ಓದುಗರ ಪತ್ರ
೧೮ ವರ್ಷಗಳ ಬಳಿಕ ಆರ್ಸಿಬಿ ತಂಡ ಐಪಿಎಲ್ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಈ ಸಂಭ್ರಮ ಕೆಲವೇ ಗಂಟೆಗಳಲ್ಲಿ ಶೋಕವಾಗಿ ಮಾರ್ಪಟ್ಟಿದ್ದು ವಿಪರ್ಯಾಸ. ಮಂಗಳವಾರ ರಾತ್ರಿ ಆರ್ಸಿಬಿ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಿಸಿದರು.
ಬುಧವಾರ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ೧೧ ಜನರ ಪ್ರಾಣ ಹಾರಿ ಹೋಯಿತು. ಹಲವು ಜನರು ಗಾಯಗೊಂಡರು. ಈ ಅಭಿಮಾನವನ್ನು ಏನೆಂದು ಹೇಳಬೇಕು? ಈ ಅಭಿಮಾನಿಗಳ ಸಾವಿಗೆ ಯಾರನ್ನು ಹೊಣೆ ಮಾಡಬೇಕು? ಇದು ಆಯೋಜಕರ ವೈಫಲ್ಯವೇ? ಇಲ್ಲ ಅಭಿಮಾನಿಗಳ ಅತಿರೇಕದ ವರ್ತನೆಯಿಂದ ಉಂಟಾದ ಘಟನೆಯೇ? ಎಲ್ಲ ಕ್ರೀಡೆ ಗಳ ಬಗ್ಗೆ ಅಭಿಮಾನವಿರಬೇಕು. ಆದರೆ ಅಂಧಾಭಿಮಾನಿಗಳಾದಾಗ ಇಂತಹ ಘಟನೆಗಳು ಸಂಭವಿಸುತ್ತವೆ. ಅಭಿಮಾನವಿರಲಿ, ಆದರೆ ಅಂಧಾಭಿಮಾನ ಬೇಡ.
ಪಿ.ಸಿ.ಕಂಗಾಣಿಸೋಮು, ಕ್ಯಾತಮಾರನಹಳ್ಳಿ, ಮೈಸೂರು
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಆರು ಹಸುಗಳು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ…
ನವೀನ್ ಡಿಸೋಜ: ಕೊಡಗು ಜಿಲ್ಲಾ ವರದಿಗಾರರು ಸಿದ್ದಾಪುರ: ತಿತಿಮತಿ ವಲಯದ ಚೆನ್ನಂಗಿ ಶಾಖೆಯ ವ್ಯಾಪ್ತಿಗೆ ಒಳಪಡುವ ಕೊಡಗು ಶ್ರೀರಂಗಪಟ್ಟಣ ಗ್ರಾಮದ…
ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಭಾಗಗಳಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಕೆಲವು ಚಾಲಕರು ಗಾಂಜಾ ಸೇವಿಸಿ ವಾಹನ ಚಾಲನೆ…
ಇಂದು ಶಿಕ್ಷಣ ಎನ್ನುವುದು ವ್ಯಾಪಾರೀಕರಣವಾಗಿದ್ದು, ಪೋಷಕರು ದುಡಿಮೆಯ ಬಹುತೇಕ ಆದಾಯವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುವುದು ಅನಿವಾರ್ಯವಾಗಿದೆ. ಕೇರಳ ಸರ್ಕಾರ…
ನಂಜನಗೂಡು ತಾಲ್ಲೂಕು ಬೆಳಗುಂದ ಗ್ರಾಮದಲ್ಲಿ ಬಸ್ ತಂಗುದಾಣವಿಲ್ಲದೆ ಪ್ರತಿದಿನ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬೇಸಿಗೆಯಲ್ಲಿ ಬಿಸಿಲಿನಲ್ಲಿ ಹಾಗೂ ಮಳೆಗಾಲದಲ್ಲಿ ಮಳೆಯಲ್ಲಿಯೇ…
ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್‌ಗಳ ಮೇಲೆ ಅಳವಡಿಸಿರುವ ಗುಟ್ಕಾ ಹಾಗೂ ತಂಬಾಕು…