ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರು ಸಾಮಾನ್ಯವಾಗಿ ಹುಟ್ಟೂರಿನಿಂದ ಹೊರಗಿರುವುದೇ ಹೆಚ್ಚು. ಉನ್ನತ ವಿದ್ಯಾಭ್ಯಾಸ ಕಲಿತವರಂತು ವಿದೇಶದಲ್ಲೇ ನೆಲೆಸುವ ಬಯಕೆ ಹೊಂದಿರುತ್ತಾರೆ. ಆದರೆ ಶೈಕ್ಷಣಿಕ ಸಾಧನೆ ಮಾಡಿದವರು ತಮ್ಮ ಹುಟ್ಟೂರಿಗೆ ವಾಪಸ್ಸಾಗಿ ತವರಿನಲ್ಲಿ ಸೇವೆ ಸಲ್ಲಿಸಬೇಕು. ತನ್ನೂರಿನ ಜನರಿಗೆ ನೆರವಾಗಬೇಕು, ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬ ಮನಸ್ಸುಳ್ಳವರು ತೀರಾ ವಿರಳ. ಅಂತಹ ವಿರಳಾತಿವಿರಳರಲ್ಲಿ ಒಬ್ಬರು ಮೂಳೆ ಮತ್ತು ಕೀಲು ರೋಗ ತಜ್ಞರಾದ ಡಾ.ಕೆ.ಆರ್.ಗೌತಮ್.
ಬೆಂಗಳೂರು, ಕೋಲ್ಕತ್ತಾ, ಮುಂಬೈ ಮುಂತಾದ ಮಹಾನಗರಗಳಲ್ಲಿ ಇವರಿಗೆ ಬೇಡಿಕೆ ಇದ್ದರೂ ತನ್ನ ಮೊದಲ ಸೇವೆ ತನ್ನೂರಿನ ಜನರಿಗೆ ಸಲ್ಲಬೇಕು ಎಂಬ ಉದ್ದೇಶದಿಂದ ಕೆ.ಆರ್.ನಗರದಲ್ಲಿ ಜೀವಾ ಆರ್ಥೋ ಕೇರ್ ಆಸ್ಪತ್ರೆ ಸ್ಥಾಪಿಸಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಡಾ.ಕೆ.ಆರ್.ಗೌತಮ್ ಅತ್ಯಂತ ವಿಶಿಷ್ಟ ರೀತಿಯಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಇವರು ಜನರಿಗೆ ಮದ್ದು ನೀಡುವ ವೈದ್ಯರಷ್ಟೇ ಅಲ್ಲ, ವಿದ್ಯಾರ್ಥಿಗಳ ಪಾಲಿಗೆ ನೀತಿ ಪಾಠ ಬೋಧಿಸುವ ಶಿಕ್ಷಕರು. ಬಡ ಮಕ್ಕಳ ಪಾಲಿಗೆ ಪುಸ್ತಕ, ಲೇಖನ ಸಾಮಗ್ರಿ, ಸಮವಸ ನೀಡುವ ಹಿತೈಷಿಗಳು. ಸರ್ಕಾರಿ ಶಾಲೆಗಳ ಪಾಲಿಗೆ ನೀರು ಶುದ್ಧೀಕರಣ ಯಂತ್ರ, ಕುರ್ಚಿ, ಬೆಂಚು, ನೆಲಹಾಸು ಮುಂತಾದ ಸೌಲಭ್ಯಗಳನ್ನು ಒದಗಿಸುವ ದಾನಿ. ಧಾರ್ಮಿಕ ನಂಬಿಕೆಯುಳ್ಳವರ ಪಾಲಿಗೆ ದೇವಾಲಯಗಳಿಗೆ ಸುಣ್ಣ ಬಣ್ಣ ಬಳಿಸಿ ಅಂದ ಹೆಚ್ಚಿಸುವ, ಅಗತ್ಯ ಮೂಲಸೌಕರ್ಯ ಕಲ್ಪಿಸುವ ಶ್ರೀಕೃಷ್ಣನ ಭಕ್ತ. ಮಾತೃಭಾಷೆಯ ವಿಷಯ ಬಂದಾಗ ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸುವ, ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ, ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುವ ಕನ್ನಡಮ್ಮನ ಕೂಸು. ಲೇಖನಿ ಹಿಡಿದರೆ ಒಳ್ಳೆಯ ಕವನಗಳನ್ನು ರಚಿಸುವ ಉದಯೋನ್ಮುಖ ಕವಿ, ಭಾವನಾತ್ಮಕ ಜೀವಿ. ಹಾಗಾಗಿಯೇ ಡಾ.ಕೆ.ಆರ್.ಗೌತಮ್ ಅವರೆಂದರೆ ಜಾತಿ-ಮತ, ಧರ್ಮ ಎಲ್ಲವನ್ನೂ ಮೀರಿ ಎಲ್ಲ ವರ್ಗಗಳ ಜನರಿಗೂ ಅಚ್ಚುಮೆಚ್ಚು.
