Andolana originals

ಸಕ್ಕರೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ನೌಕರರ ಕೊರತೆ

ಸಾರ್ವಜನಿಕ ಕೆಲಸಗಳಲ್ಲಿ ವಿಳಂಬ ಧೋರಣೆ

-ಹೇಮಂತ್‌ಕುಮಾರ್

ಮಂಡ್ಯ: ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಪೂರಕವಾಗಿ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳನ್ನು ರಚಿಸಲಾಗಿದೆ. ಸಾರ್ವಜನಿಕರಿಗೆ ರಸ್ತೆ, ನೀರು ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸುವುದು, ಖಾತೆ, ವಾಸದ ಸ್ಥಳ ಖಾತ್ರಿ ಸೇರಿದಂತೆ ವಿವಿಧ ದೃಢೀಕರಣ ಪತ್ರಗಳನ್ನು ಪ್ರಮಾಣೀಕರಿಸುವುದು
ಮುಂತಾದ ಕಾರ್ಯಗಳು ಈ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಆದರೆ, ಜಿಲ್ಲೆಯ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಆಡಳಿತ ಮಂದಸ್ಥಾಯಿಯಾಗಿದೆ.

ಮಂಡ್ಯ ಜಿಲ್ಲೆಯಲ್ಲಿ 1 ನಗರಸಭೆ, 5 ಪುರಸಭೆಗಳು ಹಾಗೂ 1 ಪಟ್ಟಣ ಪಂಚಾಯಿತಿ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಇರುವ ಅನೇಕ ಹುದ್ದೆಗಳು ಭರ್ತಿಯಾಗದೆ ಕೆಲಸ ಕಾರ್ಯಗಳ ಒತ್ತಡವಿದೆ ಎಂಬ ದೂರು ಕೇಳಿಬಂದಿದೆ.

ಮಂಡ್ಯ ನಗರಸಭೆ: ನಗರ ಸುಮಾರು 17 ಚ.ಕಿ.ಮೀ.ವಿಸ್ತೀರ್ಣ ಹೊಂದಿದ್ದು, 35 ವಾರ್ಡ್‌ಗಳನ್ನು ಹೊಂದಿದೆ. 2011ರ ಗಣತಿ ಪ್ರಕಾರ 1.38 ಲಕ್ಷ ಜನಸಂಖ್ಯೆ ಹೊಂದಿರುವ ನಗರಸಭೆ 325 ಕಿ.ಮೀ.ಉದ್ದದ ರಸ್ತೆಯನ್ನು ಹೊಂದಿದೆ.

ಈ ನಗರಸಭೆಯಲ್ಲಿ ಒಟ್ಟು ಮಂಜೂರಾತಿಯಾಗಿರುವ ಹುದ್ದೆಗಳು 418. ಆದರೆ ಪ್ರಸ್ತುತ 256 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 152 ಹುದ್ದೆಗಳು ಖಾಲಿ ಇರುವುದು ನಗರಸಭೆಯಲ್ಲಿ ಇರುವ ನೌಕರರಿಗೆ ದೈನಂದಿನ ಕೆಲಸ ಕಾರ್ಯಗಳ ಒತ್ತಡ ಹೆಚ್ಚಾಗಿದೆ.

ಇಲ್ಲಿ ಡಿ ಗ್ರೂಪ್ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಆದರೆ, ಕ್ಲರಿಕಲ್ ವಿಭಾಗದ ಸಿ ಗ್ರೂಪ್‌ನ 5 ಹುದ್ದೆಗಳು ಹಾಗೂ 4 ಬಿಲ್ ಕಲೆಕ್ಟರ್‌ಗಳು, 2 ಸಹಾಯಕ ಇಂಜಿನಿಯರ‍್ಸ್ ಹಾಗೂ 7 ಚಾಲಕರ ಹುದ್ದೆಗಳು ಖಾಲಿ ಇದ್ದು, ಜರೂರಾಗಿ ಭರ್ತಿ ಮಾಡಬೇಕಾಗಿದೆ. ಪೌರಕಾರ್ಮಿಕರ 136
ಹುದ್ದೆಗಳೂ ಖಾಲಿ ಉಳಿದಿದ್ದು, 91 ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದೆ. ಹೀಗಾಗಿ ಮಂಡ್ಯ ನಗರಸಭೆಯ ಆಡಳಿತ ವಿಭಾಗದಲ್ಲಿ ಒತ್ತಡದಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂಬುದು ಕಚೇರಿ ಅಧಿಕಾರಿಯೊಬ್ಬರ ಅಸಹಾಯಕ ನುಡಿ.

