Andolana originals

ಕಥೆ ಹೇಳುವ ದಸರಾ ಗೊಂಬೆಗಳು!

ಗಿರಿದರ್ಶಿನಿ ಬಡಾವಣೆಯ ಮನೆಯಲ್ಲಿ ನವರಾತ್ರಿ ವೈಭವ

ಜೆ.ಜೆ.ಹೇಮಂತ್ ಕುಮಾರ್
ಮೈಸೂರು: ಗೊಂಬೆ ಹೇಳುತೈತೆ… ಎಂದು ಶುರುವಾಗುವ ಸಿನಿಮಾವೊಂದರ ಈ ಹಾಡು ಜನತೆಗೆ ಸಂದೇಶ ವನ್ನೂ ನೀಡಿದೆ. ದಸರಾ ಹಬ್ಬದ ನವರಾತ್ರಿ ಪ್ರಯುಕ್ತ ಮನೆಯೊಂದರಲ್ಲಿ ಪ್ರದರ್ಶನಕ್ಕಿಟ್ಟಿರುವ ಹಲವಾರು ಗೊಂಬೆ ಗಳು, ಪುರಾಣ, ಇತಿಹಾಸ, ಸಂಪ್ರದಾಯ, ಸಂಸ್ಕೃತಿಗೆ ಸಂಬಂಧಿಸಿದಂತೆ ಅನೇಕ ಕಥೆಗಳನ್ನು ಹೇಳುತ್ತಿವೆ. ಕೇಳುಗರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂಬುದು ರೂವಾರಿಗಳ ಆಶಯವಾಗಿದೆ.

ನಗರದ ಗಿರಿದರ್ಶಿನಿ ಬಡಾವಣೆಯ ನಿವಾಸಿಯಾದ ಗೀತಾ ಶ್ರೀಹರಿಯವರು ತಮ್ಮ ಮನೆಯನ್ನೇ ಗೊಂಬೆ ಮನೆಯಾಗಿ ಪರಿವರ್ತಿಸಿದ್ದಾರೆ. ವರ್ಷ ಪೂರ್ತಿ ಮನೆಯಾಗಿರುವ ಈಮನೆನವರಾತ್ರಿಯಲ್ಲಿ ಗೊಂಬೆ ಮನೆಯಾಗಿ ಕಂಗೊಳಿಸುತ್ತದೆ.

ಗೀತಾ ಅವರು ಪ್ರತಿ ವರ್ಷ ಸಮಾಜಕ್ಕೆ ಗೊಂಬೆಗಳ ಮೂಲಕ ಒಂದು ಸಂದೇಶವನ್ನು ನೀಡುತ್ತಾರೆ. ಈ ಬಾರಿ ಚಾಮರಾಜನಗರ ಜಿಲ್ಲೆ ಹನೂರು ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯ ಸಂಪತ್ತಿನ ಸಂರಕ್ಷಣೆಯನ್ನು ಕುರಿತು ವೈವಿಧ್ಯಮಯ ಗೊಂಬೆಗಳ ಮೂಲಕ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಮನೆಯ ಒಳಗೆ ಕಾಲಿಡುತ್ತಿದ್ದಂತೆ ಹಾಲ್ ನಲ್ಲಿ ಶಿವನ ಕೈಲಾಸದ ದೃಶ್ಯ ಗಮನ ಸೆಳೆಯುತ್ತದೆ. ಇನ್ನೂ ಮುನ್ನಡೆದರೆ ಜಂಬೂಸವಾರಿ ಮೆರವಣಿಗೆಯ ಪಡಿಯಚ್ಚನ್ನು ಗೊಂಬೆಗಳನ್ನು ಬಳಸಿ ತಯಾರಿಸಲಾಗಿದೆ. ಜಂಬೂಸವಾರಿಯಲ್ಲಿ ಕಾಣಸಿಗುವ ವಿವಿಧ ಕಲಾ ತಂಡಗಳು, ಸ್ತಬ್ಧಚಿತ್ರಗಳು, ಕುದುರೆ, ಆನೆ ಇವೆಲ್ಲವನ್ನೂ ಇಲ್ಲಿ ಕಾಣಬಹುದಾಗಿದೆ. ನೈರ್ಮಲ್ಯ ಗ್ರಾಮ ಹೇಗಿರಬೇಕು, ಬೃಂದಾವನ ಮದುವೆಯ ಪರಿಕಲ್ಪನೆ, ಪಟ್ಟದ ಬೊಂಬೆಗಳು, ಮೆಟ್ಟಿಲ ಗೊಂಬೆಗಳು ಕಾಣಸಿಗುತ್ತವೆ.

ಮನೆಯ ನೆಲಮಾಳಿಗೆಯಲ್ಲಿಯೂ ಇವರು ಗೊಂಬೆಗಳನ್ನು ಕೂರಿಸುತ್ತಾರೆ. ಅಲ್ಲಿ ಮಲೆ ಮಹದೇಶ್ವರ ಬೆಟ್ಟದ ಸಣ್ಣ ಸೆಟ್ ಅನ್ನು ಹಾಕಿದ್ದು, ಮಹದೇಶ್ವರ ಸ್ವಾಮಿ ಮೂರ್ತಿ, ಹಸಿರಿನಿಂದ ಕೂಡಿದ ದಟ್ಟವಾದ ಕಾಡು, ಆ ಕಾಡಿನಲ್ಲಿ ವಾಸಿಸುವ ಹಲವಾರು ಪ್ರಾಣಿಗಳನ್ನು ಕಾಣ ಬಹುದಾಗಿದೆ. ಈ ಬಾರಿ ಮಹದೇಶ್ವರ ಬೆಟ್ಟದ ಸಣ್ಣ ಸೆಟ್ ಹಾಕಲು ಕಾರಣ ಅಲ್ಲಿರುವ ಅರಣ್ಯ ಪ್ರದೇಶ ಈಗ ಹೇಗಿದೆಯೋ ಹಾಗೆ ಇರಲಿ, ಇತರ ಅರಣ್ಯ ಪ್ರದೇಶಗಳಂತೆ ಅಲ್ಲಿಯೂ ರೆಸಾರ್ಟ್ಗಳನ್ನು ನಿರ್ಮಿಸಿ ನಾಶ ಮಾಡುವುದು ಬೇಡ ಎಂಬ ಸಂದೇಶ ನೀಡುವುದಾಗಿದೆ ಎನ್ನುತ್ತಾರೆ ಗೀತಾ ಅವರು. ಕೇವಲ ಮಹದೇಶ್ವರ ಸೆಟ್ ಮಾತ್ರ ವಲ್ಲದೇ ಲೇಪಾಕ್ಷಿ ದೇವಾಲ ಯದ ಚಿತ್ರಣ ಮತ್ತು ನವ ದುರ್ಗೆಯರ ಚಿತ್ತಾರಗಳನ್ನೂ ಕಾಣ ಬಹುದಾಗಿದೆ. ಈ ಕಲಾಕೃತಿಗಳು ಮನಸ್ಸಿಗೆ ಮುದನೀಡುತ್ತವೆ.

ಶತಮಾನದ ಗೊಂಬೆಗಳ ವಿಶೇಷ:
ಸುಮಾರು 15 ವರ್ಷಗಳಿಂದ ಪ್ರತಿವರ್ಷವೂ ಒಂದೊಂದು ವಿಭಿನ್ನ ಪ್ರಕಾರದಲ್ಲಿ ಗೊಂಬೆಗಳನ್ನು ಕೂರಿಸುತ್ತಿದ್ದೇವೆ. ಇವರಿಗೆ ದಸರಾ ಬೊಂಬೆಗಳನ್ನು ಪೂಜಿಸುವ ಆಚರಣೆ ಪೂರ್ವಜರ ಬಳುವಳಿ. ನಮ್ಮ ಬಳಿ ಐವತ್ತು ವರ್ಷಗಳು ಹಳೆಯ ಪಟ್ಟದ ಗೊಂಬೆಗಳು ಹಾಗೂ ನೂರು ವರ್ಷದ ಹಳೆಯ ಜಂಬೂಸವಾರಿ ಗೊಂಬೆ ಇವೆ ಎಂದು ಗೀತಾ ಹೇಳುತ್ತಾರೆ.

ಮೈಸೂರಿನಿಂದ ಕೇವಲ 5 ಕಿ.ಮೀ. ದೂರ:
ಮನೆಯಲ್ಲಿ ಗೊಂಬೆಗಳನ್ನು ಕೂರಿಸುವ ನಮಗೆ, ದಸರಾ ಹೆಚ್ಚಿನ ಹರ್ಷ ತಂದುಕೊಡುತ್ತದೆ. ನಮ್ಮ ಮನೆ ಮೈಸೂರಿನಿಂದ ಕೇವಲ ಐದು ಕಿಲೋಮೀಟರ್ ಅಷ್ಟೆ. ಆದ್ದರಿಂದ ಸಾರ್ವಜನಿಕರು ಬಂದು ಗೊಂಬೆಗಳನ್ನು ನೋಡಿ ಖುಷಿಪಟ್ಟರೆ ನಮಗೆ ಸಂತೋಷ.
-ಗೀತಾ ಶ್ರೀಹರಿ

ಐದು ವರ್ಷಗಳಿಂದ ಗೊಂಬೆಗಳ ದರ್ಶನ:
ನವದುರ್ಗೆಯ ಗೊಂಬೆಗಳನ್ನು ಪ್ರತಿಷ್ಠಾಪಿಸಿರುವುದು, ಮೆಟ್ಟಿಲು ಗೊಂಬೆಗಳನ್ನು ಕೂರಿಸಿರುವುದು ಮತ್ತು ಗೊಂಬೆಗಳ ಜೋಡಣೆಗೆ ತಕ್ಕಂತೆ ಕತೆಯನ್ನು ಬರೆದು ವಿವರಿಸಿರುವುದು ತುಂಬ ಇಷ್ಟವಾಯಿತು. ನಾವು ಐದು ವರ್ಷಗಳಿಂದ ಗೊಂಬೆಗಳನ್ನು ವೀಕ್ಷಿಸಲು ಇಲ್ಲಿಗೆ ಬರುತ್ತಿದ್ದೇವೆ.
ನವ್ಯಾ, ಮೈಸೂರು

ಪುರಾಣದ ಕತೆ ಅರ್ಥ ಮಾಡಿಸಲು ಸುಲಭ: ಪ್ರತಿ ವರ್ಷ ಒಂದೊಂದು ವಿಭಿನ್ನ ಪ್ರಕಾರದಲ್ಲಿ ಗೊಂಬೆಗಳನ್ನು ಕೂರಿಸುವುದರಿಂದ ಮಕ್ಕಳಿಗೆ ಎಲ್ಲ ಪುರಾಣದ ಕತೆಗಳನ್ನು ಅರ್ಥಮಾಡಿಸಲು ಸುಲಭವಾಗುತ್ತದೆ. ಕಳೆದೆರಡು ವರ್ಷಗಳಲ್ಲಿ ರಾಮ ಲಲ್ಲಾ ಸೇರಿದಂತೆ ವಿವಿಧ ರೀತಿ ಗೊಂಬೆಗಳನ್ನು ಅಲಂಕರಿಸಿದ್ದರು. ಈ ಬಾರಿ ಮಲೆ ಮಹದೇಶ್ವರ ವನ್ಯಧಾಮ ಸಂರಕ್ಷಣೆ ಮತ್ತು ನವದುರ್ಗೆಯರ ಗೊಂಬೆಗಳು ಅತ್ಯಾಕರ್ಷಕವಾಗಿವೆ.
-ಶಶಿಕಲಾ, ಮೈಸೂರು

ನವರಾತ್ರಿಗೆ 10 ದಿನಗಳು ಮುಂಚೆಯೇ ಪ್ರಕ್ರಿಯೆ ಆರಂಭ: ಗೀತಾ ಅವರು ನವರಾತ್ರಿಗೆ ಹತ್ತು ದಿನಗಳು ಬಾಕಿ ಇರುವಂತೆಯೇ ಗೊಂಬೆಗಳನ್ನು ಕೂರಿಸಲು ತಯಾರಿಯನ್ನು ಆರಂಭಿಸುತ್ತಾರೆ. ಮೊದಲಿಗೆ ಮನೆಯವರೆಲ್ಲರೂ ಯಾವ ರೀತಿಯಲ್ಲಿ ಗೊಂಬೆಗಳನ್ನು ಕೂರಿಸಬೇಕು? ಯಾವ ವಿನ್ಯಾಸದಲ್ಲಿ ಇರಬೇಕು ಎಂಬುದನ್ನು ಸಮಾಲೋಚಿಸಿ ಕೆಲಸ ಆರಂಭಿಸುತ್ತಾರೆ. ಗೀತಾರವರ ಈ ಪ್ರಯತ್ನಕ್ಕೆ ಕುಟುಂಬದವರ ಸಂಪೂರ್ಣ ಸಹಕಾರ ಇದೆ.

