Andolana originals

ಇರಾನ್ ಸಂಘರ್ಷದ ಪೂರ್ವಾಪರ

ಪ್ರೊ.ಪ್ರೇಮ ಶೇಖರ

ಒಂದೂವರೆ ತಿಂಗಳಿನಿಂದ ಜಗತ್ತು ಆತಂಕದಿಂದ ಎದುರು ನೋಡುತ್ತಿದ್ದಂತಹ ಯುದ್ಧ ಪಶ್ಚಿಮ ಏಷ್ಯಾದಲ್ಲಿ ಪ್ರಾರಂಭವಾಗಿದೆ. ಜನವರಿ ಮೊದಲ ಭಾಗದಲ್ಲಿ ಇರಾನಿನ ಜನತೆ ಅಲ್ಲಿನ ಮೂಲಭೂತವಾದಿ ಆಡಳಿತದ ವಿರುದ್ಧ ದಂಗೆ ಎದ್ದಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಲ್ಪ್ ಈಸ್ ಆನ್ ದ ವೇ ಎಂದು ಹೇಳಿದ್ದರು. ಆದರೆ, ಆ ಹೆಲ್ಪ್ ಬರಲಿಲ್ಲ. ಇರಾನ್ ಸರ್ಕಾರ ಸುಮಾರು ೩೨,೦೦೦ ಆಂದೋಲನಕಾರರ ಹತ್ಯೆಗೈಯಿತು. ಟ್ರಂಪ್ ಅವರಿಂದಾಗಲೀ ಬೇರೆ ಎಲ್ಲಿಂದಾಗಲಿ ಆ ಜನತೆಗೆ ಸಹಾಯ ಬಾರದ ಕಾರಣ ಅವರು ತಮ್ಮ ಆಂದೋಲನವನ್ನು ನಿಲ್ಲಿಸಿದರು. ಅಂದರೆ ಆಂದೋಲನಕಾರರು ಸೋತು ಹೋದರು. ಮೂಲ ಭೂತವಾದಿ ಸರ್ಕಾರ ಗೆಲುವು ಸಾಧಿಸಿತು. ಆ ಸಂದರ್ಭದಲ್ಲಿ ಅಮೆರಿಕ ಇರಾನ್ ಮೇಲೆ ದಾಳಿ ಮಾಡಲಿಲ್ಲ.

ಈಗ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿರುವುದು ನಿರೀಕ್ಷಿತವಾಗಿತ್ತು. ಆದರೆ, ಆಗಿನ ವಾಸ್ತವಗಳೇನು? ನಿಜ ಹೇಳಬೇಕೆಂದರೆ ಕಳೆದ ಜೂನ್ ತಿಂಗಳಿನಲ್ಲಿ ಅಮೆರಿಕ ಮತ್ತು ಇಸ್ರೇಲ್ ಒಟ್ಟಾಗಿ ಇರಾನ್ ಮೇಲೆ ದಾಳಿ ನಡೆಸಿದ್ದು ನಿಮಗೆಲ್ಲ ನೆನಪಿರಬಹುದು. ಆನಂತರ ಮತ್ತೊಂದು ದಾಳಿ ಆಗಬಹುದು ಎಂದು ಅನ್ನಿಸಿದ್ದರೂ ಕೂಡ ಅಮೆರಿಕ ಪಶ್ಚಿಮ ಏಷ್ಯಾದಿಂದ ತನ್ನೆಲ್ಲಾ ವಿಮಾನವಾಹಕ ನೌಕೆಗಳನ್ನು ದೂರಕ್ಕೆ ತೆಗೆದುಕೊಂಡು ಹೋಯಿತು. ಹೀಗಾಗಿ ಜನವರಿ ತಿಂಗಳಲ್ಲಿ ಇರಾನ್ ಮೇಲೆ ದಾಳಿ ನಡೆಸಲು ಅನುಕೂಲವಾಗುವಂತಹ ಯಾವುದೇ ಒಂದು ವಿಮಾನ ವಾಹಕ ಅಂದರೆ ಯುದ್ಧ ನೌಕೆ ಅಮೆರಿಕದ್ದು, ಅರೆಬಿಯನ್ ಸಮುದ್ರದಲ್ಲಾಗಲಿ, ಮೆಡಿಟರೇನಿಯನ್ ಸಮುದ್ರದಲ್ಲಾಗಲಿ ಇರಲಿಲ್ಲ. ಇರಾನ್‌ನಲ್ಲಿ ಆಂದೋಲನ ನಡೆಯುತ್ತಿದ್ದಾಗ ಫಿಲಿಪೈನ್ಸ್‌ನಿಂದ ಯುಎಸ್‌ಎಸ್ ಅಬ್ರಹಾಂ ಲಿಂಕನ್, ಕೆರೆಬಿಯನ್ ಸಮುದ್ರದಿಂದ ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್ ಇಸ್ರೇಲ್ ಕಡೆಗೆ ಹೊರಟಿವೆ ಎಂದು ಸುದ್ದಿ ಬಂದಿತ್ತು. ಅವೆರಡೂ ಕೂಡ ಒಂದು ವಾರ, ಹತ್ತು ದಿನಗಳ ಹಿಂದೆ ತಮ್ಮ ಸ್ಥಾನಗಳಿಗೆ ತಲುಪಿದವು. ಯುಎಸ್‌ಎಸ್ ಅಬ್ರಹಾಂ ಲಿಂಕನ್ ಉತ್ತರ ಅರೆಬಿಯನ್ ಸಮುದ್ರಕ್ಕೆ ಮತ್ತು ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್ ಇಸ್ರೇಲ್‌ನ ಹೈಫೈ ಬಂದರಿಗೆ ಬಂದಿತ್ತು. ಆಗ ಇನ್ನು ಯುದ್ಧ ಶುರು ಆಗಬಹುದು, ದಾಳಿ ಆಗಬಹುದು ಎನ್ನುವ ಒಂದು ಸೂಚನೆ ಸಿಕ್ಕಿತ್ತು. ಅದು ಕೊನೆಗೆ ಆತಂಕಕಾರಿಯಾಗಿ ಆರಂಭವಾಗಿದ್ದು, ಫೆ.೨೮-ಮಾ.೧ರ ರಾತ್ರಿ. ಮೊದಲ ದಾಳಿಯಲ್ಲೇ ಇರಾನ್‌ನ ಸುಮಾರು ೩೦ ಟಾರ್ಗೆಟ್‌ಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿವೆ. ಇಸ್ರೇಲ್ ಆ ದಾಳಿಯನ್ನು ಫ್ರ್ಲೋರ್ ಇನ್ ಲಯನ್ ಎಂದು ಕರೆದಿದೆ. ಅಮೆರಿಕ ಎಪಿಕ್ ಫ್ಲೂರಿ ಅನ್ನುವ ಹೆಸರಲ್ಲಿ ಕರೆದಿದೆ.

ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ. ಜತೆಗೆ ಇರಾನ್‌ನ ರಕ್ಷಣಾಮಂತ್ರಿ ಮತ್ತು ಇರಾನಿ ಸೇನೆಯ ಮುಖ್ಯಸ್ಥರೂ ಹತರಾಗಿದ್ದಾರೆ. ಅವರ ಜತೆಗೆ ಸುಮಾರು ೪೦ ಉನ್ನತ ಅಧಿಕಾರಿಗಳು, ೨೦೦ರಷ್ಟು ಇತರ ಸರ್ಕಾರಿ ಮುಖ್ಯಸ್ಥರು ಪ್ರಾಣ ಕಳೆದುಕೊಂಡಿದ್ದಾರೆ. ಇರಾನ್‌ಗೆ ಪ್ರಾಥಮಿಕವಾಗಿ ಬಹಳ ದೊಡ್ಡ ಹೊಡೆತ ಬಿದ್ದಿದೆ. ಇರಾನ್ ಪ್ರತಿಯಾಗಿ ಇಸ್ರೇಲ್ ಮೇಲಷ್ಟೇ ಅಲ್ಲ, ಪಶ್ಚಿಮ ಏಷ್ಯಾದ ಇರಾಕ್, ಕುವೈತ್, ಸೌದಿ ಅರೆಬಿಯಾ, ಬಹರೇನ್, ಕತಾರ್, ಯುಎಇ, ಒಮನ್ ದೇಶಗಳಲ್ಲಿರುವ ಅಮೆರಿಕದ ವಾಯು ನೆಲೆ, ಸೇನಾ ನೆಲೆ, ನೌಕಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ತನ್ನ ಸರ್ವೋಚ್ಚ ನಾಯಕನನ್ನು ಕಳೆದುಕೊಂಡ ಇರಾನ್ ಈ ಸನ್ನಿವೇಶದಲ್ಲಿ ಇನ್ನೆಷ್ಟು ಕಾಲ ಯುದ್ಧ ಮುಂದುವರಿಸಬಹುದು? ಯುದ್ಧ ಯಾವ ರೀತಿ ಸಾಗುತ್ತಿದೆ? ಯುದ್ಧದ ಅಂತ್ಯ ಹೇಗಾಗಬಹುದು? ಎಂಬುದು ನಮ್ಮೆಲ್ಲರ ಕುತೂಹಲ ಕೆರಳಿಸಿರುವ ವಿಷಯ. ಇರಾನ್ ಈಗ ಏನು ಮಾಡಬಹುದು? ಅದರ ಸರ್ವೋಚ್ಚ ನಾಯಕ, ರಕ್ಷಣಾ ಸಚಿವ, ಸೇನಾ ಮುಖ್ಯಸ್ಥ ಇಲ್ಲ. ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ವಿದೇಶ ಮಂತ್ರಿ ಅಬ್ಬಾಸ್ ಅರ‍್ಜ ಇದ್ದಾರೆ ಎನ್ನುವ ಸುದ್ದಿ ಇದೆ. ಆದರೆ, ಸರ್ವೋಚ್ಚ ನಾಯಕನಿಗೆ ಹೋಲಿಸಿದರೆ ಅವರ ಅಧಿಕಾರ ಕಡಿಮೆಯಾಗಿದೆ.

