ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ
ಶಿಂಷಾ ಮಾರಮ್ಮ ದೇವಾಲಯ, ದರ್ಗಾ ಹಜರತ್ ಮರ್ದಾನಿ ಗೈಬ್ ಸಾಮಾಜಿಕ ಸಾಮರಸ್ಯಕ್ಕೆ ಹೆಸರುವಾಸಿ
ಕನ್ನಡ ನಾಡಿನಲ್ಲಿ ಪ್ರಾಚೀನ ಕಾಲದಿಂದಲೂ ಸಾಮರಸ್ಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ನಡೆಯುತ್ತಾ ಬಂದಿವೆ; ಅನೇಕ ಸ್ಥಳಗಳು ರೂಪುಗೊಂಡಿವೆ. ಸಂತ ಸಮುದಾಯವು ಸಾಮಾಜಿಕ ಸಾಮರಸ್ಯ ಬೋಧಿಸುತ್ತಾ ನಡೆದು ಕನ್ನಡ ಸಂಸ್ಕೃತಿಯಲ್ಲಿ ಬಹುದೊಡ್ಡ ಕ್ರಾಂತಿಯನ್ನು ಉಂಟುಮಾಡಿರುವುದು ಚಾರಿತ್ರಿಕ ಸಂಗತಿಯಾಗಿದೆ. ಕರ್ನಾಟಕದ ಅನೇಕ ಸಂತರು ಮತ್ತು ಅವರ ಶಿಷ್ಯಂದಿರ ಸೇವಾಕಾರ್ಯದ ಪ್ರಭಾವದಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ, ಸಾಮರಸ್ಯವೂ ಸಾಧೀತಗೊಂಡು ಇಂದಿಗೂ ಜನ ಸಮುದಾಯಗಳು ಒಕ್ಕಲಾಗಿ ನಡೆದುಕೊಳ್ಳುತ್ತಿದ್ದಾರೆ. ಕಾವೇರಿ ನದಿಯ ಉಪನದಿಯಾದ ಶಿಂಷಾ ಹರಿವಿನ ಮಾರ್ಗದಲ್ಲಿ ರೂಪುಗೊಂಡಿರುವ ಶಿವನಸಮುದ್ರ ದರ್ಗಾ ಅಥವಾ ದರ್ಗಾ ಹಜರತ್ ಮರ್ದಾನಿ ಗೈಬ್ ತಾಣವು ಅಂತಹ ಸಾಮಾಜಿಕ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ.
ಇಲ್ಲಿನ ಶಿಂಷಾ ಮಾರಮ್ಮ ದೇವಾಲಯವು ಜನಮನ ಸೂರೆಗೊಂಡಂತೆ ಶಿಂಷಾ ನದಿ ಸಮೀಪದ ‘ಶಿವನಸಮುದ್ರ ದರ್ಗಾ’ ಅಥವಾ ‘ದರ್ಗಾ ಹಜರತ್ ಮರ್ದಾನಿ ಗೈಬ್’ ತಾಣವೂ ಸಾಮಾಜಿಕ ಶಾಂತಿ ಮತ್ತು ಸಾಮರಸ್ಯದ ಹಿನ್ನೆಲೆಯಲ್ಲಿ ಬಹುಮುಖ್ಯ ನೆಲೆಯಾಗಿದೆ.
