Andolana originals

ಪ್ರತಿಯೊಬ್ಬರ ಆರೋಗ್ಯಕ್ಕೂ ಕ್ರೀಡೆ ಬೇಕೇ ಬೇಕು: ಆರ್.ನಾಗೇಶ

ಎಸ್.ಎಸ್.ಭಟ್

‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ ಮನದಿಂಗಿತ ಹಂಚಿಕೊಂಡ ಹಿರಿಜೀವ 

ನಂಜನಗೂಡು: ಪ್ರತಿಯೊಬ್ಬರೂ ಆರೋಗ್ಯದಿಂದ ಇರಬೇಕಾದರೆ, ಯಾವುದಾದರೊಂದು ಕ್ರೀಡೆಯನ್ನು ಅಭ್ಯಾಸ ಮಾಡಲೇಬೇಕು. ಆರೋಗ್ಯಕ್ಕೆ ಕ್ರೀಡೆ ಮುಖ್ಯ ಎಂದು ಮೈಸೂರು ನಗರದ ಕಾಸ್ಮೋಪಾಲಿಟಿನ್ ಕ್ಲಬ್‌ನ ಹಿರಿಯ ಸದಸ್ಯ, ೮೧ ವರ್ಷದ ಆರ್. ನಾಗೇಶ ಅಭಿಪ್ರಾಯಪಟ್ಟರು.

ಕರ್ನಾಟಕ ಈಜು ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಈ ಸಾಲಿನ ರಾಜ್ಯ ಮಟ್ಟದ ಹಿರಿಯರ ವಿಭಾಗದ ಈಜು ಸ್ಪರ್ಧೆಯಲ್ಲಿ ಕಾಸ್ಮೊಪಾಲಿಟಿನ್ ಕ್ಲಬ್ ಪರವಾಗಿ ಸ್ಪರ್ಧಿಸಿದ ಅವರು, ೫ ಚಿನ್ನದ ಪದಕ ಹಾಗೂ ೧ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ‘ಆಂದೋಲನ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡಿದ್ದಾರೆ.

ಆಂದೋಲನ: ಇಲ್ಲಿಯವರೆಗೆ ಎಷ್ಟು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೀರಿ?

ನಾಗೇಶ: ಇದೇ ಮೊದಲ ಸ್ಪರ್ಧೆ; ಮೊದಲ ಬಹುಮಾನ ಪಡೆದಿದ್ದೇನೆ.

ಆಂದೋಲನ: ಈಜಿನಲ್ಲಿ ತಮಗೆ ಎಷ್ಟು ವರ್ಷಗಳ ಅನುಭವ ಇದೆ?

ನಾಗೇಶ: ನನ್ನ ಇಳಿವಯಸ್ಸಿನಲ್ಲಿ ಅಂದರೆ ೫೦ನೇ ವರ್ಷದಲ್ಲಿ ಈಜು ಕಲಿತೆ. ಇದರಲ್ಲಿ ೩೦ ವರ್ಷಗಳ ಅನುಭವ ಇದೆ. ಪ್ರತಿನಿತ್ಯ ೩೦ ನಿಮಿಷಗಳಿಂದ ೧ ಗಂಟೆ ಸಮಯದವರೆಗೆ ಈಜಾಡುತ್ತಿದ್ದೆ .

ಆಂದೋಲನ: ನಿತ್ಯ ಎಷ್ಟು ಗಂಟೆ ಈಜುಗಾರಿಕೆ ಅಭ್ಯಾಸ ಮಾಡುತ್ತೀರಿ?

ನಾಗೇಶ: ಕಳೆದ ೩೦ ವರ್ಷಗಳಿಂದ ಪ್ರತಿದಿನ ಈಜಾಡುತ್ತಿದ್ದೆ. ಈಗ ವೈದ್ಯರ ಸಲಹೆ ಮೇರೆಗೆ ವಾರದಲ್ಲಿ ಒಂದೆರಡು ಬಾರಿ ಮಾತ್ರ ಈಜಾಡುತ್ತೇನೆ.

ಆಂದೋಲನ: ನಿಮ್ಮ ಮೊದಲ ಪ್ರಯತ್ನಕ್ಕೇ ಚಿನ್ನದ ಬಹುಮಾನ ದಕ್ಕಿದೆ. ಇದರ ಬಗ್ಗೆ ಏನು ಹೇಳುತ್ತೀರಿ?

ನಾಗೇಶ: ನಿಜ, ಈ ಪದಕ ಪಡೆಯಲು ಕಾಸ್ಮೋಪಾಲಿಟನ್ ಕ್ಲಬ್‌ನ ಈಜು ತರಬೇತುದಾರ ಜಗದೀಶ ಅವರು ನೀಡಿದ ಸೂರ್ತಿಯೇ ಕಾರಣ. ಅವರು ಹುರಿದುಂಬಿಸದಿದ್ದರೆ ನಾನು ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರಲಿಲ್ಲ. ಮೊದಲ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಾಗ ನನ್ನ ಸೂರ್ತಿ ಮತ್ತಷ್ಟು ಹೆಚ್ಚಾಯಿತು. ಅಂತಾರಾಷ್ಟ್ರೀಯ ಈಜು ಪಂದ್ಯಾವಳಿಯಲ್ಲಿ ಭಾಗಿಯಾಗುವ ಹುಮ್ಮಸ್ಸು ಈಗ ನನ್ನದಾಗಿದೆ.

