ನಾಗರಹೊಳೆ ಅರಣ್ಯದ ಮಧ್ಯಭಾಗದಲ್ಲಿರುವ ದೇವಸ್ಥಾನಕ್ಕೆ ವಿವಿಧೆಡೆಯಿಂದ ಸಾವಿರಾರು ಮಂದಿ ಭೇಟಿ
ಪಿರಿಯಾಪಟ್ಟಣ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿರುವ ಶ್ರೀ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ೩೨ನೇ ವರ್ಷದ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನಡೆಯಿತು.
ದೇವಸ್ಥನದ ಮುಖ್ಯ ಅರ್ಚಕರಾದ ನರಸಿಂಹಮೂರ್ತಿರವರ ನೇತೃತ್ವದಲ್ಲಿ ಶ್ರೀ ಮುತ್ತುರಾಯಸ್ವಾಮಿ ಚಾರಿಟಬಲ್ ಟ್ರಸ್ಟ್ ಸೇವಾ ಸಮಿತಿ ವತಿಯಿಂದ ರಾತ್ರಿಯಿಂದಲೇ ಪೂಜಾ ಕಾರ್ಯಕ್ರಮಗಳು ನಡೆದವು. ಮಂಗಳವಾರ ಬೆಳಿಗ್ಗೆ ೬.೩೦ ಗಂಟೆಗೆ ಹೊಳೆ ಮಜ್ಜನ ಸೇವೆ, ಗಣಪತಿಹೋಮ, ನವಗ್ರಹ ಹೋಮ, ಶಾಂತಿಹೋಮ, ಮಹಾಮಂಗಳಾರತಿ ಮಾಡಿದ ನಂತರ ತೀರ್ಥಪ್ರಸಾದ ವಿತರಿಸಲಾಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಗ್ರಾಮಸ್ಥರು ಸೇರಿದಂತೆ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಹಾಗೂ ಕೊಡಗು, ಮೈಸೂರು, ಬೆಂಗಳೂರಿನಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ಜಾತ್ರೆಗೆ ಬಂದಂತಹ ಭಕ್ತಾದಿಗಳಿಗೆ ಶ್ರೀಮುತ್ತುರಾಯಸ್ವಾಮಿ ಚಾರಿಟ ಬಲ್ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸಾವಿರಾರು ಭಕ್ತಾದಿಗಳು ಒಂದೇ ಸಮಯದಲ್ಲಿ ಜಾತ್ರೆಗೆ ಬಂದ ಕಾರಣ ಕೆಲವು ಗಂಟೆಗಳಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಯಿತು. ಶ್ರೀ ಮುತ್ತುರಾಯಸ್ವಾಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಈ ದೇವಸ್ಥಾನಕ್ಕೆ ೧೦೦ ವರ್ಷಗಳ ಇತಿಹಾಸವಿದ್ದು, ರಾಜ್ಯಾದ್ಯಂತ ಭಕ್ತ ಸಮೂಹವನ್ನು ಹೊಂದಿದೆ.
ಈ ಹಿಂದೆ ದೇವಸ್ಥಾನವು ಆನೆಚೌಕೂರು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದ್ದ ಸಂದರ್ಭದಲ್ಲಿ ಈ ಭಾಗದ ಸುತ್ತಮುತ್ತಲ್ಲಿನ ಗ್ರಾಮದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಮದುವೆ, ನಾಮಕರಣ ಹಾಗೂ ಹರಕೆ ಮುಂತಾದ ಸಮಾರಂಭ ನಡೆಸಲು ಸಹಕಾರವಾಗುತ್ತಿತ್ತು. ಆದರೆ ಈಗ ಈ ಪ್ರದೇಶವನ್ನು ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ಬಫರ್ ಜೋನ್ ವ್ಯಾಪ್ತಿಯ ಅರಣ್ಯಪ್ರದೇಶವೆಂದು ಗುರುತಿಸಿರುವುದರಿಂದ ಜಾತ್ರೆಯನ್ನು ಹೊರತುಪಡಿಸಿ ಯಾವುದೇ ರೀತಿಯ ಸಮಾರಂಭಗಳನ್ನು ನಡೆಸಲು ಅರಣ್ಯ ಇಲಾಖೆಯಿಂದ ನಿರ್ಬಂಧವಿದೆ. ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು ಭಕ್ತಾದಿಗಳಿಂದ ದೊರಕುತ್ತಿದ್ದ ಹರಕೆಯ ಹಣ ಹಾಗೂ ದಾನ ದತ್ತಿ ಸಂಗ್ರಹ ವಾಗದ ಕಾರಣ ದೇವಸ್ಥಾನದ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದರು.
ಮಾಜಿ ಶಾಸಕರಾದ ಕೆ.ಮಹದೇವ್, ಪಿರಿಯಾಪಟ್ಟಣ ತಹಸಿಲ್ದಾರ್ ನಿಸರ್ಗಪ್ರಿಯ, ಉಪ ತಹಸಿಲ್ದಾರ್ ವಿನೋದ್ ಕುಮಾರ್, ಇನ್ ಸ್ಪೆಕ್ಟರ್ ಗೋವಿಂದರಾಜು, ಸಮಿತಿಯ ಕಾರ್ಯದರ್ಶಿ ಪಾಪಣ್ಣ, ಸದಸ್ಯರಾದ ಶ್ರೀನಿವಾಸ್, ಶಿವರಾಜ್, ಕಾಂತರಾಜು, ಕೃಷ್ಣೇಗೌಡ, ರಾಮೇಗೌಡ, ಸುರೇಶ್, ರಮೇಶ್, ಕುಮಾರ, ವಿ.ಎಸ್.ರಾಮಕೃಷ್ಣ, ಶಿವಣ್ಣ, ರಘು, ಮುತ್ತುರಾಜು, ನವೀನ್, ಸುಬ್ರಮಣಿ, ಸತೀಶ, ಪ್ರಭು ಕುಮಾರ್, ರಾಮಕೃಷ್ಣ, ಅರವಿಂದ, ನಂದಿ, ಅಕ್ಕಪಕ್ಕದ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಸಂಚಾರ ದಟ್ಟಣೆ: ಮಧ್ಯಾಹ್ನದ ವೇಳೆ ಭಕ್ತರು ಏಕಾಏಕಿ ಆಗಮಿಸಿದ್ದರಿಂದ ಒಂದೆರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
ಮೈಸೂರು : ಜಿಲ್ಲೆಯಲ್ಲಿರುವ ಹಾಡಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ…
ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ, ಗ್ಯಾರಂಟಿ ಯೋಜನೆಗಳ ಜೊತೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕೂಡ…
ಬೆಂಗಳೂರು: ನಾಳೆ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಡಿ ಬಾಸ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.…
ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್ ಸರ್ಕಾರ ಪರಿಹಾರ ನೀಡಿಲ್ಲ, ಮನೆ…
ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿನ ಅವ್ಯವಸ್ಥೆಯಿಂದಾಗಿ ನೂರಾರು ವಿಮಾನಗಳು ರದ್ದಾಗಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇಂದು ಕೇಂದ್ರ ಸರ್ಕಾರವನ್ನು ತರಾಟೆಗೆ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಅವಿವಾಹಿತ ಯುವಕರ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪಂಚಾಯಿತಿ ವತಿಯಿಂದ ನಮಗೆ ಮಠ ಕಟ್ಟಿಸಿಕೊಡುವಂತೆ…