Andolana originals

ಬದುಕು ನುಂಗಿದ ಬಿದಿರ ನದಿ!

ದೇವರನಾಡಿನಲ್ಲಿ ಪ್ರಳಯ; ಸ್ಮಶಾನವಾಯ್ತು ಊರು!

ಸಾಕ್ಷಾತ್ ವರದಿ: ಕೆ.ಪಿ. ನಾಗರಾಜ್, ಪಬ್ಲಿಕ್ ಟಿವಿ

ವಯನಾಡು: ದೇವರ ನಾಡು ಕೇರಳದಲ್ಲಿ ಜಲಪ್ರಳಯ ಉಂಟಾಗಿದೆ. ಇದು ಅಂತಿಂಥ ಪ್ರಳಯ ಅಲ್ಲ. ಇಡೀ ಊರಿಗೆ ಊರೇ ಸ್ಮಶಾನ ಮಾಡಿದ ಪ್ರಳಯ! ಮನೆ, ಮಠ, ಜೀವ ಎಲ್ಲವನ್ನೂ ಕ್ಷಣಾರ್ಧದಲ್ಲಿ ಈ ಪ್ರಳಯ ತನ್ನ ಒಡಲಲ್ಲಿ ಸೇರಿಸಿಕೊಂಡು ಬಹು ದೂರಕ್ಕೆ ಹರಿದು ಹೋಗಿದೆ. ಇಲ್ಲೊಂದು ಊರು ಇತ್ತಾ, ಇಲ್ಲಿ ನೂರಾರು ಜನರು ಬದುಕಿದ್ರಾ ಎಂಬ ಯಾವ ಕುರುಹೂ ಸಿಗದಂತೆ ಈ ಪ್ರಳಯ ಕ್ಷಣಾರ್ಧದಲ್ಲಿ ಮಾಡಿಟ್ಟಿದೆ. ರಾತ್ರೋರಾತ್ರಿ ಊರಿನ ಶೇಕಡಾ ೫೦ ರಷ್ಟು ಜನ ಜಲ ಸಮಾಽಯಾಗಿದ್ದಾರೆ. ಮನೆ, ತೋಟ, ಶಾಲೆ, ದೇವಸ್ಥಾನ, ಮಸೀದಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ – ಇದು ಕೇರಳದ ವಯನಾಡು ಜಿಲ್ಲೆಯ ಮೇಪ್ಪಾಡಿ ಪಟ್ಟಣದಿಂದ ೮ ಕಿ.ಮೀ. ದೂರದಲ್ಲಿ ಮುಂಡಕ್ಕೈ ಎಂಬ ಬೆಟ್ಟದ ತಪ್ಪಲಿನಲ್ಲಿನ ಚೂರಲ್ ಮಲೈ ಗ್ರಾಮದ ಸ್ಥಿತಿ ( ಮಲಯಾಳಂ ನಲ್ಲಿ ಚೂರಲ್ ಅಂದರೆ ಬಿದಿರು ಎಂದರ್ಥ) ಈ ಗ್ರಾಮದಲ್ಲಿ ೫೦೦ ಮನೆಗಳಿದ್ವು, ಗ್ರಾಮಕ್ಕೆ ಹೊಂದಿಕೊಂಡಂತೆ ಚೂರಲ್ ಮಲೈ ಎಂಬ ನದಿ ನಿಧಾನವಾಗಿ ಹರಿಯುತ್ತಿತ್ತು. ಮುಂಡಕ್ಕೈ ಎಂಬ ಬೆಟ್ಟದಿಂದ ಹರಿಯುವ ನೀರಿನಿಂದ ಚೂರಲ್ ಮಲೈ ನದಿ ಸೃಷ್ಟಿಯಾಗಿ ಹರಿಯುತ್ತದೆ. ಇದರ ವೈಭೋಗ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಆದರೆ ಈಗ ಅದೇ ನದಿ ಇಡೀ ಊರನ್ನೇ ಅಹುತಿ ಪಡೆದಿದೆ.