೧೮೦೦ರ ಸುಮಾರಿನಲ್ಲಿ ಈ ದರ್ಗಾಕ್ಕೆ ಭೇಟಿ ನೀಡಿದ ಕ್ರೈಸ್ತಮತ ಮೂಲದ ಲೆಫ್ಟಿನೆಂಟ್ ಎಚ್.ಜೆರ್ವಿಸ್ ಎಂಬ ಬ್ರಿಟಿಷ್ ಅಧಿಕಾರಿಯೊಬ್ಬ ತಾನು ಆಸ್ವಾದಿಸಿದ ಸುತ್ತಮುತ್ತ ಲಿನ ಪ್ರಾಕೃತಿಕ ಸೌಂದರ್ಯವನ್ನೂ ಹಾಗೂ ತನ್ನರಿವಿಗೆ ಬಂದ ದರ್ಗಾ ಸಂಬಂಧಿತ ಸಾಮಾಜಿಕ ಸಾಮರಸ್ಯವನ್ನೂ ತನ್ನ ಅನುಭವ ಕಥನದಲ್ಲಿ ಹೀಗೆ ದಾಖಲಿಸಿದ್ದಾನೆ
“….After enjoying it for some time, I was glad to retrace my steps and view the fleecy clouds rolling round the mountain to the left of the greater fall, which, gilded by the glory of the setting sun, and enlivened by the calling and rapid evolution of the birds collecting for their evening flight, were calculated to fill the mind with admiration of the wisdom and power of the Great Creator. Having taken my last look of this sublime scene, I returned to a pleasant and retired spot, called the Fakir’s Retreat, comprising, besides the dwellings of a few of the sect, a tomb and garden, which are kept with great care and neat-ness. The Fakirs in attendance, who beg alms of visitors through the medium of a present of fruits and flowers, told a long story of their saint, whose remains lie buried there; and spoke, as became them, with grateful respect of the liberality of the present Jagheerdar, from whom they have received so much kindness….”
(Lieutenant H Jervis, Narrative of a Journey to the Falls of the Cavery; with an historical and descriptive account of the Neilgherry Hills, London: Smith, Elder & Co., 1834; P.11-12)
ಅಂದು ಆ ಬ್ರಿಟಿಷ್ ಅಧಿಕಾರಿ ಕಂಡ ರಮಣೀಯವಾದ ಪ್ರಕೃತಿಯ ಸೌಂದರ್ಯವನ್ನು ಇಂದಿಗೂ ದರ್ಗಾದ ಸುತ್ತಲೂ ನಾವು ಕಾಣಬಹುದಾಗಿದೆ. ಹಾಗೆಯೇ ದರ್ಗಾದಲ್ಲಿ ನಡೆಯುವ ಉರುಸ್ ಮತ್ತು ಗಂಧೋತ್ಸವಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸಾಮರಸ್ಯವು ಇಂದಿಗೂ ಮುಂದುವರಿದುಕೊಂಡು ಸಾಗಿದೆ. ಮತಸಾಮರಸ್ಯದ ಭಾಗವಾಗಿ ಅಂದಿನ ಜಾಗೀರ್‌ದಾರರು ತೋರಿದ ಔದಾರ‍್ಯದ ಪ್ರತೀಕವಾಗಿ ದರ್ಗಾದ ಗಂಧೋತ್ಸವ ಆರಂಭವಾಗುವುದೇ ಜಾಗೀರ್‌ದಾರರ ಮನೆಯಿಂದ ತರುವ ಗಂಧದಿಂದ. ರಂಜಾನ್ ಹಬ್ಬದ ೨೦ನೇ ದಿನದಂದು ಇಲ್ಲಿ ಅದ್ಧೂರಿಯಾದ ಉರುಸ್ ನಡೆಯುತ್ತದೆ. ಸ್ಥಳೀಯರು ಮಾತ್ರವಲ್ಲದೇಮೈಸೂರು, ಬೆಂಗಳೂರು, ಬಾಂಬೆ, ಕಲ್ಕತಾ ಮುಂತಾದೆ ಡೆಗಳಿಂದಲೂ ಅಸಂಖ್ಯ ಜನರು ಈ ಉರುಸ್‌ನಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.
೧೨ನೇ ಶತಮಾನದ ಶರಣರಾದ ಅಲ್ಲಮಪ್ರಭುವು ಹೇಳುವ ಹಾಗೆ, ‘ಭಕ್ತಿಯೆಂಬುದು ತೋರುಂಬ ಲಾಭ’ ವಾಗುತ್ತಿರುವ ರೀತಿಯಲ್ಲಿ ಸ್ವಾರ್ಥಹಿತಾಸಕ್ತಿಗಳು ವಿಪರೀತಕ್ಕೆ ಹೋಗು ತ್ತಿರುವಾಗ, ಜಾತೀಯ ಹಾಗೂ ಮತೀಯ ಸಂಘರ್ಷಗಳು ಅಮಾನವೀಯವಾಗಿ ಉಲ್ಬಣಗೊಳ್ಳುತ್ತಿರುವಾಗ ‘ಮತಿಗಳ ಬೆಳಗುವ ಮಾದೇವ’ ರಂತೆ ಕಾಣುವ ಹಜರತ್ ಮರ್ದಾನಿ ಗೈಬ್ ದರ್ಗಾಗಳು ಶಾಂತಿ ಮತ್ತು ಸಾಮರಸ್ಯದ ತಾಣಗಳಾಗಿರುವುದು ಕನ್ನಡ ನೆಲದ ಹೆಮ್ಮೆ ಎಂದೇ ಹೇಳಬೇಕಾಗಿದೆ. ಶಿವನಸಮುದ್ರದೊಳಗೆ ಧುಮ್ಮುಕ್ಕಿ ಹರಿವ ಕಾವೇರಿ ಜಲಧಾರೆಯಂಥ ಅರಿವು ನಮ್ಮೊಳಗೂ ಹರಿಯುವಂತೆ ಮಾಡಬಲ್ಲ ಸಾಮರಸ್ಯದ ತಾಣಗಳು ಸದಾ ಸಂದರ್ಶನ ಯೋಗ್ಯವಾಗಿವೆ.
” ಸೂಫಿ ಸಂತರಲ್ಲಿ ಪ್ರಸಿದ್ಧರಾದ ಮರ್ದಾನಿ ಗೈಬ್ ಅವರು ತಪಸ್ವಿಗಳಾಗಿ ಐಕ್ಯಗೊಂಡ ತಾಣವಾಗಿ ಇದು ಪ್ರಸಿದ್ಧಿಗೊಂಡಿದೆ. ಮನುಷ್ಯರೊಳಗಿನ ಮೌಢ್ಯಾಚರಣೆ, ದ್ವೇಷಾಸೂಯೆ ಮೊದಲಾದ ಅಮಾನವೀಯ ಗುಣಗಳನ್ನು ಮರ್ದನ ಮಾಡುವಲ್ಲಿ, ಶಾಂತಿ ಮತ್ತು ಸಾಮರಸ್ಯಗಳು ಮೂಡುವಲ್ಲಿ ಅಪಾರವಾಗಿ ಶ್ರಮಿಸಿದವರು ಸಂತ ಮರ್ದಾನಿ ಗೈಬ್ ಅವರು. ಹೀಗಾಗಿಯೇ ಯಾವುದೇ ಪ್ರಾದೇಶಿಕ ಅಥವಾ ಧಾರ್ಮಿಕ ಗಡಿಗಳನ್ನು ಹಾಕಿಕೊಳ್ಳದೆ, ಹಿಂದೂ-ಮುಸ್ಲಿಂ ಜನರು ಮತೀಯ ಭಿನ್ನತೆಯಿಲ್ಲದೆ ಈ ಸಂತರನ್ನು ಆರಾಧಿಸುತ್ತಾರೆ”
” ತಪಸ್ವಿಗಳಾದ ಹಜರತ್ ಮರ್ದಾನಿ ಗೈಬ್ ಅವರ ಮೇಲಿನ ಪೂಜ್ಯಭಾವದ ಕಾರಣವಾಗಿ ಇಲ್ಲಿನ ಹಿಂದೂ-ಮುಸಲ್ಮಾನರು ಒಂದಾಗಿ ಯಾವುದೇ ಕೊಂಕುಬಿಂಕುಗಳಿಲ್ಲದೆ ಜಾಗೀರ್‌ದಾರರ ಮನೆತನದವರಿಂದ ಗಂಧವನ್ನು ತಂದು ಸಂಭ್ರಮದಿಂದ ಉರುಸ್ ಅನ್ನು ನಡೆಸಿಕೊಂಡು ಬರಲಾಗುತ್ತಿದೆ.”
ಮುಜಾವರ್, ದರ್ಗಾದಲ್ಲಿ ಅರ್ಚನೆ ಮಾಡುವವರು
ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…
ಹಾಸನ: ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು…
ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಸದಸ್ಯರು…
ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…
ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…
ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…