ಮದ್ದೂರು ಪುರಸಭೆ

ಸುಮಾರು 30 ಸಾವಿರ ಜನಸಂಖ್ಯೆವುಳ್ಳ ಮದ್ದೂರು ಪುರಸಭೆ 23 ವಾರ್ಡ್‌ಗಳನ್ನು ಹೊಂದಿದೆ. ಮಂಜೂರಾತಿಯಾದ ಹುದ್ದೆಗಳು 102. ಇದರಲ್ಲಿ 52 ಹುದ್ದೆಗಳಲ್ಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, 50 ಹುದ್ದೆಗಳು ಖಾಲಿ ಉಳಿದಿವೆ. 43 ಪೌರಕಾರ್ಮಿಕರ ಹುದ್ದೆಗಳಿದ್ದು, ಅದರಲ್ಲಿ 30 ನೌಕರರಿದ್ದು ಇನ್ನೂ 13 ಪೌರಕಾರ್ಮಿರ ಕೊರತೆಯಿದೆ. ಮುಖ್ಯವಾಗಿ ಇಂಜಿನಿಯರ್, ಕ್ಲರಿಕಲ್ ಹುದ್ದೆಗಳಿಗೆ ನೇಮಕಾತಿ ಅತ್ಯಗತ್ಯವಾಗಿ ಬೇಕಾಗಿವೆ.

ಪಾಂಡವಪುರ ಪುರಸಭೆ

ಸುಮಾರು 23,500 ಜನಸಂಖ್ಯೆ ಹೊಂದಿರುವ ಪಾಂಡವಪುರ ಟೌನ್‌ನಲ್ಲಿ 23 ವಾರ್ಡ್‌ಗಳಿದ್ದು, ಪಟ್ಟಣ ಪಂಚಾಯಿತಿಯಿಂದ ಇತ್ತೀಚೆಗೆ ಪಾಂಡವಪುರ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಪುರಸಭೆಯಲ್ಲಿ ಮಂಜೂರಾತಿಯಾದ 93 ಹುದ್ದೆಗಳಲ್ಲಿ 48 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 45 ಹುದ್ದೆಗಳು ಖಾಲಿ ಉಳಿದಿವೆ. ಹಾಗಾಗಿ ಕಾರ್ಯದೊತ್ತಡ ಹೆಚ್ಚಾಗಿದ್ದು, ಸದ್ಯಕ್ಕೆ ಆರ್‌ಐ,ಆರ್‌ಒ, ಬಿಲ್ ಕಲೆಕ್ಟರ್, ಆರೋಗ್ಯ ನಿರೀಕ್ಷಕರು, ಎಫ್‌ಡಿಎ ಹುದ್ದೆಗಳು ಭರ್ತಿಯಾಗಬೇಕಾಗಿದೆ.

ನಾಗಮಂಗಲ ಪುರಸಭೆ

ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ನಾಗಮಂಗಲ ಪುರಸಭೆ 23 ವಾರ್ಡ್‌ಗಳನ್ನು ಹೊಂದಿದೆ. ಪುರಸಭೆ ಕಚೇರಿಗೆ ಮಂಜೂರಾತಿಯಾದ 98
ಹುದ್ದೆಗಳಲ್ಲಿ 46 ಹುದ್ದೆಗಳಲ್ಲಷ್ಟೇ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, 52 ಹುದ್ದೆಗಳು ಖಾಲಿ ಉಳಿದಿವೆ. ಇಲ್ಲಿ ಇಂಜಿನಿಯರ್, ಆರೋಗ್ಯ ನಿರೀಕ್ಷಕರು, ಅಕೌಂಟೆಂಟ್ ಹುದ್ದೆಗಳಿಗೆ ಸರ್ಕಾರ ತುರ್ತಾಗಿ ನೇಮಕ ಮಾಡುವುದು ಅತ್ಯಗತ್ಯ ಎಂದು ಮೂಲಗಳು ತಿಳಿಸಿವೆ.

ಮಳವಳ್ಳಿ ಪುರಸಭೆ

ಮಳವಳ್ಳಿ ಪಟ್ಟಣವು ಸುಮಾರು 38 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, 23 ವಾರ್ಡ್‌ಗಳ ವಿಸ್ತಾರವನ್ನು ಹೊಂದಿದೆ. ಮಳವಳ್ಳಿ ಪುರಸಭೆ
ಆಡಳಿತ ಕಚೇರಿಯಲ್ಲಿ ಮಂಜೂರಾತಿ ಯಾದ 117ಹುದ್ದೆಗಳಿದ್ದು, 93 ಹುದ್ದೆಗಳಲ್ಲಷ್ಟೇ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. 54 ಹುದ್ದೆಗಳು ಖಾಲಿ ಉಳಿದಿವೆ.

