Andolana originals

ಸೆಸ್ಕ್ ಸೇವಾ ಕೇಂದ್ರದಿಂದ ತ್ವರಿತವಾಗಿ ಸಿಗದ ಸೇವೆ

ಏಕೈಕ ಸೇವಾ ವಾಹನದಿಂದ ನಿರ್ವಹಣೆ ಕಷ್ಟ; ಮತ್ತೊಂದು ವಾಹನ ನೀಡಲು ವಿಳಂಬ

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ನಗರ ವ್ಯಾಪ್ತಿಯ ೨೪೭ ಸೇವಾ ಕೇಂದ್ರಕ್ಕೆ ವಿದ್ಯುತ್ ಸಂಬಂಧಿತ ದೂರು ನೀಡಿದರೆ ಬೇಗ ಸಮಸ್ಯೆ ಬಗೆಹರಿಯುತ್ತಿಲ್ಲ ವಿಳಂಬವಾಗುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿದೆ.

೨೪೭ ವಾಹನದ ಸಹಾಯವಾಣಿ ೯೪೪೯೫೯೮೬೬೬, ದೂರು ಸ್ವೀಕಾರ ಕೇಂದ್ರದ ಸ್ಥಿರ ದೂರವಾಣಿ ಸಂಖ್ಯೆ ೦೮೨೨೬-೨೨೫೦೩೮, ಕೇಂದ್ರದ ಇಂಜಿನಿಯರ್ ೯೪೪೯೫೯೮೬೮೬ ಅಥವಾ ಟೋಲ್ ಫ್ರೀಂ ಸಂಖ್ಯೆ ೦೮೦೦೫೯೯೦೦೬೩ ಕ್ಕೆ ವಿದ್ಯುತ್ ಸಂಬಂಧಿತ ದೂರು ನೀಡಿದರೆ ಸ್ವೀಕಾರ ಆಗಲಿದೆ.

ನಗರದ ವ್ಯಾಪ್ತಿಯಲ್ಲಿ ಗಾಳಿ ಸಹಿತ ಭರ್ಜರಿ ಮಳೆ ಬಿದ್ದಾಗ ವಿದ್ಯುತ್ ಲೈನ್ ತುಂಡಾಗುತ್ತದೆ. ಟ್ರಾನ್ಸ್‌ಫಾರ್ಮರ್‌ಗಳು ಸಹ ಸುಟ್ಟು ಹೋಗಲಿವೆ. ತಾಂತ್ರಿಕ ಕಾರಣಗಳಿಂದ ಸಿಂಗಲ್ ಫೇಸ್ ಆಗಲಿದೆ. ಅಗತ್ಯಕ್ಕೆ ತಕ್ಕಂತೆ ಟಿಸಿ ಅಳವಡಿಸದಿರುವುದು ಹಾಗೂ ಜೋತು ಬಿದ್ದಿರುವ ಲೈನ್‌ಗಳನ್ನು ಸರಿಪಡಿಸದೆ ಇರುವುದು ಕೂಡ ವಿದ್ಯುತ್ ಕೈಕೊಡಲು ಕಾರಣವಾಗಿದೆ. ವಿದ್ಯುತ್ ವ್ಯತ್ಯಯ ಸಂಬಂಧ ದೂರುಗಳು ದಾಖಲಾದರೆ ಕ್ರಮ ವಹಿಸಲು ಸೆಸ್ಕ್ ಸಿಬ್ಬಂದಿ ಕನಿಷ್ಠ ಒಂದರಿಂದ ೨ ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ವಿದ್ಯುತ್ ಸಮಸ್ಯೆಗಳು ಇತ್ಯರ್ಥಗೊಳ್ಳುವುದು ವಿಳಂಬವಾಗುತ್ತಿವೆ. ನಗರ ವ್ಯಾಪ್ತಿಯಲ್ಲಿ ೨೪೭ ಸೇವೆ ಒಂದೇ ವಾಹನ ಇರುವುದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ವಿದ್ಯುತ್ ಸಮಸ್ಯೆ ಇತ್ಯರ್ಥ ವಿಳಂಬದಿಂದ ವಿದ್ಯಾರ್ಥಿಗಳು ಓದಲಿಕ್ಕೆ ಅನನುಕೂಲ ಆಗುತ್ತಿದೆ. ರಾತ್ರಿ ಸಮಯ ಜನ ಸಾಮಾನ್ಯರು ರಸ್ತೆಗಳಲ್ಲಿ ಓಡಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ, ರಾತ್ರಿ ಸಮಯ ವಿದ್ಯುತ್ ವ್ಯತ್ಯಯವಾದಾಗ ಕಳ್ಳತನದ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿವೆ. ಸದ್ಯ ನಗರದಲ್ಲಿರುವ ೨೪೭ ಸೇವಾ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುತ್ತಿಲ್ಲ. ಜೊತೆಗೆ ಹೆಚ್ಚುವರಿಯಾಗಿ ಇನ್ನೊಂದು ವಾಹನವನ್ನು ನೀಡುತ್ತಿಲ್ಲ. ಕೇವಲ ಒಂದು ವಾಹನ ಇಬ್ಬರು ಮಾರ್ಗದಾಳು ಹಾಗೂ ಚಾಲಕರೊಬ್ಬರು ಇರುತ್ತಾರೆ. ಇವರೇ ಎಲ್ಲಾ ದೂರುಗಳನ್ನು ಪರಿಹರಿಸಬೇಕಾಗಿದೆ.

