Andolana originals

ಅಳಿಸಿರುವ ಯುಎಚ್ಐಡಿ ಸಂಖ್ಯೆ; ಸಮೀಕ್ಷೆಗೆ ತೊಡಕು

ಪ್ರಸಾದ್ ಲಕ್ಕೂರು

ಮುಂದುವರಿದ ಆಪ್ ತಾಂತ್ರಿಕ ತೊಂದರೆ; ಗಣತಿದಾರರನ್ನು ಕಾಡುತ್ತಿರುವ ಸರ್ವರ್ ಬ್ಯುಸಿ 

ಚಾಮರಾಜನಗರ: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮನೆ ಮನೆಗಳಲ್ಲಿ ಅಂಟಿಸಿ ರುವ ಮನೆ ಸಂಖ್ಯೆಯು (ಯುಎಚ್‌ಐಡಿ- ಯುನಿಕ್ ಐಡೆಂಟಿಫಿಕೇಶನ್ ನಂಬರ್) ಕೆಲವು ಕಡೆ ಅಳಿಸಿ ಹೋಗಿದ್ದು, ಸರಿಯಾಗಿ ಸಮೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ.

ಇದರಿಂದಾಗಿ ಆಪ್‌ನಲ್ಲಿ ಯುಎಚ್‌ಐಡಿ ನಂಬರ್ ಬರುತ್ತಿಲ್ಲ. ಇದಲ್ಲದೆ ಯುಎಚ್‌ಐಡಿ ನಂಬರ್ ಲಭ್ಯವಿರುವ ಕಡೆ ಆಪ್ ತೆರೆದು ಸಮೀಕ್ಷೆ ಶುರು ಮಾಡಿದರೆ ಇದ್ದಕ್ಕಿದ್ದಂತೆ ಹ್ಯಾಂಗ್ ಆಗಿ ಸರ್ವರ್ ಬ್ಯುಸಿ ಎಂಬ ಉತ್ತರ ಬರುತ್ತಿದೆ. ಇದರಿಂದ ಜಿಲ್ಲಾದ್ಯಂತ ೫ನೇ ದಿನವೂ ಸಮೀಕ್ಷೆ ನಡೆಸಲು ಸಾಧ್ಯವಾಗದೆ ಗಣತಿದಾರರು ಮನೆಗೆ ವಾಪಸ್ ಹೋಗಿದ್ದಾರೆ.

ತಿಂಗಳ ಹಿಂದೆಯೇ ಯುಎಚ್‌ಐಡಿ ನಂಬರ್ ಇರುವ ಚೀಟಿಯನ್ನು ಪ್ರತಿಯೊಂದು ಮನೆ ಮನೆಗೂ ಅಂಟಿಸಲಾಗಿದೆ. ಆದರೆ. ಅಲ್ಲಿರುವ ಯುಎಚ್‌ಐಡಿ ನಂಬರ್ ಅಳಿಸಿ ಹೋಗಿದೆ. ಇದರಿಂದ ಸಮೀಕ್ಷೆಗೆ ತೊಂಡಕಾಗಿ ಪರಿಣಮಿಸಿದೆ.

ಇದನ್ನು ಓದಿ : ವ್ಯರ್ಥ ಪದಾರ್ಥಗಳ ಸಂಗ್ರಹಣೆ ಬ್ಯಾಂಕ್‌

ಹಾಗಾಗಿ ಆಪ್‌ನಲ್ಲಿ ಯುಎಚ್‌ಐಡಿ ಸಂಖ್ಯೆ ನಮೂದಿಸುವ ಅವಕಾಶವೇ ಸಿಗಲಿಲ್ಲ. ಬದಲಿಗೆ. ‘ಸಮೀಕ್ಷೆ ಮುಗಿದಿದೆ. ಹೊಸ ಸರ್ವೆ ಆರಂಭಿಸಿ’ ಎಂಬ ಅಡಿ ಸಾಲು ನೋಡಿ ಸಾಕಾಯಿತು ಎಂದು ಕೆಲವು ಸಮೀಕ್ಷಕರು ‘ಆಂದೋಲನ’ಕ್ಕೆ ತಿಳಿಸಿದರು.

ಯುಎಚ್‌ಐಡಿ ಸಂಖ್ಯೆ ಅಳಿಸಿ ಹೋಗಿದ್ದು ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಽಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ವಾಗಿಲ್ಲ. ತುರ್ತಾಗಿ ಸರಿಪಡಿಸಲಾಗುತ್ತದೆ ಎಂಬ ಉತ್ತರ ಬರುತ್ತಿದೆ ಎಂದು ಸಮೀಕ್ಷೆದಾರರು ತಿಳಿಸಿದ್ದಾg

‘ಆಫ್‌ಲೈನ್ ಸಮೀಕ್ಷೆಗೆ ಅವಕಾಶ ಕಲ್ಪಿಸಿ’: 

ಆನ್‌ಲೈನ್ ಸಮೀಕ್ಷೆಗೆ ಎದುರಾದ ತಾಂತ್ರಿಕ ತೊಂದರೆಗಳಿಂದ ಬೇಸತ್ತಿರುವ ಸಮೀಕ್ಷೆದಾರರು, ಆಫ್‌ಲೈನ್ ಸಮೀಕ್ಷೆ ನಡೆಸಲು ಅವಕಾಶ ನೀಡಬೇಕು. ಆಗ ಸರ್ವರ್ ಸಮಸ್ಯೆ ಇರುವುದಿಲ್ಲ; ಬೇಗ ಮನೆಗಳ ಸಮೀಕ್ಷೆ ನಡೆಸಲು ಸಾಧ್ಯ ಎಂದು ಗಣತಿದಾರರು ಹೇಳುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಅಚ್ಚುಕಟ್ಟಾಗಿ ಆಫ್‌ಲೈನ್ ಸಮೀಕ್ಷೆಗಳನ್ನು ನಡೆಸಿದ್ದೇವೆ. ಈಗಿನ ಆಪ್‌ನಿಂದ ಸಮಸ್ಯೆಯಾಗಿದೆ. ಸುಮ್ಮನೆ ಅಲೆದಾಡಬೇಕಿದೆ. ೫ ದಿನಗಳಾದರೂ ತಾಂತ್ರಿಕ ಸಮಸ್ಯೆಗಳು ಪರಿಹಾರವಾಗದೆ ಬೇಸತ್ತಿರುವ ಗಣತಿದಾರರು ಮೊದಲು ಆಪ್‌ನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು. ನೆಮ್ಮದಿಯಿಂದ ಸಮೀಕ್ಷೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮೇಲ್ವಿಚಾರಕರಲ್ಲಿ ಮನವಿ ಮಾಡುತ್ತಿದ್ದಾರೆ.

” ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಕ್ಷೇತ್ರಕ್ಕೆ ಭೇಟಿ ನೀಡಿ ಖುದ್ದು ಸಮೀಕ್ಷೆ ಕಾರ್ಯವನ್ನು ಮೊಬೈಲ್ ಆಪ್‌ನಲ್ಲಿ ಪರಿಶೀಲಿಸಿದ್ದೇನೆ. ಪ್ರಸ್ತುತ ತಾಂತ್ರಿಕ ಸಮಸ್ಯೆ ಪರಿಹರಿಸಲಾ ಗಿದೆ. ಯಾವುದೇ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದಲ್ಲಿ ಪರಿಹಾರಕ್ಕಾಗಿ ತಾಂತ್ರಿಕ ಪರಿಣತರನ್ನು ತಾಲ್ಲೂಕುವಾರು ನೇಮಕ ಗೊಳಿಸಲಾಗಿದೆ. ಮನೆಗಳಿಗೆ ಅಂಟಿಸಿರುವ ಯು ಎಚ್‌ಐಡಿ ಸಂಖ್ಯೆ ಅಳಿಸಿರುವುದು ಗಮನಕ್ಕೆ ಬಂದಿದೆ. ಆ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು.”

-ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ

ಆಂದೋಲನ ಡೆಸ್ಕ್

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

26 mins ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

41 mins ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

48 mins ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

51 mins ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

57 mins ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

1 hour ago