Andolana originals

ಸಾಮಾಜಿಕ ಮಾಧ್ಯಮಗಳ ನಿಯಂತ್ರಣ; ಸಲೀಸಲ್ಲ ಅನುಸರಣೆ

ಕೇವಲ 3 ಗಂಟೆಗಳಲ್ಲಿ ಸತ್ಯಾಸತ್ಯತೆ ಪರಿಶೀಲನೆ ಸಾಧ್ಯವೇ?

• ಶೇಷಾದ್ರಿ ಗಂಜೂರು, ಮಾಧ್ಯಮ ತಜ್ಞ

ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ, ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ವಿಚಾರಕ್ಕೆ ಬಂದಾಗ, ಭಾರತಕ್ಕೆ ಮೊದಲಿನಿಂದಲೂ ಅಂತಹ ಒಳ್ಳೆಯ ಹೆಸರೇನೂ ಇಲ್ಲ. ವಿವಿಧ ದೇಶಗಳಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಸ್ಥಿತಿಯ ಬಗೆಗೆ ನಿಗಾ ಇಡುವ ‘ಫ್ರೀಡಂ ಹೌಸ್’ ಸಂಸ್ಥೆಯ ಮಾನದಂಡದ ಪ್ರಕಾರ ನಮ್ಮ ದೇಶ ಇಂದು 51ನೆಯ ಸ್ಥಾನಕ್ಕೆ (73 ದೇಶಗಳಲ್ಲಿ) ಇಳಿದಿದೆ. ಕಳೆದ ಸುಮಾರು ಒಂದು ದಶಕದಲ್ಲಿ, ಇದು, 13 ಪಾಯಿಂಟುಗಳ ಕುಸಿತ ‘ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್’ ಸಂಸ್ಥೆಯ 180 ದೇಶಗಳ ಇನ್ನೊಂದು ಪಟ್ಟಿಯಲ್ಲಿ ಈಗಿನ ನಮ್ಮ ಸ್ಥಾನ 151ನೆಯದು. ಈ ಪಟ್ಟಿಯಲ್ಲಿ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೈನಾಗಳು ನಮಗಿಂತ ಹಿಂದೆ ಇದ್ದಾರೆಂದು ನಾವು ಸಂತಸಿಸಬಹುದಾದರೂ, ನೇಪಾಳ, ಶ್ರೀಲಂಕಾದಂತಹ ರಾಷ್ಟ್ರಗಳು ನಮಗಿಂತ ಮುಂದಿರುವುದನ್ನೂ ಗಮನಿಸಬೇಕು.