ಇದನ್ನು ಓದಿ : ಮರಳಾಪುರದಲ್ಲಿ ವೃದ್ಧೆ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

ಇದರ ಬಗ್ಗೆ ವಿದ್ಯುತ್ ಸಂಬಂಧದ ಜನಸಂಪರ್ಕ ಸಭೆಯಲ್ಲಿ ಸೆಸ್ಕ್‌ನ ಕಾರ್ಯನಿರ್ವಾಹಕ ಇಂಜಿನಿಯರ್‌ಗಳ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ನಗರದ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಹೆಚ್ಚುರಿಯಾಗಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಬೇಕಿದೆ. ನೂತನ ಮಾದರಿಯ ಎಬಿಸಿ ಕೇಬಲ್ಗಳನ್ನು, ಕವರ್ ಕಂಡಕ್ಟರ್ ಅಳವಡಿಸಿಲ್ಲ. ಇದಕ್ಕಾಗಿ ಸೆಸ್ಕ್‌ನಲ್ಲಿ ೧೫೦ ಕೋಟಿ ರೂ. ಅನುದಾನವಿದ್ದರೂ ಬಳಸುತ್ತಿಲ್ಲ. ತಡರಾತ್ರಿ ನಂತರ ದೂರು ಕೇಂದ್ರದ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ. ಸ್ಥಿರ ದೂರವಾಣಿಯ ರಿಸೀವರ್‌ಅನ್ನು ಎತ್ತಿಟ್ಟು ಸುಮ್ಮನಾಗುತ್ತಾರೆ. ಕರೆ ಮಾಡಿದರೆ ಸಂಪರ್ಕವಿಲ್ಲ ಎಂಬ ಉತ್ತರ ಬರುತ್ತದೆ ಎಂಬ ದೂರು ಕೇಳಿಬಂದಿದೆ.

” ನಗರ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಪರಿವರ್ತಕಗಳನ್ನು ಅಳವಡಿಸದೆ ಇರುವುದರಿಂದ ಪದೇಪದೇ ವಿದ್ಯುತ್ ಪರಿವರ್ತಕಗಳು ಅಧಿಕ ಭಾರದಿಂದ ಕೆಡುತ್ತಿದ್ದು ಜನಸಾಮಾನ್ಯರು ಪ್ರತಿನಿತ್ಯ ನಿರಂತರವಾಗಿ ಸಮಸ್ಯೆಯನ್ನು ಅನುಭವಿಸಬೇಕಾಗಿದೆ. ಹಳೆಯ ವಿದ್ಯುತ್ ವಾಹಕಗಳನ್ನು ತೆರವುಗೊಳಿಸಿ ನೂತನ ಮಾದರಿಯ ಎಬಿಸಿ ಕೇಬಲ್‌ಗಳನ್ನು, ಕವರ್ ಕಂಡಕ್ಟರ್ ಅಳವಡಿ ಸದ ಕಾರಣ ವಿದ್ಯುತ್ ವಾಹಕಗಳ ಮೇಲೆ ಮರದ ಕೊಂಬೆ, ರೆಂಬೆಗಳು ಬಿದ್ದಾಗ ವಿದ್ಯುತ್ ಸಮಸ್ಯೆಗಳು ಎದುರಾಗುತ್ತಿವೆ.”

-ಭಾನುಪ್ರಕಾಶ್, ಸಾಮಾಜಿಕ ಹೋರಾಟಗಾರರು, ಚಾ.ನಗರ

” ಸೆಸ್ಕ್ ಚಾ.ನಗರ ವಿಭಾಗದಲ್ಲಿ ಚಾಮರಾಜನಗರ, ಸಂತೇಮರಹಳ್ಳಿ, ಹರದನಹಳ್ಳಿ, ಬೇಗೂರು,ಗುಂಡ್ಲುಪೇಟೆಗಳಲ್ಲಿ ೨೪೭ ಸೇವಾ ವಾಹನಗಳಿವೆ. ಆದರೆ, ಚಾಮರಾಜನಗರ ವ್ಯಾಪ್ತಿಯಲ್ಲಿ ೨೪೭ ಸೇವೆಗೆ ಒಂದು ವಾಹನ ಮಾತ್ರವಿದೆ. ಇನ್ನೊಂದು ವಾಹನ ಬೇಕೆಂದು ಸೆಸ್ಕ್‌ನ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಮತ್ತೊಂದು ವಾಹನದ ಮೂಲಕ ಸೇವೆ ನೀಡಲಾಗುತ್ತಿದೆ.”

-ಸಿ.ಎಸ್.ಪ್ರವೀಣ್, ಸೆಸ್ಕ್, ನಗರ ಸಹಾಯಕ ಇಂಜಿನಿಯರ್

-ಪ್ರಸಾದ್ ಲಕ್ಕೂರು

ಆಂದೋಲನ ಡೆಸ್ಕ್

Recent Posts

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

28 mins ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

1 hour ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

3 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

3 hours ago

ಮಂಡ್ಯ ಭಾಗದ ರೈತರ ಅಭಿವೃದ್ಧಿಗೆ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸ್ಥಾಪನೆ: ಎನ್ ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…

3 hours ago

ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿರುತ್ತದೆ ಎಂದ ಸಚಿವ ಎಂ.ಬಿ.ಪಾಟೀಲ್‌

ಬೆಂಗಳೂರು: ಆರ್‌.ಅಶೋಕ್‌ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್‌…

3 hours ago