100 ವರ್ಷಗಳ ಹಿಂದಿನ ಗೊಂಬೆಗಳ ಪ್ರದರ್ಶನ
ಮಲೆ ಮಹದೇಶ್ವರಬೆಟ್ಟದ ವನ್ಯ ಸಂಪತ್ತು ಕುರಿತು ಜಾಗೃತಿ
ಗ್ರಾಮ ನೈರ್ಮಲ್ಯದ ಬಗ್ಗೆಯೂ ಅರಿವು
ನೋಡುಗರ ಮನಸ್ಸಿಗೆ ಮುದನೀಡುವ ಕಲಾಕೃತಿಗಳು

ಆಂದೋಲನ ಡೆಸ್ಕ್

Recent Posts

ಮೈಸೂರು ರೈಲ್ವೆ ವೇಳಾ ಪಟ್ಟಿಯಲ್ಲಿ ನೂತನ ಪರಿಷ್ಕರಣೆ: 2025ರ ಜನವರಿ 1 ರಿಂದ ಜಾರಿ

ಮೈಸೂರು: ಭಾರತೀಯ ರೈಲ್ವೆ ಇಲಾಖೆಯೂ ಹೊಸ ವರ್ಷದ ಆರಂಭದ ಬೆನ್ನಲ್ಲೇ, ತನ್ನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಮೈಸೂರಿನಿಂದ ಇತರ ನಿಲ್ದಾಣಗಳಿಗೆ…

2 hours ago

ಹೊಸ ವರ್ಷಾಚರಣೆಗೆ ಪೋಲಿಸರ ಕಣ್ಗಾವಲು: ಸೀಮಾ ಲಾಟ್ಕರ್‌

ಮೈಸೂರು: ಸಾಂಸಕೃತಿಕ ನಗರಿ ಮೈಸೂರು ನಗರದಾದ್ಯಂತ ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ…

3 hours ago

ನೀವು ಗೃಹ ಸಚಿವರೋ ಬೆನ್ನಿಗೆ ನಿಲ್ಲುವ ಗ್ರಹ ಸಚಿವರೋ? : ಬಿಜೆಪಿ ವ್ಯಂಗ್ಯ

ಬೆಂಗಳೂರು: ಕಲಬುರ್ಗಿಯ ಸಚಿನ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್‌ ಗಾಂಧಿ ಪರವಾಗಿ ಬೆನ್ನಿಗೆ ನಿಂತಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌…

3 hours ago

ರಾಜ್ಯ ಸರ್ಕಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ನೀಡಿದ ಸಿ.ಟಿ.ರವಿ

ಮೈಸೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಮಧ್ಯೆ ಜಟಾಪಟಿ ಇದೀಗ ರಾಜ್ಯಪಾಲರ ಭವನಕ್ಕೆ ತಲುಪಿದ್ದು,…

3 hours ago

ಕನ್ನಡದ ಅಸ್ಮಿತೆಗೆ ಬದ್ಧರಾಗಿದೆಂದು ಹೇಳಿಕೊಳ್ಳುವ ಸರ್ಕಾರ ಮತ್ತೊಮ್ಮೆ ಕೆಎಎಸ್‌ ಮರು ಪರೀಕ್ಷೆಯಲ್ಲಿ ಎಡವಟ್ಟು: ಸಂಸದ ಯದುವೀರ್‌ ವಾಗ್ದಾಳಿ

ಮೈಸೂರು: ಕನ್ನಡದ ಅಸ್ಮಿತೆ ಎಂದು ಹೇಳಿಕೊಳ್ಳುವವ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯ ಮತ್ತು ಬೇಜವಾಬ್ದಾರಿತನದಿಂದಾಗಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಗೊಂದಲಕ್ಕೊಳಗಾಗುತ್ತಿರುವುದು ವಿಷಾದನೀಯ…

4 hours ago

ಬಿ.ವೈ. ವಿಜಯೇಂದ್ರರವರಿಗೆ ಮದುವೆ ಆಮಂತ್ರಣ ನೀಡಿದ ಡಾಲಿ ಧನಂಜಯ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ಡಾಲಿ ಧನಂಜಯ್‌ ದಾಂಪತ್ಯ ಜೀವನಕ್ಕೆ ಕಾಲೀಡುತ್ತಿದ್ದು, ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ…

4 hours ago