Andolana originals

ಪಪಂ ಆದ ತಲಕಾಡು; ಬಹು ವರ್ಷದ ಕನಸು ನನಸು

ತಿ. ನರಸೀಪುರ: ತಾಲ್ಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರವಾಸೋದ್ಯಮ ಕ್ಷೇತ್ರವಾದ ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿದ್ದು, ಇಲ್ಲಿನ ಜನರ ಬಹಳ ವರ್ಷಗಳ ಕನಸು ಸಾಕಾರಗೊಂಡಿದೆ.

೨ ದಶಕಗಳಿಂದಲೂ ತಲಕಾಡನ್ನು ಪಟ್ಟಣ ಪಂಚಾಯಿತಿಯನ್ನಾಗಿ ಘೋಷಣೆ ಮಾಡಬೇಕೆಂದು ನಿರಂತರ ಹೋರಾಟ ಹಾಗೂ ಪ್ರಯತ್ನಗಳು ನಡೆಯುತ್ತಿದ್ದವು. ಗ್ರಾಪಂ ಆಗಿದ್ದ ತಲಕಾಡಿಗೆ ಬಿ. ಶೆಟ್ಟಹಳ್ಳಿ ಗ್ರಾಪಂನ ಟಿ. ಬೆಟ್ಟಹಳ್ಳಿ ಮತ್ತು ಕುರುಬಾಳ ಹುಂಡಿ ಗ್ರಾಮಗಳನ್ನು ಸೇರ್ಪಡೆಗೊಳಿಸಿ ತಲಕಾಡು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆ ಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ತಲಕಾಡಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸೌಲಭ್ಯ ವಿಸ್ತರಣೆಗಾಗಿ ಪಟ್ಟಣ ಪಂಚಾಯಿತಿ ಮಾಡಬೇಕೆಂಬ ಬೇಡಿಕೆ ಇತ್ತು. ತಲಕಾಡು ಮತ್ತು ವಡೆಯಾಂಡಹಳ್ಳಿ ಸೇರಿ ೯ ವಾರ್ಡ್‌ಗಳ ಗ್ರಾಮ ಪಂಚಾಯಿತಿಯಾಗಿದ್ದ ತಲಕಾಡನ್ನು ಪಪಂ ಆಗಿ ಮೇಲ್ದರ್ಜೆಗೇರಿಸಲು ಹಲವಾರು ಪ್ರಯತ್ನ ನಡೆದಿತ್ತು. ಜನಸಂಖ್ಯೆಯ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳಿಂದ ಪ್ರಸ್ತಾವನೆ ಸರ್ಕಾರದ ಮಟ್ಟ ತಲುಪದೇ ವಾಪಸ್ ಆಗಿತ್ತು. ಈಗ ಬಿ. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಕುರುಬಾಳ ಹುಂಡಿ ಗ್ರಾಮ ಹಾಗೂ ಟಿ. ಬೆಟ್ಟಹಳ್ಳಿ ಗ್ರಾಮವನ್ನು ಸೇರಿಸಿ ಜನಸಂಖ್ಯೆಯ ಸಮಸ್ಯೆಯನ್ನು ನಿವಾರಿಸಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಪೂರಕವಾದ ಎಲ್ಲಾ ದಾಖಲೆಗಳನ್ನು ಒದಗಿಸಿದ ಫಲವಾಗಿ ಹಾಗೂ ಇಲಾಖೆಗಳ ಸಹಕಾರ ಸಚಿವರ ಹಾಗೂ ಸಂಸದರ ಒತ್ತಾಸೆ ಮತ್ತು ಗ್ರಾಮ ಪಂಚಾಯಿತಿ ಆಡಳಿತದ ಸಹಕಾರದಿಂದಾಗಿ ಪ್ರಸ್ತಾವನೆಗೆ ಅನುಮೋದನೆ ದೊರಕಿದೆ.

ತಲಕಾಡು ಪಂಚಲಿಂಗ ದರ್ಶನ ಮತ್ತು ಕಾವೇರಿ ನಿಸರ್ಗಧಾಮ ಇಲ್ಲಿನ ಪ್ರಮುಖ ಪ್ರವಾಸಿ ತಾಣವಾ ಗಿದ್ದು, ಹೆಚ್ಚು ಪ್ರವಾಸಿಗರು ಆಗಮಿಸುವುದರಿಂದ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ಸ್ಥಳೀಯ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಹಾಗೂ ಸಂಸದ ಸುನಿಲ್ ಬೋಸ್‌ರವರ ಕಾಳಜಿಯಿಂದ ಪಟ್ಟಣ ಪಂಚಾಯಿತಿ ಕನಸು ಕೊನೆಗೂ ಕೈಗೂಡಿದೆ.