ಸಾಮಾಜಿಕ ಮಾಧ್ಯಮಗಳ ಮೇಲೆ ಸದಾ ಹೆಚ್ಚುತ್ತಿರುವ ನಿಯಂತ್ರಣ, ಯಾವುದೋ ಒಂದು ಸರ್ಕಾರ ಯಾವುದೋ ಒಂದು ದುರ್ಘಟನೆಯಿಂದ ಪ್ರೇರಿತವಾಗಿ ತೆಗೆದುಕೊಂಡ ನಡೆಯಲ್ಲ ಅಥವಾ ಅಂತಹವುಗಳ ಸರಮಾಲೆಯೂ ಅಲ್ಲ. ಇದನ್ನು ಕೇವಲ ಬಿಜೆಪಿ/ ಕಾಂಗ್ರೆಸ್ ಅಥವಾ ಬಲ ಎಡಗಳ ನೀತಿಗಳೆಂದು ವಿಶ್ಲೇಷಿಸಲೂ ಬರುವುದಿಲ್ಲ. ಉದಾಹರಣೆಗೆ, ‘ಫ್ಯಾಕ್ಸ್ ಚೆಕ್ ಯೂನಿಟ್’ ಒಂದನ್ನು ಸ್ಥಾಪಿಸಿ ಅದರ ಮೂಲಕ ಪ್ರಜೆಗಳು ನಂಬಬೇಕಾದ ‘ಸತ್ಯ’ ಯಾವುದೆಂದು ನಿರ್ಧರಿಸುವ ಅಧಿಕಾರವನ್ನು ಪಡೆಯಲು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಯತ್ನಿಸಿದ್ದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೂ ಅಂತಹುದೇ ಪ್ರಯತ್ನಕ್ಕೆ ಕೈಹಾಕಿದ್ದುದನ್ನೂ ನಾವು ಗಮನಿಸಬಹುದು. ಈ ಪ್ರಯತ್ನಗಳಿಗೆ ಸುಪ್ರೀಂಕೋರ್ಟ್‌ ಕಡಿವಾಣ ಹಾಕಿದಾಕ್ಷಣ, ಈ ವಿಚಾರದಲ್ಲಿ ಸರ್ಕಾರಗಳ ಗುರಿ ಬದಲಾಗಿಲ್ಲ; ಮಾರ್ಗ ಮತ್ತು ಹೆಸರುಗಳಷ್ಟೇ ಬದಲಾಗಿವೆ. ಇವು ನಮಗೆ ಜಾರ್ಜ್ ಆರ್ವೆಲ್‌ನ ಕಾದಂಬರಿಯ ‘ಮಿನಿಸ್ಟಿ ಆಫ್ ಟೂತ್’ ಅನು ನೆನಪಿಸಲೂಬಹುದು, ನೆನಪಿಸಲೂ ಬೇಕು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ‘ಆಕ್ಷೇಪಾರ್ಹ’ ವಿಷಯಗಳ ಕುರಿತಾದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಕಳೆದ ತಿಂಗಳಷ್ಟೇ (ಫೆಬ್ರವರಿ 2026) ಬದಲಿಸಿತು. ಸಾಮಾಜಿಕ ಮಾಧ್ಯಮವೊಂದರಲ್ಲಿ ಪ್ರಕಟವಾದ ಪೋಸ್ಟ್ ಒಂದನ್ನು ಸರ್ಕಾರ ಆಕ್ಷೇಪಾರ್ಹ’ ಅಥವಾ ‘ಅಕ್ರಮ’ ಎಂದು ಗುರುತಿಸಿದ ನಂತರ, ಅದನ್ನು ತೆಗೆದು ಹಾಕಲು ಈ ಮುನ್ನ ಇದ್ದ 36 ಗಂಟೆಗಳ ಗಡುವು ಹೊಸ ಮಾರ್ಗಸೂಚಿಯಡಿ ಕೇವಲ 3 ಗಂಟೆಗಳಿಗೆ ಇಳಿಸಲಾಗಿದೆ. ಸುಳ್ಳು ಸುದ್ದಿ ಮತ್ತು ಡೀಪ್ ಫೇಕ್‌ಗಳ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳ ಜವಾಬ್ದಾರಿ ಮತ್ತು ನಿಯಂತ್ರಣಗಳು ಚರ್ಚಿಸಬೇಕಾದ ವಿಷಯಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕೇವಲ ಮೂರು ಗಂಟೆಗಳಲ್ಲಿ ಯಾವುದೇ ವಿಷಯದ ಸತ್ಯಾಸತ್ಯತೆ ಮತ್ತು ಸರ್ಕಾರಿ ಆದೇಶದ ಕಾನೂನು ಬದ್ದತೆಯನ್ನು ಪರಿಶೀಲಿಸಲು ಸಾಧ್ಯವೇ? ಇವು ಅಸಾಧ್ಯವಾದಾಗ, ಸಾಮಾಜಿಕ ಮಾಧ್ಯಮ ಕಂಪೆನಿಗಳು ಮಾಡಬಹುದಾದದ್ದು ಇಷ್ಟೇ ಸೆನ್ಸಾರ್‌ಶಿಷ್. ಈಗಾಗಲೇ ಇಂತಹ ಸೆನ್ಸಾರ್‌ಶಿಪ್ ನಿರ್ಭಿಡೆಯಿಂದ ನಡೆಯುತ್ತಿದೆ. ಒಂದು ವರದಿಯ ಪ್ರಕಾರ, ಕಳೆದ ವರ್ಷದ ಮೊದಲ ಆರು ತಿಂಗಳಲ್ಲೇ, ಮೆಟಾ ಕಂಪೆನಿಯೊಂದೇ, 25,000ಕ್ಕೂ ಹೆಚ್ಚು ಪೋಸ್ಟ್ಗಳನ್ನು ಸರ್ಕಾರದ ಆದೇಶದ ಮೇರೆಗೆ ತೆಗೆದು ಹಾಕಿದೆ. ಟ್ವಿಟ್ಟರ್, ಯೂಟ್ಯೂಬ್‌ಗಳಲ್ಲೂ ಇದು ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇದರಲ್ಲಿ, ಇನ್ನೊಂದು ವಿಷಯವನ್ನೂ ನಾವು ಗಮನಿಸಬೇಕು. ಯಾವುದು ಆಕ್ಷೇಪಾರ್ಹ’ ‘ಅಕ್ರಮ’ ಎಂದು ಗುರುತಿಸಿ ಅವನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ಕಂಪೆನಿಗಳಿಗೆ ಆದೇಶ ನೀಡುವ ಅಧಿಕಾರ ಈ ಮುನ್ನ ಕೇವಲ ಮಾಹಿತಿ ಸಚಿವಾಲಯಕ್ಕೆ ಮಾತ್ರ ಇದ್ದರೆ, ಇತ್ತೀಚಿನ ತಿಂಗಳುಗಳಲ್ಲಿ ಇನ್ನೂ ಹಲವು ಸಚಿವಾಲಯಗಳಿಗೆ ಈ ಅಧಿಕಾರ ದೊರಕಿದೆ; ಸೆನ್ಸಾರ್‌ಶಿಪ್ ಮಾತ್ರ ಹೆಚ್ಚಾಗಿಲ್ಲ, ಸೆನ್ಸಾರ್‌ ಶಿಪ್ ಮಾಡುವವರೂ ಹೆಚ್ಚಾಗಿದ್ದಾರೆ; “ಅಸಭ್ಯ ಭಾಷೆಯ ಬಳಕೆ, ಅಪಮಾನಕಾರಿ ಪೋಸ್ಟ್, ‘ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ಇತ್ಯಾದಿಗಳ ಅಡಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವವರನ್ನು ಬಂಧಿಸುವುದೂ ಹೆಚ್ಚಾಗಿದೆ.

