Andolana originals

ಆಟೋಟದಲ್ಲಿ ಪಾಲ್ಗೊಂಡ ಮಕ್ಕಳಿಗೆ ಊಟವೇ ಇಲ್ಲ!

ನಂಜನಗೂಡು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಗಮಿಸಿದ ಮಕ್ಕಳ ಪರದಾಟ

ಎಸ್.ಎಸ್.ಭಟ್‌ 

ನಂಜನಗೂಡು: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಊಟವೂ ಇಲ್ಲ, ಕುಡಿಯಲು ನೀರೂ ಇಲ್ಲ. ಅವರು ಹಸಿದುಕೊಂಡೇ ಆಟವಾಡಬೇಕು, ಇಲ್ಲವೇ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಇಂಥ ಸನ್ನಿವೇಶ ಕಂಡುಬಂದಿದ್ದು ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ. ಮಕ್ಕಳಿಗೆ ಊಟದ ವ್ಯವಸ್ಥೆ ಇಲ್ಲವಾದರೂ ಅವರನ್ನು ಕರೆ ತಂದ ಶಿಕ್ಷಕರಿಗೆ ಮಾತ್ರ ಉಟದ ವ್ಯವಸ್ಥೆ ಇತ್ತು.

ಹೋಬಳಿ ಮಟ್ಟದಲ್ಲಿ ವಿಜೇತರಾದ ಮಕ್ಕಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲು ಮಂಗಳವಾರ ನಗರದ ಬಾಲಕರ ಕಿರಿಯ ಕಾಲೇಜು, ರೋಟರಿ ಶಾಲೆ, ಕಾರ್ಮೆಲ್ ಶಾಲೆ, ಯುನಿಟಿ ಶಾಲೆ ಹಾಗೂ ಬಸವನಪುರದ ಶಾಲೆಗಳ ಆವರಣದಲ್ಲಿ ವಾಲಿಬಾಲ್, ಥ್ರೋಬಾಲ್, ಟೆನ್ನಿಸ್, ಖೋ ಖೋ,  ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.

ಐದು ಕಡೆ ನಡೆದ ಪಂದ್ಯಾವಳಿಗಳಲ್ಲಿ ಹೋಬಳಿಯನ್ನು ಪ್ರತಿನಿಧಿಸುವ ಸುಮಾರು ೧,೨೫೦ಕ್ಕೂ ಹೆಚ್ಚು ಕ್ರೀಡಾ ಪ್ರತಿಭೆಗಳು ಹಾಗೂ ೩೦೦ ಜನ ಶಿಕ್ಷಕರು ಭಾಗಿಯಾಗಿ ಪಂದ್ಯಾವಳಿಯನ್ನು ನಡೆಸಿದರು. ಹೋಬಳಿಯಿಂದ ಗೆದ್ದು ತಾಲ್ಲೂಕು ಮಟ್ಟದಲ್ಲಿ ಆಡವಾಡಲು ಬಂದ ೭ರಿಂದ ೧೪ ವರ್ಷ ವಯಸ್ಸಿನ ಈ ಚಿಣ್ಣರು ಅನ್ನ, ನೀರಿಲ್ಲದೆ ಬಸವಳಿದಿದ್ದು ಮಾತ್ರ ಶಿಕ್ಷಣ ಇಲಾಖೆಯ ದುಸ್ಥಿತಿಗೆ ಸಾಕ್ಷಿಯಾದಂತಿತ್ತು.

ಮಕ್ಕಳಿಗೆ ಊಟದ ವ್ಯವಸ್ಥೆ ಮಾಡದ ತಾಲ್ಲೂಕು ಶಿಕ್ಷಣ ಇಲಾಖೆ ನಗರದ ಪ್ರತಿಭಾವಂತ ಬಾಲಕಿಯರ ವಸತಿ ಶಾಲೆಯಲ್ಲಿ ಕ್ರೀಡಾ ಶಿಕ್ಷಕರಿಗಾಗಿ ೩೫೦ ಜನರಿಗೆ ೪೦ ಕೆಜಿ ಅಕ್ಕಿಯಲ್ಲಿ ಆಹಾರ ಸಿದ್ಧಪಡಿಸಿ ತರಿಸಿಕೊಂಡಿದ್ದು ಮಾತ್ರ ಸೋಜಿಗವಾಗಿತ್ತು. ತಾಲ್ಲೂಕನ್ನು ಪ್ರತಿನಿಧಿಸುವವರಿಗೆ ಕನಿಷ್ಠ ಊಟದ ವ್ಯವಸ್ಥೆಯಾದರೂ ಬೇಡವೇ? ಎಂದು ಹೆಸರು ಹೇಳಲು ಇಚ್ಛಿಸದ ದೈಹಿಕ ಶಿಕ್ಷಕರೊಬ್ಬರು ಪ್ರಶ್ನಿಸಿದರು.