ಇದಲ್ಲದೆ ಮಠ ಮಾನ್ಯಗಳಿಗೆ ದೇಣಿಗೆ ನೀಡಿದ್ದಾರೆ. ಶಾಲಾ ಶುಲ್ಕ ಭರಿಸಲಾಗದ ಮಕ್ಕಳಿಗೆ ಶುಲ್ಕ ಪಾವತಿಗೆ ಧನ ಸಹಾಯ ಮಾಡಿದ್ದಾರೆ. ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಕನ್ನಡ ಪರ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿ ಕನ್ನಡ ಪ್ರೇಮ ಮೆರೆದಿದ್ದಾರೆ. ಆಟೋ ಚಾಲಕರಿಗೆ ಸಮವಸ ನೀಡಿರುವುದು, ಧಾರ್ಮಿಕ ಕಾರ್ಯಗಳಲ್ಲಿ ನಡೆಯುವ ಅನ್ನ ಸಂತರ್ಪಣೆಗಳಿಗೆ ದೇಣಿಗೆ ನೀಡುವ ಮೂಲಕ ಸಮಾಜ ಸೇವೆಯನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದಾರೆ.
ಇಂತಹ ಹತ್ತಾರು ಸದ್ಗುಣ ಗಳನ್ನು ಹೊಂದಿರುವುದ ರಿಂದಲೇ ಡಾ.ಗೌತಮ್ ಅವರ ಜನಪ್ರಿಯತೆ ಕೆ.ಆರ್.ನಗರವನ್ನು ದಾಟಿ, ಸುತ್ತಮುತ್ತಲ ಜಿಲ್ಲೆಗಳನ್ನು ಮುಟ್ಟಿ, ರಾಜ್ಯದ ರಾಜಧಾನಿವರೆಗೂ ವ್ಯಾಪಿಸಿದೆ. ಶಿಕ್ಷಕರು, ಕನ್ನಡಪರ ಹೋರಾಟಗಾರರು, ಸಾಹಿತಿಗಳ ಒಡನಾಡಿಗಳಾಗಿದ್ದಾರೆ.
ಸಮಾಜದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಅವರ ಆರೋಗ್ಯ ಸೇವೆಯೂ ವಿಶಿಷ್ಟವಾದುದು. ಇವರ ಆಸ್ಪತ್ರೆಗೆ ಚಿಕಿತ್ಸೆ ಬೇಡಿ ಬರುವ ಬಡವರು, ವೃದ್ಧರು, ಸೈನಿಕರು, ಮಾಜಿ ಸೈನಿಕರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ ನೀಡುತ್ತಾರೆ. ಶುಲ್ಕ ಭರಿಸಲು ಆಗದವರಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ. ಇನ್ನು ಹುಟ್ಟಿ ನಿಂದಲೇ ಕೈ-ಕಾಲುಗಳು ಸೊಟ್ಟಗಾಗಿ ಪರಿತಪಿಸುವ ಮಕ್ಕಳಿಗೆ ಶಸ ಚಿಕಿತ್ಸೆ ಇಲ್ಲದೆಯೇ ಸರಿಪಡಿಸುವ, ಅನಿವಾರ್ಯ ಸಂದರ್ಭಗಳಲ್ಲಿ ಶಸಚಿಕಿತ್ಸೆ ಮೂಲಕ ಸರಿಪಡಿಸಿ ಆ ಮಕ್ಕಳಿಗೆ ನವೋಲ್ಲಾಸ ತುಂಬಿರುವುದಲ್ಲದೆ, ಆ ಮಕ್ಕಳ ಪೋಷಕರ ಬಹು ದೊಡ್ಡ ಹೊರೆಯನ್ನು ಇಳಿಸಿದ್ದಾರೆ. ಈ ರೀತಿ ಆರೋಗ್ಯ ಸೇವೆಯ ಮೂಲಕ ಎಲ್ಲೆಡೆ ಮನೆಮಾತಾಗಿದ್ದಾರೆ. ಅಲ್ಲದೆ ಹೆಚ್ಚು ಬೇಡಿಕೆಯುಳ್ಳ ಮೂಳೆ ಮತ್ತು ಕೀಲು ಮರು ಜೋಡಣೆ ತಜ್ಞ ವೈದ್ಯರಾಗಿದ್ದಾರೆ. ಇವರ ಸಮಾಜ ಸೇವೆಗೆ ಹಲವು ಸಂಘ ಸಂಸ್ಥೆ ಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ಸುವರ್ಣ ಕರ್ನಾಟಕ ಅಪೂರ್ವ ದಂಪತಿ ಪ್ರಶಸ್ತಿ, ಕನ್ನಡಾಂಬೆ ರತ್ನ ಪ್ರಶಸ್ತಿ, ಸುಜನ ಲೇಖನ ಪ್ರಶಸ್ತಿ ಸೇರಿದಂತೆ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಕನ್ನಡ ಪ್ರೇಮಿಗೆ ಪತ್ನಿ ಒತ್ತಾಸೆ:
ಇವರ ಕನ್ನಡ ಪ್ರೇಮ ಎಷ್ಟರಮಟ್ಟಿಗೆ ಇದೆ ಎಂದರೆ ತಾವು ವೈದ್ಯರಾದರೂ, ಸ್ಥಿತಿವಂತರಾದರೂ ತಮ್ಮ ಅವಳಿ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಶಾಲೆಗೆ ದಾಖಲಿಸಿ ಓದಿಸಿದ್ದಾರೆ. ಆ ಮೂಲಕ ಅವರ ಕನ್ನಡ ಪ್ರೇವನ್ನು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇವರ ಈ ಕನ್ನಡ ಪ್ರೀತಿ, ಸಮಾಜಸೇವೆಗೆ ಪತ್ನಿ ಹಾಗೂ ಮೈಸೂರಿನ ಪ್ರತಿಷ್ಠಿತ ನಾರಾಯಣ ಹೃದಯಾಲಯದಲ್ಲಿ ತಜ್ಞ ವೈದ್ಯರಾಗಿರುವ ಡಾ.ವಾಣಿಶ್ರೀ ಒತ್ತಾಸೆಯಾಗಿ ನಿಂತಿದ್ದಾರೆ.