ಶ್ರೀರಂಗಪಟ್ಟಣ ಪುರಸಭೆ

ಐತಿಹಾಸಿಕ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿರುವ ಶ್ರೀರಂಗಪಟ್ಟಣ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, ಸುಮಾರು 30 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಪುರಸಭೆ ಕಚೇರಿಯಲ್ಲಿ ಮಂಜೂರಾತಿಯಾದ 99 ಹುದ್ದೆಗಳಿದ್ದು, ಇದರಲ್ಲಿ 42 ಹುದ್ದೆಗಳಲ್ಲಿ ಮಾತ್ರ ನೌಕರರಿದ್ದು, 52 ಹುದ್ದೆಗಳು ಖಾಲಿ ಉಳಿದಿವೆ. ಸದ್ಯ ಖಾಲಿಯಿರುವ 9 ಪೌರಕಾರ್ಮಿಕರ ಹುದ್ದೆಗಳು, ಇಂಜಿನಿಯರ್ ಹಾಗೂ ಕ್ಲರಿಕಲ್ ಹುದ್ದೆಗಳಿಗೆ ನೇಮಕಾತಿಯಾದರೆ ಸಾರ್ವಜನಿಕ ಕೆಲಸಗಳು ಸುಗಮವಾಗಿ ನಡೆಯಲು ಅನುಕೂಲವಾಗುತ್ತದೆ.

ಕೆ.ಆರ್.ಪೇಟೆ ಪುರಸಭೆ

23 ವಾರ್ಡ್‌ಗಳನ್ನು ಹೊಂದಿರುವ ಕೆ.ಆರ್.ಪೇಟೆ ಪುರಸಭೆಯಲ್ಲಿ 104 ಮಂಜೂರಾತಿಯಾದ ಹುದ್ದೆಗಳಿದ್ದು, ಇದರಲ್ಲಿ ಕೇವಲ ೩೮ ನೌಕರರಿದ್ದಾರೆ. ಬರೋಬ್ಬರಿ 64 ಹುದ್ದೆಗಳು ಖಾಲಿಯಾಗಿ ಉಳಿದಿವೆ. ಈ ಕಚೇರಿಯಲ್ಲಿ ಕಾರ್ಯದೊತ್ತಡ ಹೆಚ್ಚಾಗಿದ್ದು, 2011ರ ಗಣತಿಯ ಪ್ರಕಾರ ಪಟ್ಟಣದಲ್ಲಿ 26 ಸಾವಿರ ಜನಸಂಖ್ಯೆ ಇದೆ. ಹೀಗಿರುವಾಗ ಜೆಇ, ಪರಿಸರ ಇಂಜಿನಿಯರ್, ಸಹಾಯಕ ಆರೋಗ್ಯ ನಿರೀಕ್ಷಕರು ಹಾಗೂ ಎಫ್‌ಡಿಎ ಹುದ್ದೆಗಳ ಅತ್ಯಗತ್ಯವಿದೆ ಎಂಬುದು ಪುರಸಭೆ ಅಧಿಕಾರಿಯೊಬ್ಬರ ಅಳಲು.

ಬೆಳ್ಳೂರು ಪಟ್ಟಣ ಪಂಚಾಯಿತಿ

ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿಯನ್ನು 2018ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಯಿತು. ಸುಮಾರು 20
ಸಾವಿರ ಜನಸಂಖ್ಯೆಯನ್ನು ಹೊಂದಿರುವ ಬೆಳ್ಳೂರು ಪ.ಪಂಚಾಯಿತಿಯಲ್ಲಿ 13 ವಾರ್ಡ್‌ ಕಾರ್ಯನಿರ್ವಹಿಸುತ್ತಿದ್ದು,  20 ಹುದ್ದೆಗಳು ಖಾಲಿ ಉಳಿದಿವೆ. ಮುಖ್ಯವಾಗಿ ಆರ್‌ಐ, ಇಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.


ಈ ಸಮಸ್ಯೆ ರಾಜ್ಯಾದ್ಯಂತ ಇದ್ದು, ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ನಾವು ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಪ್ರತಿ ತಿಂಗಳೂ ಕೂಡ ಮಂಡ್ಯ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿನ ಖಾಲಿ ಹುದ್ದೆಗಳ ಕುರಿತಂತೆ ಸರ್ಕಾರದ ಗಮನಕ್ಕೆ ತರುತ್ತಲಿದ್ದೇವೆ. ಸರ್ಕಾರ ನಿರ್ಧರಿಸಬೇಕಿದೆ.

-ಕೆ.ಮಾಯಣ್ಣಗೌಡ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಡ್ಯ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

1 hour ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

1 hour ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

1 hour ago

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…

1 hour ago

ಮೋದಿ ಅಧಿಕಾರ ಪರ್ವ ರಜತ ಮಹೋತ್ಸವ: ಏನಿತ್ತು? ಏನಿಲ್ಲ?

ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…

1 hour ago

ತನ್ನನ್ನು ತಾನೇ ಚಿವುಟಿ ಎಚ್ಚರಿಸಿದ್ದ ನೆಹರೂ

ಜವಾಹರಲಾಲ್ ಎಂಬ ಅಪಾಯಕಾರಿ ಮನುಷ್ಯ ೬ ಬಾರಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ೩ ಬಾರಿ ಸತತವಾಗಿ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್…

1 hour ago