Andolana originals

ಅರಮನೆ ಅಂಗಳದಲ್ಲಿ ಆಸನ ವ್ಯವಸ್ಥೆ ಕಡಿತ

ಕೆ.ಬಿ.ರಮೇಶನಾಯಕ

ಕಳೆದ ವರ್ಷ ಅDiಕ ಜನರಿಗೆ ಅವಕಾಶ ಕಲ್ಪಿಸಲು ಹೆಚ್ಚಿಸಿದ್ದ ಆಸನ ಸೌಲಭ್ಯ

ಸಿಎಂ ಸೂಚನೆಯಂತೆ ಬಾರಿ ೧೧ ಸಾವಿರಕ್ಕೂ ಹೆಚ್ಚು ಆಸನಗಳ ಕಡಿತ

ವಿವಿಐಪಿ, ವಿಐಪಿ ಪಾಸ್ಗಳ ವಿತರಣೆಯಲ್ಲೂ ಬಿಗಿ ಕ್ರಮಕ್ಕೆ ಸೂಚನೆ 

ಮೈಸೂರು: ವಿಜಯದಶಮಿ ಮೆರವಣಿಗೆಯ ವೀಕ್ಷಣೆಗೆ ಅರಮನೆ ಆವರಣದಲ್ಲಿ ಹೆಚ್ಚಿನ ಆಸನಗಳನ್ನು ಕಲ್ಪಿಸಿ ಗೊಂದಲ ವಾಗುತ್ತಿದ್ದನ್ನು ತಡೆಯಲು ಮುಂದಾಗಿರುವ ಜಿಲ್ಲಾಡಳಿತ, ಈ ಬಾರಿ ಬರೋಬ್ಬರಿ ೧೧ ಸಾವಿರಕ್ಕೂ ಹೆಚ್ಚು ಆಸನಗಳನ್ನು ಕಡಿತ ಮಾಡಲು ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಈ ಬಾರಿ ಅರಮನೆ ಆವರಣದಲ್ಲಿ ಆಸನದ ವ್ಯವಸ್ಥೆ ಕಲ್ಪಿಸುವಾಗ ವಿವಿಐಪಿ, ವಿಐಪಿ ಆಸನಗಳು ಸೇರಿದಂತೆ ಎಲ್ಲಾ ರೀತಿಯ ಪಾಸ್‌ಗಳ ಪ್ರಮಾಣ ತಗ್ಗಲಿದೆ. ಹಂಚಿಕೆ ಮಾಡುವ ಪಾಸ್‌ಗಳಿಗಷ್ಟೇ ಆಸನ ವ್ಯವಸ್ಥೆ ಮಾಡಿಸಿ ಯಾವುದೇ ಗೊಂದಲ ಇಲ್ಲದಂತೆ ಅಚ್ಚುಕಟ್ಟಾಗಿ ನೋಡಿಕೊಳ್ಳಲು ಈ ಬಾರಿ ಅಗತ್ಯ ಕ್ರಮಕ್ಕೆ ಸಜ್ಜಾಗಿದೆ.  ಅಚ್ಚುಕಟ್ಟಾಗಿ ನೋಡಿಕೊಳ್ಳಲು ಈ ಬಾರಿ ಅಗತ್ಯ ಕ್ರಮಕ್ಕೆ ಸಜ್ಜಾಗಿದೆ.

ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇನ್ನಿಲ್ಲದ ಪೈಪೋಟಿ ನೀಡಿ ದಸರಾ ಪಾಸ್ ಪಡೆದುಕೊಳ್ಳುವುದರಿಂದ ಸಾಕಷ್ಟು ಒತ್ತಡ ಇರುತ್ತದೆ. ಪಾಸ್ ಪಡೆದುಕೊಂಡು ಅರಮನೆಯಲ್ಲಿ ಕುಳಿತು ನೋಡಬೇಕೆಂಬ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಪಾಸ್‌ಗಳ ಬೇಡಿಕೆ ಹೆಚ್ಚಾಗಿತ್ತು. ಅದರಂತೆ, ವರ್ಷದಿಂದ ವರ್ಷಕ್ಕೆ ಅರಮನೆ ಆವರಣದಲ್ಲಿ ಆಸನಗಳ ವ್ಯವಸ್ಥೆಯ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಬರುವ ಮೂಲಕ ಪಾಸ್ ವಿತರಣೆ ಮಾಡಲಾಗುತ್ತಿತ್ತು. ಹಾಗಾಗಿ, ಗೊಂದಲ ಉಂಟಾಗುತ್ತಿತ್ತು.

