ಕೆ.ಬಿ ರಮೇಶ್ ನಾಯಕ
ಮೈಸೂರು: ರಾಜ್ಯದಲ್ಲಿ ಹಲವು ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ಮುಡಾ ಹಗರಣದ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಶುರು ಮಾಡಿ ದಿನಕ್ಕೊಬ್ಬರಂತೆ ಬೇಟೆಯಾಡುತ್ತಿದ್ದು, ಮೈಸೂರಿನಲ್ಲಿ ಆಂತರಿಕವಾಗಿ ಚಾಚಿರುವ ರಿಯಲ್ ಎಸ್ಟೇಟ್ ಮಾಫಿಯಾವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಕಳೆದ ಎರಡು ದಿನಗಳಿಂದ ಮುಡಾದಲ್ಲಿ ಈ ಹಿಂದೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದವರ ಮನೆ ಮೇಲೆ ದಾಳಿ ಮಾಡಿ, ವಿಚಾರಣೆ ನಡೆಸುವಾಗ ದೊರೆತ ದಾಖಲೆಗಳನ್ನು ಇಟ್ಟುಕೊಂಡು ಮತ್ತಷ್ಟು ಜನರಿಗೆ ಬಲೆ ಬೀಸುವ ಸಾಧ್ಯತೆ ಇದೆ.
ಮುಡಾ ಅಧಿಕಾರಿಗಳ ಜತೆ ನಿರಂತರವಾಗಿ ಸಂಪರ್ಕ ಮತ್ತು ಅಕ್ರಮವಾಗಿ ವ್ಯವಹಾರ ಇಟ್ಟುಕೊಂಡಿದ್ದವರಿಗೂ ವಿಚಾರಣೆಯ ಭೀತಿ ಕಾಡುತ್ತಿದ್ದರೆ, ಯಾವಾಗ ನಮ್ಮ ಮನೆ ಮೇಲೆಯೂ ದಾಳಿಯಾಗುತ್ತದೋ ಎನ್ನುವ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿಗೆ ದೇವನೂರು ಬಡಾವಣೆಯಲ್ಲಿ ನಿವೇಶನಗಳನ್ನು ಮಂಜೂರು ಮಾಡದೆ ವಿಜಯನಗರ ಬಡಾವಣೆಯಲ್ಲಿ ಹದಿನಾಲ್ಕು ನಿವೇಶನಗಳನ್ನು ಮಂಜೂರು ಮಾಡಿರುವ ಪ್ರಕರಣದ ಹಿಂದೆ ಹಣದ ಅವ್ಯವಹಾರ ನಡೆದಿದೆ ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಜನಪ್ರತಿನಿಧಿಗಳ ಕೋರ್ಟ್‌ನ ಆದೇಶದಂತೆ ಎ- ಐಆರ್ ದಾಖಲಿಸಿಕೊಂಡ ಲೋಕಾಯುಕ್ತ ತನಿಖೆ ಶುರು ಮಾಡಿದ ಬೆನ್ನಲ್ಲೇ ತನಿಖೆಗೆ ಇಳಿದ ಇಡಿ ಅಽಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ನಡೆಸಿ ಎರಡು ದಿನಗಳು ಮಹತ್ವದ ದಾಖಲೆಗಳನ್ನು ವಶಪಡಿಸಿ ಕೊಂಡು ಪರಿಶೀಲನೆ ಮಾಡಿದ್ದರು. ಸಿಎಂ ಪತ್ನಿ ಪಾರ್ವತಿ ಅವರ ಅರ್ಜಿಗೆ ವೈಟ್ನರ್ ಹಾಕಿ ದಾಖಲೆ ಗಳನ್ನು ನಾಶಪಡಿಸಿರುವ ವಿಚಾರಕ್ಕೆ ಸಂಬಂಽಸಿದಂತೆ ಮೂಲ ದಾಖಲೆಗಳನ್ನು ಪತ್ತೆ ಮಾಡುವಲ್ಲಿ ಅಧಿಕಾರಿಗಳು ಸ-ಲವಾಗಿದ್ದರು. ಈ ವೇಳೆ ಪತ್ತೆಯಾದ ಕಾನೂನು ಬಾಹಿರ ವಿಚಾರಗಳನ್ನು ಮುಂದಿಟ್ಟುಕೊಂಡು ಮಾಜಿ ಆಯುಕ್ತರಾದ ಡಾ. ಡಿ. ಬಿ. ನಟೇಶ್, ಜಿ. ಟಿ. ದಿನೇಶ್ ಕುಮಾರ್ ಅವರ ಮನೆ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ ಜಿ. ಟಿ. ದಿನೇಶ್ ಕುಮಾರ್ ವಿಚಾರಣೆಯಿಂದ ತಪ್ಪಿಸಿಕೊಂಡರೆ, ಡಿ. ಬಿ. ನಟೇಶ್ ತಮ್ಮ ಅವಽಯಲ್ಲಿ ಸರ್ಕಾರದ ನಿರ್ದೇಶನದಂತೆಯೇ ಆಗಿರುವ ನಡಾವಳಿಗಳ ಕುರಿತು ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ ಮುಡಾದಲ್ಲಿ ಜಿಪಿಎ, ೫೦:೫೦ ಅನುಪಾತ, ಬದಲಿ ನಿವೇಶನಗಳನ್ನು ಪಡೆದುಕೊಂಡಿ ರುವ ಬಗ್ಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಬಿಲ್ಡರ್, ರಿಯಲ್ ಎಸ್ಟೇಟ್ ಉದ್ಯಮದವರ ಮನೆ ಮೇಲೆ ದಾಳಿ ಮಾಡಿ ಲಾಕ್ ಮಾಡಿದ್ದಾರೆ. ಬಿಲ್ಡರ್ ಜಯರಾಂ, ಜಿಪಂ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಅವರ ಜೊತೆಗೆ ವ್ಯವಹಾರ ಮಾಡಿರುವವರ ಪೈಕಿ ಅನೇಕ ರಾಜಕಾರಣಿಗಳು, ಅಧಿಕಾರಿಗಳ ಹೆಸರು ಪತ್ತೆಯಾಗಿದ್ದು, ಇವರೆಲ್ಲರಿಗೂ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಅನೇಕರ ಹೆಸರುಗಳು ಕೇಳಿ ಬರುತ್ತಿದ್ದರೂ ಯಾವಾಗ ದಾಳಿ ನಡೆಯಲಿದೆಯೋ ಎನ್ನುವ ಭಯ ಶುರುವಾಗಿದೆ. ಇಡಿ ಅಽಕಾರಿಗಳ ವಿಚಾರಣೆ ಎದುರಿಸಿರುವುದರಿಂದ ಹಿಡಿದು ಪ್ರತಿನಿತ್ಯ ಕೇಳುತ್ತಿರುವ ದಾಖಲೆಗಳನ್ನು ಒದಗಿಸುವ ವಿಚಾರದಲ್ಲಿ ಮುಡಾ ಆಯುಕ್ತರು, ಕಾರ್ಯದರ್ಶಿ, ವಿಶೇಷ ಭೂಸ್ವಾ ಽನಾಽಕಾರಿ ಸುಸ್ತಾಗಿ ಹೋಗಿದ್ದಾರೆ. ಸಿಎಂ ಪತ್ನಿ ನಿವೇ ಶನ ವಾಪಸ್ ಮಾಡಿದ್ದನ್ನು ಹಿಂದಕ್ಕೆ ತೆಗೆದು ಕೊಂಡಿ ರುವುದಕ್ಕೆ ಹಾಲಿ ಆಯುಕ್ತ ರಘುನಂದನ್ ವಿವರಣೆ ನೀಡಿದ್ದರೂ ಅದರಲ್ಲಿ ಆಗಿರುವ ಲೋಪಗಳ ಬಗ್ಗೆಯೂ ಮುಂದೆ ವಿಚಾರಣೆ ಎದುರಿಸಬೇಕಿದೆ ಎಂದು ಹೇಳಲಾಗಿದೆ.
ಅಧಿಕಾರಿಗಳ ಜತೆ ಸಂಪರ್ಕ ಇದ್ದವರಿಗೂ ವಿಚಾರಣೆಯ ಭೀತಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಮುಡಾ ಹಗರಣದ ಕೇಸ್
ಮುಡಾ ಹಗರಣದಲ್ಲಿ ದಿನಕ್ಕೊಂದು ತಿರುವು
ಮೈಸೂರು: ಸಿಎಂ ಪತ್ನಿ ಪಾರ್ವತಿ ಅವರ ನಿವೇಶನ ಪ್ರಕರಣಕ್ಕೆ ಸಂಬಂಽಸಿದಂತೆ ದಾಳಿ ನಡೆಸಿದ್ದ ಇಡಿ ಅಽಕಾರಿಗಳು ಈಗ ಅದರ ಬುಡಕ್ಕೆ ಕೈ ಹಾಕಿರುವುದರಿಂದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮಾಜಿ ಆಯುಕ್ತರ ಮನೆಗಳಷ್ಟೇ ಅಲ್ಲದೆ ಅಕ್ರಮದಲ್ಲಿ ಭಾಗಿಯಾಗಿರುವವರ ಮನೆಗಳ ಮೇಲೂ ದಾಳಿ ಮಾಡಲಾಗುತ್ತಿದೆ. ಇಡಿ ಅಧಿಕಾರಿಗಳು ಯಾವ್ಯಾವ ವಿಚಾರದಲ್ಲಿ ದಾಳಿ ಮಾಡುತ್ತಿದ್ದಾರೆ ಎನ್ನುವುದನ್ನು ಅರಿಯಲಾಗದೆ ಮುಡಾ, ಕಂದಾಯ ಇಲಾಖೆಯವರು ತಲೆಕೆಡಿಸಿಕೊಂಡಿದ್ದಾರೆ. ಭೂ ಪರಿವರ್ತನೆ, ಸ್ವಾಽನಪಡಿಸಿಕೊಂಡ ಭೂಮಿಯನ್ನು ಮತ್ತೇ ಕೈ ಬಿಟ್ಟಿದ್ದರ ಬಗ್ಗೆ ಈಗಾಗಲೇ ಲೋಕಾಯುಕ್ತದ ಎದುರು ನಿವೃತ್ತ ಐಎಎಸ್ ಅಧಿಕಾರಿಗಳಾದ ಜಿ. ಕುಮಾರ ನಾಯ್ಕ, ಎಸ್. ಪಾಲಯ್ಯ ವಿಚಾರಣೆ ನಡೆದಿದೆ. ಮುಂದೆ ಇಡಿ ಅಧಿಕಾರಿಗಳು ಇವರಿಬ್ಬರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಖಾತೆ ಮಾಡುವುದನ್ನು ಕೈಬಿಟ್ಟ ಮುಡಾ
ಹಗರಣಗಳ ಸರಮಾಲೆಯಿಂದ ಕಂಗೆಟ್ಟಿರುವ ಹಾಲಿ ಅಽಕಾರಿಗಳು ಹಳೆಯ ತಪ್ಪುಗಳು ಮರುಕಳಿಸದಂತೆ ಖಾತೆ ಮಾಡುವುದನ್ನು ಕೈಬಿಟ್ಟು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲು ನಿರ್ಧರಿಸಿದ್ದಾರೆ. ಖಾತೆ ಮಾಡುವುದರಿಂದಲೇ ಅಕ್ರಮಗಳು ಶುರುವಾಗುವು ದರಿಂದ ಅಂತಹ ಗೋಜಲಿಗೆ ಕೈ ಹಾಕುವುದು ಬೇಡ ಎಂದು ಹಾಲಿ ಆಯುಕ್ತ ರಘುನಂದನ್ ನಿರ್ಧರಿಸಿ ಹಂತ ಹಂತವಾಗಿ ಮುಡಾ ಬಡಾವಣೆಗಳನ್ನು ಪಾಲಿಕೆಗೆ ವಹಿಸಲು ತೀರ್ಮಾನಿಸಿರುವುದು ಗಮನಾರ್ಹವಾಗಿದೆ.