Andolana originals

ಹಾವಿನ ವಿಷ ಸಂಗ್ರಹಣೆಗಾಗಿ ‘ಸರ್ಪಾಲಯ’

ಮೈಸೂರಲ್ಲಿ ರಾಜ್ಯದ ಮೊದಲ ಆಂಟಿವೆನಮ್ ಪ್ರಯೋಗಾಲಯ

ಹುಣಸೂರು ತಾಲ್ಲೂಕಿನ ರತ್ನಪುರಿ ಗ್ರಾಮದಲ್ಲಿ ಲ್ಯಾಬ್ ಆರಂಭ

೮೦ ವಿಷಪೂರಿತ ಸರ್ಪಗಳ ಸಂಗ್ರಹ ಸಂಶೋಧನೆಯಲ್ಲಿ ನಾಲ್ವರು ಜೀವಶಾಸ್ತ್ರಜ್ಞರು  

ಸಾಲೋಮನ್

ಮೈಸೂರು: ಹಾವು ಕಚ್ಚಿದಾಗ ಸೂಕ್ತ ಔಷಧ ಲಭ್ಯವಿಲ್ಲದ ಕಾರಣ ಹಾವು ಎಂದರೆ ಎಲ್ಲರಿಗೂ ಭಯ ಇದ್ದೇ ಇದೆ. ವಿಷಪೂರಿತ ಹಾವು ಕಡಿತಕ್ಕೆ ಔಷಧಿ ಕಂಡು ಹಿಡಿಯುವ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೂ ಅಗತ್ಯ ಪ್ರಮಾಣದಲ್ಲಿ ಗುಣಮಟ್ಟದ ಔಷಧ ತಯಾರಾಗುತ್ತಿಲ್ಲ.

ಪ್ರಸ್ತುತ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಹಾವು ಕಡಿತದ ಸಂಶೋಧನೆ ಮತ್ತು ನಿರ್ವಹಣಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಅದು ಮೈಸೂರು ಜಿ ಹುಣಸೂರು ತಾಲ್ಲೂಕಿನ ರತ್ನಪುರಿ ಗ್ರಾಮದಲ್ಲಿ ಆರಂಭವಾಗಿದೆ. ಜೀವಂತ ಹಾವುಗಳಿಂದ ವಿಷ ಸಂಗ್ರಹಿಸಿ ಅದರಿಂದ ಔಷಧ ಕಂಡು ಹಿಡಿಯುವ ಹಾಗೂ ಸಂಶೋಧನೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಲಿಯಾನಾ ಟ್ರಸ್ಟ್ ಒಡಂಬಡಿಕೆ ಮಾಡಿಕೊಂಡಿದ್ದು, ರಾಜ್ಯ ಅರಣ್ಯ ಇಲಾಖೆಯ ಆಶ್ರಯದಲ್ಲಿ ಮಾನವ-ಹಾವಿನ ಸಂಘರ್ಷವನ್ನು ನಿಭಾಯಿಸಲು ಮತ್ತು ಆಂಟಿವೆನಮ್ ಸಂಶೋಧನೆ ಕೇಂದ್ರ ಆರಂಭಿಸಲಾಗಿದೆ.

ಹಾವು ಕಡಿತದ ಸಂಶೋಧನೆ, ನಿರ್ವಹಣೆ ಮತ್ತು ಪ್ರಯೋಗಾಲಯ ‘ಸರ್ಪೆಂಟೇರಿಯಂ’ (ಸರ್ಪಾಲಯ) ವನ್ನು ಇತ್ತೀಚೆಗೆ ಹುಣಸೂರು ಪ್ರಾದೇಶಿಕ ಅರಣ್ಯ ಇಲಾಖೆಯ ಡಿಸಿಎ- ಎಂ.ಮಹಮ್ಮದ್ -ಯಾಜುದ್ದೀನ್ ಉದ್ಘಾಟಿಸಿದರು. ಈ ಸರ್ಪೆಂಟೇರಿಯಂ, ರಾಜ್ಯದಲ್ಲಿ ಮೊದಲನೆಯದು, ವೈದ್ಯಕೀಯವಾಗಿ ಮಹತ್ವದ ಪ್ರಯೋಗಾಲಯವಾಗಿದೆ.

ಹಾವುಗಳನ್ನು ತಾವೇ ಸಾಕಿ ಅವುಗಳಿಂದ ವಿಷ ಸಂಗ್ರಹಿಸಿ ಅದನ್ನು ಔಷಧ ತಯಾರಿಕೆಗೆ ಬೇರೆಡೆ ಕಳುಹಿಸುವ ಕಾರ್ಯ ಇಲ್ಲಿ ನಡೆಸಲಾಗುತ್ತಿದೆ. ಹಾವು ಕಡಿತಕ್ಕೊಳ ಗಾದವರಿಗೆ ಹೆಚ್ಚು ಪರಿಣಾಮಕಾರಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.

ಆರೋಗ್ಯ ಇಲಾಖೆ: ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಿ ದೇಶದ ಪ್ರಥಮವಾಗಿ ಕರ್ನಾಟಕ ಆರೋಗ್ಯ ಇಲಾಖೆ ಘೋಷಿಸಿದೆ. ಕರ್ನಾಟಕ ರಾಜ್ಯದ ಹಾವು ಕಡಿತ ವರದಿಗಳು ಹೆಚ್ಚಾಗಿಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕ ಆರೋಗ್ಯ ಮತ್ತು ಹಾವು ಕಡಿತದ ನಿರ್ವಹಣೆಯ ಕಾರ್ಯತಂತ್ರಗಳಿಗೆ ಅಮೂಲ್ಯವಾದದ್ದು.

ಅರಣ್ಯ ಇಲಾಖೆ ಮೈಲಿಗಲ್ಲು : ಸಮುದಾಯಗಳು, ಪರಿಸರ ವ್ಯವಸ್ಥೆಗಳು ಮತ್ತು ಮಾನವ-ಹಾವುಗಳ ಸಂಘರ್ಷದ ಗಣನೀಯ ಜವಾಬ್ದಾರಿಯನ್ನು ತಗ್ಗಿಸಲು ಕರ್ನಾಟಕ ಅರಣ್ಯ ಇಲಾಖೆಯು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ‘ಸರ್ಪೆಂಟೇರಿಯಂ’ ಒಂದು ಮಹತ್ವದ ಮೈಲಿಗಲ್ಲು. ಈ ಸಮಸ್ಯೆಯ ನಿರ್ಣಾಯಕ ಸ್ವರೂಪವನ್ನು ಗುರುತಿಸಿ, ಪರಿಹಾರಕ್ಕೆ ಇಲಾಖೆಯು ಪೂರ್ವಸಿದ್ಧತೆ ಮಾಡಿಕೊಂಡಿದೆ.

ವೈಜ್ಞಾನಿಕ ಕೊಡುಗೆಗಳು : ಇಂಡಿಯನ್ ಇನ್ಸ್ ಟಿಟ್ಯೂಟ್ ಆ- ಸೈನ್ಸ್ (ಐಐಎಸ್‌ಸಿ) ನಲ್ಲಿ ‘ಎವಲ್ಯೂ ಷನರಿ ವೆನೊಮಿಕ್ಸ್ ಪ್ರಯೋಗಾಲಯ’ದ ಸಹಯೋಗ ದೊಂದಿಗೆ, ಲಿಯಾನಾ ಟ್ರಸ್ಟ್ ಭಾರತದಾದ್ಯಂತ ಸಿಗುವ ವಿಷ ಸರ್ಪಗಳ ಭೌಗೋಳಿಕ ವ್ಯತ್ಯಾಸವನ್ನು ಗುರುತಿಸುವ ಜವಾಬ್ದಾರಿ ನಿರ್ವಹಿಸಿದೆ.

ಹಾವು ಕಡಿತದ ಉಪಶಮನ: ‘ದಿ ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಷನಲ ಇಂಡಿಯಾ’ ಸಂಸ್ಥೆಯ ಸಹಭಾಗಿತ್ವದಲ್ಲಿ, ಲಿಯಾನಾ ಟ್ರ ಮೈಸೂರು ಜಿಯ ರತ್ನಪುರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಾವುಗಳು ಮತ್ತು ಹಾವು ಕಡಿತದ ಬಗ್ಗೆ  ಮಾಹಿತಿ ನೀಡಲು ವಾಟ್ಸಾಪ್ ಗ್ರೂಪ್‌ಗಳ ರಚನೆ, ವೈದ್ಯಕೀಯ ಸಿಬ್ಬಂದಿಗೆ ತರಬೇತಿ ಮತ್ತು ಸಾವಿರಕ್ಕೂ ಹೆಚ್ಚು ಹಾವು ಕಡಿತದ ಪರಿಹಾರ ಕಿಟ್‌ಗಳ (ಗಮ್ ಬೂಟ್‌ಗಳು, ಸೊಳ್ಳೆ ಪರದೆಗಳು, ಟಾರ್ಚ್ ಇತ್ಯಾದಿ) ವಿತರಣೆಯನ್ನು ಒಳಗೊಂಡಿದೆ.

ಪ್ರಯೋಗ ನಡೆಸುತ್ತಿರುವ ಜೀವಶಾಸ್ತ್ರಜ್ಞರು: ಜೆರ್ರಿ ಮಾರ್ಟಿನ್, ಕಿರಣ್ ಪ್ರಭು, ಲೀಸಾ ಗೊನ್ಸಾಲ್ವಿಸ್, ಅವಿನಾಶ್ ಲಿಯಾನಾ ಟ್ರ ಲ್ಯಾಬ್ ನಲ್ಲಿ ಜೀವಶಾಸಜ್ಞರಾಗಿ ಸಂಶೋಧನೆ ನಡೆಸುತ್ತಿzರೆ. ಹಿರಿಯ ಜೀವಶಾಸಜ್ಙರು ಸೂಚನೆ ನೀಡಿದ ನಂತರವೇ ಹಾವಿನಿಂದ ವಿಷವನ್ನು ಹೊರತೆಗೆಯುತ್ತೇವೆ. ಸದ್ಯಕ್ಕೆ ತಿಂಗಳಿಗೆ ಸುಮಾರು ೫ ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ವಿಷ ಸಂಗ್ರಹವಾಗುತ್ತದೆ. ರಾಜ್ಯದಲ್ಲಿ ಸಂರಕ್ಷಿಸಿದ ವಿಷದ ಹಾವುಗಳಾದ ಕಾಳಿಂಗ ಸರ್ಪ, ನಾಗರ ಹಾವು, ಮಂಡಲದ ಹಾವು ಹಾಗೂ ಕಟ್ಟಿನ ಹಾವುಗಳನ್ನು ಇಲ್ಲಿ ಸಾಕಲಾಗುತ್ತದೆ. ಸರ್ಪೆಂಟೇರಿಯಂನಲ್ಲಿ ಸರಿಸುಮಾರು ೮೦ ಹಾವುಗಳು ಇವೆ. ಅವುಗಳಿಂದ ವಿಷವನ್ನು ಸಂಗ್ರಹಿಸಿ ಅದನ್ನು ಐಐಎಸ್‌ಸಿಯ ‘ಎವಲ್ಯೂಷನರಿ ವೆನೊಮಿಕ್ಸ್ ಲ್ಯಾಬ್’ನಲ್ಲಿ ಸಂಶೋಧನೆ ನಡೆಸಿ ಆಂಟಿವೆನಮ್ ತಯಾರಿಸಲಾಗುತ್ತದೆ.

ಸಂಶೋಧನೆ ಮತ್ತು ಅಭಿವೃದ್ಧಿ: 

* ಕೇವಲ ವಿಷ ಸಂಗ್ರಹಿಸುವುದು ಮಾತ್ರವಲ್ಲದೆ, ಹಲವಾರು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ

*  ಮಾನವರು ಮತ್ತು ಹಾವುಗಳ ನಡುವಿನ ಋಣಾತ್ಮಕ ಸಂಘರ್ಷಗಳನ್ನು ತಗ್ಗಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸಲು,

*  ಮಾನವ-ಹಾವಿನ ಸಂಘರ್ಷದ ಡೈನಾಮಿಕ್ಸ್ ತನಿಖೆ ಮಾಡುವುದು

*  ಜೀವ ಉಳಿಸುವ ಆಂಟಿವೆನಮ್ ಉತ್ಪಾದನೆಗೆ ವಿಷದ ಮಾದರಿಗಳನ್ನು ಉಚಿತವಾಗಿ ಒದಗಿಸುವುದು

*  ಹಾವು ಕಡಿತದ ಸಂಭವ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ವಿಧಾನಗಳನ್ನು ಗುರುತಿಸಲು ವಿವಿಧ ಹಾವು ಕಡಿತದ ಉಪಶಮನ ತಂತ್ರಗಳನ್ನು ಪರೀಕ್ಷಿಸುವುದು

*  ಹಾವು ಸಾಕಣೆ, ಸಂಶೋಧನೆ ಮತ್ತು ಸಂರಕ್ಷಣೆಯಲ್ಲಿ ತರಬೇತಿ ನೀಡುವ ಕೇಂದ್ರವಾಗಿ ಸೇವೆ ಸಲ್ಲಿಸುವುದು, ಈ ಕ್ಷೇತ್ರಗಳಲ್ಲಿ ಹೊಸ ಪೀಳಿಗೆಯ ಪರಿಣತರನ್ನು ಬೆಳೆಸುವುದು

ಮಾನವ- ವನ್ಯಜೀವ ಸಂಘರ್ಷ ನಿಯಂತ್ರಣ ಉದ್ದೇಶ:  ದ ಲಿಯಾನಾ ಟ್ರ ವನ್ಯಜೀವಿಗಳ ಸಂರಕ್ಷಣೆ ಮತ್ತು ಸಂಶೋಧನೆ, ಶಿಕ್ಷಣ ಮತ್ತು ಸಮುದಾಯ ದೊಂದಿಗೆ ಒಳಗೊಳ್ಳುವಿಕೆ ಮೂಲಕ ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಭಾರತದಲ್ಲಿ ವರ್ಷಕ್ಕೆ ಒಂದು ಲಕ್ಷ ಜನರಿಗೆ ಹಾವು ಕಚ್ಚಿದರೆ ಅವರಲ್ಲಿ ೬೦ ಸಾವಿರ ಜನರು ಸಾಯು ತ್ತಾರೆ. ಏಕೆಂದರೆ ಹಾವು ಕಡಿತಕ್ಕೆ ಸರಿಯಾದ ಔಷಧ ಇನ್ನೂ ಕಂಡು ಹಿಡಿದಿಲ್ಲ. ನಾವು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ.

 -ಜೆರ್ರಿ ಮಾರ್ಟಿನ್, ಸಂಸ್ಥಾಪಕ ನಿರ್ದೇಶಕ, ದ ಲಿಯಾನಾ ಟ್ರ

ಆಂದೋಲನ ಡೆಸ್ಕ್

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

11 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

11 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

12 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

13 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

13 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

13 hours ago