Andolana originals

ದೇವಾಲಯ ಕಾಮಗಾರಿ ವೇಳೆ ಬೆಳ್ಳಿ ನಾಣ್ಯಗಳು ಪತ್ತೆ!

ತಾಯೂರಿನ ದೇಗುಲದಲ್ಲಿ 2 ಶತಮಾನದ ಹಿಂದಿನ ನಾಣ್ಯಗಳು ಗೋಚರ

• ಶ್ರೀಧರ್ ಆರ್.ಭಟ್
ನಂಜನಗೂಡು: ತಾಲ್ಲೂಕಿನ ತಾಯೂರಿನ ಲಕ್ಷ್ಮೀ ವರದರಾಜ ಸ್ವಾಮಿ ದೇಗುಲದಲ್ಲಿ 18ನೇ ಶತಮಾನದ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಅತ್ಯಂತ ಶಿಥಿಲವಾಗಿರುವ ಈ ದೇಗುಲದ ಪುನರ್ ನಿರ್ಮಾಣ ಕಾಮಗಾರಿ ಮಾಡುವಾಗಸುಮಾರು 29 ಬೆಳ್ಳಿ ನಾಣ್ಯಗಳು ದೊರೆತಿವೆ.

ಮುಜರಾಯಿ ಇಲಾಖೆಗೆ ಸೇರಿದ, ವರುಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ತಾಯೂರು ಗ್ರಾಮದ ವರದರಾಜ ಸ್ವಾಮಿ ದೇವಾಲಯ ಹಾಗೂ ಲಕ್ಕಿ ವರದರಾಜಸ್ವಾಮಿ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ 2.75 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಕಾಮಗಾರಿ ನಡೆಸುವಾಗ ನಾಣ್ಯಗಳು ಕಂಡು ಬಂದಿವೆ. ಶುಕ್ರವಾರ ಸಂಜೆ ಲಕ್ಷ್ಮೀ ವರದ ಈ ರಾಜ ದೇವಾಲಯದ ಗರ್ಭ ಗುಡಿಯ ಹಿಂದಿನ ಗೋಡೆಯೊಂದಿಗೆ ಚಾವಣಿ ಕೆಡವಿದಾಗ 4 ನಾಣ್ಯಗಳು ಗೋಚರವಾಗಿವೆ.

ಅಪರೂಪದ ನಾಣ್ಯಗಳನ್ನು ಕಂಡ ಗುತ್ತಿಗೆದಾರ ಸಿದ್ದರಾಜು ಹಾಗೂ ಕೆಲಸಗಾರರು ತಕ್ಷಣ ಅದನ್ನು ಶಿಲ್ಪಿ ಸುಕೇತರ ಗಮನಕ್ಕೆ ತಂದಾಗ ಅವರು ಅದನ್ನು ಪರಿಕ್ಷೀಸಿ ಪರಿಕ್ಷೀಸಿ ಇದು ಶತಮಾನಗಳ ಹಿಂದಿನ ಬೆಳ್ಳಿ ನಾಣ್ಯ ಎಂಬುದನ್ನು ಖಚಿತಪಡಿಸಿದ್ದಾರೆ.

ನಂತರ ಸಿದ್ದರಾಜು, ಗ್ರಾಮದ ಹಿರಿಯರು ಈ ವಿಚಾರವನ್ನು ಬಿಳಿಗೆರೆ ಠಾಣೆ ಪೊಲೀಸರು ಮತ್ತು ಪುರಾತತ್ವ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ತಕ್ಷಣ ಪೊಲೀಸರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿಯೇ ತಾಲೂರಿಗೆ ದೌಡಾಯಿಸಿ ಪೊಲೀಸರ ಭದ್ರತೆಯಲ್ಲಿ ಮತ್ತಷ್ಟು ಹುಡುಕಾಟ ನಡೆಸಿದಾಗ ಶನಿವಾರ ಮಧ್ಯಾಹ್ನದವರೆಗೆ ನಡೆಸಿದ ಹುಡುಕಾಟದಲ್ಲಿ 29 ನಾಣ್ಯಗಳು ಪತ್ತೆಯಾಗಿದ್ದು, ಮತ್ತೆ ಹುಡುಕಾಟ ಮುಂದುವರಿದಿದೆ. ಬಿಳಿಗೆರೆ ಪೊಲೀಸ್ ಠಾಣೆಯ ಅಧಿಕಾರಿ ನಾಗರಾಜ ಅವರ ಸಮಕ್ಷಮದಲ್ಲಿ ಅದನ್ನು ಸುಪರ್ದಿಗೆ ಪಡೆದ ಅಧಿಕಾರಿಗಳು ಆ 29 ನಾಣ್ಯಗಳನ್ನು ಮಹಜರು ಮಾಡಿ ನ್ಯಾಯಾಲಯಕ್ಕೆ ಒಪ್ಪಿಸುವ ಕ್ರಮಕ್ಕೆ ಮುಂದಾದರು.

ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ತಾಯೂರಿನ ಈ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯ ವೇಳೆ ಪತ್ತೆಯಾಗಿರುವ ಈ ಎಲ್ಲ ನಾಣ್ಯಗಳು 18ನೇ ಶತಮಾನದವುಗಳಾಗಿದ್ದು ಇಂಗ್ಲೆಂಡಿನ ಮಹಾರಾಣಿಯ ವಿಕ್ಟೋರಿಯಾ ಚಿತ್ರಗಳನ್ನು ಈ ನಾಣ್ಯದ ಒಂದು ಬದಿಗೆ ಅಚ್ಚು ಹಾಕಲಾಗಿದೆ.