೨೦೨೩ರಲ್ಲಿ ೩೮,೦೦೦ ಪಾಸ್‌ಗಳನ್ನು ವಿತರಣೆ ಮಾಡಲಾಗಿದ್ದರೆ, ೨೦೨೪ರಲ್ಲಿ ವಿವಿಐಪಿ, ವಿಐಪಿ ಸೇರಿದಂತೆ ಎಲ್ಲ ಕೆಟಗರಿಗಳ ಪಾಸ್‌ಗಳನ್ನು ಹೆಚ್ಚಿಸಿ ೫೯,೬೦೦ ಪಾಸ್‌ಗಳನ್ನು ವಿತರಿಸಲಾಗಿತ್ತು. ಪಾಸ್‌ಗಳ ಸಂಖ್ಯೆ ಜಾಸ್ತಿ ಮಾಡಿದ್ದರಿಂದಾಗಿ ಆನೆಗಳನ್ನು ಕೋಡಿ ಸೋಮೇಶ್ವರ ದೇವಸ್ಥಾನ ಮಾರ್ಗವಾಗಿ ಕರೆ ತರಲಾಗಿತ್ತು. ಅರಮನೆ ಒಳಗೆ ಹೆಚ್ಚಿನ ಪಾಸ್ ವಿತರಣೆ ಮಾಡಿದ್ದರಿಂದ ಸಾಕಷ್ಟು ಸಮಸ್ಯೆ, ಅವ್ಯವಸ್ಥೆ ಉಂಟಾಯಿತೆಂದು ಅನೇಕ ಜನಪ್ರತಿನಿಧಿಗಳು ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಪರಾಮರ್ಶಿಸಿ ಸಿಎಂ ಗಮನಕ್ಕೆ ತಂದಿದ್ದರು. ಸಿಎಂ ಸೂಚನೆ ಮೇರೆಗೆ ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ಆಸನಗಳ ಸಂಖ್ಯೆ ಕಡಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

೧೧,೬೦೦ ಆಸನಗಳು ಕಡಿಮೆ: ಕಳೆದ ವರ್ಷ ೫೯,೦೦೦ ಆಸನಗಳ ವ್ಯವಸ್ಥೆ ಮಾಡಿದ್ದರೆ, ಈ ಬಾರಿ ೧೧,೬೦೦ ಆಸನಗಳನ್ನು ಕಡಿಮೆಗೊಳಿಸಿ ೪೮,೦೦೦ ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಳೆದ ವರ್ಷ ವಿವಿಐಪಿ, ವಿಐಪಿಗಳಿಗೆ ೫ ಸಾವಿರ ಆಸನಗಳನ್ನು ನಿಗದಿಪಡಿಸಿದ್ದರೆ, ಈ ಬಾರಿ ತಲಾ ಒಂದು ಸಾವಿರ ಆಸನ ಕಡಿಮೆ ಮಾಡ ಲಾಗುತ್ತಿದೆ. ಅದೇ ರೀತಿ ಇ ಎನ್ ಕ್ಲೋಸರ್‌ನಿಂದ ಡಬ್ಲ್ಯೂ ಎನ್ ಕ್ಲೋಸರ್‌ವರೆಗೆ ಕನಿಷ್ಠ ೫೦೦ ರಿಂದ ೧ ಸಾವಿರ ಆಸಗಳಿಗೆ ಕಡಿವಾಣ ಹಾಕಲಾಗಿದೆ. ಆಸನ ಕಲ್ಪಿಸುವ ಜಾಗಗಳಿದ್ದರೂ ಶಾಮಿಯಾನ ಹಾಕಿ ಚೇರ್‌ಗಳನ್ನು ಹಾಕುತ್ತಿಲ್ಲದ್ದನ್ನು ಮನಗಂಡಿರುವ ಅಧಿಕಾರಿಗಳು ಈ ಬಾರಿ ಅಂತಹ ಕಡೆಗಳಲ್ಲಿ ಅಂದರೆ ಯು ಎನ್‌ಕ್ಲೋಸರ್‌ನಲ್ಲಿ ೨ಸಾವಿರ, ವಿ ಎನ್‌ಕ್ಲೋಸರ್‌ನಲ್ಲಿ ೨ ಸಾವಿರ, ಡಬ್ಲ್ಯೂ ಎನ್ ಕ್ಲೋಸರ್‌ನಲ್ಲಿ ೧ಸಾವಿರ ಸೀಟುಗಳನ್ನು ಸೃಜಿಸಲು ಮುಂದಾಗಿದ್ದಾರೆ

” ಜಂಬೂಸವಾರಿ ಮೆರವಣಿಗೆ ವೀಕ್ಷಣೆಗಾಗಿ ಕಳೆದ ವರ್ಷ ನಿಗದಿಪಡಿಸಿದ್ದ ಆಸನಗಳಿಗಿಂತ ಈ ಬಾರಿ ಒಂದಿಷ್ಟು ಕಡಿತಗೊಳಿಸಲಾಗಿದೆ. ಅರಮನೆ ಆವರಣದಲ್ಲಿ ಈ ಬಾರಿ ಆಸನಗಳ ವ್ಯವಸ್ಥೆಯಲ್ಲಿ ಯಾವುದೇ ಲೋಪ ಆಗದಂತೆ ಗಮನಹರಿಸಲಾಗುವುದು. ಹತ್ತು ಸಾವಿರಕ್ಕೂ ಹೆಚ್ಚು ಆಸನಗಳನ್ನು ಕಡಿಮೆ ಮಾಡುತ್ತಿರುವುದರಿಂದ ಸುಗಮವಾಗಿ ವೀಕ್ಷಣೆ ಮಾಡಲು ಸಾಧ್ಯವಾಗಲಿದೆ.”

-ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು

” ಮುಖ್ಯಮಂತ್ರಿಗಳ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಆಸನಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಜನಪ್ರತಿನಿಧಿಗಳು ನೀಡಿದ ಅಭಿಪ್ರಾಯ, ಸಲಹೆಯನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನ ಕೈಗೊಂಡಿದ್ದರು. ಅದರಂತೆ ನಾವು ಕ್ರಮಕೈಗೊಳ್ಳುತ್ತಿದ್ದೇವೆ.”

ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ

ಆಂದೋಲನ ಡೆಸ್ಕ್

Recent Posts

ಕೇಂದ್ರ ಸಚಿವ ವಿ.ಸೋಮಣ್ಣ ಸಹೋದರಿ ನಿಧನ

ರಾಮನಗರ: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಸಹೋದರಿ ಮಹಾದೇವಮ್ಮ ನಿಧನರಾಗಿದ್ದಾರೆ. ಕನಕಪುರ ತಾಲ್ಲೂಕಿನ…

5 hours ago

ಹಾಸನದಲ್ಲೂ ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಹಾಸನ: ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಬಾಗಲಕೋಟೆ,…

5 hours ago

ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ಪಿಡಬ್ಲ್ಯೂಡಿ ಎಇಇ ಸತೀಶ್ ಮನೆ…

5 hours ago

ಮೈಸೂರು ಮೃಗಾಲಯದಲ್ಲಿ ‘ಕೂಲ್ ಕೂಲ್’ ವಾತಾವರಣ: ಪ್ರಾಣಿಗಳ ರಕ್ಷಣೆಗೆ ವಿಶೇಷ ಕ್ರಮ

ಮೈಸೂರು: ​ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದ್ದು, ಮನುಷ್ಯರಂತೆ ಮೃಗಾಲಯದ ವನ್ಯಜೀವಿಗಳೂ ಕೂಡ ತತ್ತರಿಸಿವೆ. ಪ್ರಾಣಿ-ಪಕ್ಷಿಗಳಿಗೆ…

6 hours ago

ಇರಾನ್‌-ಇಸ್ರೇಲ್‌ ಯುದ್ಧದ ಎಫೆಕ್ಟ್:‌ ದುಬಾರಿಯಾಗಲಿದೆ ಡ್ರೈಫ್ರೂಟ್ಸ್‌

ಬೆಂಗಳೂರು: ಇರಾನ್-ಇಸ್ರೇಲ್‌ ನಡುವಿನ ಯುದ್ಧದಿಂದಾಗಿ ಪ್ರಪಂಚದಾದ್ಯಂತ ತೈಲ ಮಾರುಕಟ್ಟೆಗಳು ಸಂಪೂರ್ಣವಾಗಿ ಅಲುಗಾಡುತ್ತಿವೆ. ಇದರ ಎಫೆಕ್ಟ್‌ ರಾಜ್ಯದ ಮೇಲೂ ತಟ್ಟಿದ್ದು, ಡ್ರೈಫ್ರೂಟ್ಸ್‌…

6 hours ago

ಬರಿಗೈಯಲ್ಲಿ ಚರಂಡಿ ಸ್ವಚ್ಛ ಮಾಡಿದ ಪೌರಕಾರ್ಮಿಕರು

ನಂಜನಗೂಡು: ಸ್ವಚ್ಛತೆಯ ಮೂಲಕವೇ ಗ್ರಾಮದ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರಿಗೆ ಸರ್ಕಾರ ಅಗತ್ಯ ರಕ್ಷಣಾತ್ಮಕ ಸೌಲಭ್ಯಗಳನ್ನು ನೀಡುವುದರ ಜೊತೆ ಚರಂಡಿಗಳನ್ನು…

7 hours ago