ಹೆಚ್ಚು ಕಡಿಮೆ ೩೦೦ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ೧೫೦ ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಈವರೆಗೆ ೧೦೬ ಜನರ ಮೃತದೇಹಗಳು ಪತ್ತೆಯಾಗಿವೆ. ಉಳಿದವರು ಬದುಕಿದ್ದಾರಾ, ಜಲ ಸಮಾಽಯಾಗಿದ್ದಾರಾ ಗೊತ್ತಿಲ್ಲ . ಅಷ್ಟರಮಟ್ಟಿಗೆ ಈ ನದಿ ಊರನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಯಮಕೇಕೆ ಹಾಕಿದೆ.

ಚೂರಲ್ ಮಲೈನಲ್ಲಿ ಇದ್ದವರೆಲ್ಲಾ ಬಹುತೇಕ ಕೂಲಿ ಕಾರ್ಮಿಕ ವರ್ಗದ ಜನ. ಸುತ್ತಮುತ್ತಲಿನ ಎಸ್ಟೇಟ್ ನೋಡಿಕೊಳ್ಳುತ್ತಾ ಬದುಕು ಕಟ್ಟಿಕೊಂಡಿದ್ದರು. ಇದರಲ್ಲಿ ಒಂದು ಶೇ.೨೦ರಷ್ಟು ಕುಟುಂಬಗಳ ಯುವಕರು ದುಬೈಗೆ ಕೆಲಸಕ್ಕೆ ಹೋಗಿದ್ದಾರೆ. ಇಲ್ಲಿ ಇದ್ದಿದ್ದು ಇಳಿ ವಯಸ್ಸಿನ ತಂದೆ, ತಾಯಿಗಳು ಮಾತ್ರ! ಕೆಲವರು ಪತ್ನಿ – ಮಕ್ಕಳನ್ನು ಇಲ್ಲೆ ಬಿಟ್ಟು ದುಬೈನಲ್ಲಿ ದುಡಿದು ಇವರನ್ನು ಸಾಕುತ್ತಿದ್ದರು. ಒಂದರ್ಥದಲ್ಲಿ ಈ ಊರು ಸ್ವರ್ಗದಂತಿತ್ತು. ಸುತ್ತ ಬೆಟ್ಟ, ಊರಿನ ಮಧ್ಯೆ ತಣ್ಣಗೆ ಹರಿಯುವ ನದಿ. ಮನೆಯ ಮುಂಭಾಗವೆ ಕೆಲಸ. ಬಡತನ ನಿವಾರಣೆಗೆ ಮಗ, ಗಂಡ ದುಬೈನಿಂದ ಕಳಿಸುತ್ತಿದ್ದ ಹಣ… ಇವರ ಬದುಕಿಗೆ ಇಷ್ಟು ಸಾಕಾಗಿತ್ತು. ಊರಿನಿಂದ ೮ ಕಿ.ಮೀ. ದೂರ ಇರುವ ಮೇಪ್ಪಾಡಿ ಎಂಬ ಪಟ್ಟಣದ ಸಹವಾಸವೂ ಬೇಡ ಎಂಬಂತೆ ಇಲ್ಲಿನ ಕುಟುಂಬಗಳು ಬದುಕುತ್ತಿದ್ದವು.

ಕಳೆದ ೧೫ ದಿನಗಳಿಂದ ಕೇರಳದಲ್ಲಿ ಕುಂಭದ್ರೋಣ ಮಳೆ ಆಗ್ತಿದೆ. ಹೀಗಾಗಿ ಚಿಕ್ಕ ನದಿಗಳು ಕೂಡ ಭೋರ್ಗರೆದು ಹರಿಯುತ್ತಿದ್ದವು. ಆದರೂ ಚೂರಲ್ ಮಲೈ ನದಿ ಅಪಾಯದ ಮಟ್ಟ ಮೀರಿರಲಿಲ್ಲ. ಯಾವಾಗಲೂ ಈ ನದಿಗೆ ಸೌಮ್ಯವೇ ಭೂಷಣವಾಗಿತ್ತು. ಹೀಗಾಗಿಯೇ ಈ ಗ್ರಾಮದ ಜನರು ಯಾವ ಆತಂಕವೂ ಇಲ್ಲದೆ ನಿದ್ದೆಗೆ ಜಾರಿದ್ದರು. ದುಬೈನಲ್ಲಿರುವ ಈ ಕುಟುಂಬಗಳ ಆಧಾರ ಸ್ಥಂಭಗಳಿಗೂ ಮಳೆ ಹೆಚ್ಚಾಯ್ತು ಈಗ ಹೇಗಪ್ಪಾ ಎಂಬ ಕಿಂಚಿತ್ತೂ ಆತಂಕ ಕೂಡ ಇರಲಿಲ್ಲ. ಆದರೆ ಮಧ್ಯರಾತ್ರಿ ೧ ಗಂಟೆಗೆ ನದಿಯ ವರಸೆಯೆ ಬದಲಾಯ್ತು. ದೈವ ಕಳೆಯಲ್ಲಿದ್ದ ನದಿ ಯಮಸ್ವರೂಪಿ ಆಗಿ ಬದಲಾಯ್ತು. ಹೀಗೆ ನದಿ ಯಮಸ್ವರೂಪಿ ಆಗಿ ಬದಲಾಗಲು ಕಾರಣ ಮುಂಡಕ್ಕೈ ಬೆಟ್ಟದಲ್ಲಿ ಉಂಟಾದ ಭಾರೀ ಜಲಸೋಟ. ಈ ಸೋಟದ ಪರಿಣಾಮ ಚೂರಲ್ ಮಲೈ ನದಿಯ ಒಡಲಿಗೆ ಏಕಾಏಕಿ ಭಾರೀ ಪ್ರಮಾಣದ ನೀರು ಸೇರಿತು. ನೀರಿನ ಜೊತೆಗೆ ಬೆಟ್ಟದಲ್ಲಿನ ಭಾರೀ ಬಂಡೆಗಳು ಹೂವಿನ ರೀತಿ ನದಿಯಲ್ಲಿ ಹರಿದು ಬಂದವು. ನದಿಯ ಭೋರ್ಗರೆತದ ಸದ್ದು ಜೋರಾಯ್ತು. ಈ ಸದ್ದೇ ನೂರಾರು ಕನಸುಗಳ ಹೊದ್ದು ಮಲಗಿದ್ದ ಜನರ ಬದುಕಿಗೆ ಚರಮ ಗೀತೆಯಾಯ್ತು.

