ನಂಜನಗೂಡು: ಮಹಾತ್ಮ ಗಾಂಧೀಯವರ ಸರ್ವೋದಯದ ದಿನದ ಅಂಗವಾಗಿ ಸ್ವಾತಂತ್ರ್ಯಹೋರಾಟಗಾರ ತಗಡೂರು ಗಾಂಧಿ ಎಂದೇ ಖ್ಯಾತರಾಗಿದ್ದ ರಾಮಚಂದ್ರರಾಯರಿಂದ ಸ್ಥಾಪಿತವಾದ ತಗಡೂರು ಖಾದಿ ಕೇಂದ್ರದಲ್ಲಿ ಗಾಂಧಿ, ಖಾದಿ, ಅಹಿಂಸೆಗಳು ಮಾರ್ದನಿಸಿದವು.
ಶತಮಾನಗಳ ಹಿಂದೆ ಸ್ಥಾಪಿತವಾದ ಈ ಖಾದಿ ಕೇಂದ್ರಕ್ಕೆ ಪುನಶ್ಚೇತನ ನೀಡಲು ಹಿರಿಯರಂಗ ಕರ್ಮಿ ಹೆಗ್ಗೂಡು ಪ್ರಸನ್ನ ನೇತೃತ್ವದಲ್ಲಿ ಗಾಂಧಿವಾದಿಗಳು ರಾಮಚಂದ್ರ ರಾಯರ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ನಂತರ ನಡೆದ ಸಭೆಯಲ್ಲಿ ಅವಸಾನದಲ್ಲಿದ್ದ ಈ ಘಟಕದ ಪುನರುಜ್ಜೀವನದ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಹಿರಿಯ ಗಾಂಧಿವಾದಿ ಸಂತೋಷ ಕೌಲಗಿ ಅವರು, ದಶಕಗಳ ಹಿಂದೆ ಬದನವಾಳು ಖಾದಿ ಕೇಂದ್ರದ ಹಾಗೂ ತಗಡೂರು ಖಾದಿ ಕೇಂದ್ರಗಳ ಪುನಶ್ಚೇತನಕ್ಕೆ ಪ್ರಯತ್ನ ಪ್ರಾರಂಭವಾಗಿತ್ತು. ಈ ಎರಡೂ ಗ್ರಾಮಗಳು ರಾಜ್ಯ ಸೇರಿದಂತೆ ದೇಶವ್ಯಾಪಿ ಪ್ರಚಾರ ಪಡೆದವು. ಇದಕ್ಕೆ ಹಲ ವಾರು ಪ್ರಗತಿಪರರು, ಸಾಹಿತಿಗಳು, ಚಿಂತಕರು, ಕಲಾವಿದರು ಕೈಜೋಡಿಸಿದ್ದರು. ನಾಲ್ಕು ದಿಕ್ಕುಗಳಿಂದ ಬದನವಾಳಿಗೆ ಪಾದಯಾತ್ರೆ ಬಂದು ಸುಸ್ಥಿರ ಬದುಕಿಗೆ ನಾಂದಿ ಹಾಡಿದವು ಎಂದರು.
ತಗಡೂರು ಎಂದರೆ ರಾಮಚಂದ್ರರಾಯರು, ಟಿ.ಎಸ್.ಸುಬ್ಬಣ್ಣ, ಕೇಶವ್‌ರಾವ್ ಹಾಗೂ ಸತ್ಯ ನಾರಾಯಣ ಅವರ ನೆನಪಾಗುತ್ತದೆ ಎಂದ ಕೌಲಗಿ, ಈ ಖಾದಿ ಕೇಂದ್ರವು ಜನರಿಂದ ನಡೆಯುತ್ತಿ ದ್ದಾಗ ಸರಿ ಇತ್ತು. ಸರ್ಕಾರದ ಸುಪರ್ದಿಗೆ ಸೇರಿದಾಗ ಜನರಿಂದ ದೂರವಾಗಿ ಇಂದು ಈ ದುಸ್ಥಿತಿಗೆ ತಲುಪಿದೆ ಎಂದರು.