ಕ್ಯಾನ್ಸರ್‌ಗೆ ತುತ್ತಾದ ತಾಯಂದಿರಿಗೆ ನೆರವು: ಡಾ.ಗೌತಮ್ ಅವರ ತಾಯಿ ೨೦೧೩ನೇ ಸಮಯದಲ್ಲಿ ಕ್ಯಾನ್ಸರ್‌ನಿಂದ ಬಳಲಿ ಈಗ ಗುಣಮುಖರಾಗಿದ್ದಾರೆ.ತನ್ನ ತಾಯಿಯಂತೆಯೇ ಬೇರೆ ತಾಯಂದಿರು ನೋವು ಅನುಭವಿಸಬಾರದು ಎಂದು ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಜೊತೆಗೆ ಕ್ಯಾನ್ಸರ್ ರೋಗ ದಿಂದ ಬಳಲುತ್ತಿರುವ ತಾಯಂದಿರು ಇವರ ಆಸ್ಪತ್ರೆಗೆ ಬಂದರೆ ಅವರ ಇತರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುವುದಲ್ಲದೆ, ಕ್ಯಾನ್ಸರ್ ಚಿಕಿತ್ಸೆಗೆ ಧನಸಹಾಯವನ್ನೂ ಮಾಡುತ್ತಾರೆ. ವೃದ್ಧಾಶ್ರಮಗಳಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ವೃದ್ಧರಿಗೆ ಕ್ಯಾನ್ಸರ್ ಚಿಕಿತ್ಸೆಗೆ ನೆರವು ನೀಡುತ್ತಿದ್ದಾರೆ.
ಸಾವಿರಾರು ವೃದ್ಧರಿಗೆ ಊರುಗೋಲಾದ ಡಾಕ್ಟರ್:
ಡಾ.ಕೆ.ಆರ್.ಗೌತಮ್ ಅವರು ಮಂಗಳೂರಿನಲ್ಲಿರುವ ಕಸ್ತೂರಬಾ ಮೆಡಿಕಲ್ ಕಾಲೇಜು, ಮಣಿಪಾಲ್ ಯುನಿವರ್ಸಿಟಿ ಇಲ್ಲಿ ಮೂಳೆ ಮತ್ತು ಕೀಲು ರೋಗ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಮೆಟ್ ಆಸ್ಪತ್ರೆಯಲ್ಲಿ ಕೀಲು ಮರು ಜೋಡಣೆಯಲ್ಲಿ ಪರಿಣತಿ ಪಡೆದಿದ್ದಾರೆ. ಇದು ವರೆಗೂ ಸಾವಿರಾರು ಶಸ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ನೂರಾರು ಮಂದಿಗೆ ಉಚಿತವಾಗಿ ಶಸಚಿಕಿತ್ಸೆ ನಡೆಸಿಕೊಟ್ಟಿದ್ದಾರೆ. ಮಂಡಿನೋವಿ ನಿಂದ ಬಳಲುತ್ತಿದ್ದ ಅದೆಷ್ಟೋ ಮಂದಿ ವಯೋವೃದ್ಧರು ಇವರಿಂದ ಚಿಕಿತ್ಸೆ ಪಡೆದು ಆರಾಮದಾಯಕವಾಗಿ ಓಡಾಡುತ್ತಾ ನೋವಿಲ್ಲದ ಜೀವನ ನಡೆಸುತ್ತಿದ್ದಾರೆ.
ಸೊಟ್ಟ ಕೈಕಾಲು ಹೊಂದಿದ್ದ ಮಕ್ಕಳಿಗೆ ಹೊಸ ಜೀವನ ಕಲ್ಪಿಸಿದ ಡಾ.ಗೌತಮ್:
ವಂಶಾವಳಿ ಕಾರಣದಿಂದಲೋ, ಗರ್ಭಾವಸ್ಥೆಯಲ್ಲಿ ಉಂಟಾಗುವ ಸಮಸ್ಯೆಯಿಂದಲೋ ಹುಟ್ಟಿನಿಂದಲೇ ಕೈ-ಕಾಲು ಸೊಟ್ಟಗಾಗಿರುವ ಮಕ್ಕಳಿಗೆ ಶಸಚಿಕಿತ್ಸೆ ಮಾಡಿ ಸೊಟ್ಟ ಕೈಕಾಲುಗಳನ್ನು ಸರಿಪಡಿಸಿ ಹೊಸ ಜೀವನ ಕಲ್ಪಿಸಿಕೊಟ್ಟವರು ಡಾ.ಕೆ.ಆರ್.