ಆನ್‌ಲೈನ್‌ ವಂಚನೆ, ಕೋಮು ಉದ್ರಿಕ್ತತೆ, ಡೀಪ್ ಫೇಕ್ ಇತ್ಯಾದಿಗಳನ್ನು ಬಳಸಿ ನಡೆಸುವ- ಬಹುಮಟ್ಟಿಗೆ ಮಹಿಳೆಯರನ್ನೇಗುರಿಯಾಗಿಸುವ ಅಪರಾಧಗಳು, ಇವೆಲ್ಲಾ ಹೆಚ್ಚಾಗುತ್ತಿರುವ ಯುಗದಲ್ಲಿ, ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರ ಹೇರುತ್ತಿರುವ ನಿಯಂತ್ರಣಗಳು ಸರಿಯಾಗಿಯೇ ಇವೆ ಎನ್ನಿಸದಿರದು. ವಾಸ್ತವದಲ್ಲಿ ಈ ಸಮಸ್ಯೆಗಳು ಕೇವಲ ಭಾರತವೊಂದೇ ಎದುರಿಸುತ್ತಿರುವ ಸಮಸ್ಯೆಗಳಲ್ಲ. ಆದರೆ, ಈ ಸಮಸ್ಯೆಗಳನ್ನು ಎದುರಿಸಲು ಭಾರತೀಯ ಸರ್ಕಾರಿ ವ್ಯವಸ್ಥೆ ಕಂಡುಕೊಂಡಿರುವ ವಿಧಾನಗಳು ಮಾತ್ರ ಅವುಗಳ ವ್ಯಾಪ್ತಿ ಮತ್ತು ವೇಗಗಳಿಂದ ಆತಂಕ ಮೂಡಿಸಿವೆ. ಹೆಚ್ಚಿನ ಸೆನ್ಸಾರ್‌ಶಿಪ್ ನಾಗರಿಕರನ್ನು ಹೆಚ್ಚು ಜವಾಬ್ದಾರರನ್ನಾಗಿ ಮಾಡುವುದಿಲ್ಲ. ಬದಲಿಗೆ ಹೆಚ್ಚು ಮೌನಿಗಳನ್ನಾಗಿಸುತ್ತದೆ.