ಮಕ್ಕಳ ಖಾತೆಗೆ ಹಣ ಹಾಕುವವರು ಯಾರು? ಮಕ್ಕಳಿಗೆ ಹಣ ನೀಡುವುದಾದರೆ ಶಿಕ್ಷಕರಿಗೂ ಟಿಎ, ಡಿಎ ಇರ ಬೇಕಲ್ಲ ಎಂದು ಹೇಳಿದ್ದಕ್ಕೆ, ಅವರಿಗೂ ನೀಡಲಾಗುತ್ತದೆ ಎಂದ ಬಿಇಒ, ಹಾಗಾದರೆ ಮಕ್ಕಳಿಗಿಲ್ಲದ ಊಟದ ವ್ಯವಸ್ಥೆ ಸರ್ಕಾರಿ ವಸತಿ ಶಾಲೆಯಲ್ಲಿ ಮಾಡಿದ್ದು ಏಕೆ ಎಂದಾಗ ಮಹೇಶ ಮೌನಕ್ಕೆ ಶರಣಾದರು.

” ಬೆಳಗಿನ ಜಾವವೇ ಬಂದೆವು. ಊಟ ತಿಂಡಿ ಏನೂ ಇಲ್ಲ. ಇಲ್ಲಿ ಊಟದ ವ್ಯವಸ್ಥೆ ಇರುತ್ತದೆ ಎಂದು ಖಾಲಿ ಜೇಬಿನಲ್ಲಿ ಬಂದೆವು. ಈಗ ಆಟದಲ್ಲೂ ಸೋತು ಹಸಿದ ಒಡಲಿನಲ್ಲೇ ಊರಿಗೆ ತಲುಪಬೇಕಾಗಿದೆ.”

-ಗ್ರಾಮೀಣ ಪ್ರದೇಶದ ಮಕ್ಕಳು

” ಶಿಕ್ಷಣ ಇಲಾಖೆಯಲ್ಲಿ ಇದಕ್ಕೆ ಯಾವುದೇ ಹಣವಿಲ್ಲ. ಕ್ರೀಡೆಯಾಡಲು ಬಂದ ಪ್ರತಿ ಮಕ್ಕಳ ಖಾತೆಗೆ ಬಸ್ ಚಾರ್ಜ್ ಸಹಿತ ತಲಾ ೫೦ ರೂ. ಪಾವತಿಸುವುದರಿಂದ ಅವರನ್ನು ಕರೆ ತಂದ ಶಿಕ್ಷಕರೇ ಮಕ್ಕಳ ಊಟ-ತಿಂಡಿ ವ್ಯವಸ್ಥೆ ನೋಡಿಕೊಳ್ಳಬೇಕು.”

-ಮಹೇಶ, ಕ್ಷೇತ್ರ ಶಿಕ್ಷಣಾಧಿಕಾರಿ

ಆಂದೋಲನ ಡೆಸ್ಕ್

Recent Posts

ವಾಟಾಳ್‌ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಸಚಿವ ಶಿವರಾಜ್‌ ತಂಗಡಗಿ

ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಸಚಿವ…

2 mins ago

ವಾಣಿಜ್ಯ ಸಿಲಿಂಡರ್‌ ಸ್ಟಾಕ್‌ ಇಲ್ಲ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್‌ ಸ್ಟಾಕ್‌ ಇಲ್ಲ. ಹೋಟೆಲ್‌ನವರು ಒಂದು ವಾರ ಸಹಿಸಿಕೊಳ್ಳಲೇಬೇಕು ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.…

1 hour ago

ನಾಲ್ಕೈದು ದಿನಗಳ ನಂತರ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಪೂರೈಕೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ದೇಶದಲ್ಲಿ ಗ್ಯಾಸ್‌ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ಮಾಜಿ ಸಿಎಂ…

1 hour ago

ಇರಾನ್‌ ನೂತನ ಸುಪ್ರೀಂ ಲೀಡರ್‌ಗೆ ಕಾಲು ಕಟ್‌, ಕೋಮಾಗೆ ಜಾರಿಗೆ ಮೊಜ್ತಾಬಾ

ಟೆಹರಾನ್:‌ ಇಸ್ರೇಲ್ ಮತ್ತು ಇರಾನ್‌ ನಡುವಿನ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇರಾನ್‌ ದೇಶಕ್ಕೆ ಚೇತರಿಸಿಕೊಳ್ಳಲಾಗದ ಆಘಾತ ಎದುರಾಗಿದೆ.…

3 hours ago

ಡಿಕೆಶಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಔತಣಕೂಟ: ಯಾವ ದಿನ ಗೊತ್ತಾ.?

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಕೆಲ ದಿನಗಳ ಹಿಂದೆ ಡಿನ್ನರ್‌ ಸಭೆ ಆಯೋಜಿಸಿದ್ದ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಕೂಡ ಸಚಿವರಿಗೆ…

3 hours ago

ಇರಾನ್‌-ಇಸ್ರೇಲ್‌ ಸಂಘರ್ಷ ಎಫೆಕ್ಟ್:‌ ರಾಜ್ಯದಲ್ಲಿ ಅಡುಗೆ ಎಣ್ಣೆ ದರ ಏರಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಈಗ ಜನಸಾಮಾನ್ಯರ ಅಡುಗೆ ಮನೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆಯ…

3 hours ago