Andolana originals

ಆಂದೋಲನ ವರದಿಗೆ ಸ್ಪಂದನೆ: ಯುಜಿಡಿ ಬ್ಲಾಕೇಜ್ ತೆರವು

ಪ್ರತಿದಿನ ಸ್ವಚ್ಛತೆಗೆ ಜಿಟ್ಟಿಂಗ್ ವಾಹನ, ಸಿಬ್ಬಂದಿ ನಿಯೋಜನೆ

ಮೈಸೂರು: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ ೫೪ರ ವ್ಯಾಪ್ತಿಗೆ ಬರುವ ವಿದ್ಯಾರಣ್ಯಪುರಂ (ಕನಕಗಿರಿ) ಬೆಸ್ತರ ಬ್ಲಾಕ್‌ನ ೬ನೇ ಕ್ರಾಸ್‌ನಲ್ಲಿ ನಗರಪಾಲಿಕೆ ಯುಜಿಡಿ ವಿಭಾಗದ ಜೂನಿಯರ್ ಇಂಜಿನಿಯರ್ ಬಿ.ಆರ್.ಸಂತೋಷ್‌ಕುಮಾರ್ ನೇತೃತ್ವದಲ್ಲಿ ಸ್ವಚ್ಛತಾ ಸಿಬ್ಬಂದಿ ಬುಧವಾರ ಯುಜಿಡಿ ಬ್ಲಾಕೇಜ್ ತೆರವುಗೊಳಿಸುವ ಕೆಲಸ ನಿರ್ವಹಿಸಿದರು.

‘ಆಂದೋಲನ’ದಿನಪತ್ರಿಕೆಯ ಮೇ ೨೮ರ ಬುಧವಾರದ ಸಂಚಿಕೆಯಲ್ಲಿ ‘ನಡು ಬೀದಿಯಲ್ಲಿ ಕೆರೆಯಂತೆ ನಿಂತಿರುವ ಯುಜಿಡಿ ನೀರು’ ತಲೆ ಬರಹದಡಿ ಪ್ರಕಟಗೊಂಡ ಸಾರ್ವಜನಿಕ ಸಮಸ್ಯೆ ಕುರಿತ ವರದಿಗೆ ಸ್ಪಂದಿಸಿರುವ ಮಹಾ ನಗರ ಪಾಲಿಕೆ ಯುಜಿಡಿ ವಿಭಾಗದ ಅಧಿಕಾರಿಗಳು ಮತ್ತು ಸ್ವಚ್ಛತಾ ಸಿಬ್ಬಂದಿ ಬುಧವಾರ ಬೆಳಿಗ್ಗೆ ಎರಡು ಜೆಟ್ಟಿಂಗ್ ವಾಹನಗಳ ಜೊತೆ ಸ್ಥಳಕ್ಕೆ ಆಗಮಿಸಿ ಯುಜಿಡಿಯ ಬ್ಲಾಕೇಜ್‌ಅನ್ನು ಸಕ್ಕಿಂಗ್ ಪ್ರಕ್ರಿಯೆ ಮೂಲಕ ತೆರವುಗೊಳಿಸಿದರು. ಸದ್ಯಕ್ಕೆ ಕಲುಷಿತ ನೀರು ಮ್ಯಾನ್ ಹೋಲ್‌ಗಳಿಂದ ಹೊರಗೆ ಹರಿಯುವುದು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಯುಜಿಡಿ ತ್ಯಾಜ್ಯ ನೀರು ಬೆಸ್ತರ ಕೇರಿ ೬ನೇ ಕ್ರಾಸ್‌ನಿಂದ ಮುಂದಕ್ಕೆ ಹರಿದು ಹೋಗಲು ಪೈಪ್‌ಲೈನ್ ವ್ಯವಸ್ಥೆ ಇಲ್ಲದ ಕಾರಣದಿಂದ ಒತ್ತಡ ಹೆಚ್ಚಾಗಿ ಕೊಳಚೆ ನೀರು ಹೊರಗೆ ಹರಿಯುತ್ತಿದೆ. ಬ್ಲಾಕೇಜ್ ತೆರವುಗೊಳಿಸಿದರೆ ಒಂದು ದಿನದ ಮಟ್ಟಿಗೆ ಮಾತ್ರ ಮಲಿನ ನೀರು ಹೊರಗೆ ಬರುವುದು ಸ್ಥಗಿತ ಗೊಳ್ಳುತ್ತದೆ. ಒಂದು ದಿನದ ನಂತರ ಮತ್ತೆ ಯಥಾಸ್ಥಿತಿ ಮುಂದು ವರಿಯುತ್ತದೆ. ಕೊಳಚೆ ನೀರಿನಿಂದ ಮತ್ತೆ ನಿವಾಸಿಗಳಿಗೆ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ಇಲ್ಲಿನ ನಿವಾಸಿಗಳ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಯುಜಿಡಿ ಬ್ಲಾಕೇಜ್‌ಅನ್ನು ಪ್ರತಿದಿನ ಜೆಟ್ಟಿಂಗ್ ವಾಹನಗಳ ಮೂಲಕ ಸ್ವಚ್ಛತಾ ಸಿಬ್ಬಂದಿ ತೆರವುಗೊಳಿಸುವ ಕೆಲಸ ನಿರ್ವಹಿಸಲಿದ್ದಾರೆ.

ಈ ಕೆಲಸಕ್ಕಾಗಿ ಒಂದು ಜೆಟ್ಟಿಂಗ್ ವಾಹನ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಯುಜಿಡಿ ವಿಭಾಗದ ಜೂನಿಯರ್ ಇಂಜಿನಿಯರ್ ಬಿ.ಆರ್.ಸಂತೋಷ್‌ಕುಮಾರ್ ತಿಳಿಸಿದ್ದಾರೆ.

ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಬುಧವಾರ ಜೆಟ್ಟಿಂಗ್ ವಾಹನಗಳ ಮೂಲಕ ಯುಜಿಡಿ ಬ್ಲಾಕೇಜ್ ತೆರವುಗೊಳಿಸಿರುವುದರಿಂದ ತಾತ್ಕಾಲಿಕವಾಗಿ ಕೊಳಚೆ ನೀರು ಮ್ಯಾನ್ ಹೋಲ್‌ಗಳಿಂದ ಹೊರಗೆ ಹರಿಯುವುದು ಸ್ಥಗಿತಗೊಂಡಿದೆ. ಎರಡು ತಿಂಗಳುಗಳಿಂದಲೂ ಹೊರಗೆ ಹರಿಯುತ್ತಿದ್ದ ಕೊಳಚೆ ನೀರು ಮಳೆಗಾಲವಾದ್ದರಿಂದ ಭೂಮಿಯಲ್ಲಿ ಇಂಗಿಲ್ಲ. ಈ ಕೊಳಚೆ ನೀರು ಸಂಪೂರ್ಣವಾಗಿ ಇಂಗಲು ಕನಿಷ್ಠ ಒಂದು ವಾರ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಯುಜಿಡಿ ಬ್ಲಾಕೇಜ್ ತೆರವುಗೊಳಿಸುವುದನ್ನು ನಿಲ್ಲಿಸಿದಲ್ಲಿ ಮತ್ತೆ ಕೊಳೆ ನೀರು ಮ್ಯಾನ್‌ಹೋಲ್‌ಗಳ ಮೂಲಕ ಹೊರಗೆ ಹರಿದು ಇಡೀ ಪ್ರದೇಶ ಮಲಿನಗೊಳ್ಳುತ್ತದೆ. ಹಾಗಾಗಿ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಪ್ರತಿದಿನ ಯುಜಿಡಿ ಬ್ಲಾಕೇಜ್ ತೆರವುಗೊಳಿಸಿ, ನೈರ್ಮಲ್ಯ ಕಾಪಾಡಬೇಕೆಂದು ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.

” ನಿವಾಸಿಗಳ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಈಗ ಪ್ರತಿ ದಿನ ಯುಜಿಡಿ ಬ್ಲಾಕೇಜ್ ತೆರವುಗೊಳಿಸಲಾಗುವುದು, ಮಳೆಗಾಲ ಮುಗಿದ ನಂತರ ಹೊಸ ಪೈಪ್ ಲೈನ್ ಅಳವಡಿಸಿ ಯುಜಿಡಿ ನೀರು ಮುಂದೆ ಹೋಗಲು ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ.”

-ಬಿ.ಆರ್.ಸಂತೋಷ್‌ಕುಮಾರ್, ಜೂನಿಯರ್ ಇಂಜಿನಿಯರ್, ಪಾಲಿಕೆ ಯುಜಿಡಿ ವಿಭಾಗ

ಆಂದೋಲನ ಡೆಸ್ಕ್

Recent Posts

ಮೈಸೂರು | ಡಿ.25ರಂದು ಮನುಸ್ಮೃತಿ ದಹನ ಕುರಿತು ವಿಚಾರ ಸಂಕಿರಣ

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿ ದಹಿಸಿದ 98 ನೇ ವರ್ಷದ ನೆಪದಲ್ಲಿ ಪ್ರಸ್ತುತ ಸಂವಿಧಾನ ವಿರೋಧಿ…

3 mins ago

ಹುಬ್ಬಳ್ಳಿ | ದಲಿತ ಯುವಕನ ಜೊತೆ ಮದುವೆ : ಗರ್ಭಿಣಿ ಮಗಳನ್ನ ಕೊಂದ ಪೋಷಕರು

ಹುಬ್ಬಳ್ಳಿ : ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಮಗಳನ್ನು ಸ್ವಂತ ತಂದೆ ಸೇರಿ ಇತರರು ಕೊಲೆ ಮಾಡಿ ಗಂಡನ…

33 mins ago

ಡಿ.24ರಂದು ಮಹಾಸಭಾದಿಂದ ಶಾಮನೂರು ನುಡಿ ನಮನ: ಈಶ್ವರ ಖಂಡ್ರೆ

ಬೆಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಶಾಸಕ, ಕೊಡುಗೈ ದಾನಿ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಇದೇ 24ರಂದು ಅಖಿಲ ಭಾರತ…

2 hours ago

ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಹೈಕೋರ್ಟ್‌ನಿಂದ ನೋಟಿಸ್‌

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ…

2 hours ago

6 ತಿಂಗಳಿಂದ ಸಂಬಳ ಕೊಡದ ಸರ್ಕಾರ: ರಾಜೀನಾಮೆ ಕೊಟ್ಟ ವೈದ್ಯ

ಮಂಗಳೂರು: ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಕೊಲ್ಲಮೊಗ್ರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳು ಆರು ತಿಂಗಳಿಂದ ಸರಿಯಾಗಿ ಸಂಬಳ ಆಗದ ಕಾರಣ…

2 hours ago

ಸರಗೂರು ತಾಲ್ಲೂಕು ಕಚೇರಿಯಲ್ಲಿ ಆರ್‌ಡಿಎಕ್ಸ್‌ ಸ್ಫೋಟಕ ಇಟ್ಟಿರುವುದಾಗಿ ಬೆದರಿಕೆ

ಮೈಸೂರು: ಮೈಸೂರು ಜಿಲ್ಲೆ ಸರಗೂರಿನ ತಾಲ್ಲೂಕು ಕಚೇರಿ ಹಾಗೂ ಹಾಸನದ ಆಲೂರು ತಾಲ್ಲೂಕು ಕಚೇರಿಗಳಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ…

3 hours ago