ಆಂದೋಲನ: ಈಜುಗಾರಿಕೆ ಬಗ್ಗೆ ಕಿರಿಯರಿಗೆ ಏನು ಸಂದೇಶ ಕೊಡುವುದಕ್ಕೆ ಬಯಸುತ್ತೀರಿ?

ನಾಗೇಶ: ಈಜು ಆರೋಗ್ಯಕ್ಕೆ ಅತ್ಯಮೂಲ್ಯವಾಗಿದ್ದು, ಪ್ರತಿಯೊಬ್ಬರೂ ಈಜು ಕಲಿಯಬೇಕು ಅಥವಾ ನಿತ್ಯ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಆಂದೋಲನ: ನೀವು ಈಜು ಕಲಿತಿದ್ದು ಎಲ್ಲಿ ?

ನಾಗೇಶ: ಸಿಸಿ ಹಾಗೂ ಸ್ಪೋರ್ಟ್ಸ್ ಕ್ಲಬ್ ಸದಸ್ಯನಾದ ನಾನು, ಮೈಸೂರು ನಗರದ ಸದರ್ನ್ ಹಾಗೂ ವಿಶ್ವವಿದ್ಯಾಲಯದ ಈಜುಕೊಳಗಳಲ್ಲಿ ಕಲಿತೆ.

ಆಂದೋಲನ ಡೆಸ್ಕ್

Recent Posts

ಮೈಸೂರಲ್ಲಿ ಸಂಭ್ರಮದ ರಥಸಪ್ತಮಿ

ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…

2 mins ago

400 ಕೋಟಿ ಹಣ ಸಾಗಿಸುತ್ತಿದ್ದ ಕಂಟೇನರ್‌ಗಳ ಹೈಜಾಕ್‌ : ಚೋರ್ಲಾ ಘಾಟ್‌ನಲ್ಲಿ ನಡೆದ ದರೋಡೆ ಬಗ್ಗೆ ಎಸ್‌ಪಿ ಹೇಳಿದ್ದಿಷ್ಟು

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್​​ನಲ್ಲಿ ಖತರ್ನಾಕ್ ರಾಬರಿ ಗ್ಯಾಂಗ್ ಒಂದಲ್ಲ, ಎರಡಲ್ಲ ಬರೋಬರಿ 400 ಕೋಟಿ…

32 mins ago

ಮೂವರು ಕನ್ನಡಿಗರು ಸೇರಿದಂತೆ 45 ಮಂದಿಗೆ ಪದ್ಮಶ್ರೀ ಗೌರವ

ಮೂವರು ಕನ್ನಡಿಗರಿವರು ; ಮಂಡ್ಯದ ಅಂಕೇಗೌಡ, ದಾವಣಗೆರೆಯ ಡಾ. ಸುರೇಶ್ ಹನಗವಾಡಿ, ಬೆಂಗಳೂರಿನ ಎಸ್.ಜಿ. ಸುಶೀಲಮ್ಮ ಬೆಂಗಳೂರು : ದೇಶದ…

51 mins ago

ಫೆ.2ರಿಂದ ಬಜೆಟ್ ತಯಾರಿ : ಸಿಎಂ ಸಿದ್ದರಾಮಯ್ಯ

ಮೈಸೂರು : ಮುಂದಿನ ಬಜೆಟ್ ಮಂಡನೆಗೆ ಫೆ.2 ರಿಂದ ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ ತಯಾರಿ ಶುರು ಮಾಡಲಿದ್ದೇನೆ ಎಂದು…

3 hours ago

2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೀವಿ : ಸಿಎಂ ವಿಶ್ವಾಸ

ಮೈಸೂರು : ಕರ್ನಾಟಕದಲ್ಲಿ ಬಿಜೆಪಿ-ಜಾ.ದಳ ಒಂದಾದರೂ ಅಧಿಕಾರಕ್ಕೆ ಬರಲ್ಲವೆಂದು ಭವಿಷ್ಯ ನುಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2028ಕ್ಕೂ ನಾವೇ ಅಧಿಕಾರಕ್ಕೆ ಬರುವುದು…

3 hours ago

ಅತ್ಯುತ್ತಮ ಸೇವೆ : ರಾಜ್ಯದ 22 ಮಂದಿ ಪೊಲೀಸರು ರಾಷ್ಟ್ರಪತಿ ಪದಕಕ್ಕೆ ಭಾಜನ

ಬೆಂಗಳೂರು : ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಪೊಲೀಸರಿಗೆ ತಾವು ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೊಡಮಾಡುವ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು,…

4 hours ago