ಮಂಜು ಕೋಟೆ
ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ
ಎಚ್.ಡಿ.ಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಪಟ್ಟಣದಲ್ಲಿ ೫ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಕನಕ ಭವನದ ನಿರ್ವಹಣೆಯ ಜವಾಬ್ದಾರಿಯನ್ನು ಕಾಗಿನೆಲೆ ಕನಕ ಗುರುಪೀಠದ ಮೈಸೂರು ಶಾಖಾ ಮಠಾಧೀಶರಾದ ಶ್ರೀ ಶಿವಾನಂದಪುರಿ ಸ್ವಾಮೀಜಿಗಳಿಗೆ ಶ್ರೀ ಕಾಳಿದಾಸ ಕುರುಬ ಕ್ಷೇಮಾಭಿವೃದ್ಧಿ ಸಂಘದವರು ನೀಡಿದ್ದಾರೆ.
ಪಟ್ಟಣದಲ್ಲಿ ಸರ್ಕಾರದ ಅನುದಾನದ ಮೂಲಕ ೫ ಕೋಟಿ ರೂ. ವೆಚ್ಚದಲ್ಲಿ ಸಂಘದವರ ಪರಿಶ್ರಮದಿಂದ ನಿರ್ಮಾಣಗೊಂಡಿರುವ ಹೈಟೆಕ್ ಕನಕ ಭವನ ೭-೮ ವರ್ಷಗಳ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಶಾಸಕ ಅನಿಲ್ ಚಿಕ್ಕ ಮಾದು, ಸಂಸದರಾಗಿದ್ದ ಧ್ರುವನಾರಾಯಣ, ಸಮಾಜದ ತಾಲ್ಲೂಕು ಅಧ್ಯಕ್ಷರಾಗಿದ್ದ ಶಿವಪ್ಪ ಕೋಟೆ, ಅನೇಕ ಗಣ್ಯರಿಂದ ಉದ್ಘಾಟನೆಗೊಂಡಿತ್ತು. ೨೦೨೩ರಲ್ಲಿ ಮೊಳಿಯೂರು ಆನಂದ್ ಸಂಘದ ಅಧ್ಯಕ್ಷರಾದ ಸಂದರ್ಭದಲ್ಲಿ ಭವನ ಕೆಲವೊಂದು ಮೂಲಸೌಕರ್ಯಗಳನ್ನು ಕಲ್ಪಿಸಿ, ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗಿತ್ತು.
ಸಂಘಕ್ಕೆ ಪ್ರತಿ ವರ್ಷ ಲಕ್ಷಾಂತರ ರೂ. ಆದಾಯ ಬರುತ್ತಿತ್ತು. ಆದರೆ, ಷಭವನ ಮತ್ತು ಸಂಘದ ವಿಚಾರವಾಗಿ ಸಮಾಜದ ಎರಡು ಬಣಗಳ ನಡುವೆ ಗಲಾಟೆ, ಗದ್ದಲ ಉಂಟಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರ ಗಮನಕ್ಕೆ ಮೊಳಿಯೂರು ಆನಂದ್ ಮತ್ತಿತರರು ತಂದರು.
ಆಗ ಸಮಸ್ಯೆಗೆ ತೆರೆ ಎಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದ ಮೇರೆಗೆ ಮುಖ್ಯಮಂತ್ರಿಗಳ ಮಾಜಿ ಜಂಟಿ ಕಾರ್ಯದರ್ಶಿ ರಾಮಯ್ಯ, ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ ಸಹಕಾರದೊಂದಿಗೆ ಶ್ರೀ ಕಾಳಿದಾಸ ಕುರುಬ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕೋಟೆ ತಾಲ್ಲೂಕಿನ ಕನಕ ಭವನದ ಜವಾಬ್ದಾರಿಯನ್ನು ಕಾಗಿನೆಲೆ ಕನಕ ಗುರು ಪೀಠದ ಮೈಸೂರು ಶಾಖಾ ಮಠಾಧೀಶರಾದ ಶ್ರೀ ಶಿವಾನಂದಪುರಿ ಸ್ವಾಮೀಜಿಯವರಿಗೆ ನೀಡಿದ್ದಾರೆ.
ತಾಲ್ಲೂಕು ಸಂಘದ ಅಧ್ಯಕ್ಷ ಎಂ.ಬಿ.ಆನಂದ್, ಪ್ರಧಾನ ಕಾರ್ಯದರ್ಶಿ ಎಸ್.ಬಿ.ಮಹದೇವ, ನಿರ್ದೇಶಕರುಗಳಾದ ಚನ್ನೇಗೌಡ, ಕೋಟೆ ಕುಮಾರೇಗೌಡ, ರಾಜೇಗೌಡ ಕೊಡಸಿಗೆ, ಶಿವಮಲ್ಲಪ್ಪ ಮೊತ್ತ, ಬೀರೇಗೌಡ ಮರಳು, ಕಳಸೂರು ಬೀರೇಗೌಡ, ನಾಗೇಗೌಡ ಶಿರಮಳ್ಳಿ, ಮಂಚನಹಳ್ಳಿ ಮಹಾದೇವ್, ಬೈಪಾಸ್ ಮಂಜು ನಾಥ್, ಕುಮಾರನ್, ಕ್ಯಾತನಹಳ್ಳಿ ಪ್ರಕಾಶ್, ಗೋವಿಂದ ರಾಜು, ಆರ್.ಸಿ.ನಾಗೇಗೌಡ, ದೇವ ರಾಜ್ ಮೊಳೆಯೂರು, ಸಂತೋಷ್, ಮುಂತಾದವರು ಕನಕ ಭವನದ ಕೀ ಮತ್ತು ಬ್ಯಾಂಕ್‌ನ ವಹಿವಾಟುಗಳ ಮಾಹಿತಿ ಮತ್ತು ದಾಖಲಾತಿಗಳನ್ನು ಸ್ವಾಮೀಜಿ ಯವರಿಗೆ ನೀಡಿದರು.
” ನಾನು ಅಧ್ಯಕ್ಷನಾದ ಮೇಲೆ ಕನಕ ಭವನವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಸಭೆ-ಸಮಾರಂಭ, ಮದುವೆಗಳಿಗೆ ನೀಡಿ ಭವನಕ್ಕೆ ಆದಾಯ ಬರುವಂತೆ ಮಾಡಲಾಗಿತ್ತು. ಇದನ್ನು ಕೆಲವರು ಸಹಿಸದೆ ಬಣಗಳನ್ನು ನಿರ್ಮಾಣ ಮಾಡಿಕೊಂಡು ಕೋರ್ಟು, ಕಚೇರಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ, ಗಲಾಟೆ ಗೊಂದಲ ನಿರ್ಮಾಣ ವಾಗಿತ್ತು. ಇದನ್ನೆಲ್ಲ ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇನ್ನಿತರ ಗಣ್ಯರು ಭವನದ ನಿರ್ವಹಣೆ ಮತ್ತು ಅಭಿವೃದ್ಧಿ ಹೊಣೆಯನ್ನು ಮಠದವರಿಗೆ ನೀಡು ವಂತೆ ಸೂಚಿಸಿದ್ದು, ಅದರಂತೆ ಕನಕ ಭವನದ ಜವಾಬ್ದಾರಿಯನ್ನು ಶ್ರೀಗಳಿಗೆ ನೀಡಲಾಗಿದೆ.”
-ಎಂ.ಬಿ.ಆನಂದ್, ಅಧ್ಯಕ್ಷ, ತಾಲ್ಲೂಕು ಕುರುಬ ಸಮಾಜ
೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…
ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…
ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…