Andolana originals

ಓದುಗರ ಪತ್ರ: ಮಂಡ್ಯದಲ್ಲಿ ಇದ್ದೂ ಇಲ್ಲದಂತಿರುವ ನಗರ ಸಾರಿಗೆ!

ಮಂಡ್ಯ ನಗರಕ್ಕೆ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ೨೦೧೨ರಲ್ಲಿ ರಾಜ್ಯ ಸರ್ಕಾರ ಹನ್ನೊಂದು ಹೊಸ ಬಸ್ಗಳನ್ನು ಖರೀದಿಸಿತು. ಕೆಲವು ಕಾಲ ನಗರ ಬಸ್ಗಳು ಕಾರ್ಯ ನಿರ್ವಹಿಸಿದವು. ಬಹುಶಃ ನಷ್ಟದಲ್ಲಿ ಇದ್ದ ಕಾರಣ ಈ ನಗರ ಸಾರಿಗೆ ಬಸ್ ಸೌಲಭ್ಯವನ್ನು ನಿಲ್ಲಿಸಲಾಯಿತು.

ಆದರೆ ಅದೇ ನಗರ ಸಾರಿಗೆ ಬಸ್‌ಗಳು ಮಂಡ್ಯದಿಂದ ಪಾಂಡವಪುರ, ತಿ. ನರಸೀಪುರ, ಬನ್ನೂರು ಮುಂತಾದ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಈಗ ಮಂಡ್ಯ ನಗರದ ವ್ಯಾಪ್ತಿ ವಿಸ್ತಾರವಾಗಿದ್ದು, ೩೫ ವಾರ್ಡ್‌ಗಳನ್ನು ಹೊಂದಿರುವ ನಗರವಾಗಿದೆ. ನೆಹರು ನಗರ, ಸುಭಾಷ್ ನಗರ, ವಿದ್ಯಾನಗರ, ಬಂದೀಗೌಡ ಬಡಾವಣೆ, ಚಾಮುಂಡೇಶ್ವರಿ ನಗರ, ಶಂಕರ ನಗರ, ಕಾವೇರಿ ನಗರ, ವಿಶ್ವೇಶ್ವರಯ್ಯ ನಗರ, ವಿವೇಕಾನಂದ ನಗರ, ಸ್ವರ್ಣಸಂದ್ರ, ಆರ್ಕೆಶ್ವರ ನಗರ, ಅಸಿಟೇಟ್ ಟೌನ್, ಇಂಡುವಾಳು ಮುಂತಾದ ಬಡಾವಣೆಗಳು ಮಂಡ್ಯ ನಗರ ವ್ಯಾಪ್ತಿಯಲ್ಲಿ ಇವೆ.

ಇದರೊಂದಿಗೆ ಸುತ್ತಮುತ್ತಲಿನ ಸಾತನೂರು ಬಡಾವಣೆ, ದ್ವಾರಕ ನಗರ, ಚಿಕ್ಕಮಂಡ್ಯ, ಶಂಕರಪುರ, ಕೋಣಹಳ್ಳಿ, ಕಲ್ಲಹಳ್ಳಿ, ಕ್ಯಾತಂಗೆರೆ, ಹೊಸಹಳ್ಳಿ, ರಾಮನಹಳ್ಳಿ, ಗುತ್ತಲು, ಶ್ರೀನಿವಾಸಪುರ, ಶ್ರೀರಾಮ ನಗರ, ನಾಡ ಪ್ರಭು ಕೆಂಪೇಗೌಡ ಲೇಔಟ್ ಮುಂತಾದ ಬಡಾವಣೆಗಳು ಮಂಡ್ಯ ನಗರಕ್ಕೆ ಸಮೀಪದಲ್ಲೇ ಇವೆ. ಈ ಬಡಾವಣೆಗಳಲ್ಲಿ ವಾಸವಾಗಿರುವ ನಾಗರಿಕರು ನಗರ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಯ ಬಡಾವಣೆಗೆ ಹೋಗಿ ಬರಲು ಪರಿತಪಿಸುತ್ತಿದ್ದಾರೆ. ಅನುಕೂಲಸ್ಥರು ಆಟೋಗಳನ್ನು ಬಳಸುತ್ತಿದ್ದಾರೆ. ಆದರೆ ಬಡವರು ನಡೆದೇ ಹೋಗುವುದು ಅನಿವಾರ್ಯವಾಗಿದೆ. ಮಂಡ್ಯದಿಂದ ಚಿಕ್ಕ ಮಂಡ್ಯ- ಕೊಮ್ಮೇರಹಳ್ಳಿ – ಸಾತನೂರು ಬೆಟ್ಟ (ನರಸಿಂಹಸ್ವಾಮಿ ಬೆಟ್ಟ ) ಉಮ್ಮಡಹಳ್ಳಿ – ಶ್ರೀನಿವಾಸಪುರ ಮಾರ್ಗ, ಮಂಡ್ಯ – ಹೊಸಹಳ್ಳಿ -ಕಾರಸವಾಡಿ -ಮೊತ್ತಹಳ್ಳಿ -ಕ್ಯಾತಂಗೆರೆ ಹೀಗೆ ಸರ್ವೆ ಮಾಡಿ ನಗರ ಸಾರಿಗೆ ಮಾರ್ಗ ಗಳನ್ನು ಗುರುತಿಸಿ ನಗರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಅಗತ್ಯವಿದೆ.

ಮಂಡ್ಯ ಕೇಂದ್ರದ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಿಂದ ಹೆದ್ದಾರಿಯಲ್ಲಿ ಬೆಂಗಳೂರು ಕಡೆಗೆ ಹನಕೆರೆ ಪಕ್ಕದ ನಂದಿನಿ ಹಾಲಿನ ಡೇರಿವರೆಗೆ ಹಾಗೂ ಮೈಸೂರು ಕಡೆಗಿನ ತೂಬಿನಕೆರೆ ಸಮೀಪದ ಕೈಗಾರಿಕಾ ಕೇಂದ್ರ ಮತ್ತು ನಾಗಮಂಗಲ-ಕೆರಗೋಡು ಮಾರ್ಗದಲ್ಲಿ ಗೋಪಾಲಪುರ-ಕೊಮ್ಮೇರ ಹಳ್ಳಿವರೆಗೆ, ಬೆಸಗರಹಳ್ಳಿ ಮಾರ್ಗದಲ್ಲಿ ಕೀಲಾರದವರಗೆ ಕೆ. ಎಂ. ದೊಡ್ಡಿ ಮಾರ್ಗದಲ್ಲಿ ಗುತ್ತಲು, ಭೂತನಹೊಸೂರು, ಇತ್ತ ಹೊಸಹಳ್ಳಿ ಮಂಗಲದವರೆಗೆ ಸಂತೆ ಕಸಲಗೆರೆ, ಬನ್ನೂರು ಮಾರ್ಗದಲ್ಲಿ ಬೇವಿನಹಳ್ಳಿ, ಕೊತ್ತತ್ತಿವರೆಗೆ ನಗರ ಬಸ್ ವ್ಯವಸ್ಥೆ ಮಾಡಬಹುದು. ಮಂಡ್ಯದ ಶಾಸಕರಾದ ರವಿಕುಮಾರ್ ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಇತ್ತ ಗಮನಹರಿಸಿ ಮಂಡ್ಯ ನಗರಕ್ಕೆ ಮತ್ತೆ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.

-ಸಿ. ಸಿದ್ದರಾಜು ಆಲಕೆರೆ, ಮಂಡ್ಯ

ಆಂದೋಲನ ಡೆಸ್ಕ್

Recent Posts

ಶತಕ ಬಾರಿಸಿದ ಸಿಎಂ ಎದುರು ಸವಾಲುಗಳೂ ಇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…

17 hours ago

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…

17 hours ago

ರಾಜ್ಯದಲ್ಲಿ ೧೯೮೩ರ ಇತಿಹಾಸ ಮರುಕಳಿಸುತ್ತದೆಯೇ?

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…

17 hours ago

ಕೆಎಚ್‌ಬಿ ಕಾಲೋನಿ ನಿವಾಸಿಗಳ ಜೀವನ ಹೈರಾಣ

ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…

17 hours ago

ಗಣೇಶೋತ್ಸವಕ್ಕೆ ಡಿಜೆ ನಿಷೇಧ: ಮಿಶ್ರ ಪ್ರತಿಕ್ರಿಯೆ

ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…

17 hours ago

50 ವರ್ಷಗಳ ನಂತರ ಮೊದಲ ಬಾರಿ ಬರಿದಾದ ಕಾರಿಗನಹಳ್ಳಿ ಅಣೆಕಟ್ಟೆ

ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ  ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…

17 hours ago