Andolana originals

ಕೊಳಚೆ ನೀರಿನ ತಾಣವಾದ ಶ್ರೀರಾಂಪುರ ತಗ್ಗು ಪ್ರದೇಶ

ದುರ್ನಾತ ಸಹಿಸಲಾಗದೆ ನಿವಾಸಿಗಳ ಪರಿತಾಪ; ಸಮಸ್ಯೆ ಬಗೆಹರಿಸಲು ಆಗ್ರಹ

ಕೆ. ಬಿ. ರಮೇಶನಾಯಕ

ಮೈಸೂರು: ಕಾವೇರಿ ನದಿಗೆ, ಮಳೆ ನೀರು ಚರಂಡಿಗೆ ಯುಜಿಡಿ ನೀರು ಸೇರಿದಂತೆ ತಡೆಯಲು ಒಂದು ಕಡೆ ಯೋಜನೆ ರೂಪಿಸುತ್ತಿದ್ದರೆ, ಮತ್ತೊಂದೆಡೆ ಶ್ರೀರಾಂಪುರ ರಿಂಗ್ ರಸ್ತೆಯ ತಗ್ಗು ಪ್ರದೇಶವು ಯುಜಿಡಿಯ ಕೆರೆಯಂತೆಯೇ ಆಗಿಬಿಟ್ಟಿದೆ.

ನಗರಪಾಲಿಕೆ ಹಾಗೂ ಶ್ರೀರಾಂಪುರಕ್ಕೆ ಹೊಂದಿಕೊಂಡಂತೆ ಇರುವ ರಿಂಗ್ ರಸ್ತೆಯ ಶಂಕರಲಿಂಗೇಗೌಡ ಬಡಾವಣೆಯ ನಿವಾಸಿಗಳು ಸಮೀಪದಲ್ಲೇ ಹೊರ ಬರುತ್ತಿರುವ ಕೊಳಚೆ ನೀರಿನ ದುರ್ವಾಸನೆಯನ್ನು ತಾಳಲಾಗದೆ ಪರಿತಪಿಸುತ್ತಿದ್ದಾರೆ. ನಗರದ ಹೊರವಲಯದ ರಮಾಬಾಯಿನಗರ, ಶಂಕರಲಿಂಗೇಗೌಡ ಬಡಾವಣೆಯಲ್ಲಿ ದಲಿತರು, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ಈ ಜನರಿಗೆ ಎರಡು ದಶಕಗಳ ಹಿಂದೆ ವಾಸಿಸಲು ಮನೆ ಒದಗಿಸಿದ್ದನ್ನು ಬಿಟ್ಟರೆ, ಬೇರೇನೂ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ.

ಮೈಸೂರಿನ ಜೆ. ಪಿ. ನಗರ, ಶ್ರೀರಾಂಪುರ, ಅರವಿಂದನಗರ ಇನ್ನಿತರೆ ಬಡಾವಣೆಗಳಿಂದ ಹರಿದು ಬರುತ್ತಿರುವ ಮಲಿನ ನೀರು ಈ ಬಡಾವಣೆಯ ಮೂಲಕವೇ ಪೈಪ್‌ಲೈನ್‌ನಲ್ಲಿ ಹಾದು ಹೋಗುತ್ತಿದೆ. ರಿಂಗ್ ರಸ್ತೆಯಿಂದ ಸಂಪರ್ಕ ಪಡೆದಿರುವ ಪೈಪ್‌ಲೈನ್‌ನಲ್ಲಿ ಹರಿದು ಹೋಗುವ ನೀರು ನೇರವಾಗಿ ರಾಯನಕೆರೆ ಮಲಿನ ನೀರು ಸಂಸ್ಕರಣಾ ಘಟಕಕ್ಕೆ ಸೇರ್ಪಡೆಯಾಗುತ್ತಿದೆ. ಆದರೆ, ಈ ಬಡಾವಣೆಯಲ್ಲಿ ಹರಿಯುವ ನೀರನ್ನು ಮುಖ್ಯ ಕೊಳವೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲು ಪೈಪ್‌ಲೈನ್ ಅಳವಡಿಸದಿರುವ ಕಾರಣ ಬಹಿರಂಗವಾಗಿ ಹರಿಯುವುದಕ್ಕೆ ಕಾರಣವಾಗಿದೆ.

ಕೆರೆಯಂತಾದ ಪ್ರದೇಶ: ಶ್ರೀರಾಂಪುರ ರಿಂಗ್ ರಸ್ತೆಯ ನ್ಯಾಯಾಽಶರ ವಸತಿ ಬಡಾವಣೆಗೆ ಹತ್ತಿರವಿರುವ ತಗ್ಗು ಪ್ರದೇಶಗಳು ಕೆರೆಯಂತಾಗಿದೆ. ರಮಾಬಾಯಿನಗರ ಸೇರಿದಂತೆ ಅಕ್ಕಪಕ್ಕದ ಬಡಾವಣೆಗಳಿಂದ ಮೋರಿಯ ಮೂಲಕ ಹರಿದು ಬಂದು ಇಲ್ಲಿ ನಿಲ್ಲುತ್ತಿದೆ. ಈ ಜಾಗದಲ್ಲಿ ಈಗ ಕಲುಷಿತ ನೀರು ನಿಲ್ಲುತ್ತಿರುವ ಕಾರಣ ಮಲಿನ ಕೆರೆಯ ವಾತಾವರಣ ಕಾಣಿಸಿಕೊಂಡಿದೆ. ಇದಕ್ಕೆ ಹೊಂದಿಕೊಂಡಂತೆ ೨೦೦ ಮೀಟರ್ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ವಾಸನೆ ತಾಳಲಾರದೆ ಪರದಾಡುತ್ತಿದ್ದಾರೆ.

ಬೆಳಿಗ್ಗೆ ಎದ್ದು ಕೂಲಿ ಕೆಲಸಕ್ಕೆ ಹೋಗಿ ಬೆವರು ಸುರಿಸುವ ಈ ಜನರು, ಸಂಜೆ ಮನೆಗೆ ಬಂದು ನೆಮ್ಮದಿಯಾಗಿ ಕಾಲ ಕಳೆಯದಂತಾಗಿದೆ. ಈ ಕೆಟ್ಟ ವಾಸನೆಯ ಪರಿಣಾಮವಾಗಿ ಅನೇಕರು ಮಧುಮೇಹ, ನೆಗಡಿ, ಶೀತ, ಜ್ವರ ಮೊದಲಾದ ಸಮಸ್ಯೆಗಳಿಗೆ ಸಿಲುಕಿ ನರಳುತ್ತಿದ್ದಾರೆ ಎಂದು ಹೇಳಲಾಗಿದೆ.

ಬಾತುಕೋಳಿಗಳ ವಿಹಾರ: ಕುಕ್ಕರಹಳ್ಳಿ, ದಳವಾಯಿ ಕೆರೆಗಳಲ್ಲಿ ನೆಲೆಸಿರುವಂತೆ ಈ ಜಾಗದಲ್ಲೂ ನೂರಾರು ಬಾತುಕೋಳಿಗಳು ವಾಸವಾಗಿದ್ದು, ಕಲುಷಿತ ನೀರು ಸೇವನೆಯಿಂದ ಈ ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು.

ಶೀಘ್ರದಲ್ಲೇ ಎಸ್‌ಟಿಪಿ ಘಟಕ: ರಿಂಗ್ ರಸ್ತೆಯ ಕೆಲವು ಪ್ರದೇಶಗಳಲ್ಲಿ ಯುಜಿಡಿ ನೀರು ಚರಂಡಿ ಮೂಲಕ ಹಾದು ಹೋಗದಂತೆ ತಡೆಯಲು ಎಸ್‌ಟಿಪಿ ಘಟಕ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಗ್ರಾಪಂನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ. ಒಂದೊಂದು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಪರಿಹಾರ ಕಲ್ಪಿಸುವುದಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ.

ರಮಾಬಾಯಿನಗರ, ಶಂಕರಲಿಂಗೇಗೌಡ ಬಡಾವಣೆ, ಗೌತಮನಗರ ಸೇರಿದಂತೆ ಎಸ್‌ಟಿಪಿ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಸರ್ಕಾರದಿಂದಲೂ ಅನುಮೋದನೆ ದೊರೆತಿದೆ. ಶೀಘ್ರದಲ್ಲೇ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಮುಖ್ಯ ಪೈಪ್‌ಲೈನ್‌ಗೆ ಸೇರುವಂತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್. ಎಂ. ಸುರೇಶ್ ತಿಳಿಸಿದರು.

 

ಆಂದೋಲನ ಡೆಸ್ಕ್

Recent Posts

ಅಕ್ರಮ ಕೇರಳ ಲಾಟರಿ ಮಾರಾಟ: ಓರ್ವ ಬಂಧನ

ಗುಂಡ್ಲುಪೇಟೆ: ಅಕ್ರಮವಾಗಿ ಕೇರಳ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿ, ಲಾಟರಿ ಟೆಕೆಟ್‌ಗಳನ್ನು ವಶಕ್ಕೆ…

2 hours ago

ಮೈಸೂರಿನ ಜೆಕೆ ಮೈದಾನದಲ್ಲಿ ಶ್ವಾನಗಳ ಕಲರವ: ಗಮನ ಸೆಳೆದ ವೈವಿಧ್ಯಮಯ ತಳಿಗಳು

ಮೈಸೂರು: ಇಲ್ಲಿನ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಶ್ವಾನ ಪ್ರದರ್ಶನವು ಶ್ವಾನಪ್ರಿಯರ ಗಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಗಳ ಸಾವಿರಕ್ಕೂ…

2 hours ago

ಹವಾಮಾನ ವೈಪರೀತ್ಯಕ್ಕೆ ದಸರಾ ಏರ್ ಶೋ ಮೊಟಕು: ಪ್ರೇಕ್ಷಕರಿಗೆ ನಿರಾಸೆ

ಮೈಸೂರು: ದಸರಾದ ಏರ್ ಶೋ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ಹವಾಮಾನ ವೈಪರೀತ್ಯ ನಿರಾಸೆ ಉಂಟುಮಾಡಿದೆ. ಭಾರತೀಯ ವಾಯುಪಡೆಯ…

3 hours ago

ಓದುಗರ ಪತ್ರ: ಹೆಚ್‌ಡಿಕೆಯವರೇ, ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕಲ್ಲವೇ?

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ…

4 hours ago

ಓದುಗರ ಪತ್ರ: ಶಾಸಕ ಜಿ.ಟಿ.ದೇವೇಗೌಡರ ನಡೆ ಶ್ಲಾಘನಿಯ

ಮೈಸೂರಿನ ಕಳಸ್ಥವಾಡಿ ಸಮೀಪದ ವಿರಿಜ ನಾಲೆ ಸಮೀಪ ಇತ್ತೀಚೆಗೆ ನಡೆದ ಅವಘಡದಲ್ಲಿ ತೊಂದರೆಗೊಳಗಾದ ಕಬ್ಬು ಸಾಗಿಸುತ್ತಿದ್ದ ಚಂದ್ರು ಎಂಬ ರೈತನ…

4 hours ago

ಓದುಗರ ಪತ್ರ: ದನಗಳ ಪ್ರದರ್ಶನಕ್ಕೆ ಬಂದ ರೈತರೂ ಪ್ರತಿಭಟಿಸಬೇಕಾಯಿತಲ್ಲ…

ರೈತ ದಸರಾ ಅಂಗವಾಗಿ ಮೈಸೂರಿನ ಕುಕ್ಕರಹಳ್ಳಿಯ ಬೋಽಸತ್ವ ಹಾಸ್ಟೆಲ್ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಹಳ್ಳಿಕಾರ್ ತಳಿಯ ಜೋಡಿ ದನಗಳ ಪ್ರದರ್ಶನವನ್ನು ಗಮನಿಸಿದರೆ…

4 hours ago