ಇಂತಹ ಸನ್ನಿವೇಶದಲ್ಲಿ ಇರಾನ್‌ನ ಈಗಿನ ಸರ್ಕಾರ ಸಂವಿಧಾನದ ಆರ್ಟಿಕಲ್ ೧೧೧ ಪ್ರಕಾರ ಮೂವರು ಧರ್ಮಾಧಿಕಾರಿಗಳ ಸಮಿತಿಯನ್ನು ನೇಮಿಸಿಕೊಂಡಿದೆ. ಅಂದರೆ ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕ, ಚುನಾಯಿತರಾಗುವ ವರೆಗೆ ಈ ಸಮಿತಿ ಅಸ್ತಿತ್ವದಲ್ಲಿರುತ್ತದೆ. ಶಾಶ್ವತ ವ್ಯವಸ್ಥೆ ಯಾವಾಗ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕು. ಸರ್ವೋಚ್ಚ ನಾಯಕ ಖಮೇನಿ ಅವರ ನಿಧನ ಸಾಮಾನ್ಯ ರೀತಿಯಲ್ಲಿ ಆಗಿದ್ದರೆ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ಸಾಮಾನ್ಯವಾಗಿಯೇ ನಡೆಯುತ್ತಿತ್ತು. ಆದರೆ ವೈರಿಗಳ ದಾಳಿಯಲ್ಲಿ ಅವರು ಹತರಾಗಿರುವುದರಿಂದ ಹಾಗೂ ಇರಾನ್‌ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣ ವಾಗಿರುವುದರಿಂದ ಶಾಶ್ವತ ಸರ್ವೋಚ್ಚ ಧಾರ್ಮಿಕ ನೇತಾರನನ್ನು ಆಯ್ಕೆ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಇಂಪ್ಯಾಕ್ಟ್ ಮಸೂದ್ ಪೆಜೆಶ್ಕಿಯಾನ್ ಸರ್ಕಾರ ಖಮೇನಿ ಅವರ ನಿಧನಕ್ಕಾಗಿ ನಲವತ್ತು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಈ ೪೦ ದಿನಗಳ ಒಳಗೆ ಹೊಸ ನಾಯಕ ಆಯ್ಕೆ ಯಾಗಬೇಕು.  ಸರ್ವೋಚ್ಚ ನಾಯಕನಾಗಿ ಖಮೇನಿ ಅವರ ಪುತ್ರ (ಆತ ಬದುಕಿ ಉಳಿದಿದ್ದರೆ)ಆಗಬಹುದು, ಇಲ್ಲವೇ ಮೊದಲ ಧಾರ್ಮಿಕ ನೇತಾರ ಖಮೇನಿ ಅವರ ಮೊಮ್ಮಗ ಆಗಬಹುದು ಎನ್ನುವ ಸೂಚನೆಗಳಿವೆ. ಆದರೆ, ಅದಕ್ಕೆ ಅಮೆರಿಕ ಮತ್ತು ಇಸ್ರೇಲ್ ಅವಕಾಶ ಕೊಡುತ್ತವಾ? ಅವುಗಳ ಗುರಿ ಕೇವಲ ಇರಾನ್‌ನ ಅಣ್ವಸ ಮತ್ತು ಕ್ಷಿಪಣಿ ಬಯಕೆಯನ್ನು ಹೊಸಕಿ ಹಾಕುವುದು ಮಾತ್ರವಲ್ಲ, ಇರಾನ್‌ನಲ್ಲಿ ಸರ್ಕಾರ ಬದಲಾವಣೆ ಆದರೆ ಮಾತ್ರ ಆ ದೇಶ ಜಾಗತಿಕ ಶಾಂತಿಗೆ ಸಹಕಾರಿಯಾಗುವಂತೆ ಮಾಡಬಹುದು ಎಂದು ಟ್ರಂಪ್ ಸರ್ಕಾರ ಹಾಗೂ ನೆತನ್ಯಾಹು ಸರ್ಕಾರಗಳೆರಡೂ ನಂಬಿವೆ.

ಹೀಗಾಗಿ ಇರಾನ್‌ಗೆ ಹೊಸ ಸರ್ವೋಚ್ಚ ನಾಯಕ ಸಿಗುತ್ತಾರೋ, ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ. ಬಹುಶಃ ಸಿಗುವುದಕ್ಕೂ ಮೊದಲೇ ಮೊದಲೇ ಈ ಸರ್ಕಾರವೇ ಪತನವಾಗಲೂಬಹುದು.

(ಲೇಖಕರು ಅಂತಾರಾಷ್ಟ್ರೀಯ ವ್ಯವಹಾರಗಳ ವಿಷಯ ತಜ್ಞರು)

” ಇರಾನ್ ಪ್ರತಿಯಾಗಿ ಇಸ್ರೇಲ್ ಮೇಲಷ್ಟೇ ಅಲ್ಲ, ಪಶ್ಚಿಮ ಏಷ್ಯಾದ ಇರಾಕ್, ಕುವೈತ್, ಸೌದಿ ಅರೆಬಿಯಾ, ಬಹರೇನ್, ಕತಾರ್, ಯುಎಇ, ಒಮನ್ ದೇಶಗಲ್ಲಿರುವ ಅಮೆರಿಕದ ವಾಯು ನೆಲೆ, ಸೇನಾ ನೆಲೆ, ನೌಕಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ತನ್ನ ಸರ್ವೋಚ್ಚ ನಾಯಕನನ್ನು ಕಳೆದುಕೊಂಡ ಇರಾನ್ ಈ ಸನ್ನಿವೇಶದಲ್ಲಿ ಇನ್ನೆಷ್ಟು ಕಾಲ ಯುದ್ಧ ಮುಂದುವರಿಸಬಹುದು? ಯುದ್ಧ ಯಾವ ರೀತಿ ಸಾಗುತ್ತಿದೆ? ಯುದ್ಧದ ಅಂತ್ಯ ಹೇಗಾಗಬಹುದು? ಎಂಬುದು ನಮ್ಮೆಲ್ಲರ ಕುತೂಹಲ ಕೆರಳಿಸಿರುವ ವಿಷಯ.”

 

 

ಆಂದೋಲನ ಡೆಸ್ಕ್

Recent Posts

ವೈಯಕ್ತಿಕ ದ್ವೇಷ: ಕಾರ್ಮಿಕನನ್ನು ಕೊಲೆಗೈಯ್ದು ಶರಣಾದ ಆರೋಪಿ

ಚೆಟ್ಟಳ್ಳಿ: ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕನೊಬ್ಬ ಮತ್ತೊಬ್ಬ ಕಾರ್ಮಿಕನನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ…

7 hours ago

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಈಗ ರಾಜ್ಯಸಭೆ ಅಭ್ಯರ್ಥಿ

ನವದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ 9 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಅವರು ಬಿಹಾರದಿಂದ…

7 hours ago

ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ವಿಡಿಯೋ ಕಾಲ್‌ ಮಾಡಿ ಧೈರ್ಯ ಹೇಳಿದ ವಿಜಯೇಂದ್ರ

ಬೆಂಗಳೂರು: ಅಮೇರಿಕಾ, ಇಸ್ರೇಲ್‌-ಇರಾನ್‌ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದುಬೈನಲ್ಲಿ ಸಿಲುಕಿ ಆತಂಕದಲ್ಲಿರುವ ಕನ್ನಡಿಗರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ…

7 hours ago

ಬೂದಬಾಳು ಗ್ರಾಮದ ಕೆರೆಗೆ ಬಾಗಿನ ಸಮರ್ಪಿಸಿದ ಶಾಸಕ ಎಂ.ಆರ್.ಮಂಜುನಾಥ್

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಬೂದಬಾಳು ಕೆರೆಗೆ ಕಾವೇರಿ ನದಿ ಮೂಲದಿಂದ…

7 hours ago

ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪ್ರತಿಯೊಬ್ಬ ರೈತರಿಗೂ ದೊರಕಿಸಿ: ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಷೇರುದಾರರು ನಿಮ್ಮ ಮೇಲೆ ವಿಶ್ವಾಸವಿಟ್ಟು ಕೃಷಿ ಪತ್ತಿನ ಸಹಕಾರ ಸಂಘದ…

8 hours ago

ಹಾರ್ಮುಜ್‌ ಜನಸಂಧಿಯನ್ನು ಮುಚ್ಚಿದ ಇರಾನ್: ತೈಲ ಬೆಲೆಯಲ್ಲಿ ಭಾರೀ ಏರಿಕೆ

ಟೆಹರಾನ್:‌ ಅಮೇರಿಕಾ ಹಾಗೂ ಇಸ್ರೇಲ್‌ ದೇಶಗಳು ಇರಾನ್‌ ಜೊತೆ ನಡೆಸುತ್ತಿರುವ ಯುದ್ಧವು ಇದೀಗ ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಮಾರ್ಗಗಳಲ್ಲಿ…

8 hours ago