ತಲಕಾಡು ಪಟ್ಟಣ ಪಂಚಾಯಿತಿ ಆಗಬೇಕು ಎಂಬ ಜನರ ಕೂಗಿಗೆ ಕ್ಷೇತ್ರದ ಶಾಸಕ, ಸಚಿವ ಡಾ. ಎಚ್. ಸಿ. ಮಹದೇವಪ್ಪ ಹಾಗೂ ಸಂಸದ ಸುನಿಲ್ ಬೋಸ್ ಸ್ಪಂದಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಲಕಾಡು ಭಾಗದಲ್ಲಿ ಮೊಟಕುಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಂಡ ಸಚಿವರು ಪಟ್ಟಣ ಪಂಚಾಯಿತಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದ್ದಾರೆ. ಕಳೆದ ವರ್ಷವಷ್ಟೇ ಸಂಸದ ಸುನಿಲ್ ಬೋಸ್ ಅವರು ಪಟ್ಟಣ ಪಂಚಾಯಿತಿಯಾಗಿ ತಲಕಾಡು ಗ್ರಾಪಂ ಅನ್ನು ಮೇಲ್ದರ್ಜೆಗೇರಿಸುವ ಸುಳಿವು ನೀಡಿದ್ದರು. ಈ ನಿಟ್ಟಿನಲ್ಲಿ ಆಡಳಿತಾತ್ಮಕ ಕ್ರಮಗಳನ್ನು ಕಾರ್ಯಗತಗೊಳಿಸಿದ್ದಾರೆ.

ತಲಕಾಡು ಗ್ರಾಪಂ ಪಪಂ ಆಗಿ ಮೇಲ್ದರ್ಜೆಗೇರ ಬೇಕೆಂಬುದು ಇಲ್ಲಿನ ಜನರ ೨ ದಶಕಗಳ ಕನಸಾಗಿತ್ತು. ಹಲವು ಬಾರಿ ಸಲ್ಲಿಸಿದ ಪ್ರಸ್ತಾವನೆ ವಾಪಸ್ ಆಗಿತ್ತು. ಈಗ ಪ್ರವಾಸಿ ಕೇಂದ್ರವಾದ ತಲಕಾಡು ಅಭಿ ವೃದ್ಧಿ ಮತ್ತು ಆಡಳಿತ ದೃಷ್ಟಿಯಿಂದ ಪಪಂ ಆಗಿ ಘೋಷಣೆಯಾಗುವ ಮೂಲಕ ನನಸಾಗಿದೆ. -ಶೋಭಾ ಮಲ್ಲಣ್ಣಿ , ಅಧ್ಯಕ್ಷೆ, ತಲಕಾಡು ಗ್ರಾಪಂ

ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ತಲಕಾಡಿನ ಅಭಿವೃದ್ಧಿಯ ದೃಷ್ಟಿಯಿಂದ ಸಚಿವ ಡಾ. ಎಚ್. ಸಿ. ಮಹದೇವಪ್ಪ ಹಾಗೂ ಸಂಸದ ಸುನಿಲ್ ಬೋಸ್, ತಹಸಿಲ್ದಾರ್ ಸುರೇಶಾಚಾರ್, ಪಿಡಿಒ ಮಾದೇಶ್ ಮತ್ತು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸೇರಿ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಅಗತ್ಯ ದಾಖಲೆಗಳನ್ನು ಒದಗಿಸಿ, ಈ ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ದೊರೆತಿರುವುದು ಸಂತಸ ಮೂಡಿಸಿದೆ.

-ನರಸಿಂಹ ಮಾದನಾಯಕ, ತಾ. ಪಂ. ಮಾಜಿ ಸದಸ್ಯ

ತಲಕಾಡು ತಲಕಾಡು ಗ್ರಾಪಂ ಅನ್ನು ಪಪಂ ಮಾಡಲು ಹೆಚ್ಚುವರಿಯಾಗಿ ಟಿ. ಬೆಟ್ಟಹಳ್ಳಿ ಹಾಗೂ ಕುರುಬಾಳನಹುಂಡಿ ಗ್ರಾಮಗಳನ್ನು ಸೇರ್ಪಡೆ ಮಾಡಲು ಬಿ. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದಾಗಲೇ ನಿರ್ಣಯಿಸಲಾಗಿತ್ತು. ಸರ್ಕಾರದ ಮಟ್ಟದಲ್ಲಿ ಸಚಿವರು ಹಾಗೂ ಸಂಸದ ಸುನಿಲ್ ಬೋಸ್‌ರವರು ಗಮನ ಹರಿಸಿದ್ದರಿಂದ ಸಚಿವ ಸಂಪುಟದಲ್ಲಿ ಘೋಷಣೆಯಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ನಗರ ಅಭಿವೃದ್ಧಿ ಅಧಿಕಾರಿಗಳ ಸಹಕಾರವೂ ಶ್ಲಾಘನೀಯ. -ಟಿ. ಬೆಟ್ಟಹಳ್ಳಿ ಎಂ. ನಾಗರಾಜು, ಅಧ್ಯಕ್ಷ ಧರ್ಮದರ್ಶಿ ಮಂಡಳಿ,

ಶ್ರೀ ವೈದ್ಯನಾಥೇಶ್ವರ ಸಮೂಹ ದೇವಾಲಯಗಳು, ತಲಕಾಡು ತಲಕಾಡು ಗ್ರಾಪಂಯನ್ನು ಪಪಂ ಮಾಡಬೇಕೆಂದು ೨೦೦೫ರಲ್ಲಿ ಮೊದಲ ಪ್ರಸ್ತಾಪವನ್ನು ಸಲ್ಲಿಸಲಾಯಿತು. ಆಡಳಿತಾತ್ಮಕ ಸಮಸ್ಯೆಯಿಂದ ನಾಲ್ಕು ಬಾರಿ ಪ್ರಯತ್ನ ವಿಫಲವಾಯಿತು. ಸಚಿವ ಎಚ್. ಸಿ. ಮಹದೇವಪ್ಪ ಅವರ ತಲಕಾಡು ಮೇಲಿನ ವಿಶೇಷ ಕಾಳಜಿ ಮತ್ತು ಸಂಸದ ಸುನಿಲ್ ಬೋಸ್ ಅವರ ಭರವಸೆಯಂತೆ ಈಗಿನ ಸರ್ಕಾರದ ಅವಽಯಲ್ಲಿ ಆಡಳಿತಾತ್ಮಕ ಸಹಕಾರ ನೀಡಿದ ಅಧಿಕಾರಿಗಳ ನೆರವಿನಿಂದ ಪಪಂ ಆಗಿ ಘೋಷಣೆಯಾಗಿದೆ. ಮುಂದಿನ ದಿನಗಳಲ್ಲಿ ಸಚಿವರು ಹಾಗೂ ಸಂಸದರು ತಲಕಾಡು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಲಿದ್ದಾರೆ. -ಸುಂದರ ನಾಯಕ, ಗ್ರಾ. ಪಂ. ಸದಸ್ಯ, ತಲಕಾಡು

-ಎಂ. ನಾರಾಯಣ

ಆಂದೋಲನ ಡೆಸ್ಕ್

Recent Posts

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

7 hours ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

7 hours ago

ಭೀಕರ ಸರಣಿ ಅಪಘಾತ : ಇಬ್ಬರು ಸಾವು, 20ಕ್ಕೂ ಹೆಚ್ಚು ವಾಹನ ಹಾನಿ

ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…

8 hours ago

ವಿದ್ಯಾವಂತರಲ್ಲಿ ಹೆಚ್ಚುತ್ತಿರುವ ಮೌಢ್ಯತೆ, ಕಂದಾಚಾರ : ಸಿಎಂ ವಿಷಾದ

ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…

8 hours ago

ವಸ್ತುಪ್ರದರ್ಶನದಲ್ಲಿ ಜನಾಕರ್ಷಿಸಿದ ಚಿತ್ರ ಸಂತೆ

ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…

8 hours ago

ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕನಿಗೆ ಲುಕ್‌ಔಟ್‌ ನೋಟಿಸ್‌ ಜಾರಿ

ಬೆಂಗಳೂರು : ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…

8 hours ago