ಈ ಗ್ರಾಮದ ಎತ್ತರದ ಪ್ರದೇಶದಲ್ಲಿದ್ದ ಜನಕ್ಕೆ ಏನಾಗ್ತಿದೆ ಗ್ರಾಮದ ಒಳಗೆ ಅನ್ನೋದು ಗೊತ್ತಾಗುವ ಮುನ್ನವೇ ಅರ್ಧ ಊರು ನೀರು ಪಾಲಾಗಿತ್ತು. ಸಂಬಂಽಕರು, ಸ್ನೇಹಿತರು ಎಲ್ಲರೂ ಜಲಸಮಾಽ ಆಗಿಬಿಟ್ಟಿದ್ದಾರೆ. ಮಂಗಳವಾರದ ಸೂರ್ಯೋದಯದ ಹೊತ್ತಿಗೆ ಇಡೀ ದೇಶಕ್ಕೆ ಈ ಸುದ್ದಿ ಹಬ್ಬಿತು.
ಎನ್‌ಡಿಆರ್‌ಎಫ್ ತಂಡದ ನೂರಾರು ಜನ ರಕ್ಷಣಾ ಕಾರ್ಯ ಮತ್ತು ಶವಗಳ ಹುಡುಕುವ ಕೆಲಸಕ್ಕೆ ಮುಂದಾಗುತ್ತಿದ್ದಂತೆ ನೂರಾರು ಸಂಘ ಸಂಸ್ಥೆಗಳ ಕಾರ್ಯಕರ್ತರು ಕೂಡ ಫೀಲ್ಡ್ ಗೆ ಇಳಿದರು. ಕೊಡಗಿನ ಭಾಗದಿಂದ ಕೂಡ ಯುವಕರ ಟೀಂ ಈ ಕಾರ್ಯಕ್ಕಾಗಿ ಇಲ್ಲಿಗೆ ಬಂದಿತ್ತು. ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳ ಅಂಬ್ಯುಲೆನ್ಸ್ ಗಳು ಚೂರಲ್ ಮಲೈ ಗ್ರಾಮದಲ್ಲಿದ್ದವು. ಸರ್ಕಾರ ಸಾರ್ವಜನಿಕರ ನೆರವು ಕೇಳುವ ಮುನ್ನವೇ ದುರಂತ ನಡೆದ ಸ್ಥಳಕ್ಕೆ ಔಷಽ, ಆಹಾರ ಸಮೇತ ಜನ ತಲುಪಿದ್ದು ಮಾನವೀಯ ಮೌಲ್ಯಗಳಿಗೆ ಇನ್ನೂ ಜೀವವಿದೆ ಎಂಬುದನ್ನು ಸಾಬೀತು ಮಾಡುವಂತಿತ್ತು.

ತುಂಬಿ ತುಳುಕಿದ ಶವಾಗಾರ
ಮೇಪ್ಪಾಡಿಯ ಸರ್ಕಾರಿ ಆಸ್ಪತ್ರಯ ಮುಂಭಾಗ ಮಂಗಳವಾರ ಬೆಳ್ಳಂಬೆಳಿಗ್ಗೆಯೆ ಜನ ಸೇರಲು ಆರಂಭಿಸಿದರು. ಸಾಲು ಸಾಲು ಹೆಣಗಳನ್ನು ಶವಾಗಾರದಲ್ಲಿ ಮಲಗಿಸಲಾಗಿತ್ತು. ನೀರಿನ ರಭಸದ ಏಟಿಗೆ ಕೆಲವು ಮೃತ ದೇಹಗಳ ಗುರುತುಗಳೆ ನಾಪತ್ತೆ ಆಗಿವೆ. ಶವ ಸಿಕ್ಕ ಸಂಬಂಽಕರ ಆಕ್ರಂದನ ಮುಗಿಲು ಮುಟ್ಟುತ್ತಿದ್ದರೆ, ಈ ಕಡೆ ಶವಗಳೂ ಇಲ್ಲ ಆ ಕಡೆ ವ್ಯಕ್ತಿಗಶೂ ಪತ್ತೆ ಆಗ್ತಿಲ್ಲ ಅನ್ನೋ ಅತಂತ್ರ ಮನಃಸ್ಥಿತಿಯಲ್ಲಿ ನೂರಾರು ಜನ ಅಲೆದಾಡುತ್ತಿದ್ದರು. ಯಾವುದಾದರೂ ಶವ ಅಂಬ್ಯೂಲೆನ್ಸ್ ನಲ್ಲಿ ಬಂದ ಕೂಡಲೇ ಅದು ತಮ್ಮವರಾದ ಅಂತ ಜನ ಮುಗಿಬಿದ್ದು ನೋಡುವ ದೃಶ್ಯವಂತೂ ಜಲಪ್ರಳಯ ಸೃಷ್ಟಿಸಿದ ಸೂತಕಕ್ಕೆ ಕನ್ನಡಿ ಹಿಡಿದಿತ್ತು.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

4 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

4 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

4 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

7 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

7 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:  ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…

7 hours ago