ಗೌತಮ್. ಹುಟ್ಟಿನಿಂದಲೇ ಸೊಟ್ಟ ಕೈಕಾಲುಗಳನ್ನು ಹೊಂದಿರುವ ಮಕ್ಕಳನ್ನು ಹೆತ್ತ ಪೋಷಕರ ಕಷ್ಟ ಹೇಳತೀರದು. ಜೀವನಪರ್ಯಂತ ಸೊಟ್ಟ ಕೈಕಾಲು ಹೊಂದಿರುವ ಮಕ್ಕಳ ಜವಾಬ್ದಾರಿ ಯನ್ನು ಹೊರಬೇಕು ಎಂಬುದನ್ನು ನೆನೆದು ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಕೂತಿದ್ದವರು ಅದೆಷ್ಟೋ ಮಂದಿ. ಹೀಗೆ ಮುಂದೆ ತಮಗೆ ನೆಮ್ಮದಿಯ ಜೀವನವೇ ಇಲ್ಲ ಎಂಬಂತೆ ಕೈಚೆಲ್ಲಿ ಕುಳಿತಿದ್ದ ಬಹಳಷ್ಟು ಪೋಷಕರನ್ನು ಕೈಹಿಡಿದು ಮೇಲೆತ್ತಿದವರು ಡಾ.ಕೆ.ಆರ್.ಗೌತಮ್. ಹುಟ್ಟಿನಿಂದಲೇ ಸೊಟ್ಟ ಕೈಕಾಲುಗಳನ್ನು ಹೊಂದಿದ್ದ ಅನೇಕ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಇಲ್ಲದೆ ಮತ್ತು ಕೆಲವು ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿ ಅವರಿಗೆ ನೆಮ್ಮದಿಯ ಜೀವನ ಕಲ್ಪಿಸಿಕೊಟ್ಟಿದ್ದಾರೆ. ಇವರ ಆಸ್ಪತ್ರೆಯಲ್ಲಿ ಸದಾ ಒಂದಿಲ್ಲೊಂದು ಸೊಟ್ಟ ಕೈಕಾಲು ಇರುವ ಮಗುವಿಗೆ ಚಿಕಿತ್ಸೆ ನಡೆಯುತ್ತಲೇ ಇರುತ್ತದೆ. ಇವರ ವಿಶಿಷ್ಟ ಚಿಕಿತ್ಸೆ ಜನಜನಿತವಾಗಿರುವುದರಿಂದ ಕೇರಳ, ಸೂಳ್ಯ, ಕೊಡಗು, ಹಾಸನ, ದುದ್ದ, ಸಕಲೇಶಪುರ, ಬೆಂಗಳೂರು, ಮೈಸೂರು, ಕೊಳ್ಳೇಗಾಲ, ಚಾಮರಾಜನಗರ ಮುಂತಾದ ಕಡೆಗಳಿಂದ ರೋಗಿಗಳು ಇವರನ್ನು ಹುಡುಕಿಕೊಂಡು ಬರುತ್ತಾರೆ.
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸ್ಥಾನದಿಂದಲೇ ಅನರ್ಹಗೊಂಡು ನ್ಯಾಯಾಲಯದ ತಡೆಯಾಜ್ಞೆಯಿಂದ ಬಚಾವ್ ಆಗಿದ್ದ ಮಾಜಿ ಸಚಿವ ಹಾಗೂ ಶಾಸಕ…
ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ…
ಬೆಂಗಳೂರು: ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್ ಸೀಜ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ…
ಬೆಂಗಳೂರು: ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಪ್ರಸಿದ್ಧ…
ಟಿ.ನರಸೀಪುರ: ಹೊಸ ವರ್ಷದ ಸಂಭ್ರಮಾಚರಣೆ ಆಚರಿಸಲು ಐತಿಹಾಸಿಕ ಪಂಚಲಿಂಗಗಳ ಪುಣ್ಯಕ್ಷೇತ್ರ ತಲಕಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕಳೆದ ಮೂರು…
ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳ ತೆರವು ಪ್ರಕರಣವನ್ನು ಖಂಡಿಸಿ ಟ್ವೀಟ್ ಮಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ…