ಕೆ. ಬಿ. ರಮೇಶನಾಯಕ
ಮೈಸೂರು: ೫೦:೫೦ ಅನುಪಾತದಡಿ ನಿವೇಶನ ಹಂಚಿಕೆ ಹಗರಣದಿಂದ ದೊಡ್ಡ ಸದ್ದು ಮಾಡುತ್ತಿ ರುವ ಮುಡಾದಲ್ಲಿ ಒಂದಿಲ್ಲೊಂದು ಅಕ್ರಮ ಹೊರ ಬರುತ್ತಲೇ ಇದ್ದು, ಇ-ಹರಾಜಿನಲ್ಲಿ ಖರೀದಿಸಿದ್ದ ಮುಡಾ ಕ್ರಯಪತ್ರ ಮಾಡಿಕೊಟ್ಟಿ ದ್ದರೂ, ಮತ್ತೊಬ್ಬರಿಗೆ ಅದನ್ನೇ ಬದಲಿ ನಿವೇಶನ ವನ್ನಾಗಿಯೂ ಮಂಜೂರು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮುಡಾ ಅಧಿಕಾರಿಗಳ ಕೈ ಚಳಕದಿಂದಾಗಿ ಇಂತಹದೊಂದು ಅಕ್ರಮ ನಡೆದಿದ್ದು, ಒಂದೇ ನಿವೇಶನಕ್ಕಾಗಿ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ದ ಮಾಲೀಕ ಹಾಗೂ ಬದಲಿ ನಿವೇಶನ ವನ್ನಾಗಿಯೂ ಪಡೆದುಕೊಂಡಿರುವ ನಿವೇಶನ ದಾರರು ಹೋರಾಟ ಮಾಡುವಂತಾಗಿದೆ.
ನಗರದ ದಟ್ಟಗಳ್ಳಿಯ ನಿವಾಸಿ ಟಿ. ಪಿ. ಸುಹಾಸ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಽಕಾರವು ನಿರ್ಮಿಸಿರುವ ಲಲಿತಾದ್ರಿಪುರ (ದಕ್ಷಿಣ) ಬಡಾವಣೆಯಲ್ಲಿ ಸಂಖ್ಯೆ ೧೨೮೦ರ ನಿವೇಶನವನ್ನು ೨೦೨೨ರ ಮಾರ್ಚ್ ೧೮ರಂದು ಮುಡಾ ಇ-ಹರಾಜಿ ನಲ್ಲಿ ಭಾಗವಹಿಸಿ ಖರೀದಿಸಿದ್ದರು.
ನಂತರ, ಮುಡಾಕ್ಕೆ ನಿವೇಶನದ ಮೊತ್ತ ೮೨. ೧೭ ಲಕ್ಷ ರೂ. ಪಾವತಿಸಿದ ಮೇಲೆ ೨೦೨೨ ಡಿ. ೨೬ ರಂದು ಕ್ರಯಪತ್ರ ಮಾಡಲಾಗಿದೆ. ಆಯುಕ್ತರು, ವಿಶೇಷ ತಹಸಿಲ್ದಾರ್ ಕ್ರಯಪತ್ರಕ್ಕೆ ಸಹಿ ಮಾಡಿದ ನಂತರ ನಿವೇಶನ ಖಾತಾ, ಕಂದಾಯ ಪತ್ರ ಪಡೆದುಕೊಂಡಿದ್ದಾರೆ.
ನಂತರ, ಸುಹಾಸ್ ನಿವೇಶನದ ದಾಖಲೆಗಳನ್ನು ಹಾಜರುಪಡಿಸಿ ಬ್ಯಾಂಕಿನಲ್ಲಿ ಸಾಲವನ್ನೂ ಪಡೆದಿ ದ್ದಾರೆ. ಈ ವೇಳೆ ಉದ್ಯೋಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ವಾಪಸ್ ಮೈಸೂರಿಗೆ ಬಂದು ನಿವೇಶನ ವನ್ನು ಶುಚಿಗೊಳಿಸಿ ಮನೆ ಕಟ್ಟುವ ಕಾರ್ಯಕ್ಕೆ ಸಿದ್ಧತೆ ಆರಂಭಿಸಿದಾಗಲೇ ಅವರಿಗೆ ಅಚ್ಚರಿ ಕಾದಿತ್ತು. ಇದೇ ಸಂಖ್ಯೆಯ ನಿವೇಶನವನ್ನು ಮುಡಾ ಅಽಕಾರಿಗಳು ಡಾ. ಕುಮಾರ್ ಎಂಬವರಿಗೆ ಬದಲಿ ನಿವೇಶನವ ನ್ನಾಗಿ ಮಂಜೂರು ಮಾಡಿದ್ದಾರೆ.
ಡಾ. ಕುಮಾರ್ ಅವರಿಗೆ ಬೇರೆ ಜಾಗದಲ್ಲಿ ಬದಲಿ ನಿವೇಶನ ಮಂಜೂರು ಮಾಡಿಕೊಡ ಬೇಕಾದ ಅಧಿಕಾರಿಗಳು ೨೦೨೨ರಲ್ಲಿ ಇ-ಹರಾಜಿ ನಲ್ಲಿ ಮಾರಾಟ ಮಾಡಲಾಗಿರುವ ನಿವೇಶನ ಎಂಬುದನ್ನು ಪರಿಶೀಲಿಸದೆ ಕಣ್ಮುಚ್ಚಿ ಕೊಂಡು ೨೦೨೩ ಜೂನ್ ನಲ್ಲಿ ಬದಲಿ ನಿವೇಶನವನ್ನಾಗಿ ನೀಡಿರುವುದರಿಂದ ಈಗ ಇಬ್ಬರೂ ಸಮಸ್ಯೆ ಎದುರಿಸುವಂತಾಗಿದೆ. ಇ-ಹರಾಜಿನಲ್ಲಿ ಖರೀದಿಸಿರುವ ನಿವೇಶನವನ್ನು ತಮಗೆ ಬದಲಿ ನಿವೇಶನವಾಗಿ ಮಂಜೂರಾತಿ ಮಾಡಿಕೊಡಲಾಗಿದ್ದು, ಬೇರೆ ನಿವೇಶನ ಅಲಾಟ್ ಮೆಂಟ್ ಮಾಡಿಸುವಂತೆ ಕುಮಾರ್ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದೀಗ ಈ ವಿಚಾರಣೆಯು ನ್ಯಾಯಾಲಯದಲ್ಲಿ ಇದೆ.
ಬ್ಯಾಂಕಿಗೆ ೧೩ ಲಕ್ಷ ರೂ. ಬಡ್ಡಿ: ಇ-ಹರಾಜಿನಲ್ಲಿ ಖರೀದಿ ಮಾಡಲು ೮೨ ಲಕ್ಷ ರೂಪಾಯಿ ಪಾವತಿಸಿರುವ ಟಿ. ಪಿ. ಸುಹಾಸ್ ಅವರು ಎಚ್‌ಡಿಎ-ಸಿ ಬ್ಯಾಂಕಿಗೆ ನಿವೇಶನದ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದುಕೊಂಡಿದ್ದಾರೆ. ಬ್ಯಾಂಕ್ ಸಾಲಕ್ಕೆ ಎರಡು ವರ್ಷಗಳಿಂದ ೧೩ ಲಕ್ಷ ರೂಪಾಯಿ ಬಡ್ಡಿ ಕಟ್ಟಿರುವ ಮಾಲೀಕರಿಗೆ ನಿವೇಶನದ ಗೊಂದಲ ದೊಡ್ಡ ಆತಂಕವನ್ನುಂಟು ಮಾಡಿ ಕೊಟ್ಟಿದೆ. ಡಾ. ಕುಮಾರ್ ಅವರು ನ್ಯಾಯಾಲಯದ ಮೊರೆ ಹೋಗಿರುವ ಕಾರಣ ತಮಗೆ ಕ್ರಯಪತ್ರ ಮಾಡಿಕೊಟ್ಟಿದ್ದರೂ ಮನೆ ಕಟ್ಟಿಸಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ.
ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…
ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…
ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…
ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…
ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್ ಸುಬ್ಬರಾವ್ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…
ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…