ಇವುಗಳು ಗೋಡೆಯ ಒಳಗಿದ್ದವೆ ಅಥವಾ ಮೇಲ್ತಾವಣಿಯಲ್ಲಿದ್ದವೆ? ಇಷ್ಟೇ ನಾಣ್ಯಗಳನ್ನು ಅಲ್ಲಿ ಇಡಲಾಗಿತ್ತೇ? ಅಥವಾ ದೇವಾಲಯದ ಉಳಿದ ಭಾಗಗಳಲ್ಲಿ ಇನ್ನೂ ನಾಣ್ಯಗಳನ್ನು ಹುದುಗಿರಿಸಿರಬಹುದೇ ಎಂಬ ಜಿಜ್ಞಾಸೆ ಪುರಾತತ್ವ ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಉಂಟಾಗಿದ್ದು, ಮುಂದಿನ ಕಾಮಗಾರಿಯನ್ನು ಇನ್ನಷ್ಟು ಜಾಗ್ರತೆಯಿಂದ ನಡೆಸುವಂತಾಗಿದೆ.

ಇದು ದೇವರಿಗೆ ಸೇರಿದ ವಸ್ತು. ಅದನ್ನು ಜೋಪಾನವಾಗಿಸುವ ಹೊಣೆಗಾರಿಕೆ ನಮ್ಮದಾಗಿದೆ.
ಸಿದ್ದರಾಜು, ದೇವಾಲಯದ ಕಾಮಗಾರಿಗಳ ಗುತ್ತಿಗೆದಾರ

ಈ ನಾಣ್ಯಗಳನ್ನು ಮಹಜರು ಮಾಡಿ ಸಂರಕ್ಷಿಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ.
ನಾಗರಾಜು, ಸಹಾಯಕ ಪೊಲೀಸ್ ಅಧಿಕಾರಿ, ಬಿಳಿಗೆರೆ ಠಾಣೆ

1881ರ ಮೊಹರು ಹೊಂದಿರುವ ಅಂದಿನ ಇಂಗ್ಲೆಂಡಿನ ವಿಕ್ಟೋರಿಯಾ ಮಹಾರಾಣಿಯವರ ಚಿತ್ರವಿರುವ ಅಪರೂಪದ ನಾಣ್ಯಗಳು ಇವಾಗಿವೆ.
ಸುಕೇತ್, ಶಿಲ್ಪಿ

ಈ ನಾಣ್ಯಗಳ ಕುರಿತಂತೆ ಈಗಾಗಲೇ ಬಿಳಿಗೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಅವರು ನ್ಯಾಯಾಲಯಕ್ಕೆ ಒಪ್ಪಿಸಿದ ನಂತರ ಕರ್ನಾಟಕ ಪುರಾತತ್ವ ಇಲಾಖೆಯ ಕಾನೂನಿನ ಅನ್ವಯ ಪುರಾತತ್ವ ಇಲಾಖೆ ಈ ಎಲ್ಲ ನಾಣ್ಯಗಳನ್ನು ವಶಕ್ಕೆ ಪಡೆದು ಸಂರಕ್ಷಿಸುತ್ತದೆ.

ಮಂಜುಳಾ, ಡಿಡಿ, ಪುರಾತತ್ವ ಇಲಾಖೆ

ಶುಕ್ರವಾರ ಸಂಜೆ ಲಕ್ಷ್ಮೀವರದರಾಜ ದೇವಾಲಯದ ಗರ್ಭ ಗುಡಿಯ ಹಿಂದಿನ ಗೋಡೆ, ಚಾವಣಿ ಕೆಡವಿದಾಗ ಮೊದಲಿಗೆ 4 ನಾಣ್ಯಗಳು ಪತ್ತೆ.
ಮಾಹಿತಿ ಪಡೆದು ಶುಕ್ರವಾರ ರಾತ್ರಿಯೇ ತಾಲೂರಿಗೆ ದೌಡಾಯಿಸಿದ ಪುರಾತತ್ವ ಇಲಾಖೆ ಅಧಿಕಾರಿಗಳು
ಪೊಲೀಸ್ ಭದ್ರತೆಯಲ್ಲಿ ಶನಿವಾರ ಮಧ್ಯಾಹ್ನದವರೆಗೆ ನಡೆಸಿದ ಹುಡುಕಾಟದಲ್ಲಿ ಮತ್ತೆ 29 ನಾಣ್ಯಗಳು ಪತ್ತೆಯಾಗಿದ್ದು, ಇನ್ನೂ ಮುಂದುವರಿದ ಹುಡುಕಾಟ
ನಾಣ್ಯದ ಒಂದು ಮುಖದಲ್ಲಿ ಇಂಗ್ಲೆಂಡಿನ ವಿಕ್ಟೋರಿಯಾ ಮಹಾರಾಣಿಯ ಚಿತ್ರ ಅಚ್ಚು
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ

ಆಂದೋಲನ ಡೆಸ್ಕ್

Recent Posts

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

16 mins ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

32 mins ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

55 mins ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

1 hour ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

1 hour ago

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: ಆರು ನಿರ್ಣಯಗಳನ್ನು ಮಂಡಿಸಿದ ಕಸಾಪ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…

2 hours ago