ದೀನಬಂಧು ಸಂಸ್ಥೆಯ ಸಂಸ್ಥಾಪಕ ಜಿ.ಎಸ್. ಜಯದೇವ್ ಮಾತನಾಡಿ, ಮಹಾತ್ಮ ಗಾಂಽಯವರು ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಆಶಿಸಿದ್ದರು. ಗ್ರಾಮಿಣಮಹಿಳೆಯರು ಉತ್ಪಾದಿಸುವ ಖಾದಿ ಬಟ್ಟೆಗಳನ್ನು ಪಟ್ಟಣದಲ್ಲಿ ಕೊಂಡುಕೊಳ್ಳುವ ಜನರಿದ್ದಾರೆ. ಅವರಿಗೆ ತಲುಪಿಸುವ ವ್ಯವಸ್ಥೆಯಾಗಬೇಕು.ಕೊಳ್ಳುವವರ ಸಹಭಾಗಿತ್ವ ಕೂಡ ಮುಖ್ಯ ಎಂದರು. ಸರ್ಕಾರದಿಂದ ಅನುದಾನದ ಹಣ ಬರುತ್ತದೆ, ಖರ್ಚಾಗುತ್ತದೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯ ಎಂದು ಅವರು ಎಚ್ಚರಿಸಿದರು.
‘ಆಂದೋಲನ’ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಗರದ ಮಹಿಳೆಯರು, ಗ್ರಾಮೀಣ ಮಹಿಳೆಯರು ಎಂಬ ಭೇಧವಿಲ್ಲದೆ ಎಲ್ಲರೂ ಅವರಹಕ್ಕಿಗಾಗಿ ಹೋರಾಟ ನಡೆಸಬೇಕಾಗಿದೆ. ಜನತೆ ಇಂದು ಖಾದಿ ಬಳಕೆಯ ಬಗ್ಗೆ ಹೆಚ್ಚು ಆಸಕ್ತಿವಹಿಸುತ್ತಿದ್ದಾರೆ. ನಗರದ ಜನರ ಬೇಡಿಕೆಗೆ ಅನು ಗುಣವಾಗಿ ಖಾದಿ ಪೂರೈಕೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಜನರಿಗೆ ಯಾವ ಖಾದಿ ಕೊಂಡುಕೊಳ್ಳಬೇಕು ಎಂಬ ಅರಿವಿಲ್ಲ. ವಿದ್ಯುತ್ ಮಗ್ಗಗಳಿಂದ ತಯಾರಾದ ಖಾದಿ ಖರೀದಿಸುತ್ತಿದ್ದಾರೆ. ಆದರೆ ಅವರಿಗೆ ಕೈ ಮಗ್ಗದಿಂದ ನೇಯ್ದ ಖಾದಿ ವಸಗಳ ಅನುಕೂಲತೆಯ ಅರಿವು ಮೂಡಿಸಿ ಅವರನ್ನು ಕೈಮಗ್ಗದ ಖಾದಿಯತ್ತ ಆಕರ್ಷಿಸಿ, ಅವರು ಖಾದಿ ಖರೀದಿಸುವಂತೆ ಮಾಡುವ ಮಾರುಕಟ್ಟೆಯ ಅಗತ್ಯವಿದೆ. ಆ ಮಾರು ಕಟ್ಟೆಯ ಮೂಲಕ ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬಿಗಳಾಗುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮಾತನಾಡಿ, ಗಾಂಧೀಜಿ ಹಾಕಿಕೊಟ್ಟ ಮಾರ್ಗವಾದ ಶಾಂತಿ, ಅಹಿಂಸೆ, ದುಡಿಯುವ ಕೈಗಳಿಗೆ ಕೆಲಸ ದೊರೆತಾಗ ಮಾತ್ರ ಅದಕ್ಕೊಂದು ಬೆಲೆ ಬರುತ್ತದೆ. ಪ್ರಸನ್ನ ಅವರು ಸವಾಲು ಎದುರಿಸುವುದಲ್ಲದೆ ಸವಾಲು ಒಡ್ಡುವುದರಲ್ಲಿಯೂ ಗಟ್ಟಿಗರು ಎಂದರು.
