ಜಾಗೃತಿ ಕಾರ್ಯಕ್ರಮಗಳು ಮತ್ತಷ್ಟು ಪರಿಣಾಮಕಾರಿ ಆಗಲಿ
ಡಾ.ಡಿ.ಜೆ.ಶಶಿಕುಮಾರ್
ದೇಶದ ಐಕ್ಯತೆ, ಭದ್ರತೆ ಮತ್ತು ಪ್ರಗತಿಗೆ ಕಾರಣವಾಗಿರುವ ಭಾರತದ ಸಂವಿಧಾನ ರಚನೆಯಾಗಿ 75 ವರ್ಷ ಸಂದಿದೆ. ಈ ಸಂದರ್ಭದಲ್ಲಿ ಸಂವಿಧಾನದ ರಚನೆಯ ಪ್ರಕ್ರಿಯೆ ಮತ್ತು ಅದರ ಸಾಧನೆ ಹಾಗೂ ಇಂದು ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ವಿಶ್ಲೇಷಿಸುವ ಮೂಲಕ ಭಾರತವನ್ನು ಮತ್ತಷ್ಟು ಸದೃಢಗೊಳಿಸಬೇಕಿದೆ.
ಭಾರತದ ಸಂವಿಧಾನವು ತನ್ನದೇ ಮೌಲ್ಯ ಮತ್ತು ಆದರ್ಶಗಳನ್ನು ಒಳಗೊಂಡ ಜಗತ್ತಿನ ದೊಡ್ಡ ಮತ್ತು ಅತ್ಯುತ್ತಮ ಸಂವಿಧಾನವಾಗಿದೆ. ಪ್ರಪಂಚದ ಬೇರೆ-ಬೇರೆ ರಾಷ್ಟ್ರಗಳಿಗೆ ನಮ್ಮ ಸಂವಿಧಾನ ಮಾದರಿಯಾಗಿದೆ. ಅಮೆರಿಕದ ಶ್ರೇಷ್ಠ ಸಂವಿಧಾನ ತಜ್ಞ ಗ್ರಾನ್ ವಿಲ್ಲೆ ಅಸ್ಮಿನ್ ಅವರು “ಎಲ್ಲರ ಸಮ್ಮತಿಯ ಮೇರೆಗೆ ರಚನೆಯಾದ ಜಗತ್ತಿನ ಏಕೈಕ ಸಂವಿಧಾನ” ಎಂದು ಭಾರತದ ಸಂವಿಧಾನವನ್ನು ಬಣ್ಣಿಸಿದ್ದಾರೆ.
ಧರ್ಮ, ಜಾತಿ, ಲಿಂಗ, ವರ್ಣ, ಹುಟ್ಟಿದ ಸ್ಥಳ ಮೊದಲಾದ ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನೂ ಭಾರತೀಯರೆಂದು ಪರಿಗಣಿಸಿ ಒಳಗೊಂಡದ್ದು ವಿಶೇಷ. ಅಲ್ಲದೇ ವಯಸ್ಸಿನ ಆಧಾರದ ಮೇಲೆ ದೇಶದ ಎಲ್ಲ ನಾಗರಿಕರಿಗೂ ‘ಒಬ್ಬನಿಗೆ ಒಂದು ಮತ ಒಂದು ಮತಕ್ಕೆ ಒಂದೇ ‘ (one man one vote one vote one value) ಎಂಬ ತತ್ವದ ಮೇಲೆ ರಾಜಕೀಯ ಸಮಾನತೆಯನ್ನು ನೀಡಿದೆ. ಜಗತ್ತಿನ ಯಾವ ರಾಷ್ಟ್ರಗಳೂ ಸ್ವತಂತ್ರಗೊಂಡ ತಕ್ಷಣ ನೀಡದ ಮತದಾನದ ಹಕ್ಕನ್ನು ಭಾರತ ಸಂವಿಧಾನ ತನ್ನ ಎಲ್ಲ ನಾಗರಿಕರಿಗೂ ನೀಡಿರುವ ಹೆಮ್ಮೆ ನಮ್ಮ ಸಂವಿಧಾನಕ್ಕೆ ಸಲ್ಲುತ್ತದೆ. 17 ಲೋಕಸಭಾ ಹಾಗೂ ಹಲವು ರಾಜ್ಯ ವಿಧಾನಸಭಾ ಚುನಾವಣೆಗಳ ಮೂಲಕ ಅಧಿಕಾರವೂ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಸ್ತಾಂತರಗೊಂಡಿದೆ. ಆದರೆ ಎಂದೂ ಶಾಂತಿಗೆ ಭಂಗವಾಗಿಲ್ಲ ಎಂಬುದು ಸಂವಿಧಾನದ ಮತ್ತೊಂದು ಹಿರಿಮೆ.
ದೇಶದ ಭವಿಷ್ಯವನ್ನು ನಿರ್ಮಿಸುವ ಶಾಸನ ಸಭೆಗಳಲ್ಲಿ ಚರ್ಚೆ, ಸಂವಾದ ಹಾಗೂ ವಾದ-ವಿವಾದಗಳು ನಿರೀಕ್ಷೆಯ ಮಟ್ಟದಲ್ಲಿ ನಡೆಯುತ್ತಿಲ್ಲ. ಬದಲಾಗಿ ಕಲಾಪಗಳಲ್ಲಿ ಅಡ್ಡಿ, ಅಡಚಣೆ ಮತ್ತು ಅಮಾನತ್ತಿನಂತಹ ಪ್ರಸಂಗಗಳು ಹೆಚ್ಚಾಗಿ ನಡೆಯುತ್ತಿವೆ. ಯಾವುದೇ ಮುಕ್ತ ಚರ್ಚೆಗಳಿಲ್ಲದೆ, ತೀವ್ರಗತಿಯಲ್ಲಿ ಕಾನೂನುಗಳನ್ನು ರೂಪಿಸಲಾಗುತ್ತಿದೆ.
ವಿಶೇಷ ಸಂದರ್ಭಗಳಲ್ಲಿ ಸುಗ್ರೀವಾಜ್ಞೆಗಳನ್ನು ಹೊರಡಿಸಿ ಕಾನೂನು ರೂಪಿಸಲು ಸಂವಿಧಾನದಲ್ಲಿ ಇರುವ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ತಾರಕಕ್ಕೆ ಏರುತ್ತಿದೆ. ಹಾಗಾಗಿ ಕೆಲವು ಮಸೂದೆಗಳಿಗೆ ರಾಜ್ಯಪಾಲರ ಅಂಕಿತ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ‘ರಾಜ್ಯದಲ್ಲಿ ಜನಪರ ಕಾರ್ಯಕ್ರಮಗಳಿಗೆ ತೊಂದರೆಯಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.
ಪರಿಹಾರಗಳು: ಸಂವಿಧಾನವು ಕಳೆದ ಏಳೂವರೆ ದಶಕಗಳಿಂದ ದೇಶವನ್ನು ರಕ್ಷಿಸಿಕೊಂಡು, ಮುನ್ನಡೆಸುತ್ತಾ ಬರುತ್ತಿದೆ. ಆದ್ದರಿಂದ ಜನರು ಸರ್ಕಾರದ ಆಡಳಿತದ ವೈಖರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಸಂವಿಧಾನ ಸೂಚಿಸಿರುವ ಮಾರ್ಗದಲ್ಲಿ ಸರ್ಕಾರಗಳು ನಡೆಯುತ್ತಿವೆಯೇ? ಎಂಬುದನ್ನು ಖಾತರಿ ಮಾಡಿಕೊಳ್ಳಬೇಕಾಗಿದೆ. ಸಂವಿಧಾನದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಸರ್ಕಾರ ಕಾಲ-ಕಾಲಕ್ಕೆ ಹಮ್ಮಿಕೊಳ್ಳುತ್ತಿದೆ.
ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕು. ಸರ್ಕಾರೇತರ ಸಂಘ-ಸಂಸ್ಥೆಗಳು ಕೂಡ ಸಂವಿಧಾನ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವುದು ಹೆಚ್ಚಾಗಬೇಕು. ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಯಲ್ಲಿ ಈ ಕುರಿತು ಹೆಚ್ಚು ತಿಳಿವಳಿಕೆ ನೀಡಬೇಕಾದ ಅಗತ್ಯವಿದೆ.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ‘ಭಾರತ ಸಂವಿಧಾನ’ ಪಠ್ಯದ ಜೊತೆಗೆ ಅದರ ಕುರಿತು ಪ್ರಬಂಧ ರಚನೆ, ರಸ ಪ್ರಶ್ನೆ, ಚರ್ಚಾ ಸ್ಪರ್ಧೆ, ಅಣುಕು ವಿಧಾನ ಸಭೆ, ಪಾತ್ರಾಭಿನಯ ಮುಂತಾದ ಚಟುವಟಿಕೆಗಳನ್ನು ನಡೆಸಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಜೊತೆಗೆ ಟಿವಿ, ಮಾಧ್ಯಮ, ಚಲನಚಿತ್ರ ಪಾತ್ರಕ್ಕೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಂವಿಧಾನದ ಆಶಯಗಳನ್ನು ಸಮಾಜಕ್ಕೆ ತಲುಪಿಸಬೇಕು.
ಡಾ. ಬಿ. ಆರ್. ಅಂಬೇಡ್ಕರ್ ಅವರು 1949ರ ನವೆಂಬರ್ 25ರಂದು ತಮ್ಮ ಕೊನೆಯ ಭಾಷಣದಲ್ಲಿ “ಒಂದು ಒಳ್ಳೆ ಸಂವಿಧಾನವನ್ನು ಕೆಟ್ಟವರು ನಡೆಸಿದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ಅದೇ ಒಂದು ಕೆಟ್ಟ ಸಂವಿಧಾನವನ್ನು ಒಳ್ಳೆಯವರು ನಡೆಸಿದರೆ ಅದರ ಪರಿಣಾಮ ಒಳ್ಳೆಯದಾಗಿರುತ್ತದೆ” ಎಂದು ಹೇಳಿರುವುದು ಪ್ರಸ್ತುತ ಕಾಲಘಟ್ಟದಲ್ಲಿ ಬಹಳ ಮುಖ್ಯವೆನಿಸುತ್ತದೆ. ಆಳ್ವಿಕೆ ಮಾಡುವವರ ಮೇಲೆ ಸಂವಿಧಾನದ ಸಫಲತೆ ಮತ್ತು ವಿಫಲತೆ ಅವಲಂಬಿಸಿದೆ. ದೇಶದ ಐಕ್ಯತೆ ಮತ್ತು ಜನತೆಯ ಪ್ರಗತಿಗೆ ಸಾಂವಿಧಾನಿಕ ಪ್ರಜ್ಞೆ ಅತ್ಯಂತ ಅಗತ್ಯವಾಗಿದೆ. ಸಂವಿಧಾನದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಸರ್ಕಾರ” ಕಾಲ-ಕಾಲಕ್ಕೆ ಹಮ್ಮಿಕೊಳ್ಳುತ್ತಿದೆ. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕು. ಸರ್ಕಾರೇತರ ಸಂಘ-ಸಂಸ್ಥೆಗಳು ಕೂಡ ಸಂವಿಧಾನ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವುದು ಹೆಚ್ಚಾಗಬೇಕು. ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಯಲ್ಲಿ ಈ ಕುರಿತು ಹೆಚ್ಚು ತಿಳಿವಳಿಕೆ ನೀಡಬೇಕಾದ ಅಗತ್ಯವಿದೆ.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನ’ ಪಠ್ಯದ ಜೊತೆಗೆ ಅದರ ಕುರಿತು ಪ್ರಬಂಧ ರಚನೆ, ರಸ ಪ್ರಶ್ನೆ, ಚರ್ಚಾ ಸ್ಪರ್ಧೆ, ಅಣಕು ವಿಧಾನಸಭೆ ಮುಂತಾದ ಚಟುವಟಿಕೆಗಳನ್ನು ನಡೆಸಿ ಕೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಜೊತೆಗೆ ಟಿವಿ, ಮಾಧ್ಯಮ, ಚಲನಚಿತ್ರ, ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಂವಿಧಾನದ ಆಶಯಗಳನ್ನು ಸಮಾಜಕ್ಕೆ ತಲುಪಿಸಬೇಕು. ಜನರು ದೇಶದ ಮತ್ತು ಸಂವಿಧಾನದ ಇತಿಹಾಸ ಅರಿತುಕೊಳ್ಳುವ ಮೂಲಕ ಭವಿಷ್ಯ ನಿರ್ಮಾಣ ಮಾಡಬೇಕಾಗಿದೆ.
ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ 1948ರ ನವೆಂಬರ್ 4 ರಂದು ಸಂವಿಧಾನದ ಕರಡನ್ನು ಮಂಡಿಸುವ ಸಂದರ್ಭದಲ್ಲಿ ಅಡಿದ ಮಾತುಗಳು ಇಲ್ಲಿ ಬಹಳ ಮುಖ್ಯ. “ಯುದ್ಧ ಮತ್ತು ಶಾಂತಿ ಎರಡು ಕಾಲದಲ್ಲಿಯೂ ದೇಶವನ್ನು ಮುನ್ನಡೆಸುವ ಸಾರ್ಮಥ್ಯವನ್ನು ಸಂವಿಧಾನ ಹೊಂದಿದೆ. ಇಷ್ಟಾಗಿಯೂ ಕೂಡ ಸಂವಿಧಾನದ ಅಡಿಯಲ್ಲಿ ತಪ್ಪುಗಳು ನಡೆದರೆ ಅದಕ್ಕೆ ಸಂವಿಧಾನ ಕಾರಣವಲ್ಲ ಅದಕ್ಕೆ ಮನುಷ್ಯನ ವಿಕೃತವೇ ಕಾರಣ’ ಎಂದಿದ್ದಾರೆ. ಮುಂದುವರಿದು ಅವರು 1949ರ ನವೆಂಬರ್ 25ರಂದು ತಮ್ಮ ಕೊನೆಯ ಭಾಷಣದಲ್ಲಿ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಅದು ಇಲ್ಲಿ ಬಹಳ ಮುಖ್ಯವೆನಿಸುತ್ತದೆ. ಒಂದು ಒಳ್ಳೆ ಸಂವಿಧಾನವನ್ನು ಕೆಟ್ಟವರು ನಡೆಸಿದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ ಅದೇ ಒಂದು ಕೆಟ್ಟ ಸಂವಿಧಾನವನ್ನು ಒಳ್ಳೆಯವರು ನಡೆಸಿದರೆ ಅದರ ಪರಿಣಾಮ ಒಳ್ಳೆಯದಾಗಿರುತ್ತದೆ. ” ಹಾಗಾಗಿ ಅಳ್ವಿಕೆ ಮಾಡುವವರ ಮೇಲೆ ಸಂವಿಧಾನದ ಸಫಲತೆ ಮತ್ತು ವಿಫಲತೆ ಅವಲಂಬಿಸಿದೆ. ದೇಶದ ಐಕ್ಯತೆ ಮತ್ತು ಜನತೆಯ ಪ್ರಗತಿಗೆ ಸಾಂವಿಧಾನಿಕ ಪ್ರಜ್ಞೆ ಅತ್ಯಂತ ಅಗತ್ಯವಾಗಿದೆ.
(ಲೇಖಕರು, ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಂಸ್ಥೆಯಲ್ಲಿ ಬೋಧಕರು)
ಕಲ್ಕತ್ತಾ : ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ನ್ಯಾಯ, ಸ್ವಾತಂತ್ರ್ಯ,…
ಉಡುಪಿ : ಐಲ್ಯಾಂಡ್‌ಗಳನ್ನೂ ಸೇರಿಸಿಕೊಂಡು, ಸಂಪೂರ್ಣ ಕರಾವಳಿ ಭಾಗದಲ್ಲಿ ಹೊಸ ದೃಷ್ಟಿಕೋನದಿಂದ ಪ್ರವಾಸೋದ್ಯಮ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಕೇವಲ…
ಸೋಮವಾರಪೇಟೆ : ಸಮೀಪದ ಕಾಜೂರು ಗ್ರಾಮದ ಪುಷ್ಪ ಎಂಬುವವರ ಮನೆಗೆ ನೆನ್ನೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಮನೆ ಸಂಪೂರ್ಣ…
ಹೊಸದಿಲ್ಲಿ : ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಿ ಸಂಪ್ರದಾಯ…
ಬೆಂಗಳೂರು : ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನಗರದ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…
ಮೈಸೂರು : ಭಾರತದ ಸಂವಿಧಾನವು ನಮ್ಮ ದೇಶದ ಆತ್ಮವಾಗಿದ್ದು, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮೂಲಭೂತ ತತ್ವಗಳನ್ನು ನೀಡಿದೆ.…