Andolana originals

ಶತಮಾನೋತ್ಸವ ಸಂಭ್ರಮದಲ್ಲಿ ಶಾಂತಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ

ಲಕ್ಷಿ ಕಾಂತ್ ಕೊಮಾರಪ್ಪ

ಏ.೪ರಿಂದ ೬ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ

ಸೋಮವಾರಪೇಟೆ: ತಾಲ್ಲೂಕಿನ ಶಾಂತಳ್ಳಿಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತಮಾನೋತ್ಸವದ ಸಂಭ್ರಮದಲ್ಲಿದೆ.

ಕೃಷಿ ಪ್ರಧಾನ ಗ್ರಾಮವಾಗಿರುವ ಶಾಂತಳ್ಳಿಯು ಹಲವು ವೈಶಿಷ್ಠ್ಯಗಳನ್ನು ಹೊಂದಿರುವ ಪ್ರದೇಶವಾಗಿದೆ. ಇಂತಹಸ್ಥಳದಲ್ಲಿ ಕಳೆದ ೧೦೦ ವರ್ಷಗಳ ಹಿಂದೆ ಸ್ಥಾಪನೆಯಾಗಿ ಸಾವಿರಾರು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಕಾರಣವಾಗಿರುವ ಸರ್ಕಾರಿ ಶಾಲೆಯು ಇದೀಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಏಪ್ರಿಲ್ ೪ ರಿಂದ ೬ರವರೆಗೆ ವೈವಿಧ್ಯಮಯ ಕಾರ್ಯಕ್ರಮ ಗಳು ಆಯೋಜನೆಗೊಂಡಿವೆ.

ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆತಲುಪಿರುವ ಪ್ರಸ್ತುತ ಸನ್ನಿವೇಶದಲ್ಲಿ, ಶಾಂತಳ್ಳಿ ಹೋಬಳಿ ಕೇಂದ್ರದಲ್ಲಿರುವ ಈ ಶಾಲೆಯನ್ನು ಉಳಿಸಿ, ಬೆಳೆಸುವ ಸಂಕಲ್ಪ ದೊಂದಿಗೆ ಶತಮಾ ನೋತ್ಸವ ಕಾರ್ಯಕ್ರಮ ಆಯೋಜನೆಗೊಂಡಿದೆ.

೧೯೨೪ರಲ್ಲಿ ಶಾಂತಳ್ಳಿಯಲ್ಲಿ ಶಾಲೆ ಆರಂಭಗೊಂಡಿದ್ದು, ಹಿಂದೆ ೮ನೇ ತರಗತಿವರೆಗೆ ವ್ಯಾಸಂಗ ಮಾಡುವ ಅವಕಾಶವಿತ್ತು. ೧೯೬೪ರಿಂದ ೭ನೇ ತರಗತಿಗೆ ಸೀಮಿತಗೊಂಡಿದೆ. ಮೊದಲು ಶಾಲೆಯಲ್ಲಿ ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಸದ್ಯ ೨೨ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಸ್ಥಳೀಯರೇ ಆಗಿರುವ ಎಸ್.ಜಿ. ಮೇದಪ್ಪ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಶತಮಾ ನೋತ್ಸವ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪ್ರಾರಂಭಮಾಡಲು ಚಿಂತನೆ ನಡೆಸಲಾಗಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಾಹನದ ವ್ಯವಸ್ಥೆ ಮಾಡುವ ಚಿಂತನೆಯಿದೆ ಎಂದು ಸಮಿತಿಯ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