ಸಾಹಿತಿ ಸೋಮಶೇಖರ್ ಹನಗವಾಡಿ ಮಾತನಾಡಿ, ರಾಮಚಂದ್ರರಾಯರು ಮೂಲತಃ ತಗ ಡೂರಿನವರಲ್ಲ. ಅವರು ಪಕ್ಕದ ತಾಲ್ಲೂಕಿನ ಹನುಮನಪುರದವರು ಎಂದು ತಿಳಿಸಿ, ರಾಮಚಂದ್ರ ರಾಯರ ಬದುಕು, ಸಾಧನೆಗಳ ಬಗ್ಗೆ ವಿವರಿಸಿದರು. ವಿಜ್ಞಾನಿ, ಕೃಷಿಕ ಕುಮಾರ್ ಮಾತನಾಡಿ, ಸಾಮಾಜಿಕ ಹಿಂಸೆಗಿಂತ ಆರ್ಥಿಕ ಹಿಂಸೆ ಅಪಾಯಕಾರಿ. ಅದರಿಂದ ಮುಕ್ತವಾಗಲು ಗ್ರಾಮೀಣ ಸ್ವಾವಲಂಬಯೊಂದೇ ದಾರಿ ಎಂದರು.
ನೆದರ್‌ಲ್ಯಾಂಡ್‌ನ ಅನೂಖಾ ಮಾತನಾಡಿ, ಮಕ್ಕಳನ್ನು ಮೊಬೈಲ್‌ನಿಂದ ಖಾದಿಯತ್ತ ಆಕರ್ಷಿಸಬೇಕು ಎಂದರು. ರಂಗಕರ್ಮಿ ಪ್ರಸನ್ನ ಮಾತನಾಡಿ, ಪ್ರಜಾಪ್ರಭು ತ್ವದಲ್ಲಿ ಗ್ರಾಮ ಪಂಚಾಯಿತಿಯೇ ಸುಪ್ರೀಂ ಆಗಿದ್ದು, ಈ ಖಾದಿ ಕೇಂದ್ರದ ಅಭಿವೃದ್ಧಿ ಸೇರಿದಂತೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಯ ಕುರಿತಂತೆ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯ ಪತಿ ಬಸವರಾಜ ಮಾತನಾಡಿ, ಈಗಾಗಲೇ ಸಿಎಂಗೆ ಮನವಿ ಸಲ್ಲಿಸಲಾಗಿದೆ ಎಂದರು. ಮೋಹನ್‌ಕುಮಾರ್, ಉದ್ಯಮಿ ಅಮೃತ, ಮಹಾದೇವಪ್ಪ, ಅಭಿಲಾಷ್, ವಿದೇಶಿಗ ರಾದ ಅನೂಕ್, ಪ್ರೊ.ಶಿವಸ್ವಾಮಿ, ಗ್ರಾಪಂ ಸದಸ್ಯ ರಾದ ಮಹದೇವ ಸ್ವಾಮಿ, ಐದು ದಿನದಲ್ಲಿ ೨ ಲಕ್ಷ ರೂ. ಖಾದಿ ಮಾರಾಟ ಮಾಡಿದ ಮಹದೇವಪ್ಪ, ಮತ್ತಿತರರು ಭಾಗವಹಿಸಿದ್ದರು.
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಉದ್ಯಮಿ ಡಾ.ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಮರಣೋತ್ತರ…
ಬೆಂಗಳೂರು: ರಾಜ್ಯದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಇಂದು ವಿಧಾನಪರಿಷತ್ತಿನ ಅಧಿವೇಶನದ…
ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಳಿಕ…
ನಂಜನಗೂಡು: ಜಮೀನಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ರೈತ ದಂಪತಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಮಗು ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿರುವ…
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 21ನೇ ಘಟಿಕೋತ್ಸವದ ಸಂಭ್ರಮ ಮನೆಮಾಡಿದ್ದು, ಒಟ್ಟು 8 ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್…
ಬೆಂಗಳೂರು: ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಶಾಲೆಗೆ…