ಇಂದು ಮಹಾಶಿವರಾತ್ರಿ ಪ್ರಯುಕ್ತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ; ದನಗಳ ಜಾತ್ರೆಗೆ ಚಾಲನೆ
ಅಣ್ಣೂರು ಸತೀಶ್
ಭಾರತೀನಗರ: ಮದ್ದೂರು ತಾಲ್ಲೂಕಿನ ಹನುಮಂತನಗರದಲ್ಲಿರುವ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿವೆ.
ಮಂಡ್ಯದಿಂದ ೧೫ ಕಿ.ಮೀ. ದೂರದಲ್ಲಿರುವ ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನ, ಹನುಮಂತನಗರದ ಆತ್ಮಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಸ್ಥಳದ ಜೊತೆಗೆ ಪ್ರಕೃತಿ ಆರೋಗ್ಯ ಧಾಮಕ್ಕೂ ಕೂಡ ತನ್ನದೇಯಾದ ಹೆಸರು ಪಡೆದಿದೆ.
೩೩ನೇ ವರ್ಷದ ಭಾರೀ ದನಗಳ ಜಾತ್ರೆಗೆ ಈಗಾಗಲೇ ಚಾಲನೆ ದೊರೆತಿದ್ದು, ಈ ಜಾತ್ರಾ ಮಹೋತ್ಸವ ೬ ದಿನಗಳ ಕಾಲ ನಡೆಯಲಿದೆ.
ಪೂರ್ವಭಾವಿಯಾಗಿ ದನಗಳ ಜಾತ್ರೆಗೆ ಫೆ.೨೪ರಂದೇ ಚಾಲನೆ ನೀಡಲಾಗಿದ್ದು, ಮಹಾಶಿವರಾತ್ರಿಯ ಅಂಗವಾಗಿ -.೨೬ರ ಬುಧವಾರ ಬೆಳಿಗ್ಗೆ ೭ರಿಂದ ೮.೩೦ ಗಂಟೆಯವರೆಗೆ ನಿತ್ಯ ಪೂಜೆ, ಮಧ್ಯಾಹ್ನ ೧೨ ಮತ್ತು ರಾತ್ರಿ ೮ ಗಂಟೆಗೆ ಮಹಾಮಂಗಳಾರತಿ ಜರುಗಲಿದೆ.
ತಿ.ನರಸೀಪುರ ತಾಲ್ಲೂಕಿನ ಚನ್ನಾಜಮ್ಮ ಮತ್ತು ತಂಡದವರಿಂದ ಸಂಜೆ ೪ ಗಂಟೆಯಿಂದ ರಾತ್ರಿ ೬ ಗಂಟೆಯವರೆಗೆ ಸೋಬಾನೆ ಪದಗಳು, ಭಾರತೀನಗರ ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮದ ಬಿ.ಕೆ.ಗೌರಿಅಕ್ಕ ಅವರಿಂದ ಸಂಜೆ ೬ರಿಂದ ೭ ಗಂಟೆಯವರೆಗೆ ಪ್ರವಚನ, ಸಂಜೆ ೭ ರಿಂದ ರಾತ್ರಿ ೮.೩೦ರವರೆಗೆ ಭರತ ನಾಟ್ಯ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ ಸಂಜೀವಿನಿ ಭಜನಾ ಮಂಡಳಿ ವತಿಯಿಂದ ರಾತ್ರಿ ೮.೩೦ರಿಂದ ೧೦ ಗಂಟೆಯವರೆಗೆ ಭಜನೆ ಕಾರ್ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾತ್ರಿ ೧೦ರಿಂದ ಮಧ್ಯರಾತ್ರಿ ೩ ಗಂಟೆಯವರೆಗೆ ಸಾಂಸ್ಕೃತಿಕ, ಇನ್ನಿತರೆ ಕಾರ್ಯಕ್ರಮಗಳು ನಡೆಯಲಿವೆ.
ರಥೋತ್ಸವ : ಫೆ.೨೮ರ ಶುಕ್ರವಾರದಂದು ಬೆಳಿಗ್ಗೆ ೬ರಿಂದ ೮ ಗಂಟೆಯವರೆಗೆ ವಿಶೇಷ ಪೂಜಾ ಕಾರ್ಯಕ್ರಮ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ಮಧ್ಯಾಹ್ನ ೨.೩೦ ಗಂಟೆಗೆ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ. ಈ ಸಂದರ್ಭದಲ್ಲಿ ಕೆ.ಶೆಟ್ಟಹಳ್ಳಿ, ಬಿದರಹಳ್ಳಿ, ಮಾದರಹಳ್ಳಿ, ಚಿಕ್ಕರಸಿನಕೆರೆ, ಅರೆಚಾಕನಹಳ್ಳಿ, ಕರಡಕೆರೆ ಗ್ರಾಮಗಳಿಂದ ದೇವರ ಪೂಜೆಗಳು ಮತ್ತು ಬಿರುದುಗಳು ಭಾಗವಹಿಸಲಿವೆ. ವೀರಗಾಸೆ, ಡೊಳ್ಳು ಕುಣಿತ, ಜನಪದ ಕಲಾ ತಂಡಗಳು ರಥೋತ್ಸವದಲ್ಲಿ ಭಾಗವಹಿಸಲಿವೆ. ಸಂಜೆ ೪.೩೦ ಗಂಟೆಗೆ ಉತ್ತಮ ರಾಸುಗಳಿಗೆ ಮದ್ದೂರು ಎಪಿಎಂಸಿ ವತಿಯಿಂದ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ವಿತರಣೆ ಮಾಡಲಾಗುವುದು.
ತೆಪ್ಪೋತ್ಸವ: ಮಾರ್ಚ್ ೧ರಂದು ಶ್ರೀ ಆತ್ಮಲಿಂಗೇಶ್ವರ ದೇವಾಲಯದ ಆವರಣದಲ್ಲಿರುವ ಪಾವನ ಗಂಗಾದಲ್ಲಿ ಸಂಜೆ ೬.೩೦ರಿಂದ ೮ ಗಂಟೆಯವರೆಗೆ ತೆಪ್ಪೋತ್ಸವಹಾಗೂ ೮.೧೫ಕ್ಕೆ ದೇವಾಲಯದ ಆವರಣದಲ್ಲಿ ಶಯನೋತ್ಸವ ಹಾಗೂ ಭಾರತೀನಗರದ ಸಿಂಚನ ಮತ್ತು ತಂಡದವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಲಿವೆ.
” ಆತ್ಮಲಿಂಗೇಶ್ವರ ದೇವಾಲಯವನ್ನು ೧೯೯೩ರಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ಜಿ.ಮಾದೇಗೌಡರು ನಿರ್ಮಿಸಿದ್ದರು. ಈ ದೇವಾಲಯವು ನಿರ್ಮಾಣಗೊಂಡ ಎರಡು ದಶಕಗಳಲ್ಲೇ ಪವಿತ್ರ ತೀರ್ಥಕ್ಷೇತ್ರವಾಗಿ ರೂಪುಗೊಂಡು, ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.”
-ಪುಟ್ಟಸ್ವಾಮಿ, ಪ್ರಾಂಶುಪಾಲರು, ಭಾರತೀವಸತಿ ಸಂಯುಕ್ತ ಪದವಿಪೂರ್ವ ಕಾಲೇಜು, ಹನುಮಂತನಗರ.