ನಿಜವಾದಪ್ರಜಾಪ್ರಭುತ್ವಗಳುಮಾತನ್ನು ನಿಯಂತ್ರಿಸುವಾಗಹಿಂಜರಿಕೆಯಿಂದಲೇ ಹೆಜ್ಜೆ ಇಡುತ್ತವೆ; ವಿರೋಧ, ಕಿರಿಕಿರಿ, ಭಿನ್ನಾಭಿಪ್ರಾಯಗಳು, ಕೊನೆಗೆ ಅಸಭ್ಯತೆಯನ್ನೂ ಸಹಿಸಿಕೊಳ್ಳುತ್ತವೆ. ಭಾರತ ಇನ್ನೂ ನೆರೆಯ ಚೈನಾದಂತೆ — ಸಂಪೂರ್ಣ ಸೆನ್ಸಾರ್ ಶಿಪ್ ರಾಷ್ಟ್ರವಾಗಿಲ್ಲ. ಸಾರ್ವಜನಿಕ ಚರ್ಚೆಗಳಿಗೆ ಮತ್ತು ಸ್ವತಂತ್ರ ನ್ಯಾಯಾಂಗಕ್ಕೆ ನಮ್ಮಲ್ಲಿ ಇನ್ನೂ ಜಾಗವಿದೆ. ಆದರೆ, ಇಂದು, ನಾವು ಯಾವ ದಿಕ್ಕಿನೆಡೆಗೆ ಹೋಗುತ್ತಿದ್ದೇವೆಂಬುದು ಸ್ಪಷ್ಟವಾಗುತ್ತಿದೆ.

ನಮಗೆದುರಾಗಿರುವ ಅಪಾಯ, ತುರ್ತುಪರಿಸ್ಥಿತಿಯ ತರಹದ ರಾತ್ರೋರಾತ್ರಿ ಹೇರುವ ನಿಷೇಧಗಳಿಂದಲ್ಲ; ಬದಲಾಗಿ, ಸರ್ಕಾರಿ ಆದೇಶಗಳನ್ನನುಸರಿಸಿ ನಾವೇ ಸ್ವಯಂ-ಸೆನ್ಸಾರ್ ಮಾಡಿಕೊಳ್ಳುತ್ತಾ ನಿಧಾನವಾಗಿ ಮೌನಿಗಳಾಗುವ ಅಪಾಯ. ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯಗಳು ಕುಸಿಯುವುದು ನಿಷೇಧಗಳಿಂದಲ್ಲ; ಆದೇಶಗಳ ಪಾಲನೆಯಿಂದ.

ನಿಜವಾದ ಪ್ರಜಾಪ್ರಭುತ್ವಗಳು ಮಾತನ್ನು ನಿಯಂತ್ರಿಸುವಾಗ ಹಿಂಜರಿಕೆಯಿಂದಲೇ ಹೆಜ್ಜೆ ಇಡುತ್ತವೆ; ವಿರೋಧ, ಕಿರಿಕಿರಿ, ಭಿನ್ನಾಭಿಪ್ರಾಯಗಳು, ಕೊನೆಗೆ ಅಸಭ್ಯತೆಯನ್ನೂ ಸಹಿಸಿಕೊಳ್ಳುತ್ತವೆ. ಭಾರತ ಇನ್ನೂ ನೆರೆಯ ಚೈನಾದಂತೆ – ಸಂಪೂರ್ಣ ಸೆನ್ಸಾರ್‌ಶಿಪ್ ರಾಷ್ಟ್ರವಾಗಿಲ್ಲ. ಸಾರ್ವಜನಿಕ ಚರ್ಚೆಗಳಿಗೆ ಮತ್ತು ಸ್ವತಂತ್ರ ನ್ಯಾಯಾಂಗಕ್ಕೆ ನಮ್ಮಲ್ಲಿ ಇನ್ನೂ
ಜಾಗವಿದೆ.

ಆಂದೋಲನ ಡೆಸ್ಕ್

Recent Posts

ಇಂದು ದಿ.ಎಲ್.ಜಿ.ಹಾವನೂರು ಹುಟ್ಟುಹಬ್ಬ ; ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದ ಹಾವನೂರು

ಹಾವನೂರು ಆಯೋಗದ ವರದಿಯನ್ನು ಅಂದಿನ ಮುಖ್ಯಮಂತ್ರಿ ಅರಸು ಅವರು 'ಹಿಂದುಳಿದ ವರ್ಗಗಳ ಬೈಬಲ್' ಎಂದು ಬಣ್ಣಿಸಿದರೆ, ಸರ್ವೋಚ್ಚ ನ್ಯಾಯಾಲಯವು 'ಹಿಂದುಳಿದ…

9 mins ago

ಅರಕೆರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ,ರೋಗಿಗಳ ಪರದಾಟ

ರಾತ್ರಿ ಪಾಳಿಯಲ್ಲಿ ನರ್ಸ್‌ಗಳು, ವೈದ್ಯರ ನಿಯೋಜನೆಗೆ ಜನತೆ ಒತ್ತಾಯ • ಸಿದ್ದೇಗೌಡ ಕೊಡಿಯಾಲ ಶ್ರೀರಂಗಪಟ್ಟಣ : ಕ್ಷೇತ್ರದ ಶಾಸಕ ರಮೇಶ್…

3 hours ago

ಅರಮೇರಿ, ಕಡಂಗಮೂರುರಲ್ಲಿ ಗಣಿಗಾರಿಕೆಗೆ ವಿರೋಧ

ಸ್ಥಳೀಯರಿಗೆ ಸಮಸ್ಯೆ; ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು • ಕಾಂಗೀರ ಬೋಪಣ್ಣ ವಿರಾಜಪೇಟೆ : ಸ್ಥಳೀಯರಿಗೆ ಎಲ್ಲ ರೀತಿಯಲ್ಲೂ ಸಮಸ್ಯೆಯನ್ನು…

3 hours ago

ಸ್ವಚ್ಛ ನಗರಿಯ ಕೊಳಚೆ ಮುಖ

ಮೋರಿ ವಾಸನೆಯಿಂದ ಕುರುಬಾರಹಳ್ಳಿ ವಾಸಿಗಳ ಪರಿತಾಪ ಕೆ.ಎಸ್.ಚಂದ್ರಶೇಖರ್ ಮೂರ್ತಿ ಮೈಸೂರು : ರಸ್ತೆಯಲ್ಲಿ ಕಿರಿದಾದ ಮೋರಿಗಳು, ಒಳಚರಂಡಿ ನೀರು ಮೋರಿಗಳಲ್ಲಿ…

3 hours ago

ಆದಿತ್ಯ ಬಿರ್ಲಾ ಒಕ್ಕೂಟದ ತೆಕ್ಕೆಗೆ ಆರ್‌ಸಿಬಿ : 16,706 ಕೋಟಿಗೆ ಖರೀದಿ

ಬೆಂಗಳೂರು : ಐಪಿಎಲ್ 2025ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಬರೋಬ್ಬರಿ 16,706 ಕೋಟಿ ಮೊತ್ತಕ್ಕೆ ಮಾರಾಟವಾಗುವ…

3 hours ago

ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ : ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತೆ ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ…

4 hours ago