೧೯೨೪ರಲ್ಲಿ ಊರಿನ ಪ್ರಮುಖರಾಗಿದ್ದ ಅಪ್ಪಯ್ಯ ಅವರ ನೇತೃತ್ವದಲ್ಲಿ ಮಾಚಯ್ಯ, ತಿಮ್ಮಯ್ಯ, ಉತ್ತಯ್ಯ ಸೇರಿದಂತೆ ಪ್ರಮುಖರು ಸೇರಿ ಗ್ರಾಮದಲ್ಲಿ ಶಾಲೆಯನ್ನು ಸ್ಥಾಪಿಸುವ ಆಲೋಚನೆ ಹೊಂದಿದ್ದರು. ಕೂರ್ಗ್ ಗೌರ‍್ನಮೆಂಟ್‌ನಲ್ಲಿ ಈ ಭಾಗ ದಿಂದ ಮಲ್ಲಪ್ಪ ಅವರು ಮಂತ್ರಿಗಳಾಗಿದ್ದರು. ಅವರ ಸಹಕಾರದಿಂದ ಎಂಎಲ್‌ಎ ಆಗಿದ್ದ ಹರಗದ ಮುತ್ತಣ್ಣ ಅವರ ನೇತೃತ್ವದಲ್ಲಿ ಚರ್ಚೆ ನಡೆದು ಮಲ್ಲಪ್ಪ ಶಾಲೆಯ ಆರಂಭಕ್ಕೆ ಹಸಿರು ನಿಶಾನೆ ತೋರಿದರು. ಇದರೊಂದಿಗೆ ಅಪ್ಪಯ್ಯ ಶಾಲೆಗೆ ಮರಮುಟ್ಟುಗಳನ್ನು ಹೊಂದಿಸುವಲ್ಲಿ ಸ್ವತಃ ಶ್ರಮಿಸಿದ್ದರು.

ಶಾಂತಳ್ಳಿ, ಹರಗ, ತಲ್ತರೆಶೆಟ್ಟಳ್ಳಿ, ಅಭಿಮಠ ಬಾಚಳ್ಳಿ, ನಗರಳ್ಳಿ, ಕುಂದಳ್ಳಿ, ಬೆಟ್ಟದಕೊಪ್ಪ, ಕುಮಾರಳ್ಳಿ, ಹೆಗ್ಗಡಮನೆ, ನಾಡ್ನಳ್ಳಿ, ತಡ್ಡಿಕೊಪ್ಪ, ಕಂಬಳ್ಳಿ, ಕೊತ್ನಳ್ಳಿ, ತೋಳೂರು ಶೆಟ್ಟಳ್ಳಿ, ಕೂತಿ, ಕುಡಿಗಾಣ, ಬೆಂಕಳ್ಳಿ, ಬೀಕಳ್ಳಿ,ಬೆಟ್ಟದಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದ ಬಹಳಷ್ಟು ಪ್ರಮುಖರು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ೧೯೩೬ರಲ್ಲಿ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ತಂದೆ ರಾಮ ರಾಯರು ಇದೇ ಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದರು.

ಪ್ರಸ್ತುತ ಸೋಮವಾರಪೇಟೆ ತಾಲ್ಲೂಕು ತಹಸಿಲ್ದಾರ್ ಆಗಿರುವ ಕೃಷ್ಣಮೂರ್ತಿ ಅವರೂ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದರು. ಈ ಶಾಲೆಯಲ್ಲಿ ಓದಿದ ಹಲವು ಮಂದಿ ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರನ್ನೆಲ್ಲಾ ಗುರುತಿಸಿ ಶತಮಾನೋತ್ಸವಕ್ಕೆ ಆಹ್ವಾನಿಸುವ ಮೂಲಕ ಹಳೆಯ ವಿದ್ಯಾರ್ಥಿಗಳ ಸಮಾಗಮಕ್ಕೂ ಶತಮಾನೋತ್ಸವ ಸಮಾರಂಭ ವೇದಿಕೆ ಸೃಷ್ಟಿ ಸುತ್ತಿದೆ. ಶಾಲೆಯ ಶತಮಾನೋತ್ಸವವನ್ನು ಸ್ಮರಣೀಯವನ್ನಾಗಿಸಲು ಸ್ಮರಣ ಸಂಚಿಕೆಯನ್ನೂ ಹೊರತರಲಾಗುತ್ತಿದೆ. ಇದಕ್ಕೆ ಕಥೆ, ಕವನ, ಲೇಖನ ಗಳನ್ನು ಆಹ್ವಾನಿಸಲಾಗುತ್ತದೆ.

ಸಮಾರಂಭದಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ೧೫೦ಕ್ಕೂ ಅಽಕ ಪ್ರಮುಖ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿ, ಸಮಾಜಕ್ಕೆ ಪರಿಚಯ ಮಾಡಿಸಬೇಕೆಂಬ ಅಭಿಲಾಷೆಯೂ ಸಮಿತಿಯ ಸದಸ್ಯರ ಲ್ಲಿದೆ. ಶತಮಾನೋ ತ್ಸವವನ್ನು ಯಶಸ್ವಿಗೊಳಿಸಲು ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.

ಮೂರು ದಿನಗಳ ಕಾರ್ಯಕ್ರಮ..!

ಶಾಲಾ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಮಿತಿ ಕಾರ್ಯಯೋಜನೆ ರೂಪಿಸಿದೆ. ಏ.೪ರಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಡಾ. ಧನಂಜಯ್ ಮೇದಪ್ಪ ಅವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಆಯೋಜನೆಗೊಂಡಿದೆ. ಏ. ೫ರಂದು ಹೋಬಳಿ ಮಟ್ಟದ ವಾಲಿಬಾಲ್, ಕಬಡ್ಡಿ, ಥ್ರೋ ಬಾಲ್ ಪಂದ್ಯಾಟಗಳನ್ನು ಆಯೋಜಿಸಲಾಗಿದೆ. ಏ.೬ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಶಾಸಕರು, ಸಂಸದರು, ಮಾಜಿ ಮಂತ್ರಿಗಳು, ಮಾಜಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ. ಸಂಜೆ ೭ ಗಂಟೆಗೆ ಪ್ರೊ. ಕೃಷ್ಣೇಗೌಡ ಅವರಿಂದ ಹಾಸ್ಯ ರಸ ಸಂಜೆ ಕಾರ್ಯಕ್ರಮ ಆಯೋಜನೆಗೊಂಡಿದೆ.

” ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಸಂಭ್ರಮದಲ್ಲಿದೆ. ಈ ಪ್ರಯುಕ್ತ ಏಪ್ರಿಲ್ ೪ ರಿಂದ ೬ರವರೆಗೆ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೂರು ದಿನಗಳೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.”

-ಎಸ್.ಜಿ. ಮೇದಪ್ಪ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ

ಆಂದೋಲನ ಡೆಸ್ಕ್

Recent Posts

ಪಲ್ಸ್‌ ಪೋಲಿಯೋ ಅಭಿಯಾನ ಆರಂಭ : 5 ವರ್ಷದೊಳಗಿನ ನಿಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ !

ಕರ್ನಾಟಕದಾದ್ಯಂತ ಇಂದು ರಾಷ್ಟ್ರೀಯಾ ಪಲ್ಸ್‌ ಪೋಲಿಯೋ ಅಭಿಯಾನ 2025 ಚಾಲನೆ ಹೊರಡಿಸಲಾಗಿದ್ದು , ಡಿ.24 ವರೆಗೆ ಈ ಅಭಿಯಾನದಲ್ಲಿ 5…

2 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ:  ಚಳಿಗಾಲದ ಸಂಸತ್ ಅಧಿವೇಶನದ ಒಂದು ವಾರೆನೋಟ

ದೆಹಲಿ ಕಣ್ಣೋಟ -ಶಿವಾಜಿ ಗಣೇಶನ್‌  ಹತ್ತೊಂಬತ್ತು ದಿನಗಳ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎಂದಿನಂತೆ…

26 mins ago

ಅಕ್ರಮ ಗಾಂಜಾ ಮಾರಾಟ: ಮಹಿಳೆ ಬಂಧನ

ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…

36 mins ago

ಓದುಗರ ಪತ್ರ:  ಸಾಮಾಜಿಕ ಬಹಿಷ್ಕಾರಕ್ಕೆ ಜೈಲು ಶಿಕ್ಷೆ ಸ್ವಾಗತಾರ್ಹ

ಸಾಮಾಜಿಕ ಬಹಿಷ್ಕಾರ ಹಾಕಿದವರಿಗೆ ಜೈಲು ಶಿಕ್ಷೆ ಹಾಗೂ ಲಕ್ಷ ರೂ. ದಂಡವನ್ನು ವಿಧಿಸುವ ಮಸೂದೆಗೆ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ…

1 hour ago

ಓದುಗರ ಪತ್ರ: ಬಿಎಂಟಿಸಿ ಜನಹಿತ ಕಾಯಲಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಹೊರಬರಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಈ…

2 hours ago

ಓದುಗರ ಪತ್ರ: ಸಾರ್ವಜನಿಕ ಗ್ರಂಥಾಲಯದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ…

2 hours ago