” ಹನುಮಂತನಗರದಲ್ಲಿರುವ ಈ ಜಾಗ ಮೊದಲು ಬಂಡೆಗುಡ್ಡಗಳಿಂದ ಕೂಡಿತ್ತು. ಅಂದು ನಮ್ಮ ತಾತ ಜಿ.ಮಾದೇಗೌಡರು ಈ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ೧೯೮೭ರಲ್ಲಿ ಭಾರತಿ ವಸತಿ ಶಾಲೆಯನ್ನು ಆರಂಭಿಸಿದರು. ನಂತರ ಧಾರ್ಮಿಕ ಕ್ಷೇತ್ರವನ್ನಾಗಿಸಬೇಕೆಂದು ಚಿಂತಿಸಿ ಅಂದು ಭಕ್ತಾದಿಗಳ ನೆರವಿನಿಂದ ೫ ಕೋಟಿ ರೂ. ವೆಚ್ಚದಲ್ಲಿ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರವನ್ನು ನಿರ್ಮಿಸಿದ್ದಾರೆ.”
-ಆಶಯ್ ಮಧು, ಸಿಇಒ, ಭಾರತೀ ಎಜುಕೇಷನ್ ಟ್ರಸ್ಟ್.
” ೩೩ ವರ್ಷಗಳಿಂದಲೂ ಶ್ರೀ ಆತ್ಮಲಿಂಗೇಶ್ವರ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪಾರ್ಕಿಂಗ್ವ್ಯವಸ್ಥೆ, ಪೊಲೀಸ್ ಬಂದೋಬಸ್ತ್, ನೀರಿನ ವ್ಯವಸ್ಥೆ, ಜಾಗರಣೆಗೆ ಬರುವಂತಹ ಜನರಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.”
-ಮಧು ಜಿ.ಮಾದೇಗೌಡ, ಅಧ್ಯಕ್ಷರು, ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದ ಧರ್ಮದರ್ಶಿ ಮಂಡಳಿ.
” ಕ್ಷೇತ್ರದಲ್ಲಿ ಶಿವ, ನಂದಿ, ವೀರಾಂಜನೆಯ ಅಶ್ರುತರ್ಪಣ ಮಂದಿರ, ವ್ಯಾಖ್ಯಾನ ಮಂಟಪ, ನ್ಯಾಯಪೀಠ, ದುರ್ಗಾ ಪರಮೇಶ್ವರಿ, ಗಣಪತಿ ದೇವರ ದರ್ಶನ ಮಾಡಬಹುದು, ಪ್ರಮುಖವಾಗಿ ಶಿವರಾತ್ರಿಯಂದು ಜಾಗರಣೆ ಮಾಡಲು ಸಾಕಷ್ಟು ಜನರು ಬರುತ್ತಾರೆ.”
-ಸಿದ್ದೇಗೌಡ, ಟ್ರಸ್ಟಿ, ಬಿಇಟಿ
ಬೆಂಗಳೂರು: ಮುಂಬರುವ ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್.6ರಂದು ಬಜೆಟ್ ಮಂಡಿಸುವ ಬಗ್ಗೆ ಸಿಎಂ…
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದ ಸಮೀಪ ಎರಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಪ್ರಯಾಣಿಕರಿಗೆ ಗಂಭೀರವಾದ…
ಮೈಸೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಕನ್ನಡ ಶಾಲೆಗಳನ್ನು ಬಂದ್ ಮಾಡಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕನ್ನಡಪರ…
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಉದ್ಘಾಟನೆ ಮಾಡಿರುವ ಸೋಲಾರ್ ಘಟಕದಿಂದ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 15…
ಸೋಮವಾರಪೇಟೆ: ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ.9, 2026ರಂದು ಐಗೂರು ಗ್ರಾಮದಲ್ಲಿ ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ…
ಮೈಸೂರು: ಕನ್ನಡ ಚಲನಚಿತ್ರೋದ್ಯಮದ ಉತ್ತಜನ ಹಾಗೂ ಪ್ರೋತ್ಸಾಹಕ್ಕಾಗಿ ರಾಜ್ಯ ಸರ್ಕಾರ ಜಿಲ್ಲೆಗೊಂದು ಮಿನಿ ಚಿತ್ರಮಂದಿರ ನಿರ್ಮಿಸಬೇಕು ಎಂದು ಹಿರಿಯ ಸಾಹಿತಿ…