Andolana originals

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಕೊಡಗಿನಲ್ಲಿ ಶೇ.87 ಸಾಧನೆ

೧,೧೩೧ ಬ್ಲಾಕ್‌ಗಳಲ್ಲಿ ೧,೩೪,೩೯೬ ಕುಟುಂಬಗಳ ಗುರಿ; ೧,೪೭,೮೩೧ ಕುಟುಂಬಗಳ ಸಮೀಕ್ಷೆ ಪೂರ್ಣ 

ಮಡಿಕೇರಿ: ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸುವ ಸಮೀಕ್ಷಾ ಕಾರ್ಯವು ಕೊಡಗು ಜಿಲ್ಲೆಯಾದ್ಯಂತ ಪ್ರಗತಿಯಲ್ಲಿದ್ದು, ಜಿಲ್ಲೆಯಲ್ಲಿ ಶೇ.೮೭ ಸಾಧನೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ೧,೧೩೧ ಬ್ಲಾಕ್‌ಗಳಿವೆ. ಇದರಲ್ಲಿ ೧,೩೪,೩೯೬ ಕುಟುಂಬಗಳ ಗುರಿಯಲ್ಲಿ ಈಗಾಗಲೇ ೧,೪೭,೮೩೧ ಕುಟುಂಬಗಳ ಸಮೀಕ್ಷೆ ಮುಗಿದಿದೆ. ಜಿಲ್ಲೆಯಾದ್ಯಂತ ಅಂದಾಜಿಸಲಾಗಿರುವ ಒಟ್ಟು ೫ ಲಕ್ಷ ೬೨ ಸಾವಿರ ೯೬೯ ಜನಸಂಖ್ಯೆಯಲ್ಲಿ ಒಟ್ಟು ೪ ಲಕ್ಷ ೯೨ ಸಾವಿರ ೫೨೨ ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ. ಈ ಮೂಲಕ ಶೇ.೮೭.೪೬ ಸಾಧನೆ ಆಗಿದೆ. ಅಕ್ಟೋಬರ್ ೩೧ರವರೆಗೆ ಸಮೀಕ್ಷೆ ನಡೆಯಲಿದೆ.

ಕುಶಾಲನಗರ ತಾಲ್ಲೂಕಿನಲ್ಲಿ ೩೧,೩೪೯ ಮನೆಗಳ ೧,೦೮,೫೯೭ ಮಂದಿಯ ಸಮೀಕ್ಷೆ ನಡೆಸಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ೩೬,೦೭೬ ಮನೆಗಳ ೧,೨೭,೯೫೬ ಮಂದಿ, ಪೊನ್ನಂಪೇಟೆ ತಾಲ್ಲೂಕಿನ ೨೧,೩೩೩ ಮನೆಗಳ ೬೪,೧೧೦ ಮಂದಿ, ಸೋಮವಾರಪೇಟೆ ತಾಲ್ಲೂಕಿನ ೨೯,೯೪೦ ಮನೆಗಳ ೯೮,೬೩೮ ಮಂದಿ ಹಾಗೂ ವಿರಾಜಪೇಟೆ ತಾಲ್ಲೂಕಿನ ೨೯,೧೩೩ ಮನೆಗಳ ೯೩,೨೨೧ ಜನರ ಸಮೀಕ್ಷೆಯನ್ನು ಪೂರೈಸಲಾಗಿದೆ. ಒಟ್ಟು ಜಿಲ್ಲೆಯ ೧,೪೭,೮೩೧ ನಿವಾಸಗಳ ೪,೯೨,೫೨೨ ಸಾರ್ವಜನಿಕರ ಸಮೀಕ್ಷೆಯನ್ನು ಇದುವರೆಗೆ ಪೂರ್ಣಗೊಳಿಸಲಾಗಿದೆ.

ಕುಶಾಲನಗರ ತಾಲ್ಲೂಕಿನ ೩೦೪ ಬ್ಲಾಕ್‌ಗಳಲ್ಲಿ ೩೪,೬೩೭ ಕುಟುಂಬಗಳ ಪೈಕಿ ೩೧,೩೪೯ ಕುಟುಂಬಗಳ ಸಮೀಕ್ಷೆ ಆಗಿದೆ. ಮಡಿಕೇರಿ ತಾಲ್ಲೂಕಿನ ೨೬೪ ಬ್ಲಾಕ್‌ಗಳಲ್ಲಿ ೩೫,೧೨೭ ಕುಟುಂಬಗಳ ಗುರಿಯಲ್ಲಿ ೩೬,೦೭೬ ಕುಟುಂಬಗಳ ಸಮೀಕ್ಷೆ ಮುಗಿದಿದೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ ೮೭ ಬ್ಲಾಕ್‌ಗಳಲ್ಲಿ ೧೦,೩೩೭ ಕುಟುಂಬಗಳಲ್ಲಿ ೨೧,೩೩೩ ಕುಟುಂಬಗಳ ಸಮೀಕ್ಷೆ ಆಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ೨೬೬ ಬ್ಲಾಕ್‌ಗಳಲ್ಲಿ ೨೯,೪೦೨ ಕುಟುಂಬಗಳ ಗುರಿಯಲ್ಲಿ ೨೯,೯೪೦ ಕುಟುಂಬಗಳ ಸಮೀಕ್ಷೆ ಆಗಿದೆ. ಹಾಗೆಯೇ ವಿರಾಜಪೇಟೆ ತಾಲ್ಲೂಕಿನಲ್ಲಿ ೨೧೦ ಬ್ಲಾಕ್‌ಗಳಲ್ಲಿ ೨೪,೮೯೩ ಕುಟುಂಬಗಳ ಗುರಿಯಲ್ಲಿ ೨೯,೧೩೩ ಕುಟುಂಬಗಳ ಸರ್ವೆ ಆಗಿದೆ.

ಇದನ್ನು ಓದಿ: ತುಂಬಿದ ಕೆರೆ ಕಟ್ಟೆಗಳೇ ಮಕ್ಕಳ ಪಾಲಿಗೆ ಕಂಟಕ

ಈಗಾಗಲೇ ಗುರುತಿಸಲಾಗಿರುವ ಎಲ್ಲಾ ಮನೆಗಳಿಗೆ ಗಣತಿದಾರರು ಭೇಟಿ ನೀಡಿ, ಗಣತಿ ಕಾರ್ಯ ನಡೆಸುತ್ತಿದ್ದು, ಸಾರ್ವಜನಿಕರು ಕೂಡ ತಮ್ಮ ಮನೆಯ ಗಣತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸೌಲಭ್ಯ ಒದಗಿಸಲಾಗಿದೆ. ಸಾರ್ವಜನಿಕರು ವೆಬ್‌ಸೈಟ್‌ನಲ್ಲಿ ಸ್ವಯಂ ಮಾಹಿತಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಸಮೀಕ್ಷೆಗೆ ದಾಖಲೆಗಳ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ತಮ್ಮ ಕುಟುಂಬದ ಸದಸ್ಯರ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿಕಲಚೇತನರಾಗಿದ್ದರೆ ಯುಐಡಿ ಕಾರ್ಡ್ ಅಥವಾ ಅಂಗವಿಕಲ ಪ್ರಮಾಣ ಪತ್ರದ ದಾಖಲೆಗಳನ್ನು ಇರಿಸಿಕೊಂಡು ಸುಲಭವಾಗಿ ಈ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಬಹುದಾಗಿದೆ.

೮೦೫೦೭೭೦೦೦೪ಕ್ಕೆ ಕರೆ ಮಾಡಿ:  ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಸಂಗ್ರಹವಾಗುವ ದತ್ತಾಂಶದಿಂದ ನೂತನ ಕಾರ್ಯ ಕ್ರಮಗಳು,ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅನುಕೂಲವಾಗಲಿದೆ. ಮನೆಗೆ ಭೇಟಿ ನೀಡುವಸಮೀಕ್ಷಾದಾರರಿಗೆ ನಿಮ್ಮ ಕುಟುಂಬದ ಕುರಿತಾದ ನಿಖರ ಮಾಹಿತಿ ನೀಡಿ. ಮುಂದಿನ ಪೀಳಿಗೆಗೆ ಶಿಕ್ಷಣ ಮತ್ತು ಉದ್ಯೋಗ ಭದ್ರತೆಗಾಗಿ ಸಹಕರಿಸಿ. ಸಮೀಕ್ಷೆಯಲ್ಲಿ ನಿಮ್ಮ ಮನೆ ಬಿಟ್ಟು ಹೋಗಿದ್ದರೆ ಕೂಡಲೇ ೮೦೫೦೭೭೦೦೦೪ಕ್ಕೆ ಕರೆ ಮಾಡಿ ಸಮೀಕ್ಷೆಯನ್ನು ಯಶಸ್ವಿಗೊಳಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

” ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ.ಗಣತಿದಾರರು ತಮ್ಮ ಮನೆಗೆ ಬರುವವರೆಗೆ ಕಾಯದೇ ಸಾರ್ವಜನಿಕರು ತಮಗೆ ಅನುಕೂಲವಾದ ಅವಧಿಯಲ್ಲಿ ಯಾವುದೇ ಪ್ರದೇಶದಿಂದ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ. ತಾವೇ ತಮ್ಮ ಮಾಹಿತಿಯನ್ನು ದಾಖಲು ಮಾಡುವುದರಿಂದ, ನಿಖರವಾಗಿ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಸಮೀಕ್ಷೆಯಲ್ಲಿ ತಿಳಿಸಲು ಸಾಧ್ಯವಾಗಲಿದೆ.”

-ಎ.ಎಸ್. ದೀಪಕ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ

ನವೀನ್ ಡಿಸೋಜ

ಆಂದೋಲನ ಡೆಸ್ಕ್

Recent Posts

ಇರಾನ್‌ನ ಭದ್ರತಾ ಮುಖ್ಯಸ್ಥ ಹತ್ಯೆ : ಇಸ್ರೆಲ್‌

ಜೆರುಸಲೆಮ್ : ಇಸ್ರೇಲ್‌ನ ಸೇನಾ ದಾಳಿಯಲ್ಲಿ ಇರಾನ್‌ನ ಹಿರಿಯ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಹತ್ಯೆಯಾದ್ದಾರೆ ಎಂದು ಇಸ್ರೇಲ್‌ ರಕ್ಷಣಾ…

39 mins ago

SSLC EXAM | ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ 2026ರ ಎಸ್ಎಸ್ಎಲ್‌ಸಿ ಪರೀಕ್ಷೆ-1 ಆರಂಭವಾಗಲಿದ್ದು, ಒಟ್ಟು 9,02,899 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಏಪ್ರಿಲ್ 2ರ ವರೆಗೂ…

1 hour ago

ಕಾಬೂಲ್‌ ಆಸ್ಪತ್ರೆ ಮೇಲೆ ಪಾಕ್‌ ದಾಳಿ : 400 ಮಂದಿ ಸಾವು; ಭಾರತ ಖಂಡನೆ

ಕಾಬೂಲ್‌ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಸಂಘರ್ಷ ಈಗ ಭೀಕರ ಯುದ್ಧಕ್ಕೆ ತಿರುಗಿದ್ದು, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌…

1 hour ago

ಶಿವಾಲಿಕ್‌ ಬಳಿಕ ಎಲ್‌ಪಿಜಿ ಹೊತ್ತ ನಂದಾದೇವಿ ಹಡಗು ಗುಜರಾತ್‌ಗೆ ಆಗಮನ

ಅಹಮದಬಾದ್‌ : 47,000 ಟನ್ ಎಲ್‌ಪಿಜಿ ಹೊತ್ತ ನಂದಾದೇವಿ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ ಸುರಕ್ಷಿತವಾಗಿ ಇಂದು(ಮಾರ್ಚ್.‌17) ತಲುಪಿರುವುದಾಗಿ ವರದಿಯಾಗಿದೆ.…

2 hours ago

ಇರಾನ್‌ ಹೋರಾಟ ಕಂಡು ಆಘಾತಗೊಂಡೆವು, ಶೀಘ್ರದಲ್ಲೇ ಯುದ್ಧ ನಿಲ್ಲಲಿದೆ : ಡೊನಾಲ್ಡ್ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಪ್ರತೀಕಾರಿ ದಾಳಿಗಳನ್ನು ಕಂಡು "ನಾವು ನಿಜಕ್ಕೂ ಆಘಾತಗೊಂಡಿದ್ದೇವೆ" ಎಂದು…

3 hours ago

ಹೊರ್ಮುಜ್‌ ಜಲಸಂಧಿ | ಮನವಿ ತಿರಸ್ಕರಿಸಿದ ಮಿತ್ರ ರಾಷ್ಟ್ರಗಳು : ಟ್ರಂಪ್‌ಗೆ ಹಿನ್ನಡೆ

ವಾಷಿಂಗ್ಟನ್‌ : ಇರಾನ್ ವಿರುದ್ಧದ ಅಮೆರಿಕಾ-ಇಸ್ರೇಲ್ ಯುದ್ಧದ ಪರಿಣಾಮ ಪ್ರಪಂಚದ ಅತಿ ಮುಖ್ಯ ತೈಲ ಮಾರ್ಗ ಹೊರ್ಮುಜ್‌ ಜಲಸಂಧಿಯ ಮೂಲಕ…

3 hours ago