ಎಚ್.ಎಸ್.ದಿನೇಶ್ ಕುಮಾರ್
ರಸ್ತೆಗಳಲ್ಲಿ ದನಗಳ ಓಡಾಟ, ಪ್ರತಿನಿತ್ಯ ವಾಹನಗಳ ಸಂಚಾರಕ್ಕೆ ಅಡ್ಡಿ
ಮೈಸೂರು: ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಬಿಡಾಡಿ ದನಗಳ ಹಾವಳಿ ಮಿತಿ ಮೀರಿದೆ. ಜನಜಂಗುಳಿ, ವಾಹನ ಹೀಗೆ ಯಾವುದೇ ಪರಿವೆಯಿಲ್ಲದೆ ರಸ್ತೆಯಲ್ಲಿ ಓಡಾಡುವ ಹಸುಗಳಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ವಾಹನಗಳಿಗೆ ಹಸುಗಳು ಅಡ್ಡಿ ಬರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ದ್ವಿಚಕ್ರ ವಾಹನ ಸವಾರರರು ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದರೂ ನಗರ ಪಾಲಿಕೆ ಅಧಿಕಾರಿಗಳು ಕಂಡೂ ಕಾಣದಂತಿರುತ್ತಾರೆ.
ಪ್ರತಿನಿತ್ಯದ ಸಮಸ್ಯೆ: ಮಾಲೀಕನ ಮನೆಯಲ್ಲಿ ಮೇವು ತಿನ್ನುವ ಹಸುಗಳು ಬೆಳಿಗ್ಗೆ ೧೦ ಗಂಟೆಗೆ ರಸ್ತೆಗೆ ಬರುವ ಮೂಲಕ ‘ವಾಕಿಂಗ್’ ಆರಂಭಿಸುತ್ತವೆ. ಮೊದಲು ಪಾದಚಾರಿ ಮಾರ್ಗಗಳಲ್ಲಿ ದೊರಕುವ ಹೂವು, ತರಕಾರಿ ಮುಂತಾದ ತಾಜ್ಯಗಳನ್ನು ಮೇಯಲು ಆರಂಭಿಸುತ್ತವೆ.
ನಂತರ ಹಸುಗಳು ವಿಶ್ರಾಂತಿಗಾಗಿ ಆಶ್ರಯಿಸುವುದು ರಸ್ತೆಗಳನ್ನೇ. ಹೀಗೆ ರಸ್ತೆಯಲ್ಲಿ ಮೈ ಚಾಚಿಕೊಂಡು ಮಲಗುವ ಹಾಗೂ ಓಡಾಡುವ ಹಸುಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ರಸ್ತೆಯಲ್ಲಿ ಮಲಗಿರುವ ಹಸುಗಳನ್ನು ಓಡಿಸಲು ಕೂಡ ಜನರು ಭಯಪಡುತ್ತಾರೆ.
ನಗರದ ಅಗ್ರಹಾರ, ಸಿದ್ದಪ್ಪ ವೃತ್ತ, ನಂಜುಮಳಿಗೆ, ಧನ್ವಂತ್ರಿ ರಸ್ತೆ, ಇಟ್ಟಿಗೆಗೂಡು, ಎನ್.ಆರ್.ಮೊಹಲ್ಲಾ, ಮೇಟಗಳ್ಳಿ, ಹೆಬ್ಬಾಳು, ಜಯನಗರ, ಸಿಲ್ಕ್ ಫ್ಯಾಕ್ಟರಿ, ವಿದ್ಯಾರಣ್ಯಪುರಂ ಹೀಗೆ ನಗರದ ಅನೇಕ ಬಡಾವಣೆಗಳ ಪ್ರಮುಖ ರಸ್ತೆಗಳಲ್ಲಿ ಹಸುಗಳು ಓಡಾಡುವ ಮೂಲಕ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದರೂ ಹಾವಳಿಯನ್ನು ತಡೆಗಟ್ಟಲು ನಗರಪಾಲಿಕೆ ಅಽಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ.
ನಗರ ವ್ಯಾಪ್ತಿಯಲ್ಲಿ ಹಸುಗಳ ಸಾಕಾಣಿಕೆ ಮಾಡುವವರು ಅವುಗಳನ್ನು ರಸ್ತೆಯಲ್ಲಿ ಬಿಡಬಾರದೆಂಬ ಕಾನೂನಿದೆ. ರಸ್ತೆಯಲ್ಲಿ ಓಡಾಡುವ ಹಸುಗಳನ್ನು ಹಿಡಿದು ನಗರಪಾಲಿಕೆಯ ದೊಡ್ಡಿಯಲ್ಲಿ ಕೂಡಿ ಹಾಕಲಾಗುತ್ತದೆ. ನಂತರ ಹಸುಗಳ ಮಾಲೀಕರು ಒಂದು ಹಸುವಿಗೆ ೫೦೦ ರೂ. ದಂಡ ಪಾವತಿಸಿ ಹಸುಗಳನ್ನು ಬಿಡಿಸಿ ಕೊಳ್ಳಬೇಕು. ಆದರೆ ಹಸುಗಳನ್ನು ರಸ್ತೆಯಲ್ಲಿ ಬಿಡಬಾರದೆಂಬ ನಿಯಮವನ್ನು ನಗರಪಾಲಿಕೆ ರೂಪಿಸಿದ್ದರೂ ಹಸುಗಳ ಮಾಲೀಕರು ಮಾತ್ರ ಈ ನಿಯಮವನ್ನು ಪಾಲಿಸುತ್ತಿಲ್ಲ.
” ಬಿಡಾಡಿ ರಾಸುಗಳ ಸಮಸ್ಯೆ ಹೆಚ್ಚುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಪ್ರತೀ ದಿನ ರಸ್ತೆಯಲ್ಲಿರುವ ಹಸುಗಳನ್ನು ಹಿಡಿದು ದಂಡ ಹಾಕುವ ಕೆಲಸವಾಗುತ್ತಿದೆ. ಆದರೂ ಗೋಪಾಲಕರು ರಸ್ತೆಗೆ ಹಸುಗಳನ್ನು ಬಿಡುವುದು ತಪ್ಪುತ್ತಿಲ್ಲ. ಹಸುಗಳನ್ನು ಹಿಡಿದು ದೊಡ್ಡಿಗೆ ಹಾಕಲು ಹೆಚ್ಚಿನ ಸಿಬ್ಬಂದಿ ಹಾಗೂ ವಾಹನಗಳ ಅಗತ್ಯವಿದೆ. ಈ ಸಂಬಂಧ ಆಯುಕ್ತರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು.”
-ಡಾ.ವೆಂಕಟೇಶ್, ನಗರಪಾಲಿಕೆ ವೈದ್ಯಾಧಿಕಾರಿ.
ಬಿಡಾಡಿ ಹಸುಗಳ ಸೆರೆಗೆ ನಾಲ್ಕೇ ಮಂದಿ: ಮೈಸೂರು: ಬಿಡಾಡಿ ಹಸುಗಳನ್ನು ಹಿಡಿದು ದೊಡ್ಡಿಗೆ ಬಿಡಲು ನಗರಪಾಲಿಕೆಯಲ್ಲಿ ತಂಡವನ್ನು ರಚಿಸಲಾಗಿದೆ. ಆದರೆ ತಂಡದಲ್ಲಿರುವವರು ಕೇವಲ ನಾಲ್ವರು ಸಿಬ್ಬಂದಿ ಮಾತ್ರ. ಮೈಸೂರಿನಂತಹ ದೊಡ್ಡ ನಗರಕ್ಕೆ ನಾಲ್ಕು ಮಂದಿ ಸಿಬ್ಬಂದಿ ಸಾಕೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇನ್ನು ಹಿಡಿದ ಹಸುಗಳನ್ನು ಸಾಗಿಸಲು ಇರುವ ವಾಹನವೂ ಕೇವಲ ಒಂದು. ಹೀಗಾಗಿ ಬೀದಿಯಲ್ಲಿ ಅಡ್ಡಾಡುವ ಹಸುಗಳನ್ನು ಹಿಡಿಯುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಇನ್ನು ಮುಂದಾದರೂ ಅಧಿಕಾರಿಗಳು ಬಿಡಾಡಿ ದನಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಂತಹ ರಾಸುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ.
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…
ಹಾಸನ: ಪತಿ ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಲೂರು ತಾಲ್ಲೂಕಿನ ಯಡೂರು ಗ್ರಾಮದಲ್ಲಿ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ…