ಓದುಗರ ಪತ್ರ
ನ್ಯಾಯಾಲಯದಲ್ಲಿ ಕಡತಗಳ ಪುಟಗಳನ್ನು ತಿರುಗಿಸಲು ಕೆಲವು ಸಿಬ್ಬಂದಿ ಎಂಜಲನ್ನು ಬಳಸುತ್ತಾರೆ. ಅದರಲ್ಲೂ ಪಾನ್ ಮಸಾಲ ಅಥವಾ ಎಲೆ ಅಡಕೆ ಉಪಯೋಗಿಸುವವರು ಹೀಗೆ ಮಾಡುವುದರಿಂದ ಹಾಳೆಯ ಮೇಲೆ ಕೆಂಪು ಕಲೆಗಳಾಗುತ್ತವೆ. ಇದರಿಂದ ಸೋಂಕು ಹರಡುವ ಭೀತಿಯುಂಟಾಗಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಂಡಕ್ಟರ್‌ಗಳು ಹಣ ಎಣಿಸುವ ವೇಳೆ ಎಂಜಲು ಬಳಸುವುದು ಸಾಮಾನ್ಯ ಎನ್ನುವಂತಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಕೂಡ ಹಾಳೆಗಳನ್ನು ತಿರುವಿ ಹಾಕಲು ಎಂಜಲು ಅದ್ದುವುದು ಮುಂದುವರಿದೇ ಇದೆ. ಇದೊಂದು ಕೆಟ್ಟ ಅಭ್ಯಾಸವಾಗಿದೆ. ಕರ್ನಾಟಕ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿ ಹಾಳೆ ತಿರುಗಿಸಲು ಎಂಜಲು ಅದ್ದುವುದನ್ನು ನಿಷೇಧಿಸಬೇಕು. ಅಗತ್ಯವಿದ್ದರೆ ಸ್ಟೇಷನರಿ ಅಂಗಡಿಗಳಲ್ಲಿ ದೊರೆಯುವ ಸ್ಪಾಂಜ್ ಕಪ್‌ಗಳನ್ನು ತಂದು ಉಪಯೋಗಿಸಬೇಕು. ಇಲ್ಲವೇ ಯಾವುದಾದರೂ ಮುಚ್ಚಳ, ಬಟ್ಟಲಿನಲ್ಲಿ ಹತ್ತಿ,/ಬಟ್ಟೆ ಇಟ್ಟುಕೊಂಡು ನೀರು ಹಾಕಿ ಸ್ಪಾಂಜ್ ರೀತಿ ಉಪಯೋಗಿಸಬಹುದು.
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು
ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…
ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…
ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…
ಟೆಹ್ರಾನ್ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…
ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…
ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…