕ್ಕನ್ನೂ ನೀಡಲಾಗಿತ್ತು.
ಸದ್ಯ ಕಾಂಗ್ರೆಸ್ ಒಂದು ವರ್ಷ ಆಡಳಿತ ಪೂರೈಸಿದ್ದು, ಅಧಿಕಾರ ಅವಧಿ ಇದೇ ಅ.೩೧ಕ್ಕೆ ಕೊನೆಗೊಳ್ಳಲಿದೆ. ಈಗ ಆಡಳಿತ ಮಂಡಳಿಯು ತಮಗೆ ಇನ್ನು ಕೆಲ ಸಮಯ ಕಾಲಾವ ಕಾಶ ನೀಡಬೇಕೆಂದು ಕೋರಿ ನ್ಯಾಯಾಲಯ ಮೊರೆ ಹೋಗಿದೆ. ಈಗಲೂ ವಿರಾಜಪೇಟೆ ಪ.ಪಂ. ಆಗಿಯೇ ಮುಂದುವರಿದಿದ್ದು, ಇನ್ನೂ ಪುರಸಭೆಯ ಉನ್ನತೀರಿಕರಣ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಪುರಸಭೆಗೆ ಅಗತ್ಯ ಸಿಬ್ಬಂದಿ ನೇಮಕವಾಗದೆ ಪ.ಪಂ. ಸಿಬ್ಬಂದಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಾವು ಕೂಡ ಪ.ಪಂ. ಸದಸ್ಯರಾಗಿಯೇ ಅಧಿಕಾರ ನಡೆಸುತ್ತಿದ್ದೇವೆ. ಆರಂಭದಲ್ಲಿ ಮೀಸಲಾತಿ ಗೊಂದಲ, ನಂತರ ಕೋವಿಡ್ ಎದುರಾದ್ದರಿಂದ ನಾವು ಅಧಿಕಾರದಿಂದ ವಂಚಿತರಾಗುವಂತಾಯಿತು. ನಮಗೆ ನ್ಯಾಯವಾಗಿ ಇನ್ನೂ ಒಂದುವರೆ ವರ್ಷಕಾಲ ಆಡಳಿತ ಅವಧಿ ಸಿಗಬೇಕು. ಈ ನಿಟ್ಟಿನಲ್ಲಿ ನಾವು ಮಾತ್ರವಲ್ಲದೆ ಕರ್ನಾಟಕದ ೧೯೫ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ಯವರು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ವಿರಾಜಪೇಟೆ ಪ.ಪಂ.(ಪುರಸಭೆ) ಅಧ್ಯಕ್ಷೆ ದೇಚಮ್ಮ ಕಾಳಪ್ಪ ಹೇಳಿದ್ದಾರೆ.
ಮತ್ತೊಂದೆಡೆ ೨೦೧೮ರಲ್ಲಿ ಪ.ಪಂ.ಗೆ ಚುನಾವಣೆ ನಡೆದಿದ್ದರೂ ಬಳಿಕ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಪುರ ಸಭೆಯ ಸದಸ್ಯರ ಬಲ ೨೩ ಆಗಲಿದೆ. ಅಲ್ಲದೆ ಪುರಸಭೆಯ ಬಳಿಕ ನೆರೆಯ ಗ್ರಾ.ಪಂ.ಗಳ ಕೆಲ ಭಾಗಗಳು ಪುರಸಭೆ ವ್ಯಾಪ್ತಿಗೆ ಸೇರಿವೆ. ಬಿಟ್ಟಂಗಾಲ, ಅರ್ಜಿ, ಚೆಂಬೆಬೆಳ್ಳೂರು, ಮಗ್ಗುಲ ಪ್ರದೇಶಗಳು ಪುರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಹೀಗೆ ಸೇರ್ಪಡೆಯಾದ ಸ್ಥಳಗಳಿಗೆ ನಿಯಮನುಸಾರ ಚುನಾವಣೆ ನಡೆದಿಲ್ಲದಿರುವುದರಿಂದ ವ್ಯವಸ್ಥಿತವಾಗಿ ಚುನಾವಣೆ ನಡೆಯಬೇಕು ಎನ್ನುವ ಒತ್ತಾಯ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಆಡಳಿತ ಮಂಡಳಿ ವಾದ ಏನು..?:
ಸಕಾಲದಲ್ಲಿ ಮೀಸಲಾತಿ ಪ್ರಕಟಿಸದೆ ಇರುವುದರಿಂದ ಹಾಗೂ ಕೋವಿಡ್ ಕಾರಣದಿಂದ ನಾವು ೧೬ ತಿಂಗಳುಗಳ ಕಾಲ ಅಧಿಕಾರದಿಂದ ವಂಚಿತರಾಗಿದ್ದೇವೆ ಎನ್ನುವುದು ಆಡಳಿತ ಮಂಡಳಿ ವಾದ. ಈಗಾಗಲೇ ರಾಜ್ಯದಲ್ಲಿ ಹಲವು ಸ್ಥಳೀಯ ಸಂಸ್ಥೆಗಳು ಅವಧಿ ವಿಸ್ತರಣೆ ಬಯಸಿ ಉಚ್ಚ ನ್ಯಾಯಾಲಯದ ಮೊರೆ ಹೋಗಿ ಆಡಳಿತಾಧಿಕಾರಿ ನೇಮ ಕಕ್ಕೆ ತಡೆ ತಂದಿವೆ. ಹೀಗಾಗಿ ವಿರಾಜಪೇಟೆ ಪ.ಪಂ.ಗೂ ಅದೇ ರೀತಿ ತಡೆ ನೀಡಬೇಕೆಂದು ಮನವಿ ಮಾಡಲಾಗಿದೆ.
” ಕೊಡಗಿನಲ್ಲಿ ಸೋಮವಾರಪೇಟೆ, ಕುಶಾಲನಗರ ಸ್ಥಳೀಯ ಸಂಸ್ಥೆಗಳಿಗೆ ತಡೆ ಸಿಕ್ಕಿದೆ. ಆಡಳಿತಾಧಿಕಾರಿಯನ್ನು ನೇಮಿಸಿ ಜಿ.ಪಂ., ತಾ.ಪಂ. ಚುನಾವಣೆಯಂತೆ ವಿಳಂಬ ಮಾಡುವ ಬದಲು ನಮಗೆ ಅವಧಿ ಇದೆ. ಅದನ್ನು ವಿಸ್ತರಿಸಿ ಅಧಿಕಾರ ನೀಡಬೇಕು, ಇಲ್ಲವೇ ತಕ್ಷಣ ಚುನಾವಣೆ ನಡೆಸಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ.”
-ದೇಚಮ್ಮ ಕಾಳಪ್ಪ, ವಿರಾಜಪೇಟೆ ಪ.ಪಂ. (ಪುರಸಭೆ) ಅಧ್ಯಕ್ಷೆ
ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಹಣಗಳಿಕೆಗಾಗಿ ಸುಳ್ಳು, ಮೋಸ, ಕೊಲೆ ಸುಲಿಗೆ ಪ್ರಕರಣಗಳೇ ಹೆಚ್ಚಾಗಿ ಕಂಡುಬರುತ್ತಿವೆ. ನಿಧಿಗಾಗಿ ವಾಮಾಚಾರ…
ಪ್ರಸ್ತುತ ರಾಜ್ಯದಲ್ಲಿ ತೀವ್ರ ಚಳಿ ಮತ್ತು ಅಕಾಲಿಕ ತುಂತುರು ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು,…
ಪ್ರತಿಯೊಬ್ಬರೂ ಇಷ್ಟಪಡುವ ವಸ್ತುಗಳಲ್ಲಿ ಚಿನ್ನ ಪ್ರಮುಖವಾಗಿದೆ. ಮಧ್ಯಮ ವರ್ಗದ ಜನರು ಪೈಸೆ ಪೈಸೆ ಕೂಡಿಟ್ಟು ಚಿನ್ನ ಖರೀದಿಸುತ್ತಿದ್ದು, ಮದುವೆ ಮೊದಲಾದ…
ಪಂಜುಗಂಗೊಳ್ಳಿ ೭,೫೦೦ಕ್ಕೂ ಹೆಚ್ಚು ಮಕ್ಕಳ ಬದುಕಿಗೆ ಆಸರೆಯಾದ ಆನಂದ ಶಿಕ್ಷಾ ನಿಕೇತನ ಪಶ್ಚಿಮ ಬಂಗಾಳದ ಮುರ್ಷಿದಾಬಾದಿನ ಶಂಕರಪಾದ ಗ್ರಾಮದ ಒಂಬತ್ತು…
ನವೀನ್ ಡಿಸೋಜ ೪೩ ಕೋಟಿ ರೂ. ವೆಚ್ಚದ ಕಾಮಗಾರಿ; ಅಂತಿಮ ಹಂತದಲ್ಲಿ ಕೆಲಸ ಮಡಿಕೇರಿ: ಮಾರ್ಚ್ ವೇಳೆಗೆ ಮಡಿಕೇರಿಯ ವೈದ್ಯಕೀಯ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಮಕರ ಸಂಕ್ರಾಂತಿಯಂದು ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ನಡೆಯುವ ದೊಡ್ಡ ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳು…