ಮಂಜು ಕೋಟೆ
ಏಳು ವರ್ಷಗಳ ಕಾಲ ಜನಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಿದ ಪುರಸಭೆ ಸದಸ್ಯರು
ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ೨೩ ಚುನಾಯಿತ ಪ್ರತಿನಿಧಿಗಳ ಐದು ವರ್ಷಗಳ ಆಡಳಿತ ಅವಧಿ ಶನಿವಾರ ಮುಕ್ತಾಯಗೊಂಡಿತು.
ಏಳು ವರ್ಷಗಳ ಹಿಂದೆ ಪುರಸಭೆ ವ್ಯಾಪ್ತಿಯ ೨೩ ವಾರ್ಡುಗಳಲ್ಲಿ ಕಾಂಗ್ರೆಸ್,ಜಾ.ದಳ, ಬಿಜೆಪಿ, ಬಿಎಸ್ಪಿ, ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿ ೨೩ ಮಂದಿಪುರಸಭೆಯ ಸದಸ್ಯರುಗಳಾಗಿ ಆಯ್ಕೆಯಾಗಿದ್ದರು.
ಅಂದಿನಿಂದ ಎರಡು ವರ್ಷಗಳ ಕಾಲ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿಯನ್ನು ಸರ್ಕಾರ ನಾನಾ ಕಾರಣಗಳಿಂದಾಗಿ ಪ್ರಕಟಿಸಿರಲಿಲ್ಲ. ಐದು ವರ್ಷಗಳ ಹಿಂದೆ ಪ್ರಕಟಿಸಿದ್ದಮೀಸಲಾತಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಅತಿ ಹೆಚ್ಚು ಇದ್ದರೂ ಎಸ್‌ಟಿ ಮಹಿಳೆ ಮೀಸಲಾತಿ ಅಭ್ಯರ್ಥಿಜಾ.ದಳದಲ್ಲಿ ಮಾತ್ರ ಇದ್ದುದ್ದರಿಂದ ಶಿವಮ್ಮ ಚಾಕಹಳ್ಳಿ ಕೃಷ್ಣ, ಸರೋಜಮ್ಮ ಸೂರಿ, ಅನಿತಾ ನಿಂಗನಾಯಕ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಗೀತ ಗಿರಿಗೌಡ, ಆಸಿಫ್ ಇಕ್ಬಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನರಸಿಂಹಮೂರ್ತಿ,ಐಡಿಯಾ ವೆಂಕಟೇಶ್, ಮಧುಕುಮಾರ್ ಅವರು ಕಾರ್ಯನಿರ್ವಹಿಸಿದ್ದಾರೆ.
ಪುರಸಭೆ ವ್ಯಾಪ್ತಿಯು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಸಮಸ್ಯೆಗಳು ಹೆಚ್ಚಾಗಿವೆ. ಕೆಲಸ ನಿರ್ವಹಿಸಿದ ಸದಸ್ಯರು ಪುರಸಭೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸಿದರೂ ಕೆಲವೊಂದು ಕೆಲಸ ಕಾರ್ಯಗಳನ್ನು ಮಾತ್ರ ಮಾಡಲು ಸಾಧ್ಯವಾಗಿದೆ. ಕೆಲವರು ಸಕ್ರಿಯವಾಗಿ ಕೆಲಸ ನಿರ್ವಹಿಸಿದರೆ ಮತ್ತೆ ಕೆಲವರು ಜನಸಾಮಾನ್ಯರ ಮತ್ತು ವಾರ್ಡ್‌ಗಳ ಸೌಕರ್ಯಗಳಕುರಿತು ಚಿಂತನೆ ಮಾಡಲಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸದಸ್ಯರುಗಳ ಅವಧಿ ಪೂರ್ಣ ಗೊಂಡಿರುವುದರಿಂದ ಮತ್ತೆ ಚುನಾವಣೆಯಲ್ಲಿ ಕೆಲವರು ಸ್ಪರ್ಧಿಸಲು ಮುಂದಾಗಿದ್ದರೆ, ಬಹುತೇಕ ಹೊಸ ಮುಖಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಆಶಾಭಾವನೆಯನ್ನು ಇಟ್ಟುಕೊಂಡಿದ್ದಾರೆ.
೨೩ ಜನ ಸದಸ್ಯರ ಕಾರ್ಯವೈಖರಿಯನ್ನು ಕಂಡಿರುವ ಸಾರ್ವಜನಿಕರು, ಮುಂದಿನ ದಿನಗಳಲ್ಲಿ ವಾರ್ಡಿಗೆಸೂಕ್ತವಾದ ಸದಸ್ಯರು ಯಾರು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಲೋಚನೆ ನಡೆಸುತ್ತಿದ್ದಾರೆ. ೭ ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಾಗಿ ಕೆಲಸ ನಿರ್ವಹಿಸಿದ ಏಕೈಕ ಪುರಸಭಾ ಸದಸ್ಯರುಗಳೆಂಬ ಹೆಗ್ಗಳಿಕೆ ಕೋಟೆ ಪುರಸಭೆ ಸದಸ್ಯರದ್ದಾಗಿದೆ.
” ಪುರಸಭಾ ಸದಸ್ಯರ ಅವಧಿ ಪೂರ್ಣಗೊಂಡಿದೆ. ಜಿಲ್ಲಾಧಿಕಾರಿಗಳು ಸರ್ಕಾರದ ನಿರ್ದೇಶನದಂತೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಲಿದ್ದಾರೆ. ಎಂದಿನಂತೆ ಎಲ್ಲಾ ಕೆಲಸ ಕಾರ್ಯಗಳು ಸಹ ಅವರ ಮುಖಾಂತರ ನಡೆಯಲಿವೆ.”
-ಪ್ರಿಯದರ್ಶಿನಿ, ಪುರಸಭೆ ಮತ್ತು ಪಪಂಗಳ ಯೋಜನಾ ನಿರ್